ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಪ್ರೋಟೀನ್ ಆಹಾರ ಹೆಚ್ಚಾಗಿ ಸೇವಿಸಿದ್ರೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತಂತೆ!

High Protein Diet: ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಉತ್ತಮ ಆಹಾರ, ವ್ಯಾಯಾಮವಿದ್ದರೂ ಈ ಅಭ್ಯಾಸ ಇರುವವರೇ ಇಂತಹ ಹೃದಯ ಸಂಬಂಧಿಗಳಿಗೆ ಬಲಿಯಾಗುತ್ತಿದ್ದು, ಇದು ಆತಂಕಕಾರಿ. ಅತಿ ಪ್ರೋಟೀನ್ ಆಹಾರ, ಎಂಡೋಥೆಲಿಯಲ್ ಡಿಸ್ಫಂಕ್ಷನ್, ದೀರ್ಘಕಾಲದ ಉರಿಯೂತ, ಮರೆಮಾಚಿದ ಜಿನ್ ಸಮಸ್ಯೆಗಳು, ಜೀವನಶೈಲಿಯ ಅಭ್ಯಾಸಗಳು ಇದಕ್ಕೆ ಕಾರಣವಾಗಿವೆ. ಹೊರಗಿನ ಫಿಟ್ನೆಸ್ ಒಳಗಿನ ಆರೋಗ್ಯವನ್ನು ಸೂಚಿಸುವುದಿಲ್ಲ. ಇದಕ್ಕೆ ಹೆಚ್ಚು ಪ್ರೋಟಿನ್ ಅಂಶ ಇರುವ ಆಹಾರ ಸೇವಿಸುವುದು ಮುಖ್ಯ ಕಾರಣವಾಗಲಿದ್ದು, ಈ ಬಗ್ಗೆ ಡಾ. ಡಿಮಿಟ್ರಿ ಯಾರಾನೋವ್ ಮಾಹಿತಿ ಹಂಚಿಕೊಂಡಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ

ಹೈ ಫ್ರೋಟಿನ್ ಒಳ್ಳೆಯದಾ..? ಹೃದ್ರೋಗ ತಜ್ಞರು ಏನನ್ನುತ್ತಾರೆ ಗೊತ್ತಾ..?

ಹೆಚ್ಚು ಪ್ರೋಟೀನ್‌ ಆಹಾರ ಸೇವನೆಯಿಂದ ಹೃದಯಾಘಾತ (ಸಾಂದರ್ಭಿಕ ಚಿತ್ರ) -

Profile Sushmitha Jain Nov 6, 2025 6:00 AM

ಬೆಂಗಳೂರು: ಆರೋಗ್ಯವಂತ ಶರೀರ (Healthy Body) ಪಡೆಯಬೇಕು ಎಂಬುದು ಎಲ್ಲರ ಆಸೆ. ಅದಕ್ಕಾಗಿ ಆರೋಗ್ಯಕರ ಆಹಾರ (Healthy Food) ಸೇವಿಸುವುದು ಅತ್ಯಗತ್ಯ. ಅದರಲ್ಲೂ ಇತ್ತೀಚೆಗೆ ಯುವ ಜನರು ಫಿಟ್ನೆಸ್, ಜಿಮ್ ಅಂತ ದೇಹವನ್ನು ದಂಡಿಸುತ್ತಿದ್ದು, ಸದೃಢ ಮೈಕಟ್ಟು ಪಡೆಯಲು ಪ್ರೋಟೀನ್ ಆಹಾರಗಳ ಮೊರೆ ಹೋಗುತ್ತಿದ್ದಾರೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಮಾಂಸಖಂಡಗಳ ಬೆಳವಣಿಗೆಯಲ್ಲಿ, ಮೂಳೆಗಳ ಸದೃಢತೆಯಲ್ಲಿ, ಬುದ್ಧಿಶಕ್ತಿಯ ಚುರುಕುತನದಲ್ಲಿ ಪ್ರೋಟೀನ್ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಹೆಚ್ಚಿನವರು ತಾವು ಪ್ರತಿನಿತ್ಯ ಸೇವಿಸುವ ಆಹಾರ ಪದ್ಧತಿಯಲ್ಲಿ ಹೆಚ್ಚು ಪ್ರೋಟೀನ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ.

ಆದ್ರೆ ನಿಮಗೆ ಗೊತ್ತಾ ಅತ್ಯಧಿಕ ಪ್ರೋಟಿನ್ ಭರಿತ ಆಹಾರ ಸೇವಿಸಿದ್ರೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ ಎಂದು. ಈ ಬಗ್ಗೆ ಹೃದ್ರೋಗ ತಜ್ಞರಾದಂತಹ ಡಾ. ಡಿಮಿಟ್ರಿ ಯಾರಾನೋವ್ (heart_transplant_doc) ಎಂಬವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೆಚ್ಚು ಹೃದಯ ಪ್ರೋಟಿನ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹೃದಯ ವೈಫಲ್ಯ - ಹೃದಯಾಘಾತ ಅಂತಹ ಗಂಭೀರ ಆರೋಗ್ಯ ಸಮಸ್ಯೆ ಬರುತ್ತದೆ ಎಂಬ ಅಘಾತಕಾರಿ ವಿಷವನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಈ ಸುದ್ದಿಯನ್ನೂ ಓದಿ: Viral Video: ಮಕ್ಕಳಿಗೆ ಆಟ ಇಲ್ಲ... ಪಾಠ ಇಲ್ಲ... ಟೀಚರ್‌ ಕಾಲಿಗೆ ಮಸಾಜ್ ಮಾಡೋದೊಂದೇ ಕೆಲಸ- ವಿಡಿಯೊ ನೋಡಿ

ಹೌದು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದ, ಹೆಚ್ಚಿನ ಯುವಜನಾಂಗ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, 35 ರ ವಯಸ್ಸಿನಲ್ಲಿಯೇ ಹೆಚ್ಚು ಈ ಹೃದಯ ಸಂಬಂಧಿ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಅನಾರೋಗ್ಯಕರ ಆಹಾರ, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಒಂದು ಕಾರಣವಾದರೆ, ಅತೀಯಾಗಿ ದೇಹ ದಂಡಿಸುವುದು, ವ್ಯಾಯಾಮ ಮಾಡುವುದು ಹಾಗೂ ಫಿಟ್ನೆಸ್ ಗೆ ಒತ್ತು ನೀಡುವುದು ಜೊತೆ ಹೆಚ್ಚು ಪ್ರೋಟಿನ್ ಭರಿಯ ಆಹಾರವನ್ನು ಸೇವಿಸುವುದು ಹೃದಯದ ಅಪಧಮನಿಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚು ಕೊಬ್ಬಿನ ಆಹಾರವನ್ನು ಸೇವಿಸಿದಾಗ, ನಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಈ ಕೆಟ್ಟ ಕೊಲೆಸ್ಟ್ರಾಲ್ ಹೃದಯದ ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ, ಇದರಿಂದಾಗಿ ರಕ್ತದ ಹರಿವು ನಿಲ್ಲುತ್ತದೆ. ರಕ್ತವು ಹೃದಯವನ್ನು ತಲುಪಲು ಸಾಧ್ಯವಾಗದಿದ್ದಾಗ, ಹೃದಯಾಘಾತ ಸಂಭವಿಸುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಅತಿ ಹೆಚ್ಚು ಪ್ರೋಟೀನ್ ಇರುವ ಆಹಾರ ಹೃದಯಕ್ಕೆ ಅಪಾಯಕಾರಿಯೇ..?

ಅತಿ ಹೆಚ್ಚು ಪ್ರೋಟೀನ್, ಕಡಿಮೆ ಕಾರ್ಬೋಹೈಡ್ರೇಟ್ ಅಥವಾ ಮಾಂಸಾಹಾರಿ ಆಹಾರಗಳು ದೇಹದ ಮೂಳೆಗಳನ್ನು ಹಾಗೂ ಸ್ನಾಯುಗಳನ್ನು ಬಲಗೊಳಿಸುವಲ್ಲಿ ಸಹಕಾರಿಯಾಗಿದ್ದು, ಕೊಬ್ಬನ್ನು ಕರಗಿಸಲು ಇದು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಡಾ. ಯಾರಾನೋವ್ ಪ್ರಕಾರ ಇಂತಹ ಆಹಾರಗಳು "ಕೆಟ್ಟ" ಕೊಲೆಸ್ಟ್ರಾಲ್ ಆದ ಎಲ್ ಡಿಎಲ್(LDL) ಅಂಶವನ್ನು ಅತಿಯಾಗಿ ಹೆಚ್ಚಿಸುತ್ತವೆ. LDL ಹೆಚ್ಚಾದಾಗ, ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಕೊಬ್ಬು ಕಡಿಮೆ ಕಂಡರೂ ಈ ಸಮಸ್ಯೆ ಉಂಟಾಗಬಹುದು.

ಈ ಸುದ್ದಿಯನ್ನೂ ಓದಿ: Viral Video: ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಪ್ರಕರಣ; ಕೃತ್ಯ ಎಸಗಿದ ಪಾಪಿ ಮಹಿಳೆಯ ಬಂಧನ

ಇನ್ನು ಅತಿ ಫಿಟ್ ಆಗಿರುವುದು, ಜಿಮ್ ಗೆ ಹೋಗುವುದು, ಕಟ್ಟುನಿಟ್ಟಾದ ದೇಹವನ್ನು ಹೊಂದುವುದು, ಸುಂದರವಾಗಿ ಕಾಣಬೇಕು ಎನ್ನುವುದು ಅದಕ್ಕಾಗಿ ಸೆಲೆಕ್ಟೆಡ್ ಆಹಾರ ಸೇವಿಸುವುದು ಟ್ರೆಂಡ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವಿಡೀಯೋಗಳು ಇದ್ದು, ಫಿಟ್ನೆಸ್ ಬಗ್ಗೆ, ದೇಹದಾಡ್ಯ ಬಗ್ಗೆ ಮಾಹಿತಿ ನೀಡುತ್ತಾ ಇರುತ್ತಾರೆ. ಆದರೆ ಫಿಟ್ನೆಸ್ ಮಾಡಿ ಅವರು ಆರೋಗ್ಯವಾಗಿ ಕಂಡರೂ, ಅವರೊಳಗಿನ ಶಕ್ತಿ ಕುಂದುತ್ತಾ ಇರುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಈ ಫಿಟ್ನೆಸ್, ವ್ಯಾಯಾಮ ಗಮನಾರ್ಹವಾದ ಪಾತ್ರ ಇರುವುದಿಲ್ಲ. ಹೀಗೆ ಅತಿಯಾಗಿ ವ್ಯಾಯಾಮ, ಫಿಟ್ನೆಸ್ ಎಂದು ಜಿಮ್ ಅಲ್ಲಿ ಕಾಲ ಕಳೆಯುವ ಪುರುಷರು ಹೃದಯಾಘಾತಕ್ಕೆ ಬಲಿ ಆಗುವ ಅನೇಕ ಪ್ರಕರಣಗಳನ್ನು ನೋಡಿದ್ದೇನೆ ಎಂದು ಡಾ. ಯಾರಾನೋವ್ ಅವರು ತಿಳಿಸಿದ್ದಾರೆ. ಅಲ್ಲದೇ ಅವರೆಲ್ಲರೂ 35 ವರ್ಷದ ಪ್ರಾಯದವಾರಾಗಿದ್ದು, "ಸೂಪರ್ ಫಿಟ್" ಆಗಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ಹೃದಯ ಸಂಬಂಧಿ ಕಾಯಿಲೆ ಕುರಿತಾದ ಯಾವುದೇ ಎಚ್ಚರಿಕೆಯ ಲಕ್ಷಣಗಳೂ ಇರಲಿಲ್ಲ. ರಕ್ತ ಪರೀಕ್ಷೆಗಳು, ಸ್ಟ್ರೆಸ್ ಟೆಸ್ಟ್ ಗಳು, ಮತ್ತು ಆರೋಗ್ಯ ತಪಾಸಣೆಗಳು ಅವರನ್ನು ಆರೋಗ್ಯವಂತರಾಗಿ ತೋರಿಸುತ್ತಿದ್ದವು. ಆದರೆ, ಇದ್ದಕ್ಕಿದ್ದಂತೆ ರಕ್ತನಾಳಗಳಲ್ಲಿ ಅಡೆತಡೆ ಉಂಟಾಗಿ ಜೀವಕ್ಕೆ ಅಪಾಯ ತರುತ್ತಿತ್ತು ಎಂಬ ಅಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.

ಡಾ. ಯಾರಾನೋವ್ ಅವರ ಅಭಿಪ್ರಾಯಕ್ಕೆ ಒಮ್ಮತ ಇಲ್ಲ

ಅತಿ ಹೆಚ್ಚು ಪ್ರೋಟೀನ್ ಆಹಾರ ಸೇವಿಸುವುದರಿಂದ ಹೃದಯ ವೈಫಲ್ಯ ಆಗುತ್ತದೆ ಎಂಬ ಡಾ. ಯಾರಾನೋವ್ ಅವರ ವಾದಕ್ಕೆ ಹೆಚ್ಚಿನ ವೈದ್ಯರು ವಿರೋಧ ವ್ಯಕ್ತಪಡಿಸಿದ್ದು, ಇದೊಂದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ. ಫೋರ್ಟಿಸ್ ಎಸ್ಕೋರ್ಟ್ಸ್, ಓಖ್ಲಾದ ಹಿರಿಯ ಹೃದ್ರೋಗ ತಜ್ಞ ಡಾ. ಅಶೀಷ್ ಜೈ ಕಿಶನ್ ಅವರು ಹಂಚಿಕೊಂಡ ಮಾಹಿತಿ ಪ್ರಕಾರ. “ಹೈ-ಪ್ರೋಟೀನ್ ಆಹಾರ ಹೃದಯದ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಮಾತು ಒಂದು ತಪ್ಪು ಕಲ್ಪನೆಯಾಗಿದೆ. ಅವರ ಪ್ರಕಾರ, ಭಾರತದಲ್ಲಿ 70–80% ಜನರು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಕಡಿಮೆ ಪ್ರೋಟೀನ್ ಸೇವಿಸುತ್ತಿದ್ದಾರೆ. ಬಹುತೇಕ ಜನರಿಗೆ ಪ್ರೋಟೀನ್ ಸೇವನೆ ಹೆಚ್ಚಿಸುವುದು ಅಗತ್ಯವೂ ಆಗಿದ್ದು, ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಎಂದಿದ್ದಾರೆ.