ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Health: ಜೆನ್ ಝೀಗಳನ್ನು ಕಾಡುತ್ತಿದೆ ಕಣ್ಣುರಿ, ಕತ್ತುನೋವು; ಕಾರಣವೇನು? ಏನಿದಕ್ಕೆ ಪರಿಹಾರ?

Gen Z: ಕಣ್ಣುರಿ, ಕತ್ತುನೋವು ಸೇರಿ ಜೆನ್ ಝೀಗಳನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಮುಖ್ಯವಾಗಿ ಸಣ್ಣ ವಯಸ್ಸಿಗೇ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ತೊಂದರೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣವೇನು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

ಜೆನ್ ಝೀಗಳನ್ನು ಕಾಡುತ್ತಿದೆ ಹಲವು ಆರೋಗ್ಯ ಸಮಸ್ಯೆಗಳು

ಡಾ. ಸುತ್ತೂರು ಮಾಲಿನಿ -

ಬೆಂಗಳೂರು: ಸಣ್ಣ ವಯಸ್ಸಿಗೆ ಇವತ್ತು ಮಕ್ಕಳಲ್ಲಿ ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ವಯಸ್ಸಾದಾಗ ಬರಬೇಕಿದ್ದ ಕಾಯಿಲೆಗಳು ಸಣ್ಣ ವಯಸ್ಸಿಗೆ ಬರುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ನಿರೂಪಕಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ನಂತಹ ಕಾಯಿಲೆಗಳು, ಬೆನ್ನು ಹುರಿಯ ತೊಂದರೆಗಳು ಹೆಚ್ಚಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕಾಡುವಂತದ್ದು. ಆದರೆ ಇದು ಇವತ್ತು ಸಣ್ಣ ವಯಸ್ಸಿನವರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಸ್ಥೂಲಕಾಯವೆನ್ನಬಹುದು ಎಂದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ ಇಲ್ಲಿದೆ:



ಸ್ಥೂಲಕಾಯದಿಂದ ದೈಹಿಕ ಆರೋಗ್ಯದಲ್ಲಿ ಬಹಳ ಏರುಪೇರುಗಳಾಗುತ್ತವೆ. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಇದು ತೀವ್ರವಾಗಿ ಬಾಧಿಸುತ್ತದೆ. ಯೋಗ, ಜಿಮ್ ಮೂಲಕ ಕೆಲವರು ಇದನ್ನು ನಿಯಂತ್ರಿಸಿದರೂ ಹೆಚ್ಚಿನವರು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗಿದೆ. ಒಬಿಸಿಟಿ ಹೆಚ್ಚಾಗಲು ಮುಖ್ಯ ಕಾರಣ ಅವಶ್ಯಕತೆ ಇಲ್ಲದೇ ಇದ್ದರೂ ಕೂಡ ಪದೇ ಪದೆ ಆಹಾರ ಸೇವಿಸುವುದು. ಹೆಚ್ಚು ಕ್ಯಾಲೋರಿ ತುಂಬಿದ ಆಹಾರ ಸೇವನೆಯಿಂದ ಸ್ಥೂಲಕಾಯ ಅಧಿಕವಾಗುತ್ತದೆ ಎಂದರು.

ಜಿರಳೆಗಳೆಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ಜೆನ್ ಝೀಗಳು?

ಇನ್ನು ಹೆಚ್ಚಾಗಿ ಕುಳಿತು ಬಗ್ಗಿ ಕೆಲಸ ಮಾಡುವುದರಿಂದ ಕುತ್ತಿಗೆ, ಭುಜ ನೋವು ಸಣ್ಣ ವಯಸ್ಸಿಗೆ ಕಾಡುತ್ತಿದೆ. ಸ್ಕ್ರೀನ್ ಟೈಮ್, ನಿದ್ರಾಹೀನತೆಯ ಕಾರಣದಿಂದ ಕಣ್ಣಿನ ತೊಂದರೆಗಳು ಸಣ್ಣ ವಯಸ್ಸಿಗೆ ಕಾಡುತ್ತಿದೆ. ಎಲ್ಲಿ ತಪ್ಪಾಗುತ್ತಿದೆ ಎನ್ನುವುದು ಯಾರಿಗೂ ಅರಿವು ಆಗ್ತಾನೆ ಇಲ್ಲ. ನಿದ್ರೆ, ಆಹಾರ ಪದ್ಧತಿ, ದಿನಚರಿಯಲ್ಲಿ ವ್ಯತ್ಯಾಸಗಳಾದಾಗ ಹಾರ್ಮೋನ್‌ಗಳು ಸರಿಯಾಗಿ ಬಿಡುಗಡೆಯಾಗುವುದಿಲ್ಲ. ಇದು ದೇಹದ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದ ಅವರು ಇದರೊಂದಿಗೆ ಜಂಕ್, ಕಲಬೆರಕೆ, ಸಂಸ್ಕರಿಸಿದ ಆಹಾರ, ಬಣ್ಣ, ರುಚಿಗಾಗಿ ರಾಸಾಯನಿಕ ಬೆರೆಸಿದ ಬೇಕರಿ ಐಟಂಗಳನ್ನು ಸೇವಿಸುವುದು ಆರೋಗ್ಯವನ್ನು ಕೆಡಿಸುತ್ತಿದೆ ಎಂದು ಹೇಳಿದರು.

ನಿದ್ರೆ ಸರಿಯಾಗಿ ಆಗದೇ ಇದ್ದರೆ ಮೇಲೊಟಿನ್ ಹಾರ್ಮೋನ್ ಬಿಡುಗಡೆಯಾಗುವುದಿಲ್ಲ. ಈ ಹಾರ್ಮೋನ್ ಕಡಿಮೆಯಾದರೆ ದೇಹದಲ್ಲಿ ವಿಷಾದ ಪ್ರಮಾಣ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾದಾಗ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ; ಕಾರಣವೇನು?

ಜಂಕ್ ಫುಡ್ ಹೆಚ್ಚಾಗಿ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದರ ಸೇವನೆ ಅತಿಯಾದಾಗ ಮುಂದೆ ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆಹಾರ ಕೊರತೆ ಈಗ ಇಲ್ಲ. ನಾವು ಹೆಚ್ಚಿನ ಆಹಾರ ಸೇವಿಸುವಂತೆ ಮೆದುಳು ಪ್ರಚೋದಿಸುತ್ತಿದೆ. ಹೀಗಾಗಿ ನಾವು ಹೆಚ್ಚು ಹೆಚ್ಚು ಆಹಾರ ಸೇವಿಸುತ್ತೇವೆ. ಬಾಯಿ ರುಚಿಗೆ ತಕ್ಕಂತೆ ಅಲ್ಲ ದೇಹಕ್ಕೆ ಪೂರಕ ಮತ್ತು ಸೂಕ್ತವಾದ ರೀತಿಯಲ್ಲಿ ಆಹಾರ ಸೇವಿಸಿದರೆ ಆರೋಗ್ಯವಾಗಿರಬಹುದು ಎಂದು ಡಾ. ಸುತ್ತೂರು ಮಾಲಿನಿ ಹೇಳಿದರು.