ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Hair Care Tips: ಕೂದಲು ಸಾಫ್ಟ್‌ & ಶೈನ್ ಆಗಿ ಕಾಣಲು ಈ ಸೀಕ್ರೆಟ್ ಟಿಪ್ಸ್ ಬಳಸಿ!

ಬಹುತೇಕ ಹೇರ್ ಬ್ಯುಟಿ ಟ್ರಿಟ್ಮೆಂಟ್ ರಾಸಾಯನಿಕವಾಗಿದ್ದು ಅವುಗಳು ಕೃತಕ ಕಾಲದವರೆಗೆ ಮಾತ್ರ ಬಳಕೆಗೆ ಬರಲಿದೆ. ಅದರಲ್ಲಿಯೂ ಅಧಿಕ ಶಾಖದ ಮುಖೇನ ಕೂದಲು ಸ್ಟ್ರೈಟಿಂಗ್ ಮಾಡುವುದರಿಂದ ಕೂದಲ ಜೀವ ಸತ್ವ ನಶಿಸಿ ಹೊಳಪಿಗಿಂತಲೂ ಹೆಚ್ಚು ರಫ್ ಆಗಿ ಕಾಣಲಿದೆ. ಹಾಗಾಗಿ ಕೇಶ ರಾಶಿಯ ಹೊಳಪು ಹೆಚ್ಚಿಸಲು ಕೆಲವೊಂದು ಸರಳ‌ ಮನೆ ಮದ್ದು ಪ್ರಯತ್ನಿಸುವುದು ಬಹಳ ಉತ್ತಮ.

ಕೂದಲು ಸಾಫ್ಟ್  ಹಾಗೂ ಶೈನ್ ಆಗಿ ಕಾಣಲು ಇಲ್ಲಿದೆ ಟಿಪ್ಸ್!

Profile Pushpa Kumari Feb 23, 2025 6:00 AM

ನವದೆಹಲಿ: ಮುಖ ಬಹಳ ಅಂದ ಕಾಣಬೇಕು ಎಂದರೆ ಸೊಂಪಾದ ಕೇಶ ರಾಶಿ ಬಹಳ ಮುಖ್ಯ. ಅದರಲ್ಲಿಯೂ ಮಹಿಳೆಯರ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳಿಸಲು ಕೂದಲು ಬಹಳ ಮುಖ್ಯವಾಗಿದ್ದು ಕೆಲವರಿಗೆ ಬೈ ಬರ್ತ್ ಎಂಬಂತೆ ಶೈನಿ ಕೂದಲು ಇದ್ದರೆ ಇನ್ನು ಕೆಲವರು ಆರ್ಟಿಫಿಶಿಯಲ್ ಥೆರಪಿಗಳ ಮುಖೇನ ಕೂದಲ ಹೊಳಪನ್ನು ಹೆಚ್ಚಿಸಲು ಮುಂದಾಗುತ್ತಾರೆ. ಕೆರೆಟಿನ್, ಸ್ಮೂತ್‌ನಿಂಗ್ ಎಂಬ ಅನೇಕ ಪ್ರಕಾರದ ಹೇರ್ ಟ್ರೀಟ್‌ಮೆಂಟ್‌ಗಳಿವೆ. ಅದರಲ್ಲೂ ಅಧಿಕ ಶಾಖದ ಮುಖೇನ ಕೂದಲು ಸ್ಟ್ರೈಟ್ನಿಂಗ್‌ ಮಾಡುವುದರಿಂದ ಕೂದಲ ಜೀವಸತ್ವ ನಶಿಸಿ ಹೊಳಪಿಗಿಂತಲೂ ಹೆಚ್ಚು ರಫ್ ಆಗಿ ಕಾಣಲಿದೆ. ಹಾಗಾಗಿ ನಿಮ್ಮ ಮನೆಯಲ್ಲಿಯೇ ಕೇಶ ರಾಶಿಯ ಹೊಳಪು ಹೆಚ್ಚಿಸಲು ಕೆಲವೊಂದು ಸರಳ‌ ಮನೆ ಮದ್ದು ಪ್ರಯತ್ನಿಸುವುದು ಬಹಳ ಉತ್ತಮ.

ಮೊಟ್ಟೆ ಹೇರ್ ಮಾಸ್ಕ್ ಬಳಸಿ: ಮೊಟ್ಟೆಯನ್ನು ಜೇನು ತುಪ್ಪ ಹಾಗೂ ಮೊಸರಿನೊಂದಿಗೆ ಬೆರೆಸಿ ಮಿಶ್ರ ಗೊಳಿಸಿದ್ದ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಬೇಕು. ಹೀಗೆ ಹಚ್ಚು ವುದರಿಂದ ಕೂದಲಿಗೆ ಹೊಳಪು ನೀಡುವ ಜೊತೆಗೆ ವಿಟಮಿನ್ ಮತ್ತು ತೇವಾಂಶವನ್ನು ಕೂದಲ ಆರೈಕೆಗೆ ಒದಗಿಸಲಿದೆ. ಎಗ್ ವೈಟ್ ಹಚ್ಚುದರಿಂದ ಕೂಡ ಒಣ ಕೂದಲನ್ನು ಶೈನಿ ಕೂದಲನ್ನಾಗಿ ಮಾಡಬಹುದು.

ತಂಪಾಗಿಸುವ ತೆಂಗಿನೆಣ್ಣೆ: ಕೂದಲಿಗೆ ತೆಂಗಿನ ಎಣ್ಣೆ ಬಹಳ ಮುಖ್ಯ. ತಲೆಯ ನೆತ್ತಿ ಹಾಗೂ ಕೂದಲಿಗೆ ಬಿಸಿ ಮಾಡಿ ಆರಿಸಿದ್ದ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಎಣ್ಣೆಯಲ್ಲಿ ಇರುವ ಪೌಷ್ಟಿಕ ಗುಣಮಟ್ಟವು ಕೂದಲಿಗೆ ಹೊಳಪು ನೀಡಲಿದೆ. ಇದು ಕೂದಲನ್ನು ತೇವಗೊಳಿಸಲು, ಕಂಡಿಷನರ್‌ನಂತೆ ಕೆಲಸಮಾಡುತ್ತದೆ. ತೆಂಗಿನ ಎಣ್ಣೆಗೆ ಮೆಂತ್ಯೆ ಕಾಳು ಸೇರಿಸಿದರೂ ಕೂಡ ಅದು ಬಹಳ ಉತ್ತಮ ಆಯುರ್ವೇದ ಔಷಧದಂತೆ ನಿಮ್ಮ ತಲೆ ಕೂದಲಿನ ಹೊಳಪಿಗೆ ಸಹಕಾರಿಯಾಗಲಿದೆ.

ಗ್ರೀನ್ ಟೀ ಬಳಕೆ: ಹೆಚ್ಚಾಗಿ ಶ್ಯಾಂಪು ಬಳಕೆ ಮಾಡುವುದು ಕೆಲವೊಮ್ಮೆ ಕೂದಲು ಹಾನಿಯಾಗುವ ಸಾಧ್ಯತೆ ಇದೆ. ಕೂದಲನ್ನು ಶ್ಯಾಂಪು ಹಾಕಿ ತೊಳೆದ ಬಳಿಕ ಗ್ರೀನ್ ಟೀ ಯಿಂದ ತೊಳೆಯಬೇಕು. ಗ್ರೀನ್ ಟೀ ನಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಗಳು ಮತ್ತು ಕ್ಯಾಟೆಚಿನ್ ಗಳು ತೇವಾಂಶವನ್ನು ಉಳಿಸಿಕೊಳ್ಳಲು ಉಪಯುಕ್ತವಾಗುವ ಜೊತೆಗೆ ಕೂದಲು ಉದುರುವ ಸಮಸ್ಯೆ ನಿವಾರಿಸಿ ಹೆಚ್ಚು ಹೊಳಪನ್ನು ನೀಡುವಂತೆ ಮಾಡಲಿದೆ.

ಮೊಸರಿನ ಹೇರ್ ಪ್ಯಾಕ್ ಮಾಡಿ: ಮೊಸರು ತಿನ್ನುವುದರಿಂದ ಏನೆಲ್ಲ ಆರೋಗ್ಯ ಪ್ರಯೋಜನ ಇದೆ ಎಂಬುದು ನಮಗೆ ತಿಳಿದಿದೆ ಅದೇ ರೀತಿ ಮೊಸರನ್ನು ಕೂಡ ಹೇರ್ ಪ್ಯಾಕ್ ರೀತಿ ಬಳಕೆ ಮಾಡಿದರೆ ಕೂದಲು ಹೆಚ್ಚು ಸೊಂಪಾಗಿ ಮತ್ತು ಕಾಂತಿಯುತ ವಾಗಲಿದೆ. ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ಪೋಷ ಕಾಂಶ ಕೂದಲನ್ನು ಸ್ವಚ್ಛ ಗೊಳಿಸಿ, ತೇವಾಂಶ ಹಿಡಿದಿಟ್ಟುಕೊಳ್ಳುವಂತೆ ಮಾಡಿ ಫ್ರೀಜ್ ಕಡಿಮೆ ಮಾಡಿ ಹೊಳಪು ಹೆಚ್ಚಿಸುವಂತೆ ಮಾಡಲು ಸಹಕಾರಿ ಆಗಲಿದೆ.

ಅಲೋವೆರಾ ಬಳಸಿ:ಅಲೋವೆರಾದಲ್ಲಿ ಹೆಚ್ಚು ನೈಸರ್ಗಿಕ ಪೋಷಕಾಂಶ ಇದ್ದು ಇದನ್ನು ಬಳಕೆ ಮಾಡುವುದರಿಂದ ಕೂದಲು ಹೆಚ್ಚು ಕಾಂತಿಯುತವಾಗಲಿದೆ. ಅಲೋವೆರಾ ದಲ್ಲಿ ಇರುವ ಜೀವ ಸತ್ವ , ಖನಿಜಗಳು ಕೂದಲನ್ನು ಆಳವಾಗಿ ಪೋಷಿಸಿ ತೇವಾಂಶವನ್ನು ನೀಡುತ್ತದೆ. ಅಲೋವೆರಾ ಬಳಕೆ ಮಾಡುವುದರಿಂದ ತಲೆ ಹೊಟ್ಟು ಸಮಸ್ಯೆ ಮತ್ತು ಕೂದಲು ಉದುರುವಿಕೆ ಸಮಸ್ಯೆ ಕೂಡ ನಿವಾರಣೆ ಆಗಲಿದೆ.

ಇದನ್ನು ಓದಿ: Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದ್ರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು!

ಅಗಸೆ ಬೀಜ ಬಳಸಿ: ಅಗಸೆ ಬೀಜವನ್ನು ನೆನೆಸಿ ಅದರ ಹೇರ್ ಜೆಲ್ ಬಳಸುವುದರಿಂದ ಕೂದ ಲಿನ ಅನೇಕ ಸಮಸ್ಯೆ ನಿವಾರಣೆ ಆಗಲಿದೆ. ಬಿಳಿ ಕೂದಲಿನ ಸಮಸ್ಯೆ, ಸೀಳು ಕೂದಲು, ತಲೆ ಹೊಟ್ಟು ನಿವಾರಣೆ ಆಗುವ ಜೊತೆಗೆ ಕೂದಲು ಹೆಚ್ಚು ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಇದೊಂದು ಉತ್ತಮ ಔಷಧ ಎನ್ನಬಹುದು. ದಾಸವಾಳದ ಸೊಪ್ಪನ್ನು ಪೇಸ್ಟ್ ಮಾಡಿ ಬಳಸುವುದು, ಮೆಂತೆ ನೆನೆಸಿ ಪೇಸ್ಟ್ ಮಾಡಿ ಬಳಸುವುದು ಕೂಡ ಕೂದಲ ಕಾಂತಿ ಹೆಚ್ಚುವಂತೆ ಮಾಡಲಿದೆ. ಹೀಗಾಗಿ ಕೂದಲು ಅಂದವಾಗಿ ಹೊಳಪು ಯುಕ್ತವಾಗಬೇಕು ಎನ್ನುವವರು ಸಿಕ್ಕ ಸಿಕ್ಕ ರಾಸಾಯನಿಕ ವಸ್ತುಗಳನ್ನು ಬಳಸದೆ ಮನೆಯಲ್ಲಿ ಇಂತಹ ನೈಸರ್ಗಿಕ ಔಷಧ ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಕೂದಲ ಆರೈಕೆ ಮಾಡಲು ಸಹಾಯಕವಾಗುತ್ತದೆ.