ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೆದುಳಿನ ಆರೋಗ್ಯ ವೃದ್ಧಿಸಲು ಯಾವ ಆಹಾರ ಸೇವನೆ ಮಾಡಬೇಕು?

Health Tips: ಹೆಚ್ಚಿನವರು ಮೆದುಳಿನ ಆರೋಗ್ಯದ ಬಗ್ಗೆ ಕಡೆಗಣಿಸುತ್ತಾರೆ. ನಾವು ನಮ್ಮ ಕೆಲಸ ಸೇರಿದಂತೆ ನಾವು ಮಾಡುವ ಬಹುತೇಕ ಎಲ್ಲದಕ್ಕೂ ನಮ್ಮ ಮೆದುಳನ್ನು ಬಳಸುತ್ತೇವೆ. ಹಾಗಾಗಿ ಇದರ ಆರೋಗ್ಯಕ್ಕೂ ಕೆಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕಾಗುತ್ತದೆ. ಇತ್ತೀಚೆಗೆ ಪೌಷ್ಟಿಕತಜ್ಞೆ ಯೊಬ್ಬರು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾದ ಪ್ರಮುಖ ಪೋಷಕಾಂಶಗಳು ಆಹಾರ ಸೇವನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮೆದುಳಿನ ಆರೋಗ್ಯ ರಕ್ಷಣೆ ಹೇಗೆ?

ಸಂಗ್ರಹ ಚಿತ್ರ -

Profile
Pushpa Kumari Sep 19, 2026 7:00 AM

ನವದೆಹಲಿ,ಸೆ.18: ಹೃದಯ, ಕಣ್ಣು ಅಥವಾ ಚರ್ಮ ಹೀಗೆ ದೇಹದ ವಿವಿಧ ಭಾಗಗಳಿಗೆ ಉತ್ತಮವಾದ ಆಹಾರಗಳ ಬಗ್ಗೆ ನಾವು ಆಗಾಗ್ಗೆ ಚರ್ಚಿಸುತ್ತೇವೆ. ಆದರೆ ಹೆಚ್ಚಿನವರು ಮೆದುಳಿನ ಆರೋಗ್ಯದ (Brain health) ಬಗ್ಗೆ ಕಡೆಗಣಿಸುತ್ತಾರೆ. ನಾವು ನಮ್ಮ ಕೆಲಸ ಸೇರಿದಂತೆ ನಾವು ಮಾಡುವ ಬಹುತೇಕ ಎಲ್ಲದಕ್ಕೂ ನಮ್ಮ ಮೆದುಳನ್ನು ಬಳಸುತ್ತೇವೆ. ಹಾಗಾಗಿ ಇದರ ಆರೋಗ್ಯಕ್ಕೂ ಕೆಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕಾಗುತ್ತದೆ.​ಇತ್ತೀಚೆಗೆ ಪೌಷ್ಟಿಕತಜ್ಞೆಯೊಬ್ಬರು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾದ ಪ್ರಮುಖ ಪೋಷಕಾಂಶಗಳು ಆಹಾರ ಸೇವನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಿಮ್ಮ ಮೆದುಳು ದಿನದ ಪ್ರತಿ ಸೆಕೆಂಡ್ ಕೆಲಸ ಮಾಡುತ್ತಿದೆ. ಹಾಗಾಗಿ ಪ್ರತಿದಿನ ಒಂದೇ ರೀತಿಯ ಕೆಲವು ಆಹಾರಗಳನ್ನು ಅವಲಂಬಿಸುವ ಬದಲು ತರಕಾರಿಗಳು, ದ್ವಿದಳ ಧಾನ್ಯಗಳು, ಬೀಜಗಳು, ಧಾನ್ಯಗಳು ಮತ್ತು ಪ್ರೋಟೀನ್ ಮೂಲಗಳಿಗೆ ಆಧ್ಯತೆ ನೀಡಿ ಅಂದಿದ್ದಾರೆ‌.

ಒಮೆಗಾ-3 ಕೊಬ್ಬುಗಳು:

ಒಮೆಗಾ-3 ಕೊಬ್ಬುಗಳು ಮೆದುಳಿನ ಕೋಶ ರಚನೆಯನ್ನು ಬೆಂಬಲಿಸುತ್ತವೆ. ಕೊಬ್ಬಿನ ಮೀನು, ಅಗಸೆಬೀಜಗಳು, ಚಿಯಾ ಬೀಜಗಳು ಮತ್ತು ವಾಲ್ನಟ್ಗಳು ಒಮೆಗಾ-3 ಕೊಬ್ಬಿನ ಕೆಲವು ಅತ್ಯುತ್ತಮ ಮೂಲಗಳಾಗಿವೆ.ನಿಮ್ಮ ಆಹಾರದಲ್ಲಿ ದಿನನಿತ್ಯ ಇವುಗಳಿಗೂ ಆಧ್ಯತೆ ನೀಡಿ‌

Vishwavani Health: ನಿಮ್ಮ ಹಿತ್ತಿಲಿನಲ್ಲಿ ಬೆಳೆಯುವ ನೀಲ ಶಂಖ ಪುಷ್ಪ ಬಳಸಿ ಆರೋಗ್ಯ, ಸೌಂದರ್ಯ ಹೆಚ್ಚಿಸಬಹುದು; ಎಲ್ಲಿ ಸಿಕ್ಕರೂ ಬಿಡಬೇಡಿ

ಕೋಲೀನ್ ಆಹಾರಗಳು:

ಇದು ಅಸೆಟೈಲ್ಕೋಲಿನ್ ಅನ್ನು ಉತ್ಪಾದಿಸಲು ನೆರವಾಗುತ್ತದೆ‌. ಇದು ಸ್ಮರಣೆ ಮತ್ತು ನರ ಸಂವಹನವನ್ನು ಬೆಂಬಲಿಸಿ ಆರೋಗ್ಯ ವಾಗಿ ಇರಿಸುತ್ತದೆ‌. ಮೊಟ್ಟೆ, ಸೋಯಾಬೀನ್, ತೋಫು, ಹಾಲು ಮತ್ತು ಕಡಲೆಕಾಯಿಗಳಿಂದ ಇದನ್ನು ಪಡೆಯಬಹುದು.

​​ಬಿ ವಿಟಮಿನ್‌ಗಳು:

ನರಗಳ ಕಾರ್ಯನಿರ್ವಹಣೆ ಮತ್ತು ಶಕ್ತಿ ಉತ್ಪಾದನೆಗೆ ಇವು ಅಗತ್ಯ. ಧಾನ್ಯಗಳು, ಸೊಪ್ಪು,ಮೊಟ್ಟೆಗಳು, ಡೈರಿ ಉತ್ಪನ್ನದ ಆಹಾರಗಳು ಬಿ ಜೀವಸತ್ವಗಳ ಉತ್ತಮ ಮೂಲಗಳಾಗಿವೆ.

ಕಬ್ಬಿಣಾಂಶ:

ಮೆದುಳಿಗೆ ಆಮ್ಲಜನಕವನ್ನು ಪೂರೈಸಲು ಮತ್ತು ನರಮಂಡಲದ ಕಾರ್ಯಕ್ಕೆ ಇವು ನೆರವಾಗುತ್ತದೆ. ಇದಕ್ಕಾಗಿ ಬೇಳೆಗಳು, ಎಳ್ಳು, ಸೊಪ್ಪುಗಳು ಮತ್ತು ಮಾಂಸವನ್ನು ಬಳಸಬಹುದು.

ಸತು:

ಇದು ಮೆದುಳಿನ ಕೋಶಗಳ ಸಿಗ್ನಲಿಂಗ್ ಮತ್ತು ಸಾಮಾನ್ಯ ನರವೈಜ್ಞಾನಿಕ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ನೀವು ಕುಂಬಳಕಾಯಿ ಬೀಜಗಳು, ಎಳ್ಳು ಬೀಜಗಳು, ಬೀನ್ಸ್, ಡೈರಿ, ಮೊಟ್ಟೆಯನ್ನು ಸೇವಿಸಬಹುದು‌

ಜಿಂಕ್ :

ಮೆದುಳಿನ ಕೋಶಗಳ ಅಭಿವೃದ್ಧಿಗೆ ಇವು ಅತ್ಯಗತ್ಯ. ಇದಕ್ಕಾಗಿ ಕುಂಬಳಕಾಯಿ ಬೀಜ, ಎಳ್ಳು, ಬೀನ್ಸ್, ಮೊಟ್ಟೆಯನ್ನು ಬಳಸಬಹುದು