Jackfruits Cutting Tips: ಕೈಗೆ ಅಂಟು ತಾಕದಂತೆ ಹಲಸಿನಹಣ್ಣನ್ನು ಕತ್ತರಿಸಲು ಇಲ್ಲಿದೆ ಟಿಪ್ಸ್!
ಹಲಸಿನ ಹಣ್ಣು ತಿನ್ನಲು ಬಹಳಷ್ಟು ರುಚಿ ಹೌದು , ಆದರೆ ಅದನ್ನು ಕತ್ತರಿಸಿ ತಿನ್ನಲು ಕಷ್ಟ ಪಡುವವರು ಇದ್ದಾರೆ. ಏಕೆಂದರೆ ಅದರಿಂದ ಜಿಗುಟಾದ ಅಂಟುಹೊರಬಂದು ಇದು ಚಾಕುವಿಗೆ ಅಂಟಿಕೊಳ್ಳುವುದು ಇದೆ. ಅನೇಕರು ಹಲಸಿನ ಹಣ್ಣಿನ ಸಿಪ್ಪೆ ಸುಲಿಯುವ ಜಂಜಾಟವೇ ಬೇಡ ಎಂದು ಕೊಂಚ ಜಾಸ್ತಿ ಬೆಲೆಯಾದರೂ ಸಿಪ್ಪೆ ಸುಲಿದ ಹಲಸಿನ ಹಣ್ಣನ್ನು ಖರೀದಿಸುತ್ತಾರೆ. ಒಂದು ವೇಳೆ ನೀವೇನಾದರೂ ಮಾರುಕಟ್ಟೆಯಿಂದ ಹಲಸಿನ ಹಣ್ಣು ತಂದು ಕತ್ತರಿಸುವಿರಾದರೆ ಈ ಟ್ರಿಕ್ಸ್ ಬಳಸಿದರೆ ರುಚಿಕರವಾದ ಹಲಸನ್ನು ಸುಲಭವಾಗಿ ಕತ್ತರಿಸಬಹುದು


ನವದೆಹಲಿ: ಇದೀಗ ಹಲಸಿನ ಹಣ್ಣಿನ (Jackfruit) ಸೀಸನ್ ಪ್ರಾರಂಭವಾಗಿದ್ದು ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಇದನ್ನು ಖರೀದಿಸುವ ಜನರು ಕೂಡ ಹೆಚ್ಚು ಇರುತ್ತಾರೆ. ಹಲಸು ಆರೋಗ್ಯಕಕ್ಕೆ ಬಹಳಷ್ಟು ಉಪಯುಕ್ತ ವಾಗಿದ್ದು ಇದರಲ್ಲಿ ಜೀವಸತ್ವಗಳು, ಖನಿಜಗಳು, ಕಾರ್ಬೋಹೈಡ್ರೇಟ್‌ಗಳು, ಫೈಬರ್ ನಂತಹ ಹಲವು ರೀತಿಯ ಪೋಷ ಕಾಂಶಗಳು ಇದರಲ್ಲಿದೆ. ಇನ್ನು ಈ ಹಣ್ಣು ನೋಡಲು ಮಾತ್ರ ಒರಟಾಗಿ, ಮೈಮೇಲೆ ಮುಳ್ಳು ಮುಳ್ಳು ರೀತಿ ಕಂಡು ಬಂದರೂ, ಈ ಹಣ್ಣಿನ ಒಳಗಿನ ಪ್ರತಿಯೊಂದು ಭಾಗವೂ ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ರಕ್ತದೊತ್ತಡ, ಜೀರ್ಣಕ್ರಿಯೆ, ಹೃದ್ರೋಗ ಇತ್ಯಾದಿ ಸಮಸ್ಯೆಗೆ ಹಲಸು ರಾಮಬಾಣ. ಆದರೆ ಹಲಸಿನ ಹಣ್ಣು ತಿನ್ನಲು ಬಹಳಷ್ಟು ರುಚಿ ಹೌದು , ಆದರೆ ಅದನ್ನು ಕತ್ತರಿಸಿ ತಿನ್ನಲು ಕಷ್ಟ ಪಡುವವರು ಇದ್ದಾರೆ. ಏಕೆಂದರೆ ಅದರಿಂದ ಜಿಗುಟಾದ ಅಂಟು ಹೊರಬಂದು ಇದು ಚಾಕುವಿಗೆ ಅಂಟಿಕೊಳ್ಳುವುದು ಇದೆ.
ಅನೇಕರು ಹಲಸಿನ ಹಣ್ಣಿನ ಸಿಪ್ಪೆ ಸುಲಿಯುವ ಜಂಜಾಟವೇ ಬೇಡ ಎಂದು ಕೊಂಚ ಜಾಸ್ತಿ ಬೆಲೆಯಾದರೂ ಸಿಪ್ಪೆ ಸುಲಿದ ಹಲಸಿನ ಹಣ್ಣನ್ನು ಖರೀದಿಸುತ್ತಾರೆ. ಒಂದು ವೇಳೆ ನೀವೇನಾದರೂ ಮಾರುಕಟ್ಟೆಯಿಂದ ಹಲಸಿನ ಹಣ್ಣು ತಂದು ಕತ್ತರಿಸುವಿರಾದರೆ ಈ ಟ್ರಿಕ್ಸ್ ಬಳಸಿದರೆ ರುಚಿಕರವಾದ ಹಲಸನ್ನು ಸುಲಭವಾಗಿ ಕತ್ತರಿಸಬಹುದು.
ಹರಿತವಾದ ಚಾಕುವನ್ನು ಬಳಸಿ:
ಹಲಸಿನ ಹಣ್ಣನ್ನು ಕತ್ತರಿಸುವಾಗ ಯಾವಾಗಲೂ ಹರಿತವಾದ ಚಾಕುವನ್ನು ಬಳಸಿ. ಹಲಸಿನ ಸಿಪ್ಪೆ ದಪ್ಪವಾಗಿರುತ್ತದೆ, ಹಾಗಾಗಿ ಚಾಕು ಹರಿತವಾಗಿಲ್ಲದಿದ್ದರೆ, ಸಿಪ್ಪೆ ತೆಗೆಯಲು ಕಷ್ಟವಾಗುತ್ತದೆ ಮತ್ತು ಕತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದಾಗ್ಯೂ, ಹರಿತವಾದ ಚಾಕುವನ್ನು ಬಳಸುವಾಗ ಜಾಗರೂಕರಾಗಿರಿ.
ಹತ್ತಿ ಬಟ್ಟೆಯನ್ನು ಬಳಸಿ:
ನೀವು ಹಲಸಿನ ಹಣ್ಣನ್ನು ಕತ್ತರಿಸುವಾಗ, ಜಿಗುಟಾದ ಅಂಟು ಹಲಸಿನ ಹಣ್ಣಿನಿಂದ ಹೊರಬರಲು ಪ್ರಾರಂಭಿಸುತ್ತದೆ.ಹಾಗಾಗಿ ಹತ್ತಿರದಲ್ಲಿ ಹತ್ತಿ ಬಟ್ಟೆಯನ್ನು ಇರಿಸಿ ಇದರಿಂದ ಅದು ತುಂಬಾ ಜಿಗುಟಾದಾಗಲೆಲ್ಲಾ ನಿಮ್ಮ ಕೈಗಳನ್ನು ಮತ್ತು ಚಾಕುವನ್ನು ತ್ವರಿತವಾಗಿ ಒರೆಸಿಕೊಳ್ಳಬಹುದು.
ಪೇಪರ್ ಬಳಸಬಹುದು:
ನೀವು ಹಲಸಿನ ಹಣ್ಣನ್ನು ಕತ್ತರಿಸಲು ತಯಾರಿ ಮಾಡುವಾಗ, ಮೊದಲು ಅದನ್ನು ಚೆನ್ನಾಗಿ ತೊಳೆದು ಅದರ ಸುತ್ತಲೂ 2-3 ಪತ್ರಿಕೆಗಳನ್ನು ಹರಡಿ. ಇದು ಜಿಗುಟಾದ ಅಂಟುವನ್ನು ತಡೆ ಹಿಡಿದು ನೆಲದ ಮೇಲೆ ಹರಡುವುದನ್ನು ತಡೆಯುತ್ತದೆ.
ಎಣ್ಣೆ ಹಚ್ಚುವುದರಿಂದ ಸುಲಭವಾಗುತ್ತದೆ:
ನೀವು ಹಲಸಿನ ಹಣ್ಣನ್ನು ಕತ್ತರಿಸುವಾಗ ಚಾಕು ಮತ್ತು ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಳ್ಳಿ.ಇದರಿಂದ ಹಲಸು ಕತ್ತರಿ ಸುವುದು ಸುಲಭವಾಗುತ್ತದೆ. ಸಿಪ್ಪೆಯನ್ನು ತೆಗೆದ ನಂತರ, ಹಲಸಿನ ಹಣ್ಣನ್ನು ನಿಧಾನವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ
ಇದನ್ನು ಓದಿ: Health Tips: ನಮಗೆ ಒಆರ್‌ಎಸ್ ಅಗತ್ಯ ಬೀಳುವುದು ಯಾವಾಗ?
ಸಾಸಿವೆ ಎಣ್ಣೆಯನ್ನು ಬಳಸಿ:
ಹಲಸಿನ ಹಣ್ಣನ್ನು ಕತ್ತರಿಸುವ ಮೊದಲು ನಿಮ್ಮ ಕೈಗಳಿಗೆ ಮತ್ತು ಚಾಕುವಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ. ಈ ಸರಳ ಹಂತವು ಹಲಸಿನ ಹಣ್ಣು ಜಾರಿಬೀಳುವುದನ್ನು ತಡೆಯುತ್ತದೆ ಮತ್ತು ಕತ್ತರಿಸಲು ಸುಲಭವಾಗುತ್ತದೆ. ಹಲಸಿನ ಹಣ್ಣನ್ನು ಅರ್ಧದಷ್ಟು ಭಾಗ ಕತ್ತರಿಸುವ ಮೂಲಕ ಪ್ರಾರಂಭಿಸಿ, ನಂತರ ಪ್ರತಿ ಅರ್ಧವನ್ನು 7-8 ವೃತ್ತಾಕಾರದ ಭಾಗಗಳಾಗಿ ವಿಂಗಡಿಸಿ. ಪ್ರತಿ ಭಾಗವನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.
ನಿಂಬೆ ಹಣ್ಣಿನಿಂದ ಚಾಕು ಉಜ್ಜಿಕೊಳ್ಳಿ:
ಸರಿಯಾಗಿ ಚಾಕುವಿನಿಂದ ಹಲಸಿನ ಹಣ್ಣನ್ನು ಕತ್ತರಿಸಲು ಪ್ರಾರಂಭಿಸುವ ಮೊದಲು ನಿಮ್ಮ ಚಾಕುವಿನ ಮೇಲೆ ಅರ್ಧ ನಿಂಬೆ ಯನ್ನು ಉಜ್ಜಿಕೊಳ್ಳಿ. ಇದು ಹಲಸಿನ ಹಣ್ಣನ್ನು ಕತ್ತರಿಸಲು ಸುಲಭಗೊಳಿಸುತ್ತದೆ. ಹೀಗೆ ಈ ಟ್ರಿಕ್ಸ್ ಬಳಸುವುದರಿಂದ ಹಲಸಿನ ಹಣ್ಣನ್ನು ಸುಲಭ ವಾಗಿ ಕತ್ತರಿಸಬಹುದು.