ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Health: ಅನ್ನದೊಂದಿಗೆ ಎಣ್ಣೆ, ಚಟ್ನಿ ಪುಡಿ ಸೇವನೆ ಉತ್ತಮವೇ?

ಆಹಾರದೊಂದಿಗೆ ಎಣ್ಣೆ, ಚಟ್ನಿ ಪುಡಿ ಸೇವನೆ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಇದು ಆರೋಗ್ಯಕರವೇ? ಸಸ್ಯ ಜನ್ಯ ಮತ್ತು ಪ್ರಾಣಿ ಜನ್ಯ ಕೊಬ್ಬಿನ ಅಂಶಗಳಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮ ಏನು? ಈ ಕುರಿತು ವಿಜ್ಞಾನ ಹೇಳುವುದೇನು? ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಸಾಮಾನ್ಯವಾಗಿ ಆಹಾರ ತಯಾರಿಸಲು, ಆಹಾರದೊಂದಿಗೆ ಸೇವಿಸಲು ನಾವು ಸಸ್ಯ ಜನ್ಯ ಕೊಬ್ಬುಗಳನ್ನೇ ಆಯ್ಕೆ ಮಾಡುತ್ತೇವೆ. ಇದರೊಂದಿಗೆ ಪ್ರಾಣಿ ಜನ್ಯ ಕೊಬ್ಬುಗಳನ್ನು ಕೂಡ ಯಥೇಚ್ಛವಾಗಿ ಬಳಸುತ್ತೇವೆ. ಇವುಗಳಲ್ಲಿ ದೇಹಾರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ಕೇಳಿದರೆ ಅದು ಸಸ್ಯ ಜನ್ಯ ಕೊಬ್ಬುಗಳು ಎನ್ನಬಹುದು ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಅನ್ನದೊಂದಿಗೆ ಸಸ್ಯ ಜನ್ಯ ಕೊಬ್ಬುಗಳಾದ ಎಳ್ಳು, ಅಗಸೆ, ಕಡ್ಲೆಕಾಯಿ, ಜೋಳ ಎಣ್ಣೆಗಳನ್ನು ಸಾಮಾನ್ಯವಾಗಿ ಬಳಸುತ್ತೇವೆ. ಇವುಗಳಲ್ಲಿರುವ ಕೊಬ್ಬನ್ನು ಸ್ಟಿರಾಲ್ ಎನ್ನಲಾಗುತ್ತದೆ. ಇನ್ನು ಪ್ರಾಣಿ ಜನ್ಯದಿಂದ ಸಿಗುವಂತ ಕೊಬ್ಬನ್ನು ಕೊಲೆಸ್ಟ್ರಾಲ್ ಎನ್ನಲಾಗುತ್ತದೆ ಎಂದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:



ಕೊಲೆಸ್ಟ್ರಾಲ್‌ಗೆ ಹೋಲಿಸಿದರೆ ಸ್ಟಿರಾಲ್ ಮಾನವನ ದೇಹಕ್ಕೆ ಉತ್ತಮ. ಮನುಷ್ಯನ ದೇಹದಲ್ಲಿರುವ ಕೊಲೆಸ್ಟ್ರಾಲ್ ಏನೆಲ್ಲ ಕಾರ್ಯಗಳನ್ನು ಮಾಡುತ್ತದೆಯೋ ಅವುಗಳನ್ನು ಸಸ್ಯಗಳಲ್ಲಿ ಸ್ಟಿರಾಲ್ ಮಾಡುತ್ತದೆ. ಸಸ್ಯಜನ್ಯ ಕೊಬ್ಬಿನಂಶ ಸ್ಟಿರಾಲ್ ಮನುಷ್ಯನಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ ಎಂದು ಅವರು ತಿಳಿಸಿದರು.

ಮೆದುಳಿನ ಆರೋಗ್ಯ ವೃದ್ಧಿಸಲು ಯಾವ ಆಹಾರ ಸೇವನೆ ಮಾಡಬೇಕು?

ಪ್ರಾಣಿಜನ್ಯ ಕೊಬ್ಬಿನಂಶ ಕೊಲೆಸ್ಟ್ರಾಲ್ ಹೆಚ್ಚಾಗಿ ಸೇವಿಸಿದರೆ ಅದು ಬೇಗನೆ ನಮ್ಮ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಸಸ್ಯ ಜನ್ಯ ಕೊಬ್ಬುಗಳು ಕರುಳಿಗೆ ಹೋಗುತ್ತದೆ. ಅದು ಅಲ್ಲೇ ಉಳಿದುಕೊಳ್ಳುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಸ್ಟಿರಾಲ್ ದೇಹದಲ್ಲಿ ಸೇರಿಕೊಳ್ಳುವುದು ಕಡಿಮೆ ಎಂದರು.

ಕರುಳಿನಲ್ಲಿರುವ ಸ್ಟಿರಾಲ್‌ಗಳು ದೇಹಕ್ಕೆ ಹೆಚ್ಚು ಕೊಲೆಸ್ಟ್ರಾಲ್ ಸೇರದಂತೆ ನೋಡಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಇದು ದೇಹಕ್ಕೆ ಸಂಪೂರ್ಣ ರಕ್ಷಣೆ ನೀಡುವ ಕಾರ್ಯವನ್ನು ಮಾಡುತ್ತದೆ. ಸ್ಟಿರಾಲ್‌ಗಳು ದೇಹದೊಳಗೆ ಸೇರಿಕೊಂಡರೆ ಅದು ಅಪಾಯಕಾರಿಯಾಗುತ್ತದೆ ಎಂದರು.

ಮಕ್ಕಳು ಚುರುಕಾಗಿರಬೇಕಾದರೆ ಗರ್ಭಿಣಿಯರು ಈ ಸೊಪ್ಪು ಸೇವಿಸಲೇಬೇಕು

ಕೇವಲ ಪ್ರಾಣಿ ಜನ್ಯ ಆಹಾರ ಸೇವನೆ ಹೆಚ್ಚು ಮಾಡಿ ಸಸ್ಯ ಜನ್ಯವನ್ನು ತಿನ್ನದೇ ಇದ್ದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ತಿಳಿಸಿದರು. ಬೀಟಾ-ಸಿಟೊಸ್ಟೆರೊಲೇಮಿಯಾ ಎನ್ನುವ ಕಾಯಿಲೆ ಇರುವವರು ಎರಡು ರೀತಿಯ ಕೊಬ್ಬನ್ನು ಸೇವಿಸುವ ಹಾಗಿಲ್ಲ. ಯಾಕೆಂದರೆ ಇದು ಅವರಲ್ಲಿ ಬ್ಲಾಕೇಜ್ ಆಗಲು, ಹೃದಯಾಘಾತದಂತ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಡಾ. ಸುತ್ತೂರು ಮಾಲಿನಿ ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author