ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Intermittent fasting: ಹದಿಹರೆಯದವರು ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡುತ್ತೀರಾ? ತಜ್ಞರ ಈ ಸಲಹೆಗಳನ್ನು ಪಾಲಿಸಿ!

ಹೆಚ್ಚಿನವರು ಅಧಿಕ ವರ್ಕೌಟ್ ಮತ್ತು ಡಯೆಟ್ ಮಾಡಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇನ್ನು ಕೆಲವರು ಕಡಿಮೆ ಆಹಾರ ಸೇವಿಸಿ ಮಧ್ಯಂತರ ಉಪವಾಸದ ಮೊರೆ ಹೋಗುತ್ತಿದ್ದಾರೆ. ತೂಕ ಇಳಿಕೆಯ ವಿಧಾನವನ್ನು ಸರಿಯಾದ ರೀತಿಯಲ್ಲಿ ಕ್ರಮಪ್ರಕಾರ ನಿರ್ವಹಿಸದಿದ್ದರೆ ನೀವೆಷ್ಟು ಡಯೆಟ್ ವರ್ಕೌಟ್ ಮಾಡಿದರೂ ವ್ಯರ್ಥವಾಗಲಿದೆ. ಈ ನಿಟ್ಟಿನಲ್ಲಿ ತೂಕ ಇಳಿಕೆಗೆ ಮಧ್ಯಂತರ ಉಪವಾಸ ಉತ್ತಮ ಕ್ರಮವೇ?, ಇದನ್ನು ಹದಿಹರೆಯದವರು ಕೂಡ ಮಾಡಬಹುದೇ? ಎಂಬ ಅನೇಕ ಪ್ರಶ್ನೆಗಳು, ಗೊಂದಲ ಇದ್ದರೆ ತಜ್ಞರ ಸಲಹೆ ಇಲ್ಲಿದೆ.

ಹದಿಹರೆಯದವರ ಮಧ್ಯಂತರ ಉಪವಾಸ ಸುರಕ್ಷಿತವೇ? ತಜ್ಞರು ಹೇಳೋದೇನು?

ಸಾಂದರ್ಭಿಕ ಚಿತ್ರಆ

Profile Pushpa Kumari Feb 18, 2025 7:00 AM

ನವದೆಹಲಿ: ಇತ್ತೀಚಿನ ಯುವ ಜನಾಂಗಕ್ಕೆ ಫಿಟ್ ಆ್ಯಂಡ್ ಫೈನ್ ಆಗಿ ಕಾಣುವ ಕ್ರೇಜ್ ಹೆಚ್ಚು. ಹಾಗಾಗಿ ಬದಲಾದ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದ ತೂಕ ಹೆಚ್ಚಿಸಿಕೊಂಡವರು ಜಿಮ್, ವರ್ಕೌಟ್, ಡಯೆಟ್ ಮಾಡುವ ಮೂಲಕ ಸ್ಲಿಮ್ ಆಗಲು ಬಯಸುತ್ತಾರೆ(Health Tips). ಹೆಚ್ಚಿನ ವರು ಅಧಿಕ ವರ್ಕೌಟ್ ಮತ್ತು ಡಯೆಟ್ ಮಾಡಿ ಆರೋಗ್ಯ ಸಮಸ್ಯೆ ಗಳನ್ನು ಎದುರಿಸುತ್ತಿದ್ದರೆ ಇನ್ನು ಕೆಲವರು ಕಡಿಮೆ ಆಹಾರ ಸೇವಿಸಿ ಮಧ್ಯಂತರ ಉಪವಾಸದ(Intermittent fasting) ಮೊರೆ ಹೋಗುತ್ತಿದ್ದಾರೆ. ತೂಕ ಇಳಿಕೆಯ ವಿಧಾನವನ್ನು ಸರಿಯಾದ ರೀತಿಯಲ್ಲಿ ಕ್ರಮಪ್ರಕಾರ ನಿರ್ವಹಿಸದಿದ್ದರೆ ನೀವೆಷ್ಟು ಡಯೆಟ್ ವರ್ಕೌಟ್ ಮಾಡಿದರು ವ್ಯರ್ಥವಾಗಲಿದೆ. ಈ ನಿಟ್ಟಿನಲ್ಲಿ ತೂಕ ಇಳಿಕೆಗೆ ಮಧ್ಯಂತರ ಉಪವಾಸ ಉತ್ತಮ ಕ್ರಮವೇ? ಇದನ್ನು ಹದಿಹರೆಯದವರು ಕೂಡ ಮಾಡಬಹುದೇ? ಎಂಬ ಅನೇಕ ಪ್ರಶ್ನೆಗಳು, ಗೊಂದಲ ಇದ್ದರೆ ತಜ್ಞರ ಸಲಹೆ ಇಲ್ಲಿದೆ.

ಮಧ್ಯಂತರ ಉಪವಾಸ ಎಂದರೇನು?

ಮಧ್ಯಂತರ ಉಪವಾಸ ಎನ್ನುವುದು ಗರಿಷ್ಠ ಸಮಯದಲ್ಲಿ ಉಪವಾಸ ಮಾಡುವುದು ಎಂದು ಅರ್ಥೈಸಿಕೊಳ್ಳಬಹುದು. ದಿನದಲ್ಲಿ 16 ಗಂಟೆ ಉಪವಾಸ ಇದ್ದು 8 ಗಂಟೆ ಅವಧಿಯಲ್ಲಿ ಮಾತ್ರ ಆಹಾರ ಸೇವಿಸುವುದಾಗಿದೆ. ಹೆಚ್ಚಿನವರು ಉದ್ಯೋಗಕ್ಕೆ ಹೊಂದಿಕೊಂಡಂತೆ ಈ ಉಪವಾಸ ಮಾಡುತ್ತಾರೆ‌. ಸಂಜೆ 8 ಗಂಟೆಗೆ ಆಹಾರ ಸೇವಿಸಿದರೆ ನಾಳೆ ಮಧ್ಯಾಹ್ನ 12ರ ತನಕ ನೀರೊಂದನ್ನು ಬಿಟ್ಟು ಏನನ್ನು ಸೇವಿಸದೆ ಇರುವ ಒಂದು ಕ್ರಮವಾಗಿದೆ. ಇದರಿಂದ ಶೀಘ್ರವೇ ತೂಕ ಇಳಿಕೆ ಆಗುತ್ತದೆ ಎಂದು ನಂಬಲಾಗುವುದನ್ನು ನಾವು ಕಾಣಬಹುದು. ಆದರೆ ಅಧ್ಯಯನ ಒಂದರ ವರದಿ ಪ್ರಕಾರ ಇದನ್ನು ಯುವಜನತೆ, ಹದಿ ಹರೆಯದವರು ಮಾಡುವುದು ಅಷ್ಟು ಸುರಕ್ಷಿತ ಅಲ್ಲ ಎಂಬುದು ತಿಳಿದು ಬಂದಿದೆ.

ಸಂಶೋಧನಾ ವರದಿ ಹೇಳಿದ್ದೇನು?

ಮಧ್ಯಂತರ ಉಪವಾಸದ ಕುರಿತು ಜರ್ಮನ್ ಅಧ್ಯಯನ ಸಂಸ್ಥೆ ಸಂಶೋಧನೆ ನಡೆಸಿದೆ. ಅಧ್ಯಯನದಲ್ಲಿ ವಿವಿಧ ವಯಸ್ಸಿನ ಇಲಿ ಗಳನ್ನು ಬಳಸಿಕೊಂಡು ಅದರ ಮೇಲೆ ಮಧ್ಯಂತರ ಉಪವಾಸ ಪ್ರಯೋಗ ಮಾಡಲಾಗಿದೆ. ವಯಸ್ಸಾದ ಇಲಿಗಳ ದೇಹದ ಮೇಲೆ ಪರಿಣಾಮ ಬೀರಿದ್ದು ತಿಳಿದು ಬಂದಿದೆ. ಆದರೆ ಯುವ ಇಲಿಗಳ ಮೇದೋಜೀರಕ ಗ್ರಂಥಿಗಳಿಗೆ ಹಾನಿಯಾಗಿದ್ದು ತಿಳಿದು ಬಂದಿದ್ದು ಹಾಗಾಗಿ ಮಧ್ಯಂತರ ಉಪವಾಸವು ಹದಿಹರೆಯದವರಿಗೆ ಉತ್ತಮ ವಲ್ಲ. ಜರ್ಮನಿಯ ಸೆಲ್ ರಿಪೋರ್ಟ್ ಅಧ್ಯಯನ ವರದಿ ಆಧಾರಿಸಿ ಯುವ ಜನತೆ ಹಾಗೂ ಹದಿಹರೆಯದವರು ಈ ಮಧ್ಯಂತರ ಉಪವಾಸ ಮಾಡಿದರೆ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ‌.

ಇದನ್ನು ಓದಿ: Health Tips: ಖಾಲಿ ಹೊಟ್ಟೆಯ ನಡಿಗೆ ಅಥವಾ ಊಟದ ನಂತರದ ನಡಿಗೆ! ತೂಕ ಇಳಿಕೆಗೆ ಯಾವುದು ಉತ್ತಮ?

ಮಧ್ಯಂತರ ಉಪವಾಸ ಮಕ್ಕಳು ಮತ್ತು ಹದಿಹರೆಯದವರಿಗೆ ಅಷ್ಟು ಸುರಕ್ಷಿತವಲ್ಲ. ಇದು ವಯಸ್ಕರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣ ನಿಯಂತ್ರಿಸುವುದು ತೂಕ ಇಳಿಕೆಯ ಕ್ರಮವೇ ಆಗಿದ್ದರೂ ಕೂಡ ಹದಿಹರೆಯದವರು ಈ ಪ್ರಯತ್ನ ಮಾಡಿದರೆ ಇನ್ಸುಲಿನ್ ಉತ್ಪಾದಿಸುವ ಜೀವ ಕೋಶಗಳಿಗೆ ಹಾನಿಯಾಗಲಿದೆ. ಒಟ್ಟಾರೆಯಾಗಿ ತೂಕ ಇಳಿಸಬೇಕು ಎನ್ನುವವರು ವೈದ್ಯರ ಜೊತೆ ಸಮಾಲೋಚನೆ ನಡೆಸಿ ನಿಮ್ಮ ದೇಹ ಸ್ಥಿತಿ ಅರ್ಥೈಸಿಕೊಂಡು ಸರಿಯಾದ ಕ್ರಮದಲ್ಲಿ ವರ್ಕೌಟ್, ಡಯೆಟ್ ಎಲ್ಲವನ್ನು ಮಾಡುವುದು ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯ ಕ್ರಮವಾಗಿದೆ.