ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ರಸಭರಿತ ಮಾವಿನಹಣ್ಣಿನ ಉಪಯೋಗವೇನು?

ಹಣ್ಣುಗಳ ರಾಜನಾದ ಮಾವಿಗೆ ಇಂದು ಬೇಡಿಕೆ ಹೆಚ್ಚಿದ್ದು ಜ್ಯೂಸ್​, ಐಸ್​ಕ್ರೀಮ್​, ಚಾಕಲೇಟ್​, ರಸಾಯನ ಅನ್ನುತ್ತಾ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತೇವೆ. ಅದರಲ್ಲೂ ಬೇಸಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಮಾವಿನಹಣ್ಣಿನಲ್ಲಿ ಕೊಬ್ಬಿನಂಶ, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಕಡಿಮೆ ಪ್ರಮಾಣದಲ್ಲಿದೆ. ಅಲ್ಲದೆ ಇದರಲ್ಲಿರುವ ವಿಟಮಿನ್ ಬಿ6, ವಿಟಮಿನ್ ಎ ಇತ್ಯಾದಿ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ.

ಮಾವಿನಹಣ್ಣಿನಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನ ಇದೆ?

Profile Pushpa Kumari May 2, 2025 5:00 AM

ನವದೆಹಲಿ: ಇದು ಮಾವಿನ ಸೀಸನ್ ಆಗಿದೆ. ಮಾರುಕಟ್ಟೆಯಲ್ಲಿ ಮಾವು (Mango) ಮಾರಾಟ ಭರ್ಜರಿಯಾಗಿಯೇ ಆರಂಭವಾಗಿದ್ದು ಮಾವು ಪ್ರಿಯರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹಣ್ಣುಗಳ ರಾಜನಾದ ಮಾವಿಗೆ ಇಂದು ಬೇಡಿಕೆ ಹೆಚ್ಚಿದ್ದು ಜ್ಯೂಸ್​, ಐಸ್​ಕ್ರೀಮ್​, ಚಾಕಲೇಟ್​, ರಸಾಯನ ಅನ್ನುತ್ತಾ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತೇವೆ.ಅದರಲ್ಲೂ ಬೇಸಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಮಾವಿನ ಹಣ್ಣಿನಲ್ಲಿ ಕೊಬ್ಬಿನಾಂಶ, ಕೊಲೇಸ್ಟ್ರಾಲ್ ಮತ್ತು ಸೋಡಿಯಂ ಕಡಿಮೆ ಪ್ರಮಾಣದಲ್ಲಿದೆ. ಅಲ್ಲದೆ ಇದರಲ್ಲಿರುವ ವಿಟ ಮಿನ್ ಬಿ6, ವಿಟಮಿನ್ ಎ ಇತ್ಯಾದಿ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಿದ್ದಲ್ಲಿ ಮಾವಿ‌ನಹಣ್ಣಿನ ಸೇವನೆಯಿಂದ ಏನೆಲ್ಲಾ ಆರೋಗ್ಯ ಲಾಭ ಇದೆ? ಯಾವ ಸಮಯದಲ್ಲಿ ಸೇವಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಕೂದಲು ಮತ್ತು ತ್ವಚೆಗೆ ಉತ್ತಮ:

ಮಾವಿನಹಣ್ಣಿನಲ್ಲಿ ವಿಟಮಿನ್ ಎ ಯಥೇಚ್ಚವಾಗಿದೆ. ಇದು ತ್ವಚೆಯನ್ನು ಒಣಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಇದರ ಸೇವನೆಯು ಚರ್ಮ ಮತ್ತು ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಇದು ಆರೋಗ್ಯಕರ ಚರ್ಮವನ್ನು ಕಾಪಾಡುವ ಜೊತೆಗೆ ನಮ್ಮ ತ್ವಚೆಗೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.

ತೂಕ ಇಳಿಕೆಗೆ ಸಹಕಾರಿ:

ಮಾವಿನಹಣ್ಣಿನಲ್ಲಿ ಹಲವು ರೀತಿಯ ವಿಟಮಿನ್‌ಗಳು ಹಾಗೂ ಪೋಷಕಾಂಶಗಳು ಇರುವುದರಿಂದ ಇದರಿಂದ ಬೇಗನೆ ಹಸಿವು ನೀಗಿಸಿಕೊಳ್ಳಬಹುದು. ಇದರಲ್ಲಿ ನಾರಿನಂಶ ಪ್ರಮಾಣ ಅಧಿಕವಾಗಿ ಇರಲಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಬೇಡದ ಕೊಬ್ಬು ನಿವಾರಿಸಿ ತೂಕ ಇಳಿಕೆಗೂ ಸಹಾಯಕವಾಗುತ್ತದೆ.

ರೋಗ ನಿರೋಧಕ ಹೆಚ್ಚಿಸುತ್ತದೆ:

ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್‌ಗಳಂತಹ ಪ್ರಮಾಣ ಹೆಚ್ಚಾಗಿದೆ. ಇದು ದೇಹದ ರೋಗದ ವಿರುದ್ಧ ಹೋರಾಡಲು ಮತ್ತು ಬಿಳಿ ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಜೀರ್ಣಕಾರಿ ಸಮಸ್ಯೆಗೆ ಸಹಾಯ ಮಾಡುತ್ತದೆ:

ಮಾವು ಆಮ್ಲೀಯತೆ, ಮಲಬದ್ಧತೆ ಅಜೀರ್ಣದಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ಜೀರ್ಣಕಾರಿ ಕಿಣ್ವಗಳ ಸಮಸ್ಯೆ ಹೋಗಲಾಡಿಸಿ ಜೀರ್ಣಾಂಗವನ್ನು ಉತ್ತೇಜಿಸುತ್ತದೆ. ಇನ್ನು ಹಸಿ ಮಾವಿನ ಕಾಯಿಯನ್ನು ಜಗಿಯುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ.

ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ:

ಬೇಸಿಗೆಯಲ್ಲಿ ಸೂರ್ಯನ ಶಾಖ ದೇಹವನ್ನು ಹೆಚ್ಚಾಗಿ ನಿರ್ಜಲೀಕರಣಗೊಳ್ಳುತ್ತದೆ. ಇದಕ್ಕಾಗಿ ಮಾವಿನ ಹಣ್ಣನ್ನು ಸೇವಿಸಿ ದರೆ ನಿರ್ಜಲೀಕರಣದಿಂದ ಪರಾಗಬಹುದು.‌ಇದು ನಮ್ಮ ದೇಹದ ಮೇಲೆ ಹೆಚ್ಚು ತಂಪಿನ ಪ್ರಭಾವವನ್ನು ಬೀರುವ ಜೊತೆಗೆ ನಮ್ಮ ದೇಹವನ್ನು ಸಹ ಪ್ರಶಾಂತಗೊಳಿಸುತ್ತದೆ.

ಇದನ್ನು ಓದಿ: Mango Leaf: ಮಾವಿನ ಎಲೆಯ ಔಷಧೀಯ ಗುಣಗಳು ತಿಳಿದಿವೆಯೇ?

ಕಣ್ಣಿನ ಆರೋಗ್ಯಕ್ಕೆ ಉತ್ತಮ:

ಮಾವಿನಹಣ್ಣಿನಲ್ಲಿ ವಿಟಮಿನ್‌ ಎ ಅಂಶ ಸಮೃದ್ಧವಾಗಿದೆ. ಇದರ ಸೇವನೆಯಿಂದ ಕಣ್ಣಿನ ದೃಷ್ಟಿ ಉತ್ತಮ ವಾಗುತ್ತದೆ. ಕಣ್ಣಿನಲ್ಲಿ ನೀರು ಸೋರುವುದು, ಇರುಳುಗಣ್ಣಿನ ಸಮಸ್ಯೆ ಇರುವವರಿಗೂ ಇದು ಉತ್ತಮವಾಗಿದೆ.

ಯಾವ ಸಮಯದಲ್ಲಿ ಸೇವಿಸಬೇಕು?

ಮಾವಿನ ಹಣ್ಣನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನ ಹೊತ್ತಿನಲ್ಲಿ ತಿಂದರೆ ಉತ್ತಮ. ಮಲಗುವ ವೇಳೆ ಮಾವಿನ ಹಣ್ಣು ಸೇವನೆ ಮಾಡಿದರೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ ಮಿತವಾಗಿ ಸೇವಿಸಿ ಹಣ್ಣಿನ ಪ್ರಯೋಜನವನ್ನು ಪಡೆದು ಕೊಳ್ಳುವುದು ಮುಖ್ಯವಾಗಿದೆ.