Health Tips: ಪ್ರತಿದಿನ ಬೆಳಗ್ಗೆ ಲವಂಗ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳಿವು
ಲವಂಗವನ್ನು ಬಹಳ ಪ್ರಾಚೀನ ಕಾಲದಿಂದಲೂ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ. ಇದರ ಸೇವನೆಯು ಆರೋಗ್ಯಕರ ಜೀವನ ಶೈಲಿಗೆ ಬಹಳ ಪ್ರಮುಖ ಎನಿಸಿಕೊಂಡಿದೆ. ವಿಟಮಿನ್ ಸಿ, ಇ, ಮೆಗ್ನೀಶಿಯಮ್ ಮತ್ತು ಪೊಟ್ಯಾಶಿಯಮ್ ನಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಲವಂಗದ ನೀರನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನ ದೊರೆಯಲಿದೆ.

clove benefits

ನವದೆಹಲಿ: ಲವಂಗವು ಮಸಾಲೆ ಪದಾರ್ಥವಾಗಿದ್ದು ಆಹಾರದ ರುಚಿಯನ್ನು ಜಾಸ್ತಿ ಮಾಡುವುದರ ಜೊತೆಗೆ ಔಷಧೀಯ ಗುಣಗಳಲ್ಲಿಯೂ ಇದು ಸಮೃದ್ಧವಾಗಿದೆ. ಲವಂಗವನ್ನು ಬಹಳ ಪ್ರಾಚೀನ ಕಾಲ ದಿಂದಲೂ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ. ಇದರ ಸೇವನೆಯು ಆರೋಗ್ಯಕರ ಜೀವನ ಶೈಲಿಗೆ ಬಹಳ ಪ್ರಮುಖವಾಗಿದೆ. ವಿಟಮಿನ್ ಸಿ, ಇ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಲವಂಗದ (Clove water) ನೀರನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನ ದೊರಕಲಿದೆ.
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಲವಂಗ ನೀರನ್ನು ಸೇವಿಸಿದರೆ ಸಮಸ್ಯೆ ನಿವಾರಣೆ ಮಾಡಬಹುದು. ಲವಂಗದ ನೀರು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಿ ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಅಜೀರ್ಣದಂತಹ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಹಾಗಾಗಿ ನೀರಿನಲ್ಲಿ ನೆನೆ ಹಾಕಿ ಲವಂಗ ನೀರು ಸೇವನೆ ಮಾಡುವುದರಿಂದ ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆ ಕಾಪಾಡಿಕೊಳ್ಳಬಹುದು.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಸಮೃದ್ಧವಾಗಿರುವ ಲವಂಗವು ಸೋಂಕಿನ ವಿರುದ್ಧ ಹೋರಾಡುವ ಜೊತೆಗೆ ಜ್ವರ, ನೆಗಡಿ ಇತ್ಯಾದಿ ಕಾಯಿಲೆಗಳ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ದೇಹವನ್ನು ಸೋಂಕುಗಳಿಂದ ಕಾಪಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲಿದೆ.
ತೂಕ ಇಳಿಕೆಗೂ ಪ್ರಯೋಜನಕಾರಿ: ಲವಂಗದ ನೀರು ಚಯಾಪಚಯವನ್ನು ಸುಧಾರಿಸುವ ಮೂಲಕ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರ ಸೇವನೆಯು ಹಸಿವನ್ನು ನಿಗ್ರಹಿಸಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಲವಂಗ ನೀರು ಸೇವನೆ ಮಾಡಬಹುದು.
ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿ: ಲವಂಗವು ಆಂಟಿಮೈಕ್ರೊಬಿಯಲ್ ಗುಣ ಲಕ್ಷಣ ಹೊಂದಿದ್ದು ಇದು ಬಾಯಿಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸಹಾಯ ಮಾಡಲಿದೆ.ಹಲ್ಲುನೋವು ಮತ್ತು ಬಾಯಿಯ ಸಮಸ್ಯೆಗಳಿಗೆ ಈ ಮನೆಮದ್ದು ಈಗಲೂ ಮೋಡಿ ಮಾಡುವಂತೆ ಕೆಲಸ ಮಾಡುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳಿಗೆ ಹೆಸರುವಾಸಿಯಾದ ಲವಂಗದ ನೀರು ಹಲ್ಲುನೋವು ಮತ್ತು ವಸಡು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ: Health Tips: ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ ಎಷ್ಟು ಪ್ರಮಾಣದ ಪ್ರೋಟೀನ್ ಅಗತ್ಯ?
ಉಸಿರಾಟದ ಆರೋಗ್ಯವನ್ನು ಸುಧಾರಿಸುತ್ತದೆ:
ಲವಂಗದ ನೀರು ಸೇವನೆ ಉಸಿರಾಟ ವ್ಯವಸ್ಥೆ ಯನ್ನು ಬಲ ಪಡಿಸುತ್ತದೆ .ಇದರ ಸೇವನೆ ಎದೆಯಲ್ಲಿನ ಕಫ ಕರಗುವುದರ ಜೊತೆಗೆ ಶ್ವಾಸಕೋಶದ ಆರೋಗ್ಯ ವೃದ್ಧಿ ಯಾಗಲಿದೆ.ಇನ್ನು ರಕ್ತದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಅಂಶ ಹೊಂದಿರುವ ಲವಂಗ ಗ್ಲುಕೋಸ್ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜನ ಮಾಡಲಿದೆ.