ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಣಿಪಾಲ್ ಆಸ್ಪತ್ರೆಯಿಂದ ಮಾನವೀಯ ಕಾಳಜಿಯ ಆರೋಗ್ಯ ಸೇವೆಗೆ ಹೊಸ ಮುನ್ನುಡಿ: ಭಾರತದ ಪ್ರಥಮ 'ಚೈಲ್ಡ್ ಲೈಫ್' ವಿಚಾರ ಸಂಕಿರಣ ಯಶಸ್ವಿ

ಈ ಕಾರ್ಯಕ್ರಮದಲ್ಲಿ ಪ್ರಮುಖ ಮಕ್ಕಳ ವೈದ್ಯರು, ಮನಶ್ಶಾಸ್ತ್ರಜ್ಞರು, ಆರೋಗ್ಯ ರಂಗದ ಆಡಳಿತಾಧಿಕಾರಿಗಳು, ದಾದಿಯರು ಹಾಗೂ ಮಕ್ಕಳ ಜೀವನ ನಿರ್ವಹಣಾ ತಜ್ಞರು ಭಾಗವಹಿಸಿ ದ್ದರು. ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಮಕ್ಕಳು ಹಾಗೂ ಅವರ ಕುಟುಂಬಗಳು ಎದುರಿಸುವ ಭಾವನಾತ್ಮಕ ಸವಾಲುಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಭಾರತದ ಪ್ರಥಮ 'ಚೈಲ್ಡ್ ಲೈಫ್' ವಿಚಾರ ಸಂಕಿರಣ ಯಶಸ್ವಿ

-

Profile
Ashok Nayak Jun 12, 2026 6:14 PM

ಬೆಂಗಳೂರು: ರೋಗಪತ್ತೆ ಮತ್ತು ಚಿಕಿತ್ಸೆಯ ಆಚೆಗೂ ರೋಗಿಗಳ ಒಟ್ಟಾರೆ ಆರೈಕೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಮಣಿಪಾಲ್ ಆಸ್ಪತ್ರೆ ಯಲಹಂಕ ಮಹತ್ವದ ಹೆಜ್ಜೆ ಇಟ್ಟಿದೆ. ಮಕ್ಕಳ ಜೀವನ ನಿರ್ವಹಣಾ ಸೇವೆಗಳು ಮತ್ತು ಸಮಗ್ರ ಗುಣಮುಖ ಪ್ರಕ್ರಿಯೆಗೆ ಸಂಬಂಧಿಸಿ ದಂತೆ ಭಾರತದ ಅತ್ಯಂತ ಮೊದಲ ಸಮಾವೇಶವಾದ 'ಚೈಲ್ಡ್ ಲೈಫ್ ಆಂಡ್ ಬಿಯಾಂಡ್' ವಿಚಾರ ಸಂಕಿರಣವನ್ನು ಆಸ್ಪತ್ರೆಯು ಯಶಸ್ವಿಯಾಗಿ ಆಯೋಜಿಸಿತು.

ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಸಮಾವೇಶದಲ್ಲಿ ವೈದ್ಯರು, ಮನಶ್ಶಾಸ್ತ್ರಜ್ಞರು ಮತ್ತು ತಜ್ಞರು ಒಂದೆಡೆ ಸೇರಿ ಗಂಭೀರ ಆಲೋಚನೆಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಪ್ರಮುಖ ಮಕ್ಕಳ ವೈದ್ಯರು, ಮನಶ್ಶಾಸ್ತ್ರಜ್ಞರು, ಆರೋಗ್ಯ ರಂಗದ ಆಡಳಿತಾಧಿಕಾರಿಗಳು, ದಾದಿಯರು ಹಾಗೂ ಮಕ್ಕಳ ಜೀವನ ನಿರ್ವಹಣಾ ತಜ್ಞರು ಭಾಗವಹಿಸಿದ್ದರು. ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಮಕ್ಕಳು ಹಾಗೂ ಅವರ ಕುಟುಂಬಗಳು ಎದುರಿಸುವ ಭಾವನಾತ್ಮಕ ಸವಾಲುಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಇದು ಮಕ್ಕಳ ವೈದ್ಯಕೀಯ ಆರೈಕೆಯಲ್ಲಿ ಅತ್ಯಂತ ಪ್ರಮುಖ ವಾಗಿದ್ದರೂ, ಸಾಮಾನ್ಯವಾಗಿ ಅಷ್ಟಾಗಿ ಗಮನಕ್ಕೆ ಬಾರದ ವಿಷಯವಾಗಿದೆ.\

ಇದನ್ನೂ ಓದಿ: Manipal Hospital: ಸಂಗೀತದ ಮೂಲಕ ಮೆದುಳಿನ‌ ಪುನಃಶ್ಚೇತನ: ಮಣಿಪಾಲ್ ಹಾಸ್ಪಿಟಲ್ಸ್‌ನಿಂದ ವಿಶೇಷ ಚಿಕಿತ್ಸಾ ಕ್ರಮ!

ಆಧುನಿಕ ವೈದ್ಯಕೀಯ ರಂಗವು ರೋಗಗಳ ಚಿಕಿತ್ಸೆಯಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ಆದರೆ, ಚಿಕಿತ್ಸೆಯ ಅವಧಿಯಲ್ಲಿ ಮಕ್ಕಳು, ಅವರ ಕುಟುಂಬಗಳು ಮತ್ತು ಆರೋಗ್ಯ ಕಾರ್ಯಕರ್ತರು ಎದುರಿಸುವ ಭಯ, ಆತಂಕ ಹಾಗೂ ಮಾನಸಿಕ ಒತ್ತಡಗಳು ಅವರ ಮೇಲೆ ನಿರಂತರ ಪ್ರಭಾವ ಬೀರುತ್ತಲೇ ಇರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟರು. ಹೀಗಾಗಿ, ವೈದ್ಯಕೀಯ ಚಿಕಿತ್ಸೆಯ ಜೊತೆಜೊತೆಯಲ್ಲೇ ಅವರಿಗೆ ಮಾನಸಿಕ ಮತ್ತು ಸಾಮಾಜಿಕ ಬೆಂಬಲವನ್ನು ಹೇಗೆ ನೀಡಬಹುದು ಎಂಬುದರ ಕುರಿತು ಈ ವಿಚಾರ ಸಂಕಿರಣದಲ್ಲಿ ಸಮಾಲೋಚನೆ ನಡೆಸಲಾಯಿತು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮಣಿಪಾಲ್ ಆಸ್ಪತ್ರೆ ಯಲಹಂಕದ ಚೈಲ್ಡ್ ಲೈಫ್ ಸರ್ವಿಸಸ್ ವಿಭಾಗದ ಲೀಡ್ ಕನ್ಸಲ್ಟೆಂಟ್ ಡಾ.ಸುಷ್ಮಾ ಗೋಪಾಲನ್ ಅವರು, "ಯಾವುದೇ ಹೊಸ ಬದಲಾವಣೆಯು 'ನಾವು ಇದನ್ನು ಬೇರೆ ರೀತಿಯಲ್ಲಿ ಮಾಡಲು ಸಾಧ್ಯವೇ?' ಎಂಬ ಆಲೋಚನೆಯಿಂದಲೇ ಶುರುವಾಗುತ್ತದೆ. ಇದೇ ರೀತಿ ಚೈಲ್ಡ್ ಲೈಫ್ ಪರಿಕಲ್ಪನೆ ಮೂಡಿದೆ. ನಾವು ರೋಗಗಳನ್ನು ಗುಣಪಡಿಸುವುದರಲ್ಲಿ ಪರಿಣಿತರಾಗಿದ್ದೇವೆ. ಆದರೆ ಗುಣಮುಖರಾಗುವ ಪ್ರಕ್ರಿಯೆಯಲ್ಲಿ ಜನರಿಗೆ ಅವರ ಭಯ ಮತ್ತು ಆತಂಕಗಳನ್ನು ಎದುರಿಸಲು ಸಹಾಯ ಮಾಡುವುದೂ ಅಷ್ಟೇ ಮುಖ್ಯವಾಗಿದೆ. ಮಕ್ಕಳು ಮತ್ತು ರೋಗಿಗಳು ತಮ್ಮ ಚಿಕಿತ್ಸೆಯ ಅವಧಿಯಲ್ಲಿ ಸುರಕ್ಷಿತ ಹಾಗೂ ಧೈರ್ಯದ ವಾತಾವರಣವನ್ನು ಅನುಭವಿಸುವಂತಹ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ" ಎಂದರು.

bngqq

ಈ ಸಮಾವೇಶದಲ್ಲಿ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಭಾವನಾತ್ಮಕ ಯೋಗಕ್ಷೇಮ, ಬದಲಾಗುತ್ತಿರುವ ಕುಟುಂಬ ವ್ಯವಸ್ಥೆಗಳು, ಹಾಗೂ ಆರೋಗ್ಯ ರಂಗದಲ್ಲಿ ಚೈಲ್ಡ್ ಲೈಫ್ ಮತ್ತು ಮನಶ್ಶಾಸ್ತ್ರವನ್ನು ಅಳವಡಿಸಿಕೊಳ್ಳುವ ಕುರಿತು ವಿಚಾರಪೂರ್ಣ ಸಂವಾದಗಳು ನಡೆದವು. ಭಾವನಾತ್ಮಕ ಬೆಂಬಲ ಎಂಬುದು ಕೇವಲ ಹೆಚ್ಚುವರಿ ಆಯ್ಕೆಯಲ್ಲ, ಬದಲಿಗೆ ಅದು ಗುಣಮಟ್ಟದ ರೋಗಿ ಆರೈಕೆಯ ಅವಿಭಾಜ್ಯ ಅಂಗವಾಗಬೇಕು ಎಂದು ಆರೋಗ್ಯ ತಜ್ಞರು ಪ್ರತಿಪಾದಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಣಿಪಾಲ್ ಆಸ್ಪತ್ರೆ ಯಲಹಂಕದ ಪೀಡಿಯಾ ಟ್ರಿಕ್ಸ್ ಮತ್ತು ಪೀಡಿಯಾಟ್ರಿಕ್ ಸೂಪರ್-ಸ್ಪೆಷಾಲಿಟಿ ಸರ್ವಿಸಸ್ ವಿಭಾಗದ ನಿರ್ದೇಶಕರಾದ ಡಾ.ಚೇತನ್ ಗಿಣಿಗೇರಿ ಅವರು, "ಮಗುವನ್ನು ಗುಣಪಡಿಸುವುದು ಎಂದರೆ ಇಡೀ ಕುಟುಂಬಕ್ಕೆ ನೆರವಾಗುವುದು ಎಂದರ್ಥ.

ಹಾಗೆಯೇ ಅದಕ್ಕೆ ಶ್ರಮಿಸುವ ಪೋಷಕರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಧೈರ್ಯ ತುಂಬುವುದು ಸಹ ಮುಖ್ಯವಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ನಾವು ಕೇವಲ ದೈಹಿಕ ಚಿಕಿತ್ಸೆಯನ್ನಷ್ಟೇ ನೀಡುತ್ತಿಲ್ಲ; ಮಗು, ಪೋಷಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಮಾನ ಕಾಳಜಿಯಿಂದ ನೋಡಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಈ ಪ್ರಕ್ರಿಯೆ ಯಲ್ಲಿರುವ ಪ್ರತಿಯೊಬ್ಬರಿಗೂ ಸೂಕ್ತ ಬೆಂಬಲ ಸಿಕ್ಕಾಗ, ಚಿಕಿತ್ಸೆಯ ಫಲಿತಾಂಶಗಳು ಇನ್ನಷ್ಟು ಉತ್ತಮಗೊಳ್ಳುತ್ತವೆ” ಎಂದು ತಿಳಿಸಿದರು.

ವಿವಿಧ ರಂಗಗಳ ತಜ್ಞರು ಒಂದೇ ಸೂರಿನಡಿ ಒಗ್ಗೂಡಿದ್ದು ಈ ವಿಚಾರ ಸಂಕಿರಣದ ವಿಶೇಷತೆಯಾಗಿತ್ತು. ವೈದ್ಯರು, ಮನಶ್ಶಾಸ್ತ್ರಜ್ಞರು, ದಾದಿಯರು, ಶಿಕ್ಷಕರು ಮತ್ತು ಆರೋಗ್ಯ ಕ್ಷೇತ್ರದ ಮುಖಂಡರು ಒಟ್ಟಾಗಿ ಸೇರಿ, ರೋಗಿಗಳಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಆರೋಗ್ಯ ವ್ಯವಸ್ಥೆಯ ಬದಲಾವಣೆಯ ಬಗ್ಗೆ ಚರ್ಚಿಸಿದರು.

ಈ ಚರ್ಚೆಯಲ್ಲಿ ಆರೋಗ್ಯ ಕ್ಷೇತ್ರದ ಪ್ರಮುಖ ಗಣ್ಯರಾದ ಡಾ. ಕ್ಷಿತಿಜಾ ಕುಲಕರ್ಣಿ, ಡಾ. ಜಗದೀಶ್ ಚಿನ್ನಪ್ಪ, ಡಾ.ರವಿ ಶಂಕರ್ ಸ್ವಾಮಿ, ಡಾಹರೀಶ್ ಕುಮಾರ್ ಹೆಚ್., ಡಾ.ರಶ್ಮಿ ಡಿ. ಹುದ್ದಾರ್, ಡಾ.ಶ್ರೀನಿವಾಸ್ ರಾಜು, ಡಾ.ನಮ್ರತಾ ಉಪಾಧ್ಯಾಯ, ಡಾ.ಜ್ಞಾನಂ ಅರಮ್, ಡಾ.ಸಲೀಂ ಖತೀಬ್, ಡಾ.ಅರವಿಂದ್ ಆನಂದ್, ಡಾ.ಆರ್.ವಸುಮತಿ, ಡಾ.ವಿಗ್ರಾಂತ ಬಾಪು ಮತ್ತು ಡಾ.ಸುದರ್ಶನ್ ಹೆಚ್.ಎಲ್. ಸೇರಿದಂತೆ ಹಲವು ತಜ್ಞರು ಭಾಗವಹಿಸಿದ್ದರು.

ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಸಮಗ್ರ ಗುಣಮುಖ ಪದ್ಧತಿಗಳನ್ನು ಮುಂದು ವರಿಸುವ ಜಂಟಿ ಸಂಕಲ್ಪದೊಂದಿಗೆ ವಿಚಾರ ಸಂಕಿರಣವು ಮುಕ್ತಾಯಗೊಂಡಿತು.

ಡಾ.ಚೇತನ್ ಗಿಣಿಗೇರಿ ಮತ್ತು ಡಾ.ಸುಷ್ಮಾ ಗೋಪಾಲನ್ ಅವರ ನೇತೃತ್ವದಲ್ಲಿ, ಹಾಗೂ ಸಂಘಟನಾ ಸಮಿತಿಯ ಸದಸ್ಯರಾದ ಲಯ ಆರ್., ಬರ್ನಿಸ್ ಎಂ. ರಾಣಿ, ಅಶ್ರಾ ಫಾತಿಮಾ ಮತ್ತು ಇಶಿಕಾ ಮಿತ್ತಲ್ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು *"ವೈದ್ಯಕೀಯ ಚಿಕಿತ್ಸೆ ಮತ್ತು ಮಾನವೀಯತೆ ಒಟ್ಟಾಗಿ ಕೆಲಸ ಮಾಡಿದಾಗ ರೋಗ ಗುಣಮುಖವಾಗುವ ಪ್ರಕ್ರಿಯೆ ಅತ್ಯಂತ ಪರಿಣಾಮಕಾರಿಯಾಗುತ್ತದೆ" ಎಂಬ ಸಂದೇಶ ವನ್ನು ಸಾರಿತು.