Gastric Problem: ಇಡ್ಲಿ, ಚಿತ್ರಾನ್ನ ತಿಂದ್ರೂ ಗ್ಯಾಸ್ಟ್ರಿಕ್ ಪ್ರಾಬ್ಲಂ ಆಗುತ್ತಾ? ಇಲ್ಲಿದೆ ನೋಡಿ ಪರಿಹಾರ!
ನೀರು ಕುಡಿದಿದ್ದು ಕಡಿಮೆ ಆಗಿದ್ದಕ್ಕೆ, ಮಸಾಲೆ ಆಹಾರಗಳನ್ನು ತಿಂದಿದ್ದಕ್ಕೆ, ಪ್ರಯಾಣ ಮಾಡಿದ್ದಕ್ಕೆ- ಹೀಗೆ ಅನಿರೀಕ್ಷಿತ ಕಾರಣಗಳಿಗಾಗಿ ಗ್ಯಾಸ್ಟ್ರೈಟಿಸ್ ಉಂಟಾ ಗಬಹುದು. ಜೊತೆಗೆ ತಲೆನೋವು, ಹುಳಿತೇಗು, ವಾಂತಿ, ಹೊಟ್ಟೆ ತೊಳೆ ಸುವುದು ಇತ್ಯಾದಿ ತೊಂದರೆಗಳು ಕಾಡಬಹುದು. ಅಸಲಿಗೆ ಏನು ಸಮಸ್ಯೆಯಿದು ಮತ್ತು ಇದನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಖ್ಯಾತ ಆಯುರ್ವೇದ ತಜ್ಞರಾದ ಡಾ. ಮಲ್ಲಿಕಾರ್ಜುನ ಡಂಬಳ ಅವರು ವಿವರಿಸಿದ್ದಾರೆ.


- ಡಾ. ಮಲ್ಲಿಕಾರ್ಜುನ ಡಂಬಳ, ಖ್ಯಾತ ಆಯುರ್ವೇದ ತಜ್ಞ
ಬೆಂಗಳೂರು: ಗ್ಯಾಸ್ಟ್ರೈಟಿಸ್ ಅನ್ನುವ ಹೆಸರೇ ಕೆಲವೊಮ್ಮೆ ಹೊಟ್ಟೆಯಲ್ಲಿ ತಳಮಳ ಸೃಷ್ಟಿಸಬಹುದು. ಕಾರಣ, ಒಂದೆರಡು ಕಪ್ ಕಾಫಿ/ ಟೀ ಕುಡಿ ದಿದ್ದಕ್ಕೆ, ಊಟ ತಡವಾಗಿದ್ದಕ್ಕೆ, ನಿದ್ದೆಗೆಟ್ಟಿದ್ದಕ್ಕೆ, ಉದ್ದಿನ ಆಹಾರಗಳನ್ನು ತಿಂದಿದ್ದಕ್ಕೆ, ನೀರು ಕುಡಿದಿದ್ದು ಕಡಿಮೆ ಆಗಿದ್ದಕ್ಕೆ, ಮಸಾಲೆ ಆಹಾರಗಳನ್ನು ತಿಂದಿದ್ದಕ್ಕೆ, ಪ್ರಯಾಣ ಮಾಡಿದ್ದಕ್ಕೆ- ಹೀಗೆ ಅನಿರೀಕ್ಷಿತ ಕಾರಣಗಳಿಗಾಗಿ ಗ್ಯಾಸ್ಟ್ರೈಟಿಸ್ (Gastric Problem) ಉಂಟಾಗಬಹುದು. ಜೊತೆಗೆ ತಲೆನೋವು, ಹುಳಿತೇಗು, ವಾಂತಿ, ಹೊಟ್ಟೆ ತೊಳೆಸುವುದು ಇತ್ಯಾದಿ ತೊಂದರೆಗಳು ಕಾಡಬಹುದು. ಒಂದು ಆಂಟಾಸಿಡ್‌ನಿಂದ ಆ ದಿನದ ಸಮಸ್ಯೆ ಉಪಶಮನ ಕಾಣಬಹುದೇ ಹೊರತು, ಸಮಸ್ಯೆ ಮೂಲದಲ್ಲಿ ಹಾಗೆಯೇ ಉಳಿಯುತ್ತದೆ. ಅಸಲಿಗೆ ಏನು ಸಮಸ್ಯೆಯಿದು ಮತ್ತು ಇದನ್ನು ಹೇಗೆ ಪರಿಹರಿಸಿ ಕೊಳ್ಳಬಹುದು ಎಂಬುದನ್ನು ಖ್ಯಾತ ಆಯುರ್ವೇದ ತಜ್ಞರಾದ ಡಾ. ಮಲ್ಲಿಕಾರ್ಜುನ ಡಂಬಳ ಅವರು ವಿವರಿಸಿದ್ದಾರೆ.
ಮೊದಲಿಗೆ, ಎಲ್ಲರನ್ನೂ ಕಾಡುತ್ತಿರುವ ಆ ಪದವನ್ನು ಅರ್ಥ ಮಾಡಿ ಕೊಳ್ಳೋಣ. ಗ್ಯಾಸ್ಟ್ರೈಟಿಸ್ ಅನ್ನುವ ಶಬ್ದವನ್ನು ಒಡೆದರೆ- ಗ್ಯಾಸ್ಟ್ರಿಯಂ ಮತ್ತು ಐಟಿಸ್. ಗ್ಯಾಸ್ಟ್ರಿಯಂ ಅಂದರೆ ಜಠರ, ಐಟಿಸ್ ಎಂದರೆ ಊತ. ಅಂದರೆ ಜಠರದಲ್ಲಿ ಕಾಣುವಂಥ ಊತ. ಇದನ್ನೀಗ ಕಡಿಮೆ ಮಾಡುವ ಬಗ್ಗೆ ಯೋಚಿಸುವ ಮುನ್ನ, ಹಾಗೆ ಊತ ಬಂದರೆ ಆಗುವ ಪರಿಣಾಮವೇನು ಎನ್ನುವುದನ್ನು ಗಮನಿಸೋಣ. ಊತ ಬಂದಂಥ ಅಂಗ- ಅದು ಯಾವುದೇ ಇರಲಿ, ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಿಲ್ಲ. ಕಣ್ಣಿನಲ್ಲಿ ಊತ ಇದ್ದರೆ ಸರಿಯಾಗಿ ಕಾಣುವುದಿಲ್ಲ; ಕಿವಿಯಲ್ಲಿ ಬಂದರೆ ಸ್ಪಷ್ಟವಾಗಿ ಕೇಳುವುದಿಲ್ಲ; ಕಾಲಿನಲ್ಲಾದರೆ ನಡೆಯಲಾಗದು. ಹಾಗೆ ಯೇ ಜಠರದಲ್ಲಿ ಊತ ಬಂದರೆ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ.
ಏಕೆ ಬರುತ್ತದೆ?: ಇದಕ್ಕೆ ಮುಖ್ಯ ಕಾರಣವೆಂದರೆ ನಾವು ತಿನ್ನುವ ಆಹಾರದ ಸ್ವರೂಪ. ಅಂದರೆ, ನಾವು ತಿನ್ನುವ ಆಹಾರವನ್ನು ನಂನಮ್ಮ ದೇಹಕ್ಕೆ ಒಗ್ಗುವಂಥದ್ದು (ಸಾತ್ಮ್ಯ) ಮತ್ತು ಒಗ್ಗದಿರುವಂಥದ್ದು (ಅಸಾತ್ಮ್ಯ) ಎಂದು ವಿಂಗಡಿಸಿಕೊಳ್ಳಬಹುದು. ಹಾಗಾದರೆ ಒಗ್ಗುವಂಥ ಆಹಾರಗಳ ಪಟ್ಟಿಯನ್ನು ಪಾಲಿಸಿದರೆ ಸಮಸ್ಯೆ ತೀರಿತಲ್ಲವೇ? ಇಲ್ಲ, ಹಾಗಾಗದು! ಒಬ್ಬರಿಗೆ ಒಗ್ಗು ವುದು ಎಲ್ಲರಿಗೂ ಒಗ್ಗಬೇಕೆಂದಿಲ್ಲ. ಹಾಗಾಗಿ ಆಹಾರವೊಂದಕ್ಕೆ ನಮ್ಮ ಶರೀರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಾವೇ ಗಮನಿಸಿ ಕೊಳ್ಳ ಬೇಕು. ಯಾವುದೇ ಆಹಾರವು ಸೇವಿಸಿದ ಎರಡು ತಾಸಿನಲ್ಲಿ ಸುಲಭವಾಗಿ ಪಚನ ವಾಯಿತು ಎಂದಾದರೆ, ಅದು ನಮಗೆ ಒಗ್ಗುವಂಥದ್ದು. ಹಾಗಾಗದೇ ಎರಡು ತಾಸುಗಳಾದರೂ ಹೊಟ್ಟೆ ಭಾರವೇ ಇದೆ, ಹಸಿವೇ ಆಗಲಿಲ್ಲ ಎಂದಾದರೆ ಅದು ನಮಗೆ ಒಗ್ಗುವಂಥದ್ದಲ್ಲ. ಅಂಥ ಆಹಾರವನ್ನು ವರ್ಜಿ ಸಬೇಕು. ಉದಾ, ಉದ್ದಿನ ಇಡ್ಲಿ; ಇದು ಬಹುತೇಕರಿಗೆ ಅಸಾತ್ಮ್ಯ ಆಹಾರ. ಇದರಿಂದ ಹೊಟ್ಟೆ ಭಾರವಾಗುವುದು ಸಾಮಾ ನ್ಯ. ಇಂಥ ಆಹಾರವನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಜಠರದಲ್ಲಿ ಊತ ಬರುವುದು, ಅಂದರೆ ಗ್ಯಾಸ್ಟ್ರೈಟಿಸ್ ಬರುವುದು ದಿಟ.
ತೀಕ್ಷ್ಣ ರುಚಿಗಳು: ಖಾರ, ಹುಳಿ ಮುಂತಾದ ತೀಕ್ಷ್ಣ ರುಚಿಗಳನ್ನು ತಿಂದರೆ ಗ್ಯಾಸ್ಟ್ರೈಟಿಸ್ ಬರುತ್ತದೆಂದು ಹಲವರು ದೂರುವುದನ್ನು ಕೇಳಿರಬಹುದು. ಇದು ಸುಳ್ಳೇನಲ್ಲ. ಆದರೆ ಇದರಲ್ಲೂ ಒಂದು ವಿಷಯವನ್ನು ಲಕ್ಷಿಸಬೇಕು. ಒಬ್ಬರಿಗೆ ಖಾರ ಎನಿಸಿದ್ದು, ಇನ್ನೊಬ್ಬರಿಗೆ ಖಾರವೇ ಅಲ್ಲದಿರಬಹುದು. ಇದು ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದ್ದು. ಆದಾಗ್ಯೂ, ನಮ್ಮ ಆಹಾರ ಗಳಲ್ಲಿ ಹೆಚ್ಚಾಗಿ ಇರಬೇಕಾದ್ದು ಮಧುರ ರಸಗಳು. ಹಾಗೆನ್ನುತ್ತಿದ್ದಂತೆ ಸಕ್ಕರೆ, ಬೆಲ್ಲಗಳನ್ನು ತಿನ್ನಬೇಕೆಂದಲ್ಲ. ಅಕ್ಕಿ, ಜೋಳ, ರಾಗಿ ಮುಂತಾ ದವುಗಳಿಂದ ಮಾಡಿದ ಅನ್ನ, ರೊಟ್ಟಿ, ಮುದ್ದೆ ಇವೆಲ್ಲ ಮಧುರ ರಸಕ್ಕೆ ಸೇರಿದವು. ಇವುಗಳನ್ನು ಬಾಯಲ್ಲಿಟ್ಟುಕೊಂಡರೆ ನಮಗೆ ಕಿರಿಕಿರಿ ಆಗುವುದಿಲ್ಲ. ಅದೇ, ಉಪ್ಪನ್ನೊ, ಮೆಣಸಿನ ಕಾಯನ್ನೊ, ನಿಂಬೆ ರಸವನ್ನೋ ಬಾಯಲ್ಲಿ ತುಂಬಿಕೊಂಡರೆ ಕಿರಿಕಿರಿ ಮುಗಿಯುವುದೇ ಇಲ್ಲ. ಇದೇ ಆಧಾರ ದಲ್ಲಿ, ಮಧುರ ರಸದ ಆಹಾರಗಳು ಹೊಟ್ಟೆಗೂ ಕಿರಿಕಿರಿ ಮಾಡಲಾರವು. ಹಾಗಾಗಿ ಊಟದಲ್ಲಿ ಷಡ್ರಸಗಳು ಬೇಕು ಎನ್ನುವುದು ಹೌದಾದರೂ ಹೆಚ್ಚಿನ ಭಾಗ ಮಧುರ ರಸದಿಂದಲೇ ಕೂಡಿರಬೇಕು. ಇದಕ್ಕಾಗಿ ನಮ್ಮ ಅಡುಗೆ ಯನ್ನು ನಾವೇ ಮಾಡಿಕೊಳ್ಳುವುದು ಎಲ್ಲಾ ದೃಷ್ಟಿಯಿಂದಲೂ ಸೂಕ್ತ.
ಮಾತ್ರೆಗಳು ಅಗತ್ಯವೇ?: ಈ ಸಮಸ್ಯೆಗೆ ಮಾತ್ರೆಗಳು, ಸಿರಪ್‌ಗಳು ಪರಿಹಾರ ಅಲ್ಲವೇ ಅಲ್ಲ. ಅವುಗಳನ್ನು ಸೇವಿಸಲೂ ಬಾರದು. ಇಂದು ಗ್ಯಾಸ್ಟ್ರೈಟಿಸ್ ಇದೆ ಯೆಂದಾದರೆ, ಬೆಳಗ್ಗೆ ಒಂದು ಲೋಟ ಅನ್ನ ಬಸಿದು ತೆಗೆದ ಗಂಜಿತಿಳಿಯನ್ನು ಕುಡಿಯಿರಿ. ಮಧ್ಯಾನ್ನಕ್ಕೆ ಸರಳವಾಗಿ ಅನ್ನ-ಸಾರಿನ ಮನೆಯೂಟ ಮಾಡಿ. ರಾತ್ರಿ ಮತ್ತೆ ಅನ್ನ ಬಸಿದ ತಿಳಿ ಕುಡಿದ ಮಲಗಿ. ಮಾರನೇ ದಿನಕ್ಕೆ ಯಾವುದೇ ಔಷಧಿ ಇಲ್ಲದೆಯೇ ಗ್ಯಾಸ್ಟ್ರೈಟಿಸ್ ಕಡಿಮೆ ಆಗಿರುತ್ತದೆ. ಸುಲಭವಾಗಿ ಜೀರ್ಣವಾಗುವಂಥ ಆಹಾರವನ್ನು ಹೊಟ್ಟೆಗೆ ನೀಡಿದರೆ, ಅದು ತನ್ನನ್ನು ತಾನೇ ಸರಿ ಮಾಡಿಕೊಳ್ಳುತ್ತದೆ. ಇದಕ್ಕೆ ಮಾತ್ರೆಗಳಿಂದ ಪರಿಹಾರ ಸಾಧ್ಯವಿಲ್ಲ. ಹಾಗೆ ಸದಾ ಮಾತ್ರೆ ತಿನ್ನುತ್ತಿದ್ದರೆ, ಆ ಸಮ ಸ್ಯೆಯ ಬದಲಿಗೆ ಇನ್ನಾವುದೋ ಸಮಸ್ಯೆ ನಮಗೆ ಗಂಟಾಗುತ್ತದೆಯಷ್ಟೆ.
ಉಪೇಕ್ಷೆ ಮಾಡಿದರೇನಾಗುತ್ತದೆ?: ನಮ್ಮ ಜೀರ್ಣಾಂಗಗಳನ್ನು ನಮ್ಮ ಶರೀರದ ಬೇರು ಎಂದು ಕರೆಯಬಹುದು. ಬೇರು ಮಣ್ಣಿನಿಂದ ಸತ್ಯವನ್ನು ಹೀರಿಕೊಂಡು ಮರಕ್ಕೆಲ್ಲ ನೀಡುವಂತೆ, ಜೀರ್ಣಾಂಗಗಳು ಆಹಾರದ ಸತ್ವವನ್ನು ಹೀರಿಕೊಂಡು ದೇಹಕ್ಕೆಲ್ಲ ನೀಡುತ್ತವೆ. ಬೇರು ಸರಿಯಾಗಿಲ್ಲ ದಿದ್ದರೆ ಮರ ಸಾಯು ವಂತೆಯೇ ನಮ್ಮ ಸ್ಥಿತಿಯೂ ಆಗಬಾರದಲ್ಲ. ಕಾರಣ, ದೇಹದ ಪ್ರತಿಯೊಂದು ಭಾಗಕ್ಕೂ ಸತ್ವಗಳನ್ನು ಹೀರಿಕೊಳ್ಳುವುದಕ್ಕೆ ಕರುಳಿನ ಪ್ರತ್ಯೇಕ ಭಾಗಗಳೇ ಕೆಲಸ ಮಾಡುವುದು. ಹಾಗಾಗಿ ಕರುಳಿನ ಯಾವ ಭಾಗದಲ್ಲಿ ಊತ ಇದೆ ಎನ್ನುವುದರ ಮೇಲೆ ದೇಹಕ್ಕೆ ಎಂಥಾ ಖಾಯಿಲೆ ಬರುತ್ತದೆ ಎನ್ನುವುದು ನಿರ್ಧಾರವಾಗುವುದು. ಉದಾ, ದೊಡ್ಡ ಕರುಳಿನಲ್ಲಿ ಊತ ಇದ್ದರೆ ಮಾನಸಿಕ ತಳಮಳ ಅತಿಯಾಗುತ್ತದೆ. ಡಿಯೋಡಿನಂನಲ್ಲಿ ಊತ ಇದ್ದರೆ ಪುಪ್ಪುಸಗಳ ತೊಂದರೆ ಕಾಣುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಮ್ಮೆ ಗ್ಯಾಸ್ಟ್ರೈಟಿಸ್ ಪ್ರಾರಂಭವಾದರೆ ಬೆಂಕಿಯ ಕಿಡಿಯನ್ನು ಹೊಟ್ಟೆಯಲ್ಲಿ ಇರಿಸಿಕೊಂಡಂತೆ. ಅದನ್ನು ಸರಿಯಾಗಿ ಶಮನ ಮಾಡದಿದ್ದರೆ, ಬೆಂಕಿ ಕ್ರಮೇಣ ದೇಹವನ್ನೆಲ್ಲ ವ್ಯಾಪಿಸುತ್ತದೆ.
ನಿವಾರಣೆ ಹೇಗೆ?: ಸರಿಯಾದ ಆಹಾರಕ್ರಮವನ್ನು ಪಾಲಿಸುವುದೊಂದೇ ಇದಕ್ಕೆ ದಾರಿ. ಹೊರಗಿನ ಊಟ-ತಿಂಡಿಗಳು ಅನಿವಾರ್ಯ ಎಂಬಂತೆ ನಾವೇ ಮಾಡಿಕೊಂಡಿದ್ದೇವೆ. ಹಾಗಾಗಿ ಸರಿಯಾದ ಊಟ ಹೇಗಿರಬೇಕು ಎನ್ನುವುದೇ ನಮಗೆ ಮರೆತು ಹೋಗಿವೆ. ಎಲ್ಲರೂ ರುಚಿಯ ಬೆನ್ನು ಹತ್ತುವ ಬದಲು ಆರೋಗ್ಯದ ಬೆನ್ನು ಹತ್ತಿದರೆ ಬಹಳಷ್ಟು ರೋಗಗಳು ನಮ್ಮತ್ತ ಸುಳಿಯುವುದೇ ಇಲ್ಲ. ಹಾಗಾಗಿ ಆಹಾರಗಳನ್ನು ಹಿತ-ಮಿತವಾಗಿ ಬೇಯಿ ಸಿಕೊಳ್ಳಿ. ತಾಜಾ ಇದ್ದಾಗಲೇ ಸೇವಿಸಿ. ನಿನ್ನೆಯದ್ದು, ಮೊನ್ನೆಯದ್ದೆಲ್ಲ ಬೇಡ. ಹೊಟ್ಟೆ. ಶೇ. ೭೦ರಷ್ಟು ತುಂಬುವರೆಗೆ ತಿಂದು, ಉಳಿದಿದ್ದನ್ನು ಖಾಲಿ ಇರಿಸಿ.
ಈ ಸುದ್ದಿಯನ್ನೂ ಓದಿ: Health Tips: ಊಟದ ಬಳಿಕ ವಾಕಿಂಗ್ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
ಇನ್ನೊಂದು ಮುಖ್ಯವಾದ ಅಂಶವೆಂದರೆ, ಮಾನಸಿಕ ಒತ್ತಡ. ಅತಿಯಾದ ಮಾನಸಿಕ ಒತ್ತಡವೂ ತೀವ್ರವಾಗಿ ಗ್ಯಾಸ್ಟ್ರೈಟಿಸ್ ಉಂಟುಮಾಡಬಲ್ಲದು. ಉದಾ, ನಮ್ಮ ಅತೀ ಆಪ್ತರಿಗೆ ಏನೋ ಅಪಾಯವಾಗಿದೆ ಎಂದಾಗ ನಮಗೆ ತುತ್ತು ಗಂಟಲಲ್ಲಿ ಇಳಿಯುವುದೇ ಇಲ್ಲ. ಕಾರಣ, ವೇಗಸ್ ನರ ಎಚ್ಚೆತ್ತು ಕೊಂಡು ಜಠರದ ಬಾಯಿ ಮುಚ್ಚಿಸುತ್ತದೆ. ಆಗ ಏನನ್ನೂ ತಿನ್ನಲಾಗದು. ಏನು ತಿಂದರೂ ಅದು ಜೀರ್ಣವಾಗದು. ಇದೀಗ ವಿಪರೀತ ಪರಿಸ್ಥಿತಿಯಲ್ಲಿ ಮಾತ್ರ ಹೀಗೆ ಎಂದು ಭಾವಿಸುವಂತಿಲ್ಲ. ಇಂಥಾ ಒತ್ತಡದ ಸನ್ನಿವೇಶವನ್ನು ನಾವು ದಿನಾ ಎದುರಿ ಸುತ್ತೇವೆ ಅಥವಾ ಸೃಷ್ಟಿಸಿಕೊಳ್ಳುತ್ತೇವೆ. ಹಾಗಾಗಿ ಆಹಾರ ಜೀರ್ಣವಾಗುವುದು ದಿನವೂ ಕುಂಠಿತವಾಗಿ, ಗ್ಯಾಸ್ಟ್ರೈ ಟಿಸ್ ನಮ್ಮ ನ್ನು ಬಿಡುವುದೇ ಇಲ್ಲ. ಅದಕ್ಕಾಗಿ ಮಾನಸಿಕ ಒತ್ತಡವನ್ನು ಶಮನ ಮಾಡಿ ಕೊಳ್ಳುವುದು ಸಹ ಅತಿ ಮುಖ್ಯವಾದ ಸಂಗತಿ.