ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ರಾಸಾಯನಿಕ ಬಳಸಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ?

ನೈಸರ್ಗಿಕವಾಗಿ ಹಣ್ಣಾದ ಮಾವು(Mango) ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೇ ಕೃತಕವಾಗಿ ಹಣ್ಣಾದ ಮಾವು ಆರೋಗ್ಯಕ್ಕೆ ಅಷ್ಟೇ ಹಾನಿಕರಕ. ಮಾವಿನ ಹಣ್ಣನ್ನು ಬೇಗನೆ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಫಾಸ್ಫರಸ್ ಹೈಡ್ರೈಡ್ ಮತ್ತು ಆರ್ಸೆನಿಕ್‌ನಂತಹ ರಾಸಾಯನಿಕಗಳನ್ನು ಬೆರೆಸಿ ಚುಚ್ಚಲಾಗುತ್ತದೆ. ಇದರಿಂದ ಅಸಿಟಿಲೀನ್ ಅನಿಲ ಬಿಡುಗಡೆಯಾಗಿ ಬೇಗನೆ ತೇವಾಂಶಕ್ಕೆ ಬಂದು ಮಾವಿನಕಾಯಿಗಳು ಕಾಯಿ ಇದ್ದರೂ ಹಣ್ಣಾಗಲು ಕಾರಣವಾಗುತ್ತದೆ.

ಮಾವಿನ ಹಣ್ಣು ಅಸಲಿಯೋ ನಕಲಿಯೋ ಗುರುತಿಸೋದು ಹೇಗೆ?

Profile Pushpa Kumari Apr 3, 2025 4:34 PM

ನವದೆಹಲಿ: ಬೇಸಿಗೆ ಬಂತೆಂದರೆ ಸಾಕು ರಸ್ತೆ ಬದಿಗಳಲ್ಲಿ, ಹಣ್ಣಿನ ಅಂಗಡಿಗಳಲ್ಲಿ ಹೆಚ್ಚಾಗಿ ಕಾಣಸಿಗುವ ಏಕೈಕ ಹಣ್ಣು ಎಂದರೆ ಅದು ಮಾವಿನಹಣ್ಣು (Mango) ರಸಭರಿತ ಸ್ವಾದದ ಮಾವು ಎಲ್ಲರಿಗೂ ಇಷ್ಟ ವಾಗುತ್ತದೆ. ಹಾಗಾಗಿ ಇದರ ಬೇಡಿಕೆಯು ಹೆಚ್ಚಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಮಾವಿನಕಾಯಿಯನ್ನು ಹಣ್ಣಾಗಿಸಲಾಗುತ್ತಿದೆ. ಮಾವಿನಕಾಯಿಯನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈ ಡ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಬೇಗನೆ ಹಣ್ಣಾಗಿಸುವಂತೆ ಮಾಡಲಾಗುತ್ತದೆ. ಇಂತಹ ಮಾವಿನಹಣ್ಣು ತಿನ್ನುವುದರಿಂದ ಅಲರ್ಜಿ, ವಾಂತಿ-ಬೇಧಿ, ಕ್ಯಾನ್ಸರ್‌ನಂಥ ಗಂಭೀರ ಆರೋಗ್ಯ ಸಮಸ್ಯೆ ಗಳು ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾದರೆ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾದ ಮಾವಿನಹಣ್ಣನ್ನು ಗುರುತಿಸುವುದು ಹೇಗೆ ಎಂಬ ಗೊಂದಲ ನಿಮ್ಮಲ್ಲಿ ಇರಬಹುದು. ನೀವು ಖರೀದಿ ಮಾಡುವ ಮಾವಿನ ಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ಯಾ? ಅಥವಾ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ಎನ್ನುವ ಪತ್ತೆ ಹಚ್ಚಲು ಕೆಲವೊಂದು ಸಲಹೆ ಇಲ್ಲಿದೆ.

ನೈಸರ್ಗಿಕವಾಗಿ ಹಣ್ಣಾದ ಮಾವು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೇ ಕೃತಕವಾಗಿ ಹಣ್ಣಾದ ಮಾವು ಆರೋಗ್ಯಕ್ಕೆ ಅಷ್ಟೇ ಹಾನಿಕಾರಕ ಮಾವಿನ ಹಣ್ಣನ್ನು ಬೇಗನೆ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಫಾಸ್ಫರಸ್ ಹೈಡ್ರೈಡ್ ಮತ್ತು ಆರ್ಸೆನಿಕ್‌ನಂತಹ ರಾಸಾಯನಿಕಗಳನ್ನು ಬೆರೆಸಿ ಚುಚ್ಚಲಾಗುತ್ತದೆ. ಇದರಿಂದ ಅಸಿಟಿಲೀನ್ ಅನಿಲ ಬಿಡುಗಡೆಯಾಗಿ ಬೇಗನೆ ತೇವಾಂಶಕ್ಕೆ ಬಂದು ಮಾವಿನಕಾಯಿಗಳು ಹಣ್ಣಾಗಲು ಕಾರಣವಾಗುತ್ತದೆ. ಇದರಿಂದ ಮಾವಿನಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡು ಬರುವ ಖನಿಜಾಂಶಗಳು ಮತ್ತು ಪೌಷ್ಠಿಕ ಸತ್ವಗಳು ನಾಶವಾಗಿ ವಿಷಕಾರಿ ಅಂಶಗಳು ಮಾವಿನ ಹಣ್ಣಿನಲ್ಲಿ ತುಂಬಿಕೊಳ್ಳುತ್ತವೆ. ಈ ರಾಸಾಯನಿಕಗಳು ನಮ್ಮ ದೇಹಕ್ಕೆ ಸೇರಿದರೆ ವಾಂತಿ, ಭೇದಿ, ಉಸಿರಾಟದ ತೊಂದರೆ, ನರಮಂಡಲದ ಹಾನಿ ಮತ್ತು ಹಲವು ರೀತಿಯ ಗಂಭೀರ ಖಾಯಿಲೆಗಳಿಗೂ ಕಾರಣವಾಗಬಹುದು.

ಅಸಲಿಯೋ? ನಕಲಿಯೋ?ಪತ್ತೆ ಹಚ್ಚುವುದು ಹೇಗೆ?

  • ನೈಸರ್ಗಿಕವಾಗಿ ಹಣ್ಣಾದ ಮಾವಿನಹಣ್ಣುಗಳು ಸಿಹಿ ಮತ್ತು ಪರಿಮಳ ಯುಕ್ತವಾಗಿರುತ್ತವೆ. ಅದೇ ಕೃತಕವಾದ ಮಾವಿನಹಣ್ಣುಗಳು ಹೆಚ್ಚು ಸುವಾಸನೆಯನ್ನು ಹೊಂದಿರುವುದಿಲ್ಲ. 
  • ರಸಾಯನಿಕ ಸಿಂಪಡಿಸಿದ ಮಾವಿನ ಹಣ್ಣು ನೈಸರ್ಗಿಕ ಮಾವಿನ ಹಣ್ಣುಗಳಿಗಿಂತ ಮೃದುವಾಗಿರುತ್ತದೆ. ಮತ್ತು ಕಡಿಮೆ ಜ್ಯೂಸ್ ಉತ್ಪಾದಿಸುತ್ತದೆ.
  • ಮಾವಿನ ಹಣ್ಣನ್ನು ಖರೀದಿಸುವಾಗ, ಮಾವಿನ ಹಣ್ಣಿನ ಬಣ್ಣವನ್ನು ನೋಡಲು ಮರೆಯದಿರಿ. ಮಾವಿನ ಹಣ್ಣನ್ನು ರಾಸಾಯನಿಕ ಗಳಿಂದ ಹಣ್ಣು ಮಾಡಿದರೆ ಅದರ ಮೇಲೆ ಹಸಿರು ಚುಕ್ಕೆಗಳಿರುತ್ತವೆ
  • ಮಾವಿನ ಹಣ್ಣನ್ನು ಖರೀದಿಸುವಾಗ ಸರಿಯಾಗಿ ಗಮನಿಸಿ.ಅಲ್ಲಲ್ಲಿ ಹಸಿರು ಚುಕ್ಕೆಗಳಿದ್ದರೆ, ಅದಕ್ಕೆ ಇಂಜೆಕ್ಷನ್ ಮಾಡಿರುವ ಸಾಧ್ಯತೆ ಇರುತ್ತದೆ. 
  • ಮಾವಿನಹಣ್ಣಿನ ಆಕಾರ ಹೇಗಿದೆ ಎಂಬುದನ್ನು ನೋಡುವ ಮೂಲಕವು ಕಂಡು ಹಿಡಿಯಬಹುದು. ರಾಸಾಯನಿಕ ವಾಗಿ ಮಾಗಿದ ಮಾವಿನ ಹಣ್ಣುಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ರಸವನ್ನು ತೊಟ್ಟಿಕ್ಕುವಂತೆ ಕಾಣಲಿವೆ.
  • ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವಿನ ಹಣ್ಣುಗಳು ರಾಸಾಯನಿಕ ಯುಕ್ತ ವಾಸನೆಯನ್ನು ಬೀರುತ್ತವೆ.
  • ಮಾವಿನ ಹಣ್ಣನ್ನು ಕೊಳ್ಳುವಾಗ ಅದನ್ನು ಲಘುವಾಗಿ ಒತ್ತಿ ನೋಡಬೇಕು. ನೀವು ಮಾವಿನಹಣ್ಣನ್ನು ಒತ್ತಿದಾಗ ಗಟ್ಟಿಯಾಗಿದ್ದರೆ, ಮಾವು ಸರಿಯಾಗಿ ಹಣ್ಣಾಗಿಲ್ಲ ಮತ್ತು ಅದನ್ನು ಕೆಮಿಕಲ್‌ನಿಂದ ಹಣ್ಣಾಗಿಸಿ ಮಾರಾಟ ಮಾಡ ಲಾಗುತ್ತಿದೆ ಎಂದು ತಿಳಿಯಬಹುದು.

ಇದನ್ನು ಓದಿ: Health Benefits of Mangosteen: ಮ್ಯಾಂಗೋಸ್ಟೀನ್ ಹಣ್ಣಿನ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಆರೋಗ್ಯ ಲಾಭ!

ಹೀಗೂ ಪತ್ತೆಹಚ್ಚಬಹುದು:

ಮಾವಿನ ಹಣ್ಣುಗಳನ್ನು ಖರೀದಿಸುವಾಗ, ಮಾವಿನಹಣ್ಣನ್ನು ಬಕೆಟ್ ಅಥವಾ ಪಾತ್ರೆಗೆ ನೀರು ಸೇರಿಸಿ, ಅದಕ್ಕೆ ಮಾವಿನ ಹಣ್ಣನ್ನು ಹಾಕಿ ಮಾವಿನ ಹಣ್ಣುಗಳು ಮುಳುಗುತ್ತಿವೆ ಮತ್ತು ನೀರಿನ ಮೇಲ್ಮೈಯಲ್ಲಿವೆ ಎಂದು ನೋಡಿ. ಡಿಪ್ ಪರೀಕ್ಷೆ ಮಾಡಬಹುದು. ನೀರಿನಲ್ಲಿ ಮುಳುಗುವ ಮಾವು ನೈಸರ್ಗಿಕ ವಾಗಿ ಹಣ್ಣಾಗುತ್ತವೆ. ಆದರೆ ಮಾವಿನ ಹಣ್ಣು ನೀರಿನಲ್ಲಿ ತೇಲುತ್ತಿದ್ದರೆ ಅದನ್ನು ರಾಸಾಯನಿಕಗಳಿಂದ ಹಣ್ಣಾಗಿಸಲಾಗಿದೆ ಎಂದು ಪತ್ತೆ ಹಚ್ಚಬಹುದು.