ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾತ್ರಿ ಈ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹಾನಿಕರವೇ? ವೈದ್ಯರು ಹೇಳೋದೇನು?

Health Tips: ಇತ್ತೀಚಿನ ದಿನಗಳಲ್ಲಿ"ಸೂರ್ಯಾಸ್ತದ ನಂತರ ಅಥವಾ ರಾತ್ರಿ ಸಮಯದಲ್ಲಿ ಹಣ್ಣುಗಳ ಸೇವನೆ ಹಿತವಲ್ಲ  ಎನ್ನುವ ವಿಚಾರ ಹರಿದಾಡ್ತ ಇದೆ. ಈ ಬಗ್ಗೆ ತಜ್ಞರು ಏನು ಹೇಳ್ತಾರೆ?ರಾತ್ರಿಅಥವಾ ಸೂರ್ಯಾಸ್ತ ನಂತರ ಹಣ್ಣು ತಿನ್ನುವುದು ನಿಜಕ್ಕೂ ಕೆಟ್ಟದ್ದೇ? ಈ ಕುರಿತು ಪೂರ್ಣ ಮಾಹಿತಿ ಇಲ್ಲಿದೆ.

​ರಾತ್ರಿ ಈ ಹಣ್ಣುಗಳಿಂದ ದೂರವಿರಿ!

ಇಂಟರ್ ನೆಟ್ ಚಿತ್ರ -

Profile
Pushpa Kumari Oct 9, 2026 7:00 AM

ನವದೆಹಲಿ: ಹಣ್ಣುಗಳ ಸೇವನೆ ದೇಹಕ್ಕೆ (Health Tips) ಅತೀ ಅಗತ್ಯ.‌ ಅದರಲ್ಲೂ ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದನ್ನು ಕೇಳಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ, "ಸೂರ್ಯಾಸ್ತದ ನಂತರ ಅಥವಾ ರಾತ್ರಿ ಸಮಯ ದಲ್ಲಿ ಹಣ್ಣುಗಳ ಸೇವನೆ ಹಿತವಲ್ಲ  ಎನ್ನುವ ವಿಚಾರ ಹರಿದಾಡುತ್ತಿದೆ ಇದೆ. ಈ ಬಗ್ಗೆ ತಜ್ಞರು ಏನು ಹೇಳ್ತಾರೆ?ರಾತ್ರಿಅಥವಾ ಸೂರ್ಯಾಸ್ತ ನಂತರ ಹಣ್ಣು ತಿನ್ನುವುದು ನಿಜಕ್ಕೂ ಕೆಟ್ಟದ್ದೇ? ಈ ಕುರಿತು ಪೂರ್ಣ ಮಾಹಿತಿ ಇಲ್ಲಿದೆ.

ಹಣ್ಣುಗಳು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಆದರೆ ಪೌಷ್ಟಿಕಾಂಶ ತಜ್ಞರ ಪ್ರಕಾರ, ಆರೋಗ್ಯಕರ ಆಹಾರವನ್ನು ಸೇವಿಸುವುದಕ್ಕೂ ಸಹ ಎಲ್ಲದಕ್ಕೂ ಸರಿಯಾದ ಸಮಯ ಎಂಬುದು ಇದೆ. ಹಗಲಿನಲ್ಲಿ ಅಮೃತದಂತೆ ಇರುವ ಕೆಲವು ಹಣ್ಣುಗಳನ್ನು ನೀವು ರಾತ್ರಿಯಲ್ಲಿ ತಿಂದರೆ ವಿಷದಂತೆ ವರ್ತಿಸಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಸಿಟ್ರಸ್ ಹಣ್ಣುಗಳು (ಕಿತ್ತಳೆ, ನಿಂಬೆ, ದ್ರಾಕ್ಷಿ):

​ರಾತ್ರಿ ಸಮಯದಲ್ಲಿ ತಿಂದರೆ ಅಸಿಡಿಟಿ, ಎದೆ ಉರಿ ಮತ್ತು ಗ್ಯಾಸ್ಟ್ರಿಕ್ ಉಂಟಾಗುತ್ತದೆ ಎಂದು ಹೇಳುತ್ತಾರೆ. ಆದರೆ ತಜ್ಞರ ಪ್ರಕಾರ ಹಣ್ಣಿನಲ್ಲಿರುವ ಆಮ್ಲೀಯತೆ ರಾತ್ರಿಯ ಸಮಯದಲ್ಲಿ ದೇಹಕ್ಕೆ ತೊಂದರೆ ಉಂಟು ಮಾಡುತ್ತದೆ ಎಂಬುದು ಸರಿಯಲ್ಲ. ಅಸಿಡಿಟಿ ಇರುವವರು ಮಲಗುವ ತಕ್ಷಣ ಆಮ್ಲೀಯ ಆಹಾರ ತಿಂದರೆ ಅಸ್ವಸ್ಥತೆ ಕಾಣಿಸಬಹುದು. ಆದರೆ ಸಾಮಾನ್ಯ ಜನರಿಗೆ ರಾತ್ರಿ ಸಿಟ್ರಸ್ ಹಣ್ಣು ಸೇವನೆಯಿಂದ ಯಾವುದೇ ಹಾನಿಯಿಲ್ಲ.

Vishwavani Health: ಜೆನ್ ಝೀಗಳನ್ನು ಕಾಡುತ್ತಿದೆ ಕಣ್ಣುರಿ, ಕತ್ತುನೋವು; ಕಾರಣವೇನು? ಏನಿದಕ್ಕೆ ಪರಿಹಾರ?

ಬಾಳೆಹಣ್ಣು:

​ರಾತ್ರಿ ಬಾಳೆಹಣ್ಣು ತಿಂದರೆ ದೇಹದಲ್ಲಿ ತೂಕ ಹೆಚ್ಚಾಗುತ್ತದೆ ಮತ್ತು ನೆಗಡಿ, ಕೆಮ್ಮು ಉಂಟಾಗಬಹುದು ಅನ್ನುತ್ತಾರೆ. ಆದೆ ಬಾಳೆಹಣ್ಣು ತಿಂದರೆ ಕಫ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಬಾಳೆಹಣ್ಣಿನಲ್ಲಿರುವ ಪೋಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಿದ್ರೆಗೆ ಸಹಕಾರಿಯಾಗುವಂತೆ ಮಾಡುತ್ತದೆ.

​ಕಲ್ಲಂಗಡಿ ಹಣ್ಣು:

ರಾತ್ರಿ ಸಮಯದಲ್ಲಿ ಕಲ್ಲಂಗಡಿ ತಿಂದರೆ ನೀರು ಶೇಖರಣೆಯಾಗಿ  ಗ್ಯಾಸ್ಟ್ರಿಕ್‌ ಉಂಟಾಗಬಹುದು ಎನ್ನುತ್ತಾರೆ. ​ಆದರೆ ಕಲ್ಲಂಗಡಿ ಯಲ್ಲಿ ಶೇಕಡಾ 90ಕ್ಕೂ ಹೆಚ್ಚು ನೀರಿರುತ್ತದೆ. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾಗಬಹುದು ಹೊರತು ದೇಹಕ್ಕೆ ಯಾವುದೇ ನಂಜು ಅಥವಾ ವಿಷ ಇಲ್ಲ.

ಮಾವಿನಹಣ್ಣು ಮತ್ತು ಹಲಸಿನಹಣ್ಣು:

​ಈ ಹಣ್ಣುಗಳಲ್ಲಿ ನೈಸರ್ಗಿಕ ನಾರಿನಂಶ ಇದೆ ಹೊರತು ಸಂಸ್ಕರಿಸಿದ ಸಕ್ಕರೆಯಂತೆ ರಕ್ತದಲ್ಲಿ ಸಕ್ಕರೆಯನ್ನು ದಿಢೀರ್ ಏರಿಸುವುದಿಲ್ಲ.

ಸೇಬು:

​ರಾತ್ರಿ ಸೇಬು ತಿಂದರೆ ಗ್ಯಾಸ್ ಮತ್ತು ಮಲಬದ್ಧತೆ ಉಂಟಾಗುತ್ತದೆ ಎನ್ನುತಾರೆ. ಆದರೆ ಸೇಬಿನಲ್ಲಿರುವ ಪೆಕ್ಟಿನ್ ಹಾಗೂ ನಾರಿನಂಶವು ಕರುಳಿನ ಆರೋಗ್ಯಕ್ಕೆ ಬಹಳಷ್ಟು ಉತ್ತಮವಾಗಿದೆ.