ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತಾ? ತಜ್ಞರು ಹೇಳೋದೇನು?
Health Tips: ಸಣ್ಣ ತುಂಡು ಬೆಲ್ಲ ತಿನ್ನುವುದರಿಂದ ಗಂಟಲು ಶುದ್ಧವಾಗಿ ಕೆಮ್ಮು ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಕ್ಲೆನ್ಸರ್ ಮತ್ತು ಕಫ ನಿವಾರಕವಾಗಿ ಕಾರ್ಯನಿರ್ವಹಿಸಲಿದ್ದು ಲೋಳೆಯನ್ನು ತೆರವುಗೊಳಿಸಲು ಮತ್ತು ಉಸಿರಾಡುವ ಮಾಲಿನ್ಯಕಾರಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಕೆಲವು ವೈಜ್ಞಾನಿಕ ಸಂಶೋಧನೆಯಲ್ಲಿ ಪ್ರಕಟವಾಗಿದೆ. ಹಾಗಿದ್ರೆ ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತಾ?..
ಸಂಗ್ರಹ ಚಿತ್ರ -
ಬೆಂಗಳೂರು,ಜೂ.22: ಭಾರತೀಯ ಮನೆಗಳಲ್ಲಿ ಮನೆಗೆ ಬಂದ ಅತಿಥಿಗಳಿಗೆ ನೀರಿನ ಜೊತೆ ಬೆಲ್ಲ (Jaggery for Health) ನೀಡಿ ಸತ್ಕರಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲದೆ ಆರೋಗ್ಯದ ದೃಷ್ಟಿ ಯಿಂದಲೂ ಬೆಲ್ಲ ಮನೆಮದ್ದುಗಳ ಭಾಗವಾಗಿದೆ. ಸಣ್ಣ ತುಂಡು ಬೆಲ್ಲ ತಿನ್ನುವುದರಿಂದ ಗಂಟಲು ಶುದ್ಧವಾಗಿ ಕೆಮ್ಮು ಕಡಿಮೆಯಾಗುತ್ತದೆ.ಇದು ನೈಸರ್ಗಿಕ ಕ್ಲೆನ್ಸರ್ ಮತ್ತು ಕಫ ನಿವಾರಕವಾಗಿ ಕಾರ್ಯನಿರ್ವಹಿಸಲಿದ್ದು ಲೋಳೆಯನ್ನು ತೆರವುಗೊಳಿಸಲು ಮತ್ತು ಉಸಿರಾಡುವ ಮಾಲಿನ್ಯಕಾರಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಕೆಲವು ವೈಜ್ಞಾನಿಕ ಸಂಶೋಧನೆ ಯಲ್ಲಿ ಪ್ರಕಟವಾಗಿದೆ. ಹಾಗಿದ್ರೆ ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆ ಯಾಗುತ್ತಾ?
ಬೆಲ್ಲದಲ್ಲಿ ಮೆಗ್ನಿಷಿಯಂ, ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್,ಸತು ಇರುವುದರಿಂದ ಹಲವು ರೀತಿಯ ಆರೋಗ್ಯ ಲಾಭವನ್ನು ದೇಹಕ್ಕೆ ನೀಡುತ್ತದೆ. ಆದರೆ ಬೆಲ್ಲವು ಉಸಿರಾಟ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆಯೇ? ಅಥವಾ ಇದು ಕೇವಲ ಒಂದು ನಂಬಿಕೆಯಷ್ಟೆಯೇ? ಎಂದು ಹಲವರಲ್ಲಿ ಸಂದೇಹ ಕೂಡ ಇದೆ. ಆದರೆ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಗಳ ಪ್ರಕಾರ, ಬೆಲ್ಲವು ಧೂಳು ಅಥವಾ ಹೊಗೆಯಿಂದ ಶ್ವಾಸಕೋಶಕ್ಕೆ ಉಂಟಾಗುವ ಹಾನಿಯನ್ನು ತಡೆಯುತ್ತಿದೆ ಎಂದು ಹಲವು ವೈಜ್ಞಾನಿಕ ರಿಸರ್ಚ್ ನಲ್ಲಿ ತಿಳಿದು ಬಂದಿದೆ.
Vishwavani Health: ಉಪಹಾರಕ್ಕೆ ಇಡ್ಲಿ ಸಾಂಬಾರ್ ಬೆಸ್ಟ್; ವೈದ್ಯರು ಹೀಗೆನ್ನುವುದೇಕೆ?
ಕೆಲವೊಮ್ಮೆ ಅಲರ್ಜಿ, ಆಸ್ತಮಾ, ಉಸಿರಾಟದ ಸೋಂಕುಗಳು, ಹೃದ್ರೋಗ ಮತ್ತು ಪರಿಸರ ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು. ಬೆಲ್ಲದಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳಿರುವುದರಿಂದ, ಇದು ಗಂಟಲು ಕಿರಿಕಿರಿ, ಕೆಮ್ಮಿಗೆ ಉತ್ತಮ ಪರಿಹಾರ ನೀಡುತ್ತದೆ. ಆದರೆ ಇದು ಶ್ವಾಸಕೋಶದ ಕಾರ್ಯವನ್ನು ಸುಧಾರಿಸಿ ಉಸಿರಾಟದ ಸೋಂಕು ಗಳಂತಹ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ತೋರಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಹಾಗಾಗಿ ನಿರಂತರ ಉಸಿರಾಟದ ತೊಂದರೆ, ಒಣ ಕೆಮ್ಮು ಮತ್ತು ಎದೆ ಬಿಗಿತದಂತಹ ಲಕ್ಷಣಗಳು ತೀವ್ರವಾದ ಆರೋಗ್ಯ ಸಮಸ್ಯೆಯಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಕೇವಲ ಬೆಲ್ಲದಂತಹ ಮನೆಮದ್ದುಗಳನ್ನು ನಂಬಿ ಕುಳಿತರೆ ದೊಡ್ಡಸಮಸ್ಯೆ ಆಗಬಹುದು. ಹಾಗಾಗಿ ಬೆಲ್ಲವು ಗಂಟಲಿಗೆ ತಾತ್ಕಾಲಿಕ ಆರಾಮ ನೀಡಬಲ್ಲದೇ ಹೊರತು ಶ್ವಾಸಕೋಶದ ಕಾಯಿಲೆಗಳಿಗೆ ಮದ್ದಲ್ಲ ಎಂದು ತಜ್ಞರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಯಾರು ಜಾಗರೂಕರಾಗಿರಬೇಕು?
ಬೆಲ್ಲವೂ ಒಂದು ಸಕ್ಕರೆಯ ಒಂದು ರೂಪವಾಗಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಮಧುಮೇಹ, ಬೊಜ್ಜು ಅಥವಾ ತಮ್ಮ ಕ್ಯಾಲೋರಿ ಸೇವನೆಯನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವ ಜನರು ಬೆಲ್ಲವನ್ನು ಮಿತವಾಗಿ ಸೇವಿಸಬೇಕು.