Dr Pathanjali Acharya Column: ಇಂದ್ರಿಯಗಳು ಚುರುಕಾಗಲು ಪ್ರಾಣಮುದ್ರೆ ಅಭ್ಯಾಸ ಮಾಡಿ
ಪದ್ಮಾಸನ, ಸುಖಾಸನದಂಥ ನಿರಾಳ ಭಂಗಿಯಲ್ಲಿ ಕುಳಿತುಕೊಳ್ಳಿ. ಅಥವಾ ಕುರ್ಚಿಯ ಮೇಲೆ ಕುಳಿತೂ ಈ ಅಭ್ಯಾಸ ಮಾಡಬಹುದು. ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ, ಇಡೀ ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದುಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆರಳಿನ ತುದಿಯನ್ನು ಉಂಗು ರದ ಬೆರಳು ಮತ್ತು ಕಿರುಬೆರಳಿನ ತುದಿಗಳಿಗೆ ಜೋಡಿಸಿಟ್ಟುಕೊಳ್ಳಿ


ಮುದ್ರಾ ವಿಶ್ವ
ಡಾ.ಪತಂಜಲಿ ಆಚಾರ್ಯ
‘ಪ್ರಾಣ’ ಎಂದರೆ ಜೀವದ ಚೈತನ್ಯ ಅಥವಾ ಶಕ್ತಿ. ಪ್ರಾಣಮುದ್ರೆಯ ಅಭ್ಯಾಸಕ್ಕೆ ಇಂಥದೇ ಎಂಬ ನಿಗದಿತ ಸಮಯವೇನಿಲ್ಲ; ಆದರೆ ಇದನ್ನು ಏಕಾಂತದಲ್ಲಿ ನಿರ್ವಹಿಸಿದರೆ ಒಳಿತು. ಪ್ರಶಾಂತವಾಗಿರುವ ನೆಲೆಯೊಂದರಲ್ಲಿ ಕುಳಿತು ಪ್ರಾಣಮುದ್ರೆಯನ್ನು ಅಭ್ಯಾಸ ಮಾಡುವು ದರಿಂದ ಇಂದ್ರಿಯಗಳು ಚುರುಕಾಗುತ್ತವೆ. ಅಭ್ಯಾಸಕ್ರಮ: ಪದ್ಮಾಸನ, ಸುಖಾಸನದಂಥ ನಿರಾಳ ಭಂಗಿಯಲ್ಲಿ ಕುಳಿತುಕೊಳ್ಳಿ. ಅಥವಾ ಕುರ್ಚಿಯ ಮೇಲೆ ಕುಳಿತೂ ಈ ಅಭ್ಯಾಸ ಮಾಡಬಹುದು. ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ, ಇಡೀ ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದುಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆರಳಿನ ತುದಿಯನ್ನು ಉಂಗುರದ ಬೆರಳು ಮತ್ತು ಕಿರುಬೆರಳಿನ ತುದಿಗಳಿಗೆ ಜೋಡಿಸಿಟ್ಟುಕೊಳ್ಳಿ.
ಇದನ್ನೂ ಓದಿ: Dr Pathanjali Acharya Column: ಪಚನಕ್ರಿಯೆಗೆ ನೆರವಾಗುವ ಹಲಾಸನ
ಮಿಕ್ಕೆರಡು ಬೆರಳುಗಳು ನೇರವಾಗಿ ಚಾಚಿಕೊಂಡಿರಬೇಕು. ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಂಡು ನಿಧಾನವಾಗಿ ಹೊರಗೆ ಬಿಡಿ. ಈ ಅಭ್ಯಾಸವನ್ನು ಶುರುವಿನಲ್ಲಿ 2-3 ನಿಮಿಷದವರೆಗೆ ಮಾಡಿ, ಕ್ರಮೇಣ 15 ನಿಮಿಷದ ವರೆಗೂ ವಿಸ್ತರಿಸಬಹುದು.
ಪ್ರಯೋಜನಗಳು: ಪ್ರಾಣಮುದ್ರೆಯ ಆಚರಣೆಯಿಂದ ಎದೆಯುರಿ ಸೇರಿದಂತೆ ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇಲ್ಲವಾಗುತ್ತವೆ. ಆತಂಕ, ಒತ್ತಡ, ಖಿನ್ನತೆ ಇತ್ಯಾದಿ ಸಮಸ್ಯೆಗಳು ತಹಬಂದಿಗೆ ಬರುತ್ತವೆ. ದೇಹದ ಇಂದ್ರಿಯಗಳು ಚುರುಕುಗೊಂಡು, ಉತ್ಸಾಹ-ಉಲ್ಲಾಸ ಆವರಿಸುತ್ತವೆ.