Health Tips: ಅಗಸೆ ಬೀಜಗಳ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಅಗಸೆ ಬೀಜವನ್ನು ಪ್ರಾಚೀನ ಕಾಲದಿಂದಲೂ ಸಹ ಬಳಕೆ ಮಾಡಲಾಗುತ್ತಿದ್ದು ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಗಸೆ ಬೀಜದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುವ ಅಂಶ ಇರಲಿದೆ. ಜೊತೆಗೆ ಹೃದಯದ ಆರೋಗ್ಯ ವನ್ನು ರಕ್ಷಣೆ ಮಾಡುವ ಗುಣ ಹೊಂದಿದ್ದು ರಕ್ತ ದೊತ್ತಡ ವನ್ನು ನಿಯಂತ್ರಿಸಿ, ಹೈಪರ್ ಟೆನ್ಷನ್ ಅನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಬಿಪಿ ಸಮಸ್ಯೆ ಇದ್ದವರು ನಿಯಮಿತವಾಗಿ ಅಗಸೆ ಬೀಜಗಳನ್ನು ಸೇವಿಸಿದರೆ ಒಳ್ಳೆಯದು.
![ಹುರಿದ ಅಗಸೆ ಬೀಜ ಸೇವನೆಯಿಂದ ಸಿಗುವ ಆರೋಗ್ಯ ಲಾಭವೇನು?](https://cdn-vishwavani-prod.hindverse.com/media/original_images/flax_seeds.jpg)
flax seeds
![Profile](https://vishwavani.news/static/img/user.png)
ನವದೆಹಲಿ: ಸದೃಢ ಆರೋಗ್ಯಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಬಹಳಷ್ಟು ಅವಶ್ಯಕವಾಗಿದ್ದು ಅದರಲ್ಲಿ ಫ್ಲಾಕ್ಸ್ ಬೀಜಗಳು (flax seeds) ಎಂದು ಕರೆಯಲ್ಪಡುವ ಅಗಸೆ ಬೀಜವನ್ನು ಪ್ರಾಚೀನ ಕಾಲದಿಂದಲೂ ಸಹ ಬಳಕೆ ಮಾಡಲಾಗುತ್ತಿದ್ದು ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ(Health Tips). ಆರೋಗ್ಯ ತಜ್ಞರ ಪ್ರಕಾರ, ಅಗಸೆ ಬೀಜಗಳು ಆಂಟಿ ಫಂಗಲ್, ಆಂಟಿ ಆಕ್ಸಿಡೆಂಟ್, ಆಂಟಿ ಹೈಪರ್ಟೆನ್ಸಿವ್, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಗುಣವನ್ನು ಹೊಂದಿದ್ದು ಹುರಿದ ಅಗಸೆ ಬೀಜಗಳನ್ನು ಸೇವಿಸುವುದರಿಂದ ಮಧುಮೇಹ, ಹೃದಯ ಸಂಬಂಧಿತ ಕಾಯಿಲೆ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಣದಲ್ಲಿ ಇಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಹೃದಯದ ಆರೋಗ್ಯಕ್ಕೆ ಉತ್ತಮ: ಅಗಸೆ ಬೀಜದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುವ ಅಂಶ ಇರಲಿದೆ. ಜೊತೆಗೆ ಹೃದಯದ ಆರೋಗ್ಯವನ್ನು ರಕ್ಷಣೆ ಮಾಡುವ ಗುಣ ಹೊಂದಿದ್ದು ರಕ್ತದೊತ್ತಡವನ್ನು ನಿಯಂತ್ರಿಸಿ, ಹೈಪರ್ ಟೆನ್ಷನ್ ಅನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಬಿಪಿ ಸಮಸ್ಯೆ ಇದ್ದವರು ನಿಯಮಿತವಾಗಿ ಅಗಸೆ ಬೀಜಗಳನ್ನು ಸೇವಿಸಿದರೆ ಒಳ್ಳೆಯದು.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ: ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಅಗಸೆ ಬೀಜ ಹೊಂದಿ ದೆ.ಇದರಲ್ಲಿ ನಾರಿನಂಶ ಹೆಚ್ಚಾಗಿ ಇರಲಿದ್ದು ಮಲಬದ್ಧತೆ, ಆಮ್ಲೀ ಯತೆ ನಿವಾರಣೆಗೆ ಸಹಾಯ ಮಾಡುತ್ತದೆ. ನೀವು ಸೇವನೆ ಮಾಡಿದಂತಹ ಆಹಾರ ಚೆನ್ನಾಗಿ ಜೀರ್ಣವಾಗಲು ಮತ್ತು ಕರುಳಿನ ಚಲನೆ ಉತ್ತಮ ಗೊಳ್ಳಲು ಇದು ಸಹಕಾರಿ ಯಾಗಲಿದೆ.
ಮಧುಮೇಹ ನಿಯಂತ್ರಣ ಮಾಡಲಿದೆ: ಅಗಸೆ ಬೀಜ ಮಧುಮೇಹ ನಿಯಂತ್ರಣಕ್ಕೂ ಸಹಕಾರಿ ಯಾಗಲಿದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಿ ಮಧುಮೇಹವನ್ನು ಹತೋಟಿಗೆ ತರುವಲ್ಲಿ ಅಗಸೆ ಬೀಜಗಳು ಸಹಾಯಕವಾಗಲಿದೆ. ಇದು ಕರಗುವ ಫೈಬರ್ ಅಂಶವನ್ನು ಹೊಂದಿರಲಿದ್ದು ವೈದ್ಯರ ಸಲಹೆಯ ಮೇರೆಗೆ ಮಧುಮೇಹ ಸಮಸ್ಯೆ ಇದ್ದವರು ಅಗಸೆ ಬೀಜವನ್ನು ಸೇವನೆ ಮಾಡಬಹುದು.
ಚರ್ಮ, ಕೂದಲಿನ ರಕ್ಷಣೆಗೆ ಸಹಕಾರಿ: ಅಗಸೆ ಬೀಜ ಚರ್ಮ ಮತ್ತು ಕೂದಲಿನ ರಕ್ಷಣೆಗೂ ಉತ್ತಮ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಇರಲಿದ್ದು ಚರ್ಮ ಮತ್ತು ಕೂದಲಿಗೆ ಚೈತನ್ಯ ನೀಡಲಿವೆ. ಅಗಸೆ ಬೀಜಗಳ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿ ಕೊಳ್ಳುವ ಮೂಲಕ ಮೊಡವೆ, ಕಲೆ, ಸುಕ್ಕು ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಜೊತೆಗೆ ಕೂದಲಿನ ಆರೈಕೆಗೂ ಇದು ಉತ್ತಮ.
ಇದನ್ನು ಓದಿ: Health Tips: ಹೆಚ್ಚುತ್ತಿರುವ ಜಿಬಿಎಸ್- ಆಹಾರದ ಸ್ವಚ್ಛತೆಗೆ ಆದ್ಯತೆ ನೀಡಿ
ರೋಗ ನಿರೋಧಕ ಶಕ್ತಿ ಹೆಚ್ಚಲಿದೆ:
ಅಗಸೆ ಬೀಜಗಳು ಒಮೆಗಾ-3 ಕೊಬ್ಬಿ ನಾಮ್ಲಗಳು ಮತ್ತು ಅಮೈನೋ ಆಮ್ಲಗಳನ್ನು ಸಹ ಹೊಂದಿರಲಿದ್ದು ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ ಯಾಗಲಿದೆ. ಇದರಲ್ಲಿ ದೇಹಕ್ಕೆ ಅಗತ್ಯ ವಿರುವ ಹಲವು ರೀತಿಯ ಪೋಷಕಾಂಶಗಳು ಇರಲಿದ್ದು ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡಲಿದ್ದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನ ಕಡಿಮೆ ಮಾಡಲು ಸಹಕಾರಿಯಾಗಲಿದೆ.