Health Tips: ನೀವು ತೂಕ ಇಳಿಸಲು ಟ್ರೈ ಮಾಡ್ತಿದ್ದೀರಾ? ಹಾಗಾದರೆ ಈ ಒಣ ಹಣ್ಣು ನಿಮಗೆ ಸಹಾಯ ಮಾಡಬಹುದು!
Health Benifits Of Dates: ಖರ್ಜೂರ ಸೇವನೆಯಿಂದ ಅನೇಕ ಲಾಭಗಳಿವೆ. ನಿಮ್ಮ ತೂಕ ನಿಯಂತ್ರಣಕ್ಕೆ ಸಹಾಯಕವಾಗುವ ಆಹಾರವಾಗಿದ್ದು, ಖರ್ಜೂರ ಜೀರ್ಣಕ್ರಿಯೆ ಸುಧಾರಿಸುವುದು, ಹೊಟ್ಟೆ ತುಂಬಿರುವ ಭಾವನೆ ನೀಡುವುದು ಮಾತ್ರವಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸಲು ಸಹ ನೆರವಾಗುತ್ತದೆ.
ಖರ್ಜೂರ -
ಬೆಂಗಳೂರು: ಬದಲಾದ ಜೀವನ ಶೈಲಿಯ ಪರಿಣಾಮವೋ ಅಥವಾ ಇಂದಿನ ಆಹಾರ ಕ್ರಮದ ಪ್ರಭಾವೋ ಏನೋ ಕೆಲವರು ತಾವು ದಪ್ಪ ಆಗಬೇಕು, ತೂಕ ಹೆಚ್ಚಿಸಿಕೊಳ್ಳಬೇಕು(Weight Gain) ಎಂದು ಸಿಕ್ಕಿದೆಲ್ಲಾ ತಿನ್ನುತ್ತಾರೆ, ಆದರೂ ಅವರು ದಪ್ಪ ಆಗೋದೇ ಇಲ್ಲ... ಅದೇ ಇನ್ನೂ ಕೆಲವರು ತಾವು ಸಣ್ಣ ಆಗಬೇಕು(Weight Loss), ಬೊಜ್ಜು ಕರಗಿಸಬೇಕು ಅಂತ ಮೂರು ಹೊತ್ತು ತಿನ್ನುತ್ತಾ ಇದ್ದವರು ಎರಡೇ ಹೊತ್ತು ತಿನ್ನಲು ಶುರು ಮಾಡುತ್ತಾರೆ. ಜಿಮ್ ಗೆ ಹೋಗುತ್ತಾರೆ... ಆದರೂ ಸಣ್ಣ ಆಗೋದೇ ಇಲ್ಲ..
ಇಂತಹ ಪರಿಸ್ಥಿತಿಯಲ್ಲಿ, ಖರ್ಜೂರ (Dates) ನಿಮ್ಮ ತೂಕ ನಿಯಂತ್ರಣಕ್ಕೆ ಸಹಾಯಕವಾಗುವ ಆಹಾರವಾಗಿದ್ದು, ಖರ್ಜೂರ ಜೀರ್ಣಕ್ರಿಯೆ ಸುಧಾರಿಸುವುದು, ಹೊಟ್ಟೆ ತುಂಬಿರುವ ಭಾವನೆ ನೀಡುವುದು ಮಾತ್ರವಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸಲು ಸಹ ನೆರವಾಗುತ್ತದೆ.
ಖರ್ಜೂರ ಕೇವಲ ತೂಕ ನಿಯಂತ್ರಣಕ್ಕಷ್ಟೇ ಅಲ್ಲ, ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಪೌಷ್ಠಿಕ ಅಂಶವುಳ್ಳ ಡ್ರೈ ಫ್ರೂಟ್ ಆಗಿದ್ದು, ಇದು ಮೂಳೆಗಳನ್ನು ಗಟ್ಟಿಗೊಳಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಪ್ರತಿ ದಿನ ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸಿಕೊಳ್ಳುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯಾವಾಗಿದೆ. ನಿಯಮಿತವಾಗಿ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದೆರಡು ಖರ್ಜೂರ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತವೆ.
ಹಾಗಾದ್ರೆ ಬನ್ನಿ ಖಾಲಿ ಹೊಟ್ಟೆಗೆ ಖರ್ಜೂರ ಸೇವಿಸುವುದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳು(Health Benifits) ಏನು ಎಂಬುದನ್ನು ನೋಡೋಣ
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ:
ನೀರಿನಲ್ಲಿ ಅಥವಾ ತುಪ್ಪದಲ್ಲಿ ನೆನೆಸಿದ ಖರ್ಜೂರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳು ಸಮೃದ್ಧವಾಗಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ನಿಮ್ಮ ದೇಹವನ್ನು ಸೋಂಕುಗಳಿಂದ ದೂರವಿರಿಸುತ್ತದೆ.
ಈ ಸುದ್ದಿಯನ್ನು ಓದಿ: Health Tips: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿದರೆ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ಮುಕ್ತಿ
ಜೀರ್ಣಕ್ರಿಯೆಗೆ ಒಳ್ಳೆಯದು:
ಖರ್ಜೂರ ಮತ್ತು ತುಪ್ಪವನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಖರ್ಜೂರವು ಆಹಾರದ ಫೈಬರ್‌ನ ಉತ್ತಮ ಮೂಲವಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ತುಪ್ಪವು ಕರುಳಿನ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತುಪ್ಪದಲ್ಲಿ ನೆನೆಸಿದ ಖರ್ಜೂರದ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು, ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಖರ್ಜೂರ ಸಹಾಯಕ
ತಜ್ಞರ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆ ತೂಕ ಕಡಿತಕ್ಕೆ ನೆರವಾಗುತ್ತದೆ. ಖಾಲಿ ಹೊಟ್ಟೆಗೆ ಖರ್ಜೂರ ತಿಂದರೆ ದೀರ್ಘಕಾಲ ಹೊಟ್ಟೆ ತುಂಬಿದ ಭಾವನೆ ನೀಡುವ ಕಾರಣದಿಂದ ಅನಾವಶ್ಯಕ ತಿಂಡಿಗಳನ್ನು ತಿನ್ನುವ ಪ್ರವೃತ್ತಿ ಕಡಿಮೆಯಾಗುತ್ತದೆ. ಹಸಿವು ತಡವಾಗಿ ಕಾಣಿಸಿಕೊಳ್ಳುವುದರಿಂದ ಕ್ಯಾಲೊರಿ ಸೇವನೆಯೂ ಸ್ವಾಭಾವಿಕವಾಗಿ ಇಳಿಯುತ್ತದೆ.
ತೂಕ ಇಳಿಸಿಕೊಳ್ಳಲು ಯೋಜಿಸುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಗೆ ಖರ್ಜೂರವನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಕಂಡುಬರುತ್ತದೆ.
ಇನ್ನು ಖರ್ಜೂರಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಸಿಗುತ್ತವೆ.ಇದರಲ್ಲಿ ಸಿಗುವ ಫಿನೋಲಿಕ್ ಆಮ್ಲ ದೈಹಿಕ ಆಕ್ಸಿಡೆ ಟೀವ್ ಒತ್ತಡವನ್ನು ನಿರ್ವಹಣೆ ಮಾಡುವಲ್ಲಿ ಕೆಲಸ ಮಾಡುತ್ತದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಖರ್ಜೂ ರವನ್ನು ಸೇವಿಸುವುದರಿಂದ ನಿಮಗೆ ಈ ಲಾಭ ಗಳು ಪೂರ್ಣ ಪ್ರಮಾಣದಲ್ಲಿ ಸಿಗುತ್ತವೆ. ಇವುಗಳ ಸೇವ ನೆಯಿಂದ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.