ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

JC The University Review: ಕಾರಾಗೃಹದ ಕರಾಬ್‌ ಕಥೆಗಳು ಮತ್ತು ರೌಡಿಸಂ ಜಗತ್ತಿನ ಒಳಸುಳಿಗಳು!

JC The University Review And Rating: ಸಣ್ಣ ಮುಂಗೋಪದಿಂದಾಗಿ ಭೂಗತ ಲೋಕಕ್ಕೆ ಅನಿವಾರ್ಯವಾಗಿ ಎಂಟ್ರಿ ಕೊಡುವ ಹುಡುಗನೊಬ್ಬನ ಕಥೆಯೇ 'ಜೆಸಿ'. ಜೈಲಿನೊಳಗಿನ ನೈಜ ಪರಿಸ್ಥಿತಿ, ಕೈದಿಗಳ ಮನಸ್ಥಿತಿ ಮತ್ತು ಅಲ್ಲಿ ನಡೆಯುವ ಅಕ್ರಮ ದಂಧೆಗಳನ್ನು ನಿರ್ದೇಶಕ ಚೇತನ್ ಜಯರಾಮ್ ಈ ಸಿನಿಮಾದಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ.

ಜೆಸಿ ದಿ ಯೂನಿವರ್ಸಿಟಿ ವಿಮರ್ಶೆ: ಪ್ರಖ್ಯಾತ್ ಸಿನಿಮಾಕ್ಕೆ ರೇಟಿಂಗ್‌ ಎಷ್ಟು?

-

Avinash GR
Avinash GR Feb 6, 2026 3:49 PM

"ಇದು ಕಾರಾಗೃಹವಲ್ಲ, ಇದು 'ಪರಿವರ್ತನಾ' ಗೃಹ. ಇಲ್ಲಿ ನಿಮ್ಮ ಹಳೆಯ ತಪ್ಪುಗಳು ಅಂತ್ಯವಾಗಲಿ, ಹೊಸ ಬದುಕು ಆರಂಭವಾಗಲಿ.."- ಇಂತಹ ಅನೇಕ ಸಾಲುಗಳನ್ನು ಜೈಲಿನ ಗೋಡೆಗಳ ಮೇಲೆ ಬರೆದಿರುತ್ತಾರೆ. ಕಾರಣ, ಜೈಲಿಗೆ ಮೊದಲ ಸಲ ಬಂದ ಅಪರಾಧಿ, ಅದನ್ನೆಲ್ಲಾ ಓದಲಿ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಇನ್ಮೊಮ್ಮೆ ಇಂತಹ ತಪ್ಪನ್ನು ಮಾಡದೇ ಇರಲಿ ಎಂದು. ಆದರೆ, ಜೈಲಿಗೆ ಹೋದವರು, ಇದು ಪರಿವರ್ತನೆಗೆ ಸಿಕ್ಕ ಒಂದು ಅವಕಾಶ ಎಂದು ಭಾವಿಸದೇ, ಜೈಲಿಗೆ ಹೋಗಿಬರುವುದನ್ನೇ ರೂಢಿ ಮಾಡಿಕೊಂಡರೇ..?? ಇಂತಹ ಜೈಲಿನೊಳಗಿನ ಮತ್ತು ಕ್ರಿಮಿನಲ್‌ಗಳ ಮನಸ್ಸಿನೊಳಗಿನ ವಿಚಾರಗಳನ್ನು ಇಟ್ಟುಕೊಂಡೇ ಸೃಷ್ಟಿಯಾದ ಸಿನಿಮಾದ ಜೆಸಿ ದಿ ಯೂನಿವರ್ಸಿಟಿ!

ಜೆಸಿ ದಿ ಯೂನಿವರ್ಸಿಟಿ ಸಿನಿಮಾ ಕಥೆ ಏನು?

ಅಪ್ಪ ಅಮ್ಮನ ಒಬ್ಬನೇ ಮುದ್ದಿನ ಮಗ ಮಧು ಸೂದನ್‌ ಅಲಿಯಾಸ್‌ ಮ್ಯಾಡಿಗೆ (ಪ್ರಖ್ಯಾತ್‌) ಒಂಚೂರು ಮುಂಗೋಪ. ಆದರೆ ಯಾರಿಗೂ ಕೇಡು ಬಯಸುವವನಲ್ಲ. ಎಂಜಿನಿಯರಿಂಗ್‌ ಓದಿ, ಏನಾದರೂ ಸಾಧನೆ ಮಾಡಿ, ಅಪ್ಪ ಅಮ್ಮ ಮತ್ತು ಪ್ರೀತಿಸಿದ ಹುಡುಗಿ ಜೊತೆಗೆ ಒಂದು ಚೆಂದವಾದ ಜೀವನ ಕಟ್ಟಿಕೊಳ್ಳುವ ಕನಸು ಕಂಡಂತಹ ಹುಡುಗ. ಆದರೆ ವಿಧಿ ಇದಕ್ಕೆಲ್ಲಾ ಅವಕಾಶ ಮಾಡಿಕೊಡುವುದಿಲ್ಲ. ಒಂದು ಸಿಲ್ಲಿ ಮ್ಯಾಟರ್‌ನಿಂದ ಶುರುವಾದ ಜಗಳ, ಕೊನೆಗೆ ಮ್ಯಾಡಿಯನ್ನು ಬೆಂಗಳೂರಿನ ಡಾನ್‌ ಆಗಿ ಮಾರ್ಪಾಡು ಮಾಡುತ್ತದೆ, ಅದು ಹೇಗೆ? ಯಾವ ರೀತಿ ಎಂಬುದನ್ನು ತೆರೆಮೇಲೆ ನೋಡಬೇಕು.

Daali Dhananjaya: ನಟ ಧನಂಜಯ-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭ ಕೋರಿದ ಅಂಚೆ ಇಲಾಖೆ

ಸಿಂಪಲ್‌ ಕಥೆ; ಸುದೀರ್ಘ ಚಿತ್ರಕಥೆ

ನಿರ್ದೇಶಕ ಚೇತನ್‌ ಜಯರಾಮ್‌ಗೆ ʻಜೆಸಿʼ ಮೊದಲ ಸಿನಿಮಾ. ಈಚೆಗೆ ಜೈಲಿನ ಕರಾಳ ಲೋಕದ ಕುರಿತ ಸಿನಿಮಾಗಳು ಹೆಚ್ಚಾಗುತ್ತಿವೆ. ಆದರೆ ಅವಕ್ಕೆಲ್ಲಾ ಹೋಲಿಸಿದರೆ, ಜೆಸಿ ಭಿನ್ನವಾಗಿದೆ. ಜೈಲಿನ ಒಳಗೆ ಸಜಾ ಕೈದಿಗಳು ಹೇಗಿರುತ್ತಾರೆ? ವಿಚಾರಣಾಧೀನ ಕೈದಿಗಳ ಪಾಡೇನು? ಪೊಲೀಸರು ಯಾವ ರೀತಿ ನಡೆಸಿಕೊಳ್ಳುತ್ತಾರೆ? ಸಹ ಕೈದಿಗಳಿಂದ ಏನೆಲ್ಲಾ ತೊಂದರೆ ಇರುತ್ತದೆ... ಹೀಗೆ ಸಾಕಷ್ಟು ವಿಚಾರಗಳನ್ನು ಜೆಸಿ ಮೂಲಕ ತೋರಿಸಿದ್ದಾರೆ. ಜೊತೆಗೆ ಜೈಲೊಳಗೆ ನಡೆಯುವ ಅಕ್ರಮ ದಂಧೆಗಳ ಸ್ಯಾಂಪಲ್‌ ಕೂಡ ಇಲ್ಲಿದೆ. ಜೆಸಿ ಚಿತ್ರದ ಮೊದಲರ್ಧ ಬಹಳ ಚಾಲಾಕಿತನದ ಬರವಣಿಗೆಯನ್ನು ಹೊಂದಿದೆ.

Rakkasapuradol Review: ಪ್ರೇಕ್ಷಕರನ್ನು ಆಪ್ತಗೊಳಿಸುವ ಬಿಗಿಯಾದ ನಿರೂಪಣೆ; ರಾಜ್‌ ಬಿ ಶೆಟ್ಟಿ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ಗಳ ಮೆರವಣಿಗೆ!

ಶುರುವಿನಲ್ಲೇ ಬರುವ ಕೊಲೆಯೊಂದರ ಭೂತಕಾಲ, ವರ್ತಮಾನಕಾಲ, ಭವಿಷ್ಯತ್ಕಾಲದ ದೃಶ್ಯಗಳು ಮಜಾ ನೀಡುತ್ತವೆ ಮತ್ತು ಸಿನಿಮಾದ ಮೇಲೊಂದು ಭರವಸೆಯನ್ನು ಆರಂಭದಲ್ಲೇ ನೀಡುತ್ತದೆ. ಇಂಟರ್‌ವಲ್‌ ಹೊತ್ತಿಗೆ ಪ್ರಬಲ ಟ್ವಿಸ್ಟ್‌ ಮೂಲಕ ಕುತೂಹಲವನ್ನು ಡಬಲ್‌ ಮಾಡುತ್ತಾರೆ. ಆದರೆ ದ್ವಿತೀಯಾರ್ಧ ಅಂದುಕೊಂಡಮಟ್ಟಿಗೆ ಮೂಡಿಬಂದಿಲ್ಲ. ಸಿನಿಮಾದ ಅವಧಿ 2.42 ಗಂಟೆ ಇದೆ. ಇದು ಕೊಂಚ ದುಬಾರಿ ಆಯಿತೇನೋ ಎಂದೇನಿಸದು. ಕಥೆಯು ಕೂಡ ಮುಂದಕ್ಕೆ ಸಾಗದೇ ನಿಂತಲ್ಲಿಯೇ ಸುತ್ತುತ್ತಿರುತ್ತದೆ. ಆ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಬಹುದಿತ್ತು. ರೌಡಿಸಂ ಜಗತ್ತಿನ ಕಥೆಯೊಳಗೆ ತಂದೆ ಸೆಂಟಿಮೆಂಟ್‌ ಕೂಡ ಹೈಲೈಟ್‌ ಆಗಿದೆ.

Rakkasapuradhol Official Trailer: ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು ! ಹೇಗಿದೆ ರಕ್ಕಸಪುರದೋಳ್ ಟ್ರೈಲರ್‌?

ಹಲವು ಕಡೆ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಜೆಸಿ ಮತ್ತಷ್ಟು ಶಾರ್ಪ್‌ ಎನಿಸುತ್ತಿತ್ತು. ಕಾರ್ತಿಕ್‌ ಛಾಯಾಗ್ರಹಣ ಚೆನ್ನಾಗಿದೆ. ರಿಯಲ್‌ ಜೈಲಿನಲ್ಲೇ ಶೂಟಿಂಗ್‌ ಮಾಡಿರುವುದರಿಂದ ನೈಜತೆಗೆ ಹತ್ತಿರ ಇರುವಂತಂತಹ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಇನ್ನಷ್ಟು ಧಮ್‌ ಇರಬೇಕಿತ್ತು. ಸಾಹಸ ಸನ್ನಿವೇಶಗಳಲ್ಲೂ ನೈಜತೆ ಎದ್ದು ಕಾಣುತ್ತದೆ. ಮಾಸ್ತಿ ಬರೆದ ಸಂಭಾಷಣೆ ಈ ಸಿನಿಮಾದ ನಿಜವಾದ ಕಿಕ್‌ ಎನ್ನಬಹುದು. ರೌಡಿ ಶೀಟರ್‌ಗಳು, ನಟೋರಿಯಸ್ ಕೈದಿಗಳು ಮಾತುಗಳು ಯಾವ ರೀತಿ ಇರುತ್ತವೋ, ಅದನ್ನು ಹಂಗ್ಹಂಗೆ ರಿಯಾಲಿಟಿಗೆ ಹತ್ತಿರ ಇರುವಂತೆ ಬರೆದಿದ್ದಾರೆ ಮಾಸ್ತಿ.

ಮಾಗಿದ್ದಾರೆ ಪ್ರಖ್ಯಾತ್‌

ನಡುವೆ ಅಂತರವಿರಲಿ ಸಿನಿಮಾದಲ್ಲಿ ಚಾಕೊಲೇಟ್ ಬಾಯ್‌ ಥರ ಇದ್ದ ಪ್ರಖ್ಯಾತ್‌ ಇಲ್ಲಿ ಬದಲಾಗಿದ್ದಾರೆ. ಆರಂಭದಲ್ಲಿ ಲವರ್‌ ಬಾಯ್‌ ಆಗಿ ಮಿಂಚಿರುವ ಪ್ರಖ್ಯಾತ್‌, ನಂತರ ರೌಡಿ ಬಾಯ್‌ ಆಗಿ ಅಬ್ಬರಿಸಿದ್ದಾರೆ. ಈ ಬಾರಿ ಅವರು ಮಾಸ್‌ ಅವತಾರ ತಾಳಿದ್ದು, ಅದು ಅವರಿಗೆ ಒಪ್ಪುತ್ತದೆ. ರಂಗಾಯಣ ರಘು ಅಳಿಸುತ್ತಾರೆ. ನಾಯಕಿ ಭಾವನಾ ರೆಡ್ಡಿ ನಟನೆಯಲ್ಲಿ ಇನ್ನಷ್ಟು ಪಳಗಬೇಕಿದೆ. ಹೊಸ ಪ್ರತಿಭೆ ವಿಜಯ್‌ ಸಿಂಹ ಖಳನಾಗಿ ಇಷ್ಟವಾಗುತ್ತಾರೆ. ಥ್ರಿಲ್ಲರ್‌ ಮಂಜು, ವಿಕಾಸ್‌, ಹಂಸ ಮುಂತಾದವರು ಸಿಕ್ಕ ಪಾತ್ರಗಳನ್ನು ನೀಟ್‌ ಆಗಿ ನಿಭಾಯಿಸಿದ್ದಾರೆ.


Movie: ಜೆಸಿ ದಿ ಯೂನಿವರ್ಸಿಟಿ

Release Date: ಫೆಬ್ರವರಿ 6, 2026

Language: ಕನ್ನಡ

Genre: ಥ್ರಿಲ್ಲರ್‌, ಡ್ರಾಮಾ, ಆಕ್ಷನ್

Director: ಚೇತನ್‌ ಜಯರಾಮ್

Cast: ‌ಸೂರ್ಯ ಪ್ರಖ್ಯಾತ್‌, ಭಾವನಾ ರೆಡ್ಡಿ, ಥ್ರಿಲ್ಲರ್‌ ಮಂಜು, ರಂಗಾಯಣ ರಘು, ಹಂಸ, ವಿಜಯ್‌ ಸಿಂಹ

Duration: 162 Minutes

Rating: 3/5