Chikkaballapur News: ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ನಂದಿಗಿರಿ ಪ್ರದಕ್ಷಿಣೆ : ಭಕ್ತಿಭಾವದಿಂದ ಪಾಲ್ಗೊಂಡ ಸಾವಿರಾರು ಭಕ್ತರು
ಗಿರಿ ಪ್ರದಕ್ಷಿಣೆಗೆ ಜಿಲ್ಲೆಯ ಭಜನಾ ತಂಡಗಳೊಟ್ಟಿಗೆ ಬೆಂಗಳೂರು ಗ್ರಾಮಾಂತರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು ಕೂಡ ಸಕ್ರಿಯವಾಗಿ ಭಾಗವಹಿಸಿದ್ದವು. 14 ಕಿ.ಮೀ. ಸುತ್ತಳತೆಯ ಪಾದ ಯಾತ್ರೆಯು 5 ಗಂಟೆಗೆ ಭೋಗನಂದೀಶ್ವರ ದೇವಾಲಯದಿಂದ ಪ್ರಾರಂಭವಾಗಿ ರಾತ್ರಿ 9.30ಕ್ಕೆ ಮುಕ್ತಾಯ ವಾಯಿತು. ನಂದಿ ಗಿರಿಧಾಮ ಸುತ್ತ ನಡೆದ ಪ್ರದಕ್ಷಿಣೆಯಲ್ಲಿ ಸಾವಿರಾರು ಭಕ್ತರು, ಮುಖಂಡರು ಭೋಗ ನಂದೀಶ್ವರ ಸ್ವಾಮಿಯ ಆರಾಧನೆಯೊಂದಿಗೆ ಗಿರಿಧಾಮಕ್ಕೆ ಪ್ರದಕ್ಷಿಣೆ ಬಂದರು.
-
ಇದು ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಕಾರ್ಯಕ್ರಮ, ಪ್ರತಿ ತಿಂಗಳ ಹುಣ್ಣಿಮೆಯಂದು ಕಾರ್ಯಕ್ರಮ ಮಾಡಲು ಸಂಕಲ್ಪ: ಡಾ.ಕೆ.ಸುಧಾಕರ್ ಹೇಳಿಕೆ
ಚಿಕ್ಕಬಳ್ಳಾಪುರ: ಮಾಘ ಹುಣ್ಣಿಮೆಯ ಅಂಗವಾಗಿ ನಂದಿಯ ಶ್ರೀಭೋಗನಂದೀಶ್ವರ ದೇವಾ ಲಯದಲ್ಲಿ ಸಂಕಲ್ಪ ಪೂಜೆ ಮಾಡಿ ಪ್ರಾರಂಭಿಸಿದ ಯಾತ್ರೆ ರಾತ್ರಿ 9ಕ್ಕೆ ನಂದೀಶ್ವರನ ದರ್ಶನ ದೊಂದಿಗೆ ಸಂಪನ್ನವಾಯಿತು. ಡಾ.ಕೆ.ಸುಧಾಕರ್ (Dr.K.Sudhakar)ಅವರ ನೇತೃತ್ವದಲ್ಲಿ ನಡೆದ ನಂದಿ ಗಿರಿಧಾಮ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸ್ವಯಂ ಸಂಕಲ್ಪದೊಂದಿಗೆ ಭಾಗವಹಿಸಿ ಭಕ್ತಿಭಾವ ಮೆರೆದು ಭಗವಂತನ ಪ್ರೀತಿಗೆ ಪಾತ್ರವಾಗಿದ್ದು ವಿಶೇಷವಾಗಿತ್ತು.
ಗಿರಿ ಪ್ರದಕ್ಷಿಣೆಗೆ ಜಿಲ್ಲೆಯ ಭಜನಾ ತಂಡಗಳೊಟ್ಟಿಗೆ ಬೆಂಗಳೂರು ಗ್ರಾಮಾಂತರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು ಕೂಡ ಸಕ್ರಿಯವಾಗಿ ಭಾಗವಹಿಸಿದ್ದವು. 14 ಕಿ.ಮೀ. ಸುತ್ತಳತೆಯ ಪಾದಯಾತ್ರೆಯು 5 ಗಂಟೆಗೆ ಭೋಗನಂದೀಶ್ವರ ದೇವಾಲಯದಿಂದ ಪ್ರಾರಂಭವಾಗಿ ರಾತ್ರಿ 9.30ಕ್ಕೆ ಮುಕ್ತಾಯವಾಯಿತು.ನಂದಿ ಗಿರಿಧಾಮ ಸುತ್ತ ನಡೆದ ಪ್ರದಕ್ಷಿಣೆಯಲ್ಲಿ ಸಾವಿರಾರು ಭಕ್ತರು, ಮುಖಂ ಡರು ಭೋಗನಂದೀಶ್ವರ ಸ್ವಾಮಿಯ ಆರಾಧನೆಯೊಂದಿಗೆ ಗಿರಿಧಾಮಕ್ಕೆ ಪ್ರದಕ್ಷಿಣೆ ಬಂದರು.
ಈ ವೇಳೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್ ಇತಿಹಾಸ ಪ್ರಸಿದ್ದ ನಂದಿ ಗಿರಿಧಾಮಕ್ಕೆ 1936 ರಲ್ಲಿ ಮಹಾತ್ಮ ಗಾಂಧೀಜಿ ನಡೆದುಕೊಂಡು ಹೋಗಿದ್ದ ಬಗ್ಗೆ ದಾಖಲೆಯಿದೆ. ಅಲ್ಲಿ 45 ದಿನಗಳ ಕಾಲ ವಿಶ್ರಾಂತಿ ಪಡೆದು ಅನಾರೋಗ್ಯದಿಂದ ಹೊರ ಬಂದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು 'ಆರೋಗ್ಯಧಾಮ' ಎಂದು ಬಣ್ಣಿಸಿದ್ದರು. ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ ಎಂದರು.
ಮಕರ ಸಂಕ್ರಾಂತಿಯ ಭಾಗವಾದ ಮಾಘ ಮಾಸದ ಹುಣ್ಣಿಮೆಯ ದಿನದಂದು ಭೋಗನಂದೀಶ್ವರ ಸನ್ನಿಧಿಯಿಂದ ಆರಂಭವಾಗಿ ನಂದಿ ಗಿರಿಧಾಮದ ಸುತ್ತ ಪ್ರದಕ್ಷಿಣೆ ಮಾಡಲಾಗಿದೆ. ಭೋಗ ನಂದೀ ಶ್ವರ ದೇವಾಲಯ ಐತಿಹಾಸಿಕವಾಗಿ ಬಹಳ ಖ್ಯಾತಿ ಹೊಂದಿದೆ. ಪ್ರತಿ ತಿಂಗಳ ಹುಣ್ಣಿಮೆ ಯಂದು ಪ್ರದಕ್ಷಿಣೆ ಕಾರ್ಯಕ್ರಮ ಮಾಡಬೇಕೆಂದು ಸಂಕಲ್ಪ ಮಾಡಲಾಗಿದೆ. ತಮಿಳುನಾಡಿನ ಅರುಣಾ ಚಲೇಶ್ವರ ದೇವಾಲಯದಂತೆಯೇ ಭೋಗನಂದೀಶ್ವರ ದೇವಾಲಯ ಕೂಡ ಈ ಮೂಲಕ ಇನ್ನಷ್ಟು ಖ್ಯಾತಿ ಪಡೆಯಲಿದೆ ಎಂದರು.
ಗಿರಿಪ್ರದಕ್ಷಿಣೆಯ ಕಾರ್ಯಕ್ರಮ ಎಂದರೆ ಅಧ್ಯಾತ್ಮ ಹಾಗೂ ಆರೋಗ್ಯದ ಸಮ್ಮಿಲನವಾಗಿದೆ. ಈ ಕಾರ್ಯಕ್ರಮದಿಂದ ಎಲ್ಲರಿಗೂ ಭಕ್ತಿಭಾವ, ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ದೊರೆಯಲಿದೆ. ಎಲ್ಲರಿಗೂ ಉತ್ತಮ ಆರೋಗ್ಯ, ಆಯುಷ್ಯ ದೊರೆಯಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಪ್ರದಕ್ಷಿಣೆಯಲ್ಲಿ ಭಾಗಿಯಾಗಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.