Health Benefits of Mangosteen: ಮ್ಯಾಂಗೋಸ್ಟೀನ್ ಹಣ್ಣಿನ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಆರೋಗ್ಯ ಲಾಭ!
ಮ್ಯಾಂಗೋಸ್ಟೀನ್ ಹಣ್ಣು ನೋಡಲು ಸಣ್ಣ ಕಿತ್ತಳೆ ಹಣ್ಣಿನಂತಿದ್ದು, ಇದರ ಸಿಪ್ಪೆ ನೇರಳೆ ಮತ್ತು ಅದರ ತಿರುಳು ಬಿಳಿಯಾಗಿರಲಿದ್ದು ಇದು ಸವಿಯಲು ಬಹಳಷ್ಟು ಸಿಹಿಯಾಗಿರುತ್ತದೆ. ಈ ಹಣ್ಣು ಹಲವು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರ ಜೊತೆಗೆ ಅಗತ್ಯವಾದ ಜೀವ ಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೇರಳವಾಗಿ ಹೊಂದಿದೆ.

Mangosteen

ನವದೆಹಲಿ: ಹಣ್ಣುಗಳ ರಾಣಿ ಎಂದು ಕರೆಯಲ್ಪಡುವ ಮ್ಯಾಂಗೋಸ್ಟೀನ್ (Mangosteen) ಹಣ್ಣು ಇದು ತಿನ್ನಲು ಬಹಳ ರುಚಿಯಾಗಿರುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಮ್ಯಾಂಗೋಸ್ಟೀನ್ ಹಣ್ಣು ನೋಡಲು ಸಣ್ಣ ಕಿತ್ತಳೆ ಹಣ್ಣಿನಂತಿದ್ದು, ಇದರ ಸಿಪ್ಪೆ ನೇರಳೆ ಮತ್ತು ಅದರ ತಿರುಳು ಬಿಳಿಯಾಗಿರಲಿದ್ದು ಇದು ಸವಿಯಲು ಬಹಳಷ್ಟು ಸಿಹಿಯಾಗಿರುತ್ತದೆ.ಈ ಹಣ್ಣು ಹಲವು ರೀತಿಯ ಪೋಷಕಾಂಶ ಗಳಿಂದ ಸಮೃದ್ಧವಾಗಿದ್ದು, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಈ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರ ಜೊತೆಗೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೇರಳವಾಗಿ ಹೊಂದಿದ್ದು ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಚರ್ಮದ ಆರೈಕೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಾಗಿ ಇದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದ್ದು ಈ ಹಣ್ಣಿನ ಆರೋಗ್ಯಕರ ಲಾಭದ ಬಗ್ಗೆ ಮಾಹಿತಿ ಇಲ್ಲಿದೆ.
ಕಾಂತಿಯುಕ್ತ ತ್ವಚೆಯ ಆರೈಕೆ: ಬೇಸಿಗೆ ಕಾಲದಲ್ಲಿ ಅಲರ್ಜಿ, ತುರಿಕೆ ಇತ್ಯಾದಿ ಚರ್ಮ ಸಂಬಂಧಿಸಿತ ಸಮಸ್ಯೆ ಇದ್ದರೆ ಅಂತಹ ಸಂದರ್ಭದಲ್ಲಿ ಮ್ಯಾಂಗೋಸ್ಟಿನ್ ಹಣ್ಣಿನ ಸೇವನೆ ಮಾಡಿದರೆ ದೇಹ ಆರೋಗ್ಯಯುತವಾಗುವ ಜೊತೆಗೆ ಚರ್ಮ ಸಂಬಂಧಿತ ಸಮಸ್ಯೆ ನಿವಾರಣೆ ಆಗಲಿದೆ.ಇದರ ಸಿಪ್ಪೆಯ ಜ್ಯೂಸ್ ಮಾಡಿ ಕುಡಿ ಯುವುದರಿಂದ ನಿಮ್ಮ ತ್ವಚೆ ಕಾಂತಿಯುಕ್ತವಾಗಲು ಸಾಕಷ್ಟು ಉಪಯುಕ್ತ ಆಗಲಿದೆ.
ಮಧುಮೇಹ ನಿಯಂತ್ರಣ: ಮ್ಯಾಂಗೋಸ್ಟಿನ್ ಹಣ್ಣಿನಲ್ಲಿ ಕ್ಯಾಂಥೋನ್ ಹಾಗೂ ಫೈಬರ್ ಅಂಶಗಳಿದ್ದು ಇವುಗಳು ಮಧು ಮೇಹ ನಿಯಂತ್ರಣ ಮಾಡಲು ಸಹಕಾರಿ ಆಗಲಿದೆ. ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸುವ ಸಲುವಾಗಿ ಸಮೃದ್ಧವಾಗಿ ನಾರಿನಿಂದ ಕೂಡಿದ್ದ ಮ್ಯಾಂಗೋಸ್ಟಿನ್ ಹಣ್ಣನ್ನು ಸೇವನೆ ಮಾಡಬೇಕು.
ರೋಗ ನಿರೋಧಕ ಶಕ್ತಿ ಹೆಚ್ಚಲಿದೆ: ಮ್ಯಾಂಗೋಸ್ಟಿನ್ ಹಣ್ಣಿನಲ್ಲಿ ದೇಹದ ಆರೋಗ್ಯ ಪ್ರಯೋಜನೆ ನೀಡುವ ಅನೇಕ ಅಂಶಗಳು, ಪೌಷ್ಟಿಕಾಂಶ, ಮ್ಯಾಗ್ನೇಷಿಯಂ ಹೇರಳವಾಗಿದ್ದು ಇವುಗಳು ದೇಹಕ್ಕೆ ಸೋಂಕು , ಬ್ಯಾಕ್ಟೀರಿಯಾ ತಗಲದಂತೆ ರೋಗ ನಿರೋಧಕ ಶಕ್ತಿ ಒದಗಿಸಲು ಸಹಕಾರಿ ಆಗಲಿದೆ. ಚರ್ಮ ಸಮಸ್ಯೆ, ಕರುಳಿನ ನೋವು ಇತ್ಯಾದಿಗಳ ಆರೈಕೆಯಲ್ಲಿ ಕೂಡ ಈ ಮ್ಯಾಂಗೋಸ್ಟಿನ್ ಹಣ್ಣು ಪ್ರಧಾನ ಪಾತ್ರ ನಿರ್ವಹಿಸಲಿದೆ.
ಹೃದಯದ ಆರೋಗ್ಯಕ್ಕೆ ಸಹಕಾರಿ: ಮ್ಯಾಂಗೋಸ್ಟಿನ್ ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿತ ಸಮಸ್ಯೆ ಗಳು ಬರಲಾರದು. ಮ್ಯಾಂಗೋ ಸ್ಟಿನ್ ಹಣ್ಣಿನಲ್ಲಿರುವ ಮೆಗ್ನೇಷಿಯಂ ಪ್ರಮಾ ಣ ರಕ್ತಕಣಗಳ ಆರೋಗ್ಯದ ಜೊತೆಗೆ ಹೃದಯ ಆರೋಗ್ಯಕ್ಕೂ ಪೂರಕವಾಗಿದೆ. ಹೆಚ್ಚಿನ ವಿಟಮಿನ್ ಹಾಗೂ ನಾರಿನಾಂಶದಿಂದ ಹೃದಯ ಆರೋಗ್ಯಕರವಾಗಿರಲು ಬೇಕಾದ ಪೋಷಕಾಂಶ ಒದಗಿಸಿದಂತಾಗುವುದು.
ತೂಕ ಕಡಿಮೆ ಮಾಡಲು ಸಹಕಾರಿ: ಮ್ಯಾಂಗೋಸ್ಟಿನ್ ಹಣ್ಣನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ಕೊಬ್ಬಿನ ಚಯಾಪಚಯ ಕ್ರಿಯೆ ಉತ್ತೇಜಿಸುವಲ್ಲಿ ಸಹಕಾರಿಯಾಗುವ ಜೊತೆಗೆ ಬೇಡದ ಕೊಬ್ಬಿನ ನಿರ್ಮೂಲನೆ ಮಾಡಲು ಬಹಳ ಉಪಯುಕ್ತ ಆಗಲಿದೆ. ಮ್ಯಾಂಗೋಸ್ಟಿನ್ ನಲ್ಲಿ ಕಡಿಮೆ ಕ್ಯಾಲೊರಿ, ಜೀವಸತ್ವ ಹಾಗೂ ಫೈಬರ್ ಪ್ರಮಾಣ ಇದ್ದು ಅನಗತ್ಯ ಗೊಬ್ಬು ಶೇಕರಣೆ ಆಗದಂತೆ ತಡೆ ಹಿಡಿಯಲಿದೆ. ದೇಹದ ತೂಕ ಇಳಿಕೆಗೆ ಪ್ರಯತ್ನಿಸುವವರು ಆಯುರ್ವೇದ ಅಂಶಗಳು ಹೇರಳವಾಗಿರುವ ಮ್ಯಾಂಗೋಸ್ಟಿನ್ ಹಣ್ಣನ್ನು ಸೇವಿಸಿದರೆ ಬಹಳ ಒಳ್ಳೆಯದು.
ನರ ಸಮಸ್ಯೆಗಳಿಗೆ ಪರಿಹಾರ: ಮ್ಯಾಂಗೋಸ್ಟಿನ್ ಹಣ್ಣಿನಲ್ಲಿ ವಿಟಮಿನ್ ಪ್ರಮಾಣ ಹೇರಳವಾಗಿದೆ. ವಿಟಮಿನ್ ಸಿ, ವಿಟಮಿನ್ ಬಿ 9, ವಿಟಮಿನ್ ಬಿ1, ವಿಟಮಿನ್ ಬಿ2 ಗಳಿಂದ ನರ ಸಮಸ್ಯೆ ನಿವಾರಿಸಲು ಇದರ ಸೇವನೆ ಬಹಳ ಸಹಕಾರಿ ಆಗಲಿದೆ. ನರ ಊತ, ನೋವು ಇತ್ಯಾದಿ ಸಂದರ್ಭದಲ್ಲಿ ಹಣ್ಣಿನ ಸೇವನೆ ಮಾಡಿದರೆ ನೋವು ಶಮನವಾಗಲಿದೆ.
ಪಿತ್ತ ಸಮಸ್ಯೆಗೆ ಮನೆ ಮದ್ದು: ದೇಹದಲ್ಲಿ ಪಿತ್ತ ಸಮಸ್ಯೆ ಅತಿಯಾಗಿ ಕಾಡುತ್ತಿದ್ದರೆ ಮ್ಯಾಂಗೋಸ್ಟಿನ್ ನಿಂದ ಮಾಡುವ ಜ್ಯೂಸ್ ಸೇವನೆ ಮಾಡಿದರೆ ಸಮಸ್ಯೆ ಪರಿಹಾರ ಆಗಲಿದೆ. ಪಿತ್ತದಿಂದ ವಾಂತಿ, ತಲೆನೋವು, ತಲೆಸುತ್ತು ಇತ್ಯಾದಿ ನಿವಾರಣೆಗೆ ಮ್ಯಾಂಗೋಸ್ಟಿನ್ ಸಿಪ್ಪೆಯಿಂದ ತಯಾರಿಸುವ ಜ್ಯೂಸ್ ಬಹಳ ಉತ್ತಮ ಆರೋಗ್ಯ ಪ್ರಯೋಜನೆ ನೀಡಲಿದೆ.
ಇದನ್ನು ಓದಿ: Health Tips: ಆರಾಮ, ಪೌಷ್ಠಿಕಾಂಶಯುಕ್ತ ಆಹಾರ: ಅಮ್ಮ ನಿನಗಿದು ಅತ್ಯಗತ್ಯ
ಈ ವಿಚಾರ ನೆನಪಿಡಿ: ಮ್ಯಾಂಗೋಸ್ಟಿನ್ ಹಣ್ಣು ತಿನ್ನಲು ರುಚಿ ಅಧಿಕ ಆರೋಗ್ಯ ಪ್ರಯೋಜನೆ ಇರುವುದು ನಿಜವಾಗಿದ್ದರೂ ರಕ್ತಸ್ರಾವ ಸಮಸ್ಯೆ ಇರುವವರು ಇದನ್ನು ಕಡಿಮೆ ಸೇವಿಸುವುದೇ ಉತ್ತಮವಾಗಿದೆ. ದೇಹಕ್ಕೆ ಅಧಿಕ ಆರೋಗ್ಯ ಪ್ರಯೋಜನ ನೀಡಲಿದೆ ಎಂದು ಈ ಹಣ್ಣನ್ನು ಮಿತಿ ಮೀರಿ ತಿನ್ನದಿರಿ. ನಿಮ್ಮ ದೇಹದ ಸ್ಥಿತಿಗೆ ಅನುಗುಣವಾಗಿ ಸೇವಿಸುವುದು ಉತ್ತಮ.