ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hair Care Tips: ಎಳ್ಳೆಣ್ಣೆಯನ್ನು ಹೀಗೆ ಬಳಸಿ ನೋಡಿ ನಿಮ್ಮ ಬಿಳಿ ಕೂದಲೂ ಆಡ್ರೆಸ್ ಇಲ್ಲದಂತೆ ಮಾಯಾವಾಗುತ್ತದೆ...!

ಈ ಹೇರ್ ಫಾಲ್, ಡೆಂಡ್ರಾಫ್ ಸಮಸ್ಯೆಯ ಜೊತೆಗೆ ಇತೀಚೆಗೆ ಬಿಳಿ ಕೂದಲಿನ ಸಮಸ್ಯೆಯುಹೆಚ್ಚಾಗಿದ್ದು, ವಯಸ್ಸಿನ ಹಂಗಿಲ್ಲದೆ ಸ್ಕೂಲ್ ಗೆ ಹೋಗುವ ಮಕ್ಕಳಿಂದ ಹಿಡಿದು ಕಾಲೇಜ್ ಗೆ ಹೋಗುವ ಯುವಕ ಯುವತಿಯರನ್ನು ಆವರಿಸಿದೆ. ವಯಸ್ಸಿನ ಸೂಚಕವಾಗಿ ಹಿರಿಯ ವಯಸ್ಕರಿಗೆ ಮಾತ್ರ ಸೀಮಿತವಾಗಿದ್ದ ಈ ಬಿಳಿ ಕೂದಲು ಇದೀಗ ಎಲ್ಲಾ ವಯೋಮನದವರನ್ನು ತನ್ನ ವಶ ಮಾಡಿಕೊಂಡು ಬಿಟ್ಟಿದೆ.

ಬಿಳಿ ಕೂದಲು

ಗಂಡಸಿಗೆ ಗಡ್ಡ ಮೀಸೆ ಹೇಗೆ ಶೋಭೆಯೂ ಹೆಣ್ಣಿಗೆ ಕೂದಲು ಇರುವುದು ಲಕ್ಷಣ. ಹಿಂದಿನ ಕಾಲದಲ್ಲಿ ಎಣ್ಣೆ ಹಾಕಿ ಮಾರುದ್ದ ಜಡೆ ಹಾಕಿ ಅದಕ್ಕೆ ಒಂದು ಮಳಿಗೆ ಮುಡಿದುಕೊಂಡರೆ ಸಾಕ್ಷಾತ್ ಲಕ್ಷ್ಮೀ ಸ್ವರೂಪ ಅಂತ ಮನೆಯ ಹಿರಿಯರೆಲ್ಲಾ ಹಾಡಿ ಹೊಗಳುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಾರುದ್ದ ಜಡೆ ಹೋಗಿ ಮೋಟುದ್ದ ಜಡೆ ಬಂದಿದೆ. ಕೆಲವರು ಇಷ್ಟ ಪಟ್ಟು ಕೂದಲಿಗೆ ಕತ್ತರಿ ಹಾಕಿ ನಾನಾ ರೂಪಗಳನ್ನು ಕೊಡುತ್ತಿದ್ದರೆ, ಪಾಪ ಇನ್ನೂ ಕೆಲವರಿಗೆ ಉದ್ದ ಕೂದಲು ಬೇಕೆಂಬ ಆಸೆ ಇದ್ದರು ಈ ಕೂದಲು ಉದುರುವ ಸಮಸ್ಯೆ(Hair Fall), ತಲೆಯೊಟ್ಟಿನ(Dandruff) ಸಮಸ್ಯೆಯಿಂದ ಜಡೆಯ ಆಸೆಯನ್ನು ಬಿಟ್ಟಿದ್ದಾರೆ.

ಈ ಹೇರ್ ಫಾಲ್, ಡೆಂಡ್ರಾಫ್ ಸಮಸ್ಯೆಯ ಜೊತೆಗೆ ಇತೀಚೆಗೆ ಬಿಳಿ ಕೂದಲಿನ ಸಮಸ್ಯೆಯು(White Hairs) ಹೆಚ್ಚಾಗಿದ್ದು, ವಯಸ್ಸಿನ ಹಂಗಿಲ್ಲದೆ ಸ್ಕೂಲ್ ಗೆ ಹೋಗುವ ಮಕ್ಕಳಿಂದ ಹಿಡಿದು ಕಾಲೇಜ್ ಗೆ ಹೋಗುವ ಯುವಕ ಯುವತಿಯರನ್ನು ಆವರಿಸಿದೆ. ವಯಸ್ಸಿನ ಸೂಚಕವಾಗಿ ಹಿರಿಯ ವಯಸ್ಕರಿಗೆ ಮಾತ್ರ ಸೀಮಿತವಾಗಿದ್ದ ಈ ಬಿಳಿ ಕೂದಲು ಇದೀಗ ಎಲ್ಲಾ ವಯೋಮನದವರನ್ನು ತನ್ನ ವಶ ಮಾಡಿಕೊಂಡು ಬಿಟ್ಟಿದೆ.

ನೀವು ಈ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನಾವು ಹೇಳುವ ಈ ಸರಳ ಮಾರ್ಗಗಳನ್ನು(Hair Care Tips) ಅನುಸರಿಸಿದ್ದರೆ ಈ ವೈಟ್ ಹೇರ್ ಬಂಧನದಿಂದ ಮುಕ್ತಿ ಪಡೆಯಬಹುದು.

ಕರಿಬೇವಿನ ಎಲೆ

ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳ ಬಹುದಾಗಿದ್ದು, ಕರಿಬೇವಿನ ಎಲೆಗಳ ಮೂಲಕ ವೈಟ್ ಹೇರ್ ಹಾವಳಿಗೆ ಬ್ರೇಕ್ ಹಾಕಬಹುದಾಗಿದೆ. ಕರಿಬೇವಿನ ಎಲೆಗಳು ಕೂದಲಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಮೂಲಕ ಬೇರಿನ ಸಮೇತ ಕೂದಲನ್ನು ಬಲಗೊಳಿಸಲ್ಲಿದ್ದು, ಕರಿಬೇವಿನ ಪುಡಿಯನ್ನು ಎಳ್ಳೆಣ್ಣೆಯೊಂದಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದ್ದರೆ ಶೀಘ್ರದಲ್ಲೆ ನಿಮ್ಮ ಬಿಳಿ ಕೂದಲೆಲ್ಲ ಮಂಗಮಾಯಾವಾಗುತ್ತದೆ.

ತಯಾರಿಸುವ ವಿಧಾನ

  • ಒಂದು ಕಪ್ ಎಳ್ಳೆಣ್ಣೆಯನ್ನು ತೆಗೆದುಕೊಂಡು, ಅದಕ್ಕೆ ಅರ್ಧ ಕಪ್ ಕರಿಬೇವಿನ ಎಲೆಗಳನ್ನು ಸೇರಿಸಿ ಆ ಎಣ್ಣಿಯನ್ನು ಮೀಡಿಯಲ್ ಫ್ಲೇಮ್ ನಲ್ಲಿ ಬಿಸಿ ಮಾಡಬೇಕು.
  • ಕರಿಬೇವಿನ ಎಲೆ ಪುಡಿ ಚೆನ್ನಾಗಿ ಎಣ್ಣೆಯ ಜೊತೆ ಮಿಶ್ರಣಗೊಂಡು ಕುದಿಯಲು ಆರಂಭಿಸಿದ್ದಾಗ ಗ್ಯಾಸ್ ಯಿಂದ ಇದನ್ನು ಕೆಳಗಿಳಿಸಬೇಕು.

Beauty Tips: ಮನೆಯಲ್ಲಿ ಸಿಗುವ ಈ ಮೂರು ವಸ್ತುಗಳಿಂದ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ

ಬಳಕೆಯ ರೀತಿ ಹೇಗೆ?

ಹೀಗೆ ಸಿದ್ಧಪಡಿಸಿದ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ಮಸಾಜ್ ಮಾಡಿದರೆ, ಕೂದಲು ಉದುರುವಿಕೆ ಕಡಿಮೆಯಾಗುವುದು, ಬೇರುಗಳು ಬಲಪಡುವುದು ಹಾಗೂ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುವುದು.

ಎಳ್ಳೆಣ್ಣೆಯೊಂದಿಗೆ ಗೋರಂಟಿ ಎಲೆ

ಇನ್ನು ಇದರೊಂದಿಗೆ ಬಿಳಿ ಕೂದಲನ್ನು ಕಪ್ಪಾಗಾಗಿಸಲು ಎಳ್ಳೆಣ್ಣೆಯೊಂದಿಗೆ ಗೋರಂಟಿ ಅಥವಾ ಮೆಹಂದಿಯ ಎಲೆ ಅಥವಾ ಅದರ ಪುಡಿಯನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಲಿದ್ದು, ಜೊತೆಗೆ ಕೂದಲಿನ ಹೊಳಪು ಹೆಚ್ಚಿಸಿ, ತಲೆಯೊಟ್ಟನ್ನು ತಡೆಯುತ್ತದೆ. ಹಾಗೇ ಬಿಳಿ ಕೂದಲಿನ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ನೀಡುತ್ತದೆ.

ಇದಕ್ಕಾಗಿ 1 ಕಪ್ ಎಳ್ಳಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಗೋರಂಟಿ ಪುಡಿ ಅಥವಾ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ನಂತರ ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚಿ. ನಿಮ್ಮ ಕೂದಲಿಗೆ ಈ ಎಣ್ಣೆಯನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕ್ರಮೇಣ ನಿಮ್ಮ ಕೂದಲು ಕಪ್ಪಾಗುತ್ತದೆ.