Health Tips: ದೈನಂದಿನ ಆಹಾರದಲ್ಲಿ ಬೀಟ್ರೂಟ್ ಸೇರಿಸಲು ಇಲ್ಲಿವೆ ರುಚಿಕರ ವಿಧಾನ
ಬೀಟ್ರೂಟ್ನಲ್ಲಿ ಸಮೃದ್ಧ ಪೌಷ್ಠಿಕಾಂಶವಿದ್ದು,ಚಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ನೀಡಲಿದೆ. ಇದು ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಈ ತರಕಾರಿಯನ್ನು ಸಲಾಡ್, ಗೊಜ್ಜು, ಸಾಂಬಾರು, ಪಲ್ಯ ಹೀಗೆ ನಾನಾ ರೂಪದಲ್ಲಿ ಸೇವಿಸಬಹುದು.
![ದೈನಂದಿನ ಆಹಾರ ಕ್ರಮದಲ್ಲಿ ಬೀಟ್ರೂಟ್ ಸೇರಿಸಲು ಇಲ್ಲಿದೆ ಟಿಪ್ಸ್](https://cdn-vishwavani-prod.hindverse.com/media/original_images/beetroot.jpg)
beetroot
![Profile](https://vishwavani.news/static/img/user.png)
ನವದೆಹಲಿ: ಹಸಿರು ತರಕಾರಿಗಳು ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಅದರಲ್ಲೂ ಅಗತ್ಯ ತರಕಾರಿ ಅಂದಾಗ ತಕ್ಷಣ ನೆನಪಿಗೆ ಬರುವುದೇ ಬೀಟ್ರೂಟ್ (Beetroot). ಇದರಲ್ಲಿ ಸಮೃದ್ಧ ಪೌಷ್ಠಿಕಾಂಶವಿದ್ದು, ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ನೀಡುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೀಟ್ರೂಟ್ ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿಯ ಉತ್ತಮ ಮೂಲವಾಗಿದ್ದು ಇದನ್ನು ಸಲಾಡ್, ಗೊಜ್ಜು, ಸಾಂಬಾರು, ಪಲ್ಯ ಹೀಗೆ ನಾನಾ ರೂಪದಲ್ಲಿ ಸೇವಿಸಬಹುದು (Health Tips). ಬಹಳಷ್ಟು ಆರೋಗ್ಯ ಲಾಭ ಹೊಂದಿರುವ ಈ ತರಕಾರಿಯನ್ನು ನಿಮ್ಮ ದೈನಂದಿನ ಊಟದಲ್ಲಿ ಸೇರಿಸಲು ಅನೇಕ ಮಾರ್ಗಗಳಿದ್ದು. ಆಸಕ್ತಿದಾಯಕ ಮತ್ತು ರುಚಿಕರ ವಿಧಾನಗಳು ಇಲ್ಲಿದೆ.
ಬೀಟ್ರೂಟ್ ಪರೋಟ
ಬೀಟ್ರೂಟ್ ಪರೋಟವನ್ನು ನೀವು ಸುಲಭವಾಗಿ ತಯಾರಿಸಬಹುದು. ಬೀಟ್ರೂಟ್ ಪರೋಟಾ ಮಾಡಲು ಮೊದಲಿಗೆ ನೀವು ಬೀಟ್ರೊಟ್ ತುರಿ ಮಾಡಿ, ಗೋಧಿ ಹಿಟ್ಟು, ಮಸಾಲೆ ಮತ್ತು ನಿಮ್ಮ ಆಯ್ಕೆಯ ಪದಾರ್ಥಗಳೊಂದಿಗೆ ಬೆರೆಸಿ ಬಾಣಲೆಯಲ್ಲಿ ಬೇಯಿಸಿ. ಅದಕ್ಕೆ ಈರುಳ್ಳಿ, ಕಾಯಿ ಮೆಣಸು, ಪ್ರೈ ಮಾಡಿ ಹಾಕಿದರೆ ಸವಿಯಲು ಸಿದ್ದ. ಇದರಿಂದ ನಿಮ್ಮ ಬಾಯಿರುಚಿಯು ಹೆಚ್ಚುವುದಲ್ಲದೆ ಆರೋಗ್ಯಕ್ಕೂ ಉತ್ತಮ.
ಬೀಟ್ರೂಟ್ ರಾಯಿತ
ನಿಮ್ಮ ಆಹಾರದಲ್ಲಿ ಬೀಟ್ರೂಟ್ ಅನ್ನು ಸೇರಿಸುವ ಸರಳ ವಿಧಾನಗಳಲ್ಲಿ ಬೀಟ್ರೂಟ್ ರಾಯಿತ ಕೂಡ ಒಂದು. ಬೀಟ್ರೋಟ್ ಅನ್ನು ಬೇಯಿಸಿ, ಗ್ರೈನ್ ಮಾಡಿ, ಇದಕ್ಕೆ ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೊ ಮತ್ತು ಇತರ ತರಕಾರಿಗಳನ್ನು ಸೇರಿಸಿ ಮೊಸರಿನೊಂದಿಗೆ ಸವಿಯಬಹುದು. ಇದನ್ನು ಊಟದೊಂದಿಗೆ ಸೈಡ್ ಡಿಶ್ ಆಗಿ ಸೇವಿಸಿದರೆ ಇನ್ನಷ್ಟು ರುಚಿ ಹೆಚ್ಚುತ್ತದೆ. ಇದರ ಸೇವನೆಯು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಇದು ತುಂಬಾ ಪ್ರಯೋಜನಕಾರಿ.
ಬೀಟ್ರೂಟ್ ಸೂಪ್
ಮೊದಲು ಬೀಟ್ರೂಟ್, ಕ್ಯಾರೆಟ್, ಈರುಳ್ಳಿಯನ್ನು ಕತ್ತರಿಸಿ. ಒಲೆಯ ಮೇಲೆ ನಾನ್ ಸ್ಟಿಕ್ ಪ್ಯಾನ್ ಇಟ್ಟು ಬೆಣ್ಣೆಯನ್ನು ಬಿಸಿ ಮಾಡಿ ತರಕಾರಿಗಳನ್ನು ಫ್ರೈ ಮಾಡಿ. ಬಳಿಕ ಕರಿಮೆಣಸು, ಶುಂಠಿ ಬೆಳ್ಳುಳ್ಳಿ ಚೆನ್ನಾಗಿ ಬಾಡಿಸಿ. ಸ್ಟವ್ ಅನ್ನು ಮಧ್ಯಮ ಉರಿಯಲ್ಲಿರಿಸಿ 5 ನಿಮಿಷ ಬೇಯಿಸಿ. ಮಿಶ್ರಣವನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಸೇರಿಸಿ. ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸೂಪ್ ತಯಾರಿಸಿ.
ಬೀಟ್ರೂಟ್ ರಸಂ
ಟೊಮ್ಯಾಟೊ ಜತೆ ಬೀಟ್ರೂಟ್ ಬೆರೆಸಿ ರಸಂ ತಯಾರಿಸಬಹುದು. ಅದಕ್ಕೆ ಜೀರಿಗೆ, ಕೊತ್ತಂಬರಿ ಮತ್ತು ಅರಿಶಿನ, ಮೆಣಸು ಸೇರಿಸಿ ಮಸಾಲೆಗಳನ್ನು ರುಬ್ಬಿ. ಇದಕ್ಕೆ ತೆಂಗಿನ ಹಾಲು ಸೇರಿಸಿ ರಸಂ ತಯಾರಿಸಿ. ಅನ್ನದೊಂದಿಗೆ ಸೇವಿಸಲು ಇದು ಉತ್ತಮ ಆಯ್ಕೆ.
ಬೀಟ್ರೂಟ್ ಹಲ್ವ
ಬೀಟ್ರೂಟ್ ಹಲ್ವ ಮಾಡುವುದು ತುಂಬಾ ಸರಳ. ಸಕ್ಕರೆ, ತುಪ್ಪ ಮತ್ತು ಹಾಲಿನೊಂದಿಗೆ ತುರಿದ ಬೀಟ್ರೂಟ್ ಅನ್ನು ಬೇಯಿಸಬೇಕು. ಬಳಿಕ ಅದಕ್ಕೆ ಬಾದಾಮಿ, ಗೋಡಂಬಿ ಮತ್ತು ಏಲಕ್ಕಿ ಪುಡಿ ಮಿಕ್ಸ್ ಮಾಡಿ ಹಲ್ವ ತಯಾರಿಸಬಹುದು. ಅದರಲ್ಲೂ ತುಪ್ಪದ ಘಮದೊಂದಿಗೆ ಬೀಟ್ರೂಟ್ ಹಲ್ವ ತಿನ್ನಲು ರುಚಿಯಾಗಿರುತ್ತದೆ.
ಇದನ್ನು ಓದಿ: Health Tips: ತೂಕ ಇಳಿಸ್ಬೇಕಾ? ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಖರ್ಜೂರ ಸೇವಿಸಿ!
ಬೀಟ್ರೂಟ್ ಸಲಾಡ್
ಬೀಟ್ರೂಟ್ ಅನ್ನು ಸಲಾಡ್ ಆಗಿ ಬಳಸಲು ಉತ್ತಮ ಮಾರ್ಗ. “ಬೀಟ್ರೂಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅದಕ್ಕೆ ಸೌತೆ ಕಾಯಿ, ಕ್ಯಾರೆಟ್, ಚೀಸ್ ಇತರ ಪದಾರ್ಥಗಳನ್ನು ಸಲಾಡ್‌ಗೆ ಸೇರಿಸಿ. ನಿಂಬೆ ರಸವನ್ನು ಬೆರಿಸಿ, ಸ್ವಲ್ಪ ಉಪ್ಪು, ಖಾರ ಸೇರಿಸಿದರೆ ಬೀಟ್ರೂಟ್ ಸಲಾಡ್ ಸಿದ್ಧವಾಗುತ್ತದೆ.