ಕ್ಲಿಷ್ಟಕರ ಥೈರಾಯ್ಡ್ ಗೆಡ್ಡೆಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ
ವೈದ್ಯಕೀಯ ತಂಡವು ಇ ಎನ್ ಟಿ, ಹೆಡ್ & ನೆಕ್ ಕ್ಯಾನ್ಸರ್ ಮತ್ತು ಕಾರ್ಡಿಯೋಥೊರಾಸಿಕ್ ಸರ್ಜರಿ ತಂಡಗಳು ಸೇರಿದಂತೆ ಬಹುವಿಭಾಗೀಯ ತಂಡದ ಸಹಕಾರ ದಿಂದ ಅತ್ಯಂತ ಕೌಶಲ್ಯಪೂರ್ವಕವಾಗಿ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸೆಯ ಮೂಲಕ ಈ ಗೆಡ್ಡೆಯನ್ನು ಯಶಸ್ವಿಯಾಗಿ, ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಈ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಲಾಯಿತು.
-
ಇ ಎನ್ ಟಿ, ಹೆಡ್ & ನೆಕ್ ಆಂಕೊಲಾಜಿ- ಕಾರ್ಡಿಯೋಥೊರಾಸಿಕ್ ಸರ್ಜರಿ ಸೇರಿದಂತೆ ಬಹು ವಿಭಾಗೀಯ ತಂಡಗಳ ಸಹಯೋಗದಿಂದ ರೋಗಿಯು ಅತ್ಯುತ್ತಮ ಚಿಕಿತ್ಸೆ ಪಡೆದು ವೇಗವಾಗಿ ಗುಣಮುಖರಾಗಿದ್ದು, ಬಹಳ ಕಡಿಮೆ ಗಾಯದ ಗುರುತುಗಳೊಂದಿಗೆ ಮನೆಗೆ ಮರಳಿದ್ದಾರೆ
ಬೆಂಗಳೂರು: 30 ವರ್ಷದ ಸುಷ್ಮಾ (ಹೆಸರು ಬದಲಾಯಿಸಲಾಗಿದೆ) ಅವರು ಸಾಮಾನ್ಯ ಪ್ರಸೂತಿ ಸಂಬಂಧಿಸಿದ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದರು. ಆ ವೇಳೆಯಲ್ಲಿ ಅವರಿಗೆ ಯಾರೂ ನಿರೀಕ್ಷಿಸದ ಒಂದು ದೊಡ್ಡ ಸಮಸ್ಯೆಯೊಂದು ಪತ್ತೆಯಾಯಿತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ವೈದ್ಯರು ಒಂದು ದೊಡ್ಡ ಗಾತ್ರದ ಥೈರಾಯ್ಡ್ ಗೆಡ್ಡೆಯನ್ನು ಪತ್ತೆಹಚ್ಚಿದರು. ಅದಕ್ಕೆ ರೆಟ್ರೋಸ್ಟರ್ನಲ್ ಗಾಯಿಟರ್ ಎಂದು ಹೆಸರಿದ್ದು, ಇದು ಕ್ಲಿಷ್ಟಕರವಾದ ಮತ್ತು ಅಪಾಯಕಾರಿ ಸ್ಥಿತಿಯಾಗಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯಕೀಯ ತಂಡವು ಇ ಎನ್ ಟಿ, ಹೆಡ್ & ನೆಕ್ ಕ್ಯಾನ್ಸರ್ ಮತ್ತು ಕಾರ್ಡಿಯೋಥೊರಾಸಿಕ್ ಸರ್ಜರಿ ತಂಡಗಳು ಸೇರಿದಂತೆ ಬಹುವಿಭಾಗೀಯ ತಂಡದ ಸಹಕಾರ ದಿಂದ ಅತ್ಯಂತ ಕೌಶಲ್ಯಪೂರ್ವಕವಾಗಿ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸೆಯ ಮೂಲಕ ಈ ಗೆಡ್ಡೆಯನ್ನು ಯಶಸ್ವಿಯಾಗಿ, ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಈ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಲಾಯಿತು.
ಈ ರೆಟ್ರೋಸ್ಟರ್ನಲ್ ಗಾಯಿಟರ್ ನಲ್ಲಿ ಸಾಮಾನ್ಯವಾಗಿ ಕಂಠದಲ್ಲಿ ಊತ ಮಾತ್ರ ಕಾಣುತ್ತದೆ ಯಾದರೂ, ಸ್ಕ್ಯಾನ್ ಮಾಡಿದಾಗ ಈ ಗಡ್ಡೆ ಕತ್ತಿನಿಂದ ಎದೆಗೂಡಿನ ಹಿಂಭಾಗಕ್ಕೆ (ಸ್ಟರ್ನಮ್ ನ ಹಿಂದೆ) ಆಳವಾಗಿ ಬೆಳೆದು ಎದೆಯ ಒಳಗೆ ಹರಡಿಕೊಂಡಿರುವುದು ಕಂಡುಬಂದಿತ್ತು. ರೋಗಿಗೆ ಕೇವಲ ಸ್ವಲ್ಪ ಕಂಠದ ಸಮಸ್ಯೆ ಮತ್ತು ಕೆಲವೊಮ್ಮೆ ನುಂಗಲು ತೊಂದರೆ ಕಂಡುಬಂದಿದ್ದರೂ ಗೆಡ್ಡೆಯು ಮುಖ್ಯವಾಗಿ ರಕ್ತನಾಳಗಳು ಮತ್ತು ಗಾಳಿಯ ಹರಿವಿನ ದಾರಿಗೆ ಹತ್ತಿರವಾಗಿರುವ ಅಪಾಯಕಾರಿ ಸ್ಥಿತಿಯನ್ನು ವೈದ್ಯರು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ: Neck Pain: ಕುತ್ತಿಗೆ ನೋವು ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ದಿಂಬು ಸರಿಯಾಗಿದೆಯೇ ಎಂದು ಚೆಕ್ ಹೀಗೆ ಮಾಡಿ
ಈ ಸಮಸ್ಯೆಯನ್ನು ಅರಿತ ಬಳಿಕ ಬಹುವಿಭಾಗೀಯ ತಂಡದ ಸಹಕಾರದಿಂದ ಅತ್ಯಂತ ಕೌಶಲ್ಯ ಪೂರ್ವಕವಾಗಿ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸೆಯ ಮೂಲಕ ಈ ಗೆಡ್ಡೆಯನ್ನು ಯಶಸ್ವಿಯಾಗಿ, ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಅಡಿಷನಲ್ ಡೈರೆಕ್ಟರ್ - ಇ ಎನ್ ಟಿ, ಕೋಕ್ಲಿಯರ್ ಇಂಪ್ಲಾಂಟ್ & ಸ್ಕಲ್ ಬೇಸ್ ಸರ್ಜನ್ ಡಾ. ಸುಶೀನ್ ದತ್ ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು.
ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ನ ಮಿನಿಮಲಿ ಇನ್ವೇಸಿವ್ ಮತ್ತು ರೋಬೋಟಿಕ್ ಕಾರ್ಡಿಯಾಕ್ ಸರ್ಜರಿ ಅಡಿಷನಲ್ ಡೈರೆಕ್ಟರ್ ಡಾ. ಸುದರ್ಶನ್ ಜಿ.ಟಿ ಮತ್ತು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ನ ಕನ್ಸಲ್ಟಂಟ್ - ಇ ಎನ್ ಟಿ, ಹೆಡ್ & ನೆಕ್ ಕ್ಯಾನ್ಸರ್ ಸರ್ಜನ್ ಡಾ. ಅಭಿಷೇಕ್ ಎಸ್ ಅವರ ಸಹಕಾರದಲ್ಲಿ ಮತ್ತು ಸಿಟಿವಿಎಸ್ ತಂಡದ ನೆರವಿನೊಂದಿಗೆ ವೀಡಿಯೋ-ಅಸಿಸ್ಟೆಡ್ ಥೊರಾಕೋಸ್ಕೋಪಿಕ್ ಸರ್ಜರಿ (ವಿಎಟಿಎಸ್) ವಿಧಾನವನ್ನು ಬಳಸಿ ಕೊಂಡು ಕೇವಲ ಕಂಠದ ಬಳಿ ಸಣ್ಣ ಗಾಯ ಮಾಡುವ ಮೂಲಕ ಮತ್ತು ಎದೆಯಲ್ಲಿ ಸಣ್ಣ ರಂಧ್ರ ಗಳ ಮೂಲಕ ಗೆಡ್ಡೆಯನ್ನು ತಲುಪಿ ಆ ಗೆಡ್ಡೆಯನ್ನು ತೆಗೆದುಹಾಕಲಾಯಿತು. ವೈದ್ಯರ ಕೌಶಲದಿಂದ ಮತ್ತು ಅತ್ಯಾಧುನಿಕ ಚಿಕಿತ್ಸೆಯಿಂದ ಎದೆಗೂಡನ್ನು ಒಡೆಯುವ ಅಥವಾ ದೊಡ್ಡ ಗಾಯ ಮಾಡುವ ಅಗತ್ಯ ಬೀಳಲಿಲ್ಲ.
ಈ ಆಧುನಿಕ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸಾ ವಿಧಾನದಿಂದ:
- ರಕ್ತ ನಷ್ಟವಾಗುವುದು ತುಂಬಾ ಕಡಿಮೆ
- ನೋವು ಕೂಡ ಬಹಳ ಕಡಿಮೆ
- ತುಂಬಾ ವೇಗವಾಗಿ ಗುಣಮುಖವಾಗಬಹುದು
- ವಿಶೇಷವಾಗಿ ಗಾಯದ ಗುರುತು ಬಹಳಷ್ಟು ಕಡಿಮೆ ಇರುತ್ತದೆ
ಅತ್ಯಂತ ಮುಖ್ಯವಾಗಿ ಈ ವಿಧಾನದಿಂದ ಎಡಭಾಗದ ಥೈರಾಯ್ಡ್ ಲೋಬ್ ಅನ್ನು ಸಂರಕ್ಷಿಸ ಲಾಗಿದ್ದು, ಇದರಿಂದ ಶಸ್ತ್ರಚಿಕಿತ್ಸೆ ನಂತರ ಕ್ಯಾಲ್ಸಿಯಂ ಮಟ್ಟ ಮತ್ತು ಥೈರಾಯ್ಡ್ ಹಾರ್ಮೋನ್ ಸಾಮಾನ್ಯವಾಗಿ ಕೆಲಸ ಮಾಡುತ್ತಿದೆ. ಈ ಯಶಸ್ವಿ ಚಿಕಿತ್ಸೆಯು ಫೋರ್ಟಿಸ್ ಹಾಸ್ಪಿಟಲ್ ನ ಅತ್ಯಂತ ಆಧುನಿಕ ಚಿಕಿತ್ಸಾ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ.
ಈ ಕುರಿತು ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ನ ಅಡಿಷನಲ್ ಡೈರೆಕ್ಟರ್ - ಇ ಎನ್ ಟಿ, ಕೋಕ್ಲಿಯರ್ ಇಂಪ್ಲಾಂಟ್ & ಸ್ಕಲ್ ಬೇಸ್ ಸರ್ಜನ್ ಡಾ. ಸುಶೀನ್ ದತ್ ಅವರು, “ರೆಟ್ರೋಸ್ಟರ್ನಲ್ ಗಾಯಿಟರ್ ಬಹಳ ಅಪರೂಪವಾದ ಮತ್ತು ಎದೆಯೊಳಗೆ ಆಳವಾಗಿ ಹರಡಿರಬಹುದಾದ ತುಂಬಾ ಅಪಾಯಕಾರಿ ಮತ್ತು ಸವಾಲಿನ ಸಮಸ್ಯೆಯಾಗಿದೆ. ವಿಎಟಿಎಸ್ ವಿಧಾನದ ಸಹಾಯದಿಂದ ಕನಿಷ್ಠ ಪ್ರವೇಶ ವಿಧಾನದಲ್ಲಿ ಗೆಡ್ಡೆಯನ್ನು ಸಂಪೂರ್ಣ ವಾಗಿ, ಸುರಕ್ಷಿತವಾಗಿ ತೆಗೆದುಹಾಕಿ ಥೈರಾಯ್ಡ್ ಎಂದಿನಂತೆ ಕಾರ್ಯ ಮಾಡುವಂತೆ ಉಳಿಸಿಕೊಳ್ಳಲು ಸಾಧ್ಯವಾಯಿತು.
ವಿಶೇಷವಾಗಿ ತೆರೆದ ಎದೆಯ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯ ಬೀಳಲಿಲ್ಲ ಮತ್ತು ಅದರಿಂದಾಗುವ ಪರಿಣಾಮಗಳನ್ನು ಯಶಸ್ವಿಯಾಗಿ ತಪ್ಪಿಸಲಾಗಿದೆ. ಸಾಮಾನ್ಯವಾಗಿ ಇಂತಹ ಗಂಭೀರ ಸಮಸ್ಯೆಗಳು ಹಲವು ಬಾರಿ ಬೇರೆ ತಪಾಸಣೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪತ್ತೆಯಾಗುತ್ತವೆ. ಆದ್ದರಿಂದ ಈ ರೀತಿ ಸಂಪೂರ್ಣ ತಪಾಸಣೆ ಮಾಡುವ ಅಗತ್ಯವನ್ನು ಈ ಪ್ರಕರಣವು ಎತ್ತಿ ತೋರಿಸಿದೆ” ಎಂದು ಹೇಳಿದರು.
ಈ ಕುರಿತು ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ನ ಮಿನಿಮಲಿ ಇನ್ವೇಸಿವ್ & ರೋಬೋಟಿಕ್ ಕಾರ್ಡಿಯಾಕ್ ಸರ್ಜರಿ ಅಡಿಷನಲ್ ಡೈರೆಕ್ಟರ್ ಡಾ. ಸುದರ್ಶನ್ ಜಿ.ಟಿ. ಅವರು, “ಸಾಮಾನ್ಯವಾಗಿ ಎದೆಯೊಳಗೆ ಹರಡಿರುವ ಥೈರಾಯ್ಡ್ ಗೆಡ್ಡೆ ತೆಗೆಯಲು ಎದೆಯನ್ನು ದೊಡ್ಡದಾಗಿ ತೆರೆದು ತೆರೆದ ಶಸ್ತ್ರಚಿಕಿತ್ಸೆ (ಓಪನ್ ಥೊರಾಕ್ಟಮಿ) ಮಾಡಬೇಕಾಗುತ್ತದೆ. ಅದರಿಂದ ತುಂಬಾ ಜಾಸ್ತಿ ನೋವು ಇರುತ್ತದೆ, ದೊಡ್ಡ ಗಾಯ ಮಾಡಬೇಕಾಗಿರುವುದರಿಂದ ದೊಡ್ಡ ಗಾಯದ ಗುರುತು ಉಳಿಯುತ್ತದೆ ಮತ್ತು ಗುಣವಾಗಲು ತುಂಬಾ ದೀರ್ಘ ಸಮಯ ಬೇಕಾಗುತ್ತದೆ. ವಿಎಟಿಎಸ್ ಮೂಲಕ ಕೀಹೋಲ್ (ಸಣ್ಣ ರಂಧ್ರ) ತಂತ್ರದ ಸಹಾಯದಿಂದ ಕಡಿಮೆ ಗಾಯದ ಮೂಲಕ ಸುರಕ್ಷಿತವಾಗಿ ಗೆಡ್ಡೆ ತೆಗೆಯಲು ಸಾಧ್ಯವಾಯಿತು. ಇ ಎನ್ ಟಿ, ಹೆಡ್ & ನೆಕ್ ಆಂಕೊಲಾಜಿ- ಕಾರ್ಡಿಯೋಥೊರಾಸಿಕ್ ಸರ್ಜರಿ ಸೇರಿದಂತೆ ಬಹುವಿಭಾಗೀಯ ತಂಡಗಳ ಸಹಯೋಗವು ಈ ಬಗೆಯ ಸಂಕೀರ್ಣವಾದ ಕಂಠ-ಎದೆ ಸಮಸ್ಯೆಗಳ ನಿರ್ವಹಣೆಯ ಉತ್ತಮ ಭವಿಷ್ಯವನ್ನು ಸೂಚಿಸುತ್ತದೆ ಮತ್ತು ಪರಿಣಾಮಕಾರಿತ್ವವನ್ನು ಸಾರಿದೆ” ಎಂದು ಹೇಳಿದರು.
ಈ ಕುರಿತು ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ನ ಕನ್ಸಲ್ಟಂಟ್ - ಇ ಎನ್ ಟಿ, ಹೆಡ್ & ನೆಕ್ ಕ್ಯಾನ್ಸರ್ ಸರ್ಜನ್ ಡಾ. ಅಭಿಷೇಕ್ ಎಸ್ ಅವರು, “ಈಗ ಥೈರಾಯ್ಡ್ ಮತ್ತು ತಲೆ- ಕತ್ತಿನ ಸಮಸ್ಯೆಗಳ ಪರಿಹಾರಕ್ಕೆ ಯಾವಾಗೆಲ್ಲಾ ಸಾಧ್ಯವಿದೆಯೋ ಆವಾಗೆಲ್ಲಾ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸೆಯೇ ಈಗ ಅತ್ಯುತ್ತಮ ಮಾನದಂಡವಾಗಿದೆ. ಸುಷ್ಮಾ (ಹೆಸರು ಬದಲಿಸಲಾಗಿದೆ) ಅವರ ಗೆಡ್ಡೆ ಎದೆಗೂಡಿನ ಹಿಂದೆ ಇದ್ದಿದ್ದರಿಂದ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಅತ್ಯಗತ್ಯ ವಾಗಿತ್ತು. ನಮ್ಮ ಒಟ್ಟು ತಂಡದ ಸಹಕಾರದಿಂದ ದೊಡ್ಡ ಗಾಯ ಮಾಡದೆಯೇ ಅಥವಾ ಎಲುಬನ್ನು ಒಡೆಯದೇ ಸಂಪೂರ್ಣ ಗೆಡ್ಡೆ ತೆಗೆಯುಲು ಸಾಧ್ಯವಾಯಿತು. ಇಂಥಾ ಚಿಕಿತ್ಸೆಯು ರೋಗಿಗಳಿಗೆ ಮತ್ತು ವಿಶೇಷವಾಗಿ ಈ ರೀತಿಯ ಸಣ್ಣ ವಯಸ್ಸಿನ ರೋಗಿಗಳಿಗೆ ತುಂಬಾ ಮುಖ್ಯವಾಗಿದ್ದು, ಅವರ ಮುಂದಿನ ಜೀವನಕ್ಕೆ ಉತ್ತಮವಾಗಿದೆ” ಎಂದು ಹೇಳಿದರು.
ಈ ಕುರಿತು ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ನ ಫೆಸಿಲಿಟಿ ಡೈರೆಕ್ಟರ್ ಡಾ. ತೇಜಸ್ವಿನಿ ಪಾರ್ಥಸಾರಥಿ ಅವರು, “ಈ ಪ್ರಕರಣದ ಯಸಸ್ಸು ನಮ್ಮ ಆಸ್ಪತ್ರೆಯ ಬಹುವಿ ಭಾಗೀಯ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸೆಯ ಬಲವನ್ನು ತೋರಿಸುತ್ತದೆ. ಇ ಎನ್ ಟಿ, ಹೆಡ್ & ನೆಕ್ ಆಂಕೊಲಾಜಿ ಹಾಗೂ ಸಿಟಿವಿಎಸ್ ತಜ್ಞರ ಸಂಯೋಜಿತ ಪ್ರಯತ್ನದಿಂದಾಗಿ ಸುರಕ್ಷಿತ ಶಸ್ತ್ರಚಿಕಿತ್ಸಾ ವಿಧಾನದಿಂದ, ಕಡಿಮೆ ಗಾಯದ ಗುರುತು ಉಂಟಾಗುವಂತೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವಂತೆ ಚಿಕಿತ್ಸೆ ಒದಗಿಸುವುದು ಸಾಧ್ಯವಾಯಿತು. ರೋಗಿಗಳಿಗೆ ರೋಗಿಕೇಂದ್ರಿತ, ಅತ್ಯಾಧುನಿಕ ಚಿಕಿತ್ಸೆ ಒದಗಿಸುವುದು ನಮ್ಮ ಆಸ್ಪತ್ರೆಯ ಆತ್ಯಂತಿಕ ಗುರಿಯಾಗಿದೆ” ಎಂದು ಹೇಳಿದರು.
ಸುಷ್ಮಾ ಅವರು ಶಸ್ತ್ರಚಿಕಿತ್ಸೆಯ ನಂತರ ಬಹಳ ಚೆನ್ನಾಗಿ, ವೇಗವಾಗಿ ಚೇತರಿಸಿಕೊಂಡು ಕೇವಲ ನಾಲ್ಕೇ ದಿನಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಮಾಡುವಂತಾದರು. ಪರೀಕ್ಷೆಗಳ ಮೂಲಕ ಅವರಲ್ಲಿದ್ದ ಈ ಗೆಡ್ಡೆ ಕ್ಯಾನ್ಸರ್ ರಹಿತ (ಬಿನೈನ್) ಎಂದು ದೃಢಪಟ್ಟಿದ್ದು, ಥೈರಾಯ್ಡ್ ಕಾರ್ಯವೂ ಸಂಪೂರ್ಣವಾಗಿ ಸಾಮಾನ್ಯವಾಗಿದೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ತಮ್ಮ ಅನುಭವ ಹಂಚಿಕೊಂಡ ಸುಷ್ಮಾ ಅವರು, “ರೊಟೀನ್ ಚೆಕಪ್ ಮಾಡುವಾಗ ಗೆಡ್ಡೆ ಪತ್ತೆಯಾದಾಗ ಆಘಾತವಾಯಿತು. ಆದರೆ ವೈದ್ಯರು ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಿದರು. ಶಸ್ತ್ರಚಿಕಿತ್ಸೆ ತುಂಬಾ ಸುಗಮವಾಗಿ ನಡೆಯಿತು, ನಾನು ಊಹಿಸಿದ್ದಕ್ಕಿಂತ ಬಹಳ ಬೇಗ ಚೇತರಿಸಿಕೊಂಡೆ ಮತ್ತು ಯಾವುದೇ ಗಾಯದ ಗುರುತು ಕಾಣುತ್ತಿಲ್ಲ. ಹಾಗಾಗಿ ಫೋರ್ಟಿಸ್ ನ ವೈದ್ಯರು ಮತ್ತು ಸಿಬ್ಬಂದಿ ತಂಡದ ಕಾಳಜಿ ಮತ್ತು ಅವರ ಪರಿಣತ ಚಿಕಿತ್ಸೆಗೆ ತುಂಬಾ ಕೃತಜ್ಞಳು” ಎಂದು ಹೇಳಿದರು.