ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಥೈರಾಯ್ಡ್ ಸಮಸ್ಯೆ ಇದ್ದರೆ ದಿನವೂ ಮಖಾನ ಸೇವಿಸುವುದು ಎಷ್ಟು ಒಳ್ಳೆಯದು?

Health Tips: ಇಂದು ಥೈರಾಯ್ಡ್ ಸಮಸ್ಯೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ವಿಪರೀತ ಆಯಾಸ, ತೂಕ ಹೆಚ್ಚಾಗುವುದು, ಖಿನ್ನತೆಯಂತಹ ಅನೇಕ ಸಮಸ್ಯೆಗಳು ಇದರಿಂದ ಉಂಟಾಗಬಹುದು. ಹೀಗಾಗಿ ಮಿತಿಮೀರುವ ಮೊದಲೇ ನಾವು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಮುಖ್ಯವಾಗಿ ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಪ್ರತಿದಿನ ಸೂಕ್ತವಾದ ಉಪ ಹಾರದ ಆಯ್ಕೆ ಅಂದ್ರೆ ಅದು ಮಖಾನ.

ಥೈರಾಯ್ಡ್  ಸಮಸ್ಯೆಗೆ ರಾಮಬಾಣ ಮಖಾನ!

ಸಂಗ್ರಹ ಚಿತ್ರ -

Profile
Pushpa Kumari Sep 15, 2026 7:00 AM

ನವದೆಹಲಿ,ಸೆ.14: ಇಂದು ಥೈರಾಯ್ಡ್ ಸಮಸ್ಯೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ವಿಪರೀತ ಆಯಾಸ, ತೂಕ ಹೆಚ್ಚಾಗುವುದು, ಖಿನ್ನತೆಯಂತಹ ಅನೇಕ ಸಮಸ್ಯೆಗಳು ಇದರಿಂದ ಉಂಟಾಗಬಹುದು. ಹೀಗಾಗಿ ಮಿತಿಮೀರುವ ಮೊದಲೇ ನಾವು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಮುಖ್ಯವಾಗಿ ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಪ್ರತಿದಿನ ಸೂಕ್ತವಾದ ಉಪಹಾರದ ಆಯ್ಕೆ ಅಂದ್ರೆ ಅದು ಮಖಾನ (Eating Makhana) ಇದು ಹಾರ್ಮೋನ್ ಬ್ಯಾಲೆನ್ಸ್ ತಪ್ಪದಂತೆ ಅತ್ಯುತ್ತಮ ಹಾಗೂ ಸುರಕ್ಷಿತ ಆಹಾರವಾಗಿ ಕಾಣಿಸಿಕೊಂಡಿದೆ.

ನೈಸರ್ಗಿಕವಾದ ಸುರಕ್ಷಿತ ಆಹಾರವಾಗಿದ್ದು ಗಾಯ್ಟ್ರೋಜೆನಿಕ್ ಹೊಂದಿಲ್ಲ:

ಥೈರಾಯ್ಡ್ ನಿರ್ವಹಣೆಯಲ್ಲಿ ಅತ್ಯಂತ ಅಂಶವೆಂದರೆ ಗಾಯ್ಟ್ರೋಜೆನಿಕ್ ಆಹಾರಗಳನ್ನು ತಪ್ಪಿಸುವುದು ಆಗಿದೆ. ಗಾಯ್ಟ್ರೋಜೆನ್‌ಗಳು ಹೆಚ್ಚಾಗಿ ತರಕಾರಿಗಳಾದ ಎಲೆಕೋಸು ಹೂಕೋಸು , ಸೋಯಾ ಮತ್ತು ಕೆಲವು ರಾಗಿಗಳಂತಹ ಹಲವಾರು ಆರೋಗ್ಯಕರ ಸಸ್ಯ ಆಧಾರಿತ ಆಹಾರಗಳಲ್ಲಿ ಕಂಡುಬರುವ ಸಂಯುಕ್ತಗಳಾಗಿವೆ. ಇವು ದೇಹವು ಅಯೋಡಿನ್ ಬಳಸಿಕೊಳ್ಳುವುದನ್ನು ತಡೆಯುತ್ತವೆ. ಆದರೆ ಮಖಾನದಲ್ಲಿ ಈ ರೀತಿಯ ಯಾವುದೇ ಹಾನಿಕಾರಕ ಅಂಶ ಇಲ್ಲ.

ತೂಕ ನಿಯಂತ್ರಣ ಮಾಡಲು ಸಹಕಾರಿ:

ಡಯಟ್ ಮಾಡಿ ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಇದ್ದವರಿಗೆ ಇವುಗಳು ಸಹಾಯಕ್ಕೆ ಬರುತ್ತವೆ. ಇದರಲ್ಲಿ ನಾರಿನ ಪ್ರಮಾಣ ಹೆಚ್ಚಾಗಿ ಇರುವುದರಿಂದ ಹೊಟ್ಟೆ ಬೇಗ ತುಂಬುವ ಅನುಭವ ಬರುತ್ತದೆ. ಹಾಗಾಗಿ ತೂಕ ಇಳಿಕೆಗೆ ಇದು ಅತ್ಯುತ್ತಮ ಉಪಹಾರವಾಗಿದೆ.

Health Tips: ಮೊಬೈಲ್ ಸ್ಕ್ರೋಲ್ ಮಾಡುತ್ತ ಆಹಾರ ಸೇವಿಸುವ ಅಭ್ಯಾಸ ನಿಮಗಿದ್ಯಾ? ನೀವು ಡೇಂಜರ್‌ ಝೋನ್‌ನಲ್ಲಿದ್ದೀರಿ ಎಂದೇ ಅರ್ಥ

ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ:

ಮಖಾನವು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಹೊಡೆದೋಡಿಸಿ ಪ್ರಮುಖ ಏಜೆಂಟ್ ಗಳಾಗಿ ಕೆಲಸ ಮಾಡುತ್ತವೆ. ದೇಹದಲ್ಲಿ ನೀರು ಶೇಖರಣೆಯಾಗಿ ಮುಖ ಊದಿ ಕೊಳ್ಳುವುದನ್ನು ನಿಯಂತ್ರಣ ಮಾಡುವುದರಲ್ಲೂ ಸಹಕಾರಿ.

ಉರಿಯೂತ ಮತ್ತು ಜೀರ್ಣಕ್ರಿಯೆ ಸುಧಾರಣೆ:

ಮಖಾನದಲ್ಲಿರುವ ಕ್ಯಾಂಪ್ಫೆರಾಲ್ ನಂತಹ ಆಂಟಿ ಆಕ್ಸಿಡೆಂಟ್‌ಗಳು ದೇಹದ ಉರಿಯೂತವನ್ನು ತಡೆಯಲು ಬಹಳಷ್ಟು ಸಹಕಾರಿಯಾಗಿದೆ. ಮಖಾನದ ಜೀರ್ಣಕಾರಿ ಗುಣಗಳು ಹಾರ್ಮೋನ್ ಸಮತೋಲನ ಗೊಳಿಸಲು ಸಹಾಯ ಮಾಡುತ್ತದೆ.

ರಕ್ತಹೀನತೆ ಸಮಸ್ಯೆ ಪರಿಹಾರ:

ಮಖಾನದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ರಕ್ತಹೀನತೆಯನ್ನು ತಡೆಯುತ್ತದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಿ ಆರೋಗ್ಯಕರವಾಗಿ ಇರಿಸುತ್ತದೆ.

​ಸೇವಿಸುವಾಗ ಇರಬೇಕಾದ ಪ್ರಮುಖ ನಿಯಮಗಳು:

*​ಮನೆಯಲ್ಲೇ ಹುರಿಯಿರಿ: ಸ್ವಲ್ಪ ತುಪ್ಪ ಅಥವಾ ಕೊಬ್ಬರಿ ಎಣ್ಣೆಹಾಕಿ ಮನೆಯಲ್ಲೆ ಹುರಿಯಿರಿ.

*​ಅಂಗಡಿಗಳಲ್ಲಿ ಸಿಗುವಪ್ಯಾಕೆಟ್‌ ತಪ್ಪಿಸಿ: ಇದರಲ್ಲಿ ಹೆಚ್ಚಿನ ತಾಳೆ ಎಣ್ಣೆ, ಕೃತಕ ಬಣ್ಣ ಹಾಕಿ ಸಿದ್ದಪಡಿಸಲಾಗುತ್ತದೆ‌ ಅವುಗಳನ್ನು ತಪ್ಪಿಸಿ.

*ಥೈರಾಯ್ಡ್ ಮಾತ್ರೆ ಸೇವಿಸಿ ತಕ್ಷಣಕ್ಕೆ ಯಾವುದೇ ಆಹಾರ ಅಥವಾ ಮಖಾನ ಸೇವಿಸಬಾರದು.