ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Health: ಸದಾ ಏಕಾಂತ ಬಯಸುವ ಜೆನ್ ಝೀಗಳ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಹೇಗೆ?

Social Well-being: ಜೆನ್ ಝೀಗಳ ಸಾಮಾಜಿಕ ಸ್ವಾಸ್ಥ್ಯ ಕಳವಳಕಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ನಾವು ಸಾಮಾಜಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವುದು. ಇದು ಹೇಗೆ, ಯಾಕೆ, ಇದನ್ನು ಹೇಗೆ ಸರಿಪಡಿಸಬಹುದು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

ಜೆನ್ ಝೀಗಳ ಸಾಮಾಜಿಕ ಸ್ವಾಸ್ಥ್ಯ  ಹೇಗಿದೆ?

ಡಾ. ಸುತ್ತೂರು ಮಾಲಿನಿ -

ಬೆಂಗಳೂರು: ಇವತ್ತು ಹೆಚ್ಚಿನ ಮಕ್ಕಳು ಒಂಟಿತನದಿಂದ ಬಳಲುತ್ತಿದ್ದಾರೆ. ಮನೆ ದೊಡ್ಡದಾಗಿದೆ ಆದರೆ ಮನೆಯಲ್ಲಿ ಜನರಿಲ್ಲ. ಹೀಗಾಗಿ ಅವರು ಎಲ್ಲವನ್ನೂ ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಅವರಿಗೆ ತಮ್ಮ ಕಷ್ಟ ಸುಖಗಳನ್ನು ಕೇಳುವವರೇ ಇಲ್ಲ ಎಂದೆನಿಸುತ್ತಿದೆ. ಹೀಗಾಗಿ ಜೆನ್ ಝೀಗಳ (Gen Z) ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ನಿರೂಪಕಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ನಾವು ಇವತ್ತು ವರ್ಚುವಲ್ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ನಮ್ಮ ಸುತ್ತಮುತ್ತ ನಾವೇ ಕೋಟೆಗಳನ್ನು ಕಟ್ಟುತ್ತಿದ್ದೇವೆ.ಇದರಿಂದ ಸಾಮಾಜಿಕ ಆರೋಗ್ಯ ಕಳೆದುಕೊಂಡು ಬಾಂಧವ್ಯ, ಪ್ರೀತಿ ಕಡಿಮೆಯಾಗಿ ಮಕ್ಕಳಲ್ಲಿ ಒಂಟಿತನ ಕಾಡುತ್ತಿದೆ ಎಂದು ತಿಳಿಸಿದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:



ಮನೆಯಲ್ಲಿ ಜನ ಕಡಿಮೆ ಇದ್ದು, ಮನೆ ದೊಡ್ಡದಾಗಿದೆ. ಹಿಂದೆಲ್ಲ ಮನೆ ಚಿಕ್ಕದಾಗಿದ್ದರೂ ಮನೆ ತುಂಬಾ ಜನವಿದ್ದರು. ಮಕ್ಕಳ ಬೆಳವಣಿಗೆ, ಸಣ್ಣ ಪುಟ್ಟ ನಡವಳಿಕೆ ಬಗ್ಗೆ ಮನೆಯವರಿಗೆ ಗೊತ್ತಾಗಿರುತ್ತಿತ್ತು. ಆದರೆ ಇವತ್ತು ಮಗುವಿನ ಕಷ್ಟ ಕೇಳಲು ಯಾರಿಗೂ ಸಮಯವಿಲ್ಲ ಎಂದರು.

ಅತಿಯಾದ ಮೊಬೈಲ್‌ ಬಳಕೆಯಿಂದ ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ

ಮಕ್ಕಳು ಹೆಚ್ಚು ಭಾವನಾತ್ಮಕವಾಗಿದ್ದಾಗ ಅವರ ಮಾತನ್ನು ಕೇಳಬೇಕು. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ಬರೋಬ್ಬರಿ ಎರಡು ಲಕ್ಷ ಫಾಲೋವರ್ ಇದ್ದರೂ ಅವರ ಸಮಸ್ಯೆ ಕೇಳುವವರು ಯಾರೂ ಇಲ್ಲ. ನಾವೆಲ್ಲರೂ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ನಮ್ಮಲ್ಲಿ ಸಾಮಾಜಿಕ ಬದ್ಧತೆ ಕಡಿಮೆಯಾಗುತ್ತಿದೆ. ಮನುಷ್ಯ ಸಂಘ ಜೀವಿ. ಆದರೆ ಇವತ್ತು ಎಲ್ಲಾ ಇದ್ದು ನಾವು ಒಂಟಿಯಾಗುತ್ತಿದ್ದೇವೆ. ಜನರೊಂದಿಗೆ ನಾವು ಬೆರೆತಾಗ ಡೊಕೋಮೈನ್, ಸೆರೋಟಿನ್, ಆಕ್ಸಿಟಾಸೀನ್, ಎಂಡೋಫೀನ್, ಮೇಲೊಟಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಮನುಷ್ಯನಿಗೆ ಮನುಷ್ಯನ ಸ್ಪರ್ಶ ಬೇಕು. ಆದರೆ ಪ್ರತಿಷ್ಠೆ, ಅಹಂ ಇದ್ದಾಗ ಸಮಾಜ ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಬೆಳಗಿನ ತಿಂಡಿಗೆ ಹಣ್ಣು ಸೇವಿಸುತ್ತಿದ್ದೀರಾ? ಈ ಅಭ್ಯಾಸ ಇಂದೇ ಬಿಟ್ಟುಬಿಡಿ; ಆರೋಗ್ಯ ತಜ್ಞರ ಕಿವಿಮಾತು ಇಲ್ಲಿದೆ

ಮುಖ್ಯವಾಗಿ ನಮಗೆ ಮಾರ್ಗದರ್ಶನ ಮಾಡುವವರು ಇಲ್ಲ. ಕೇಳುವವರು ಇಲ್ಲ. ಮಕ್ಕಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಅವರಿಗೆ ಕ್ಷಮಿಸುವುದನ್ನು ಹೇಳಿಕೊಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಸಮಾಜದಲ್ಲಿ ಹೊಂದಿಕೊಂಡು ಬಾಳುವುದನ್ನು ಕಲಿಸಬೇಕು ಎಂದು ಡಾ. ಸುತ್ತೂರು ಮಾಲಿನಿ ಹೇಳಿದರು.