ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಆಗಸ್ಟ್‌ 5, 2026: ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಬಾಸ್‌ನಿಂದ ಮೆಚ್ಚುಗೆ

Horoscope Today August 5th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರದ, ಆಗಸ್ಟ್  5ನೇ ತಾರೀಕಿನ ಈ ದಿ‌ನ ಗುರು ಕರ್ಕಾಟಕದಲ್ಲಿ ಉಚ್ಚನಾಗಿದ್ದಾನೆ. ಮನೆ ಹಾಗೂ ಸಂಪತ್ತು ವೃದ್ಧಿಗೆ ಇಂದು ಪ್ರಾಪ್ತ ಕಾಲವಾಗಿದೆ. ಅದೇ ರೀತಿ 12 ರಾಶಿಯವರ ಇಂದಿನ ಭವಿಷ್ಯ ಹೇಇರಲಿದೆ ಎನ್ನುವ ವಿವರ ಇಲ್ಲಿದೆ.

ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ

ಇಂಟರ್‌ನೆಟ್ ಚಿತ್ರ -

Profile
Pushpa Kumari Aug 5, 2026 6:00 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು, ಬಾಸ್‌ನಿಂದ ಪ್ರಶಂಸೆ ಸಿಗಲಿದೆ. ಖರ್ಚುಗಳನ್ನು ನಿಯಂತ್ರಿಸಿದರೆ ಉತ್ತಮ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ಹಿಂದೆ ಉಳಿದಿದ್ದ ಬಾಕಿ ಹಣವು ಇಂದು ನಿಮ್ಮ ಕೈ ಸೇರಲಿದೆ. ಕೆಲಸದ ಒತ್ತಡ ಹೆಚ್ಚಾದರೂ ಕಾರ್ಯಕ್ಷಮತೆಯಿಂದ ಯಶಸ್ಸು ಪಡೆಯುತ್ತೀರಿ.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸ್ನೇಹಿತರ ಸಹಾಯದಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಇಂದು ಅಧ್ಯಯನದಲ್ಲಿ ಪ್ರಗತಿ ಕಂಡು ಬರಲಿದೆ.

ಕಟಕ ರಾಶಿ: ಕಟಕ ರಾಶಿಯವರು ಇಂದು ಕುಟುಂಬದಿಂದ ಶುಭ ಸುದ್ದಿ ಪಡೆಯಬಹುದು. ವ್ಯಾಪಾರ ಹಾಗೂ ಸಂಬಂಧದಲ್ಲಿ ಪ್ರಗತಿ ಕಾಣುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕೆಲಸದ ಹೊರೆ ಹೆಚ್ಚಾಗಬಹುದು. ಆದರೆ ಆತ್ಮವಿಶ್ವಾಸದಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ಎಚ್ಚರ ಅಗತ್ಯ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಇಂದು ವೃತ್ತಿಯಲ್ಲಿ ಅಭಿವೃದ್ಧಿ ಕಾಣಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಮನೆಗೆ ಸುಖ, ಸಮೃದ್ಧಿ ತರಲು ಪಾಲಿಸಬೇಕಾದ ಪ್ರಮುಖ ನಿಯಮಗಳು

ತುಲಾ ರಾಶಿ: ತುಲಾ ರಾಶಿಯವರಿಗೆ ಮನೆ ಹಾಗೂ ಆಸ್ತಿ ವಿಚಾರದಲ್ಲಿ ನೆಮ್ಮದಿ ಸಿಗುತ್ತದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸ್ನೇಹ ಸಂಬಂಧದಲ್ಲಿ ನೆಮ್ಮದಿ ಸಿಗುತ್ತದೆ.‌ ಹೂಡಿಕೆಯ ಮೂಲಕ ಇಂದು ನೀವು ಲಾಭ ಗಳಿಸಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಉತ್ತಮ ದಿನವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಇಂದು ಲಾಭ ಕಂಡು ಬರಲಿದೆ. ಆದರೆ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಕೆಲಸ ಕಾರ್ಯದಲ್ಲಿ ಪ್ರಗತಿ ಸಿಗಲಿದ್ದು, ಜನಪ್ರಿಯತೆ ಹೆಚ್ಚಾಗುತ್ತದೆ.‌ ಆತ್ಮವಿಶ್ವಾದಿಂದ ಎಲ್ಲವನ್ನು ಇಂದು ಗೆಲ್ಲಲು ಸಾಧ್ಯ.

ಕುಂಭ ರಾಶಿ: ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಸೃಜನಶೀಲ ಕೆಲಸದಲ್ಲಿ ಇಂದು ಲಾಭ. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಕೆಲಸದಲ್ಲಿ  ಪ್ರಗತಿ. ಸಕಾರಾತ್ಮಕ ಯೋಚನೆಯ ಮೂಲಕ ಆತ್ಮವಿಶ್ವಾಸ ಹೆಚ್ಚಾಗಬಹುದು.