Summer Health Tips: ಸುಡುವ ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ!
ಎಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ಇದರಿಂದಾಗಿ ಗ್ಯಾಸ್ಟ್ರೋಎಂಟರೈಟಿಸ್ ಮತ್ತು ತಲೆ ನೋವಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞರಾದ ಟಿ ರಮಾಲಕ್ಷ್ಮಿ ಬಿಸಿಲಿನ ತಾಪಮಾನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಬೆಂಗಳೂರು ನಗರದಲ್ಲೂ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ತಲುಪಿರುವುದು ವರದಿಯಾಗಿದೆ. ಈ ನಡುವೆ ಬೆಂಗಳೂರಿಗರಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತಿದ್ದು, ಗ್ಯಾಸ್ಟ್ರೋ ಎಂಟರೈಟಿಸ್ ಮತ್ತು ತಲೆ ನೋವಿನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞರಾದ ಟಿ ರಮಾಲಕ್ಷ್ಮಿ ಬಿಸಿಲಿನ ತಾಪಮಾನ(Summer Health) ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹಗಲಿನ ತಾಪಮಾನವು ಹೆಚ್ಚಾಗಿದ್ದು, ರಾತ್ರಿಯ ವೇಳೆ ವಾತಾವರಣವು ಶೀತದಿಂದ ಕೂಡಿರುತ್ತದೆ. ಹೀಗಾಗಿ ಸಮತೋಲಿತ ವಾತಾವರಣ ಕಂಡುಬರುತ್ತಿದೆ, ಇಲ್ಲವಾದಲ್ಲಿ ವಾತಾವರಣದಿಂದಾಗಿ ಇನ್ನಷ್ಟು ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ಆರಂಭಿಕ ಹಂತದಲ್ಲೇ ವಾತಾವರಣ ಹೆಚ್ಚಾಗಿದ್ದು, ದಿನಕ್ಕೆ 2 ರಿಂದ 3 ತಲೆ ನೋವು ಮತ್ತು , ಗ್ಯಾಸ್ಟ್ರೋ ಎಂಟರೈಟಿಸ್ ಸಮಸ್ಯೆ ಹೊಂದಿರುವ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞರಾದ ಟಿ ರಮಾಲಕ್ಷ್ಮಿ ಬಿಸಿಲಿನ ತಾಪಮಾನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ದೇಹದಲ್ಲಿ ಅನೇಕ ರೀತಿಯ ಬದಲಾವಣೆಯಾಗುವುದರಿಂದ ಅತಿಸಾರ, ತಲೆನೋವು ಮತ್ತು ಒಣ ಕೆಮ್ಮು ಸೇರಿದಂತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಮುಖ್ಯವಾಗಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ತಲೆನೋವು, ತಲೆ ತಿರುಗುವಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಲಬದ್ಧತೆ ಹೊಂದಿ ದವರಲ್ಲಿ ತಲೆ ನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ ಈ ವೇಳೆ ಸಾಕಷ್ಟು ನೀರು, ದ್ರವದ ಸೇವನೆಯ ಮೂಲಕ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಮುಖ್ಯ.
ಇದನ್ನು ಓದಿ: Health Tips: ಖಾಲಿ ಹೊಟ್ಟೆಗೆ ನೆನೆಸಿದ ಮೆಂತೆಕಾಳು ನೀರು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲ ಪ್ರಯೋಜನ
ಬೆಳಗ್ಗೆ ಎದ್ದಾಗಿನಿಂದಲೂ ದೇಹದಲ್ಲಿ ನೀರಿನಾಂಶ ಇರುವಂತೆ ಹಾಗೂ ಫೈಬರ್, ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಕಾರ್ಬೋ ಹೈಡ್ರೇ ಟ್‌ಗಳ ಸರಿಯಾದ ಮಿಶ್ರಣವಿರುವ ಸಮತೋಲಿತ ಆಹಾರ ವನ್ನು ಸೇವಿಸಬೇಕು. ಚಳಿಗಾಲದ ಹಿನ್ನೆಲೆ ಅನೇಕ ಮಂದಿ ನೀರು ಕುಡಿ ಯುವುದನ್ನು ಕಡಿಮೆ ಮಾಡಿರುತ್ತಾರೆ. ಆದ್ರೆ ವಾತಾವರಣದಲ್ಲಿನ ತಾಪಮಾನ ಹೆಚ್ಚಳದಿಂದಾಗಿ ಹೆಚ್ಚು ನೀರು ಕುಡಿಯುವುದರ ಜೊತೆಗೆ ಎಳನೀರು, ಮಜ್ಜಿಗೆ, ನಿಂಬೆ ರಸ ಮತ್ತು ಹಣ್ಣಿನ ಜ್ಯೂಸ್‌ಗಳನ್ನು ಕುಡಿಯುವ ಅಭ್ಯಾಸ ಮಾಡಿ ಕೊಳ್ಳುವುದು ಉತ್ತಮ ಎನ್ನುತ್ತಾರೆ ಆಹಾರ ತಜ್ಞರಾದ ಟಿ ರಮಾಲಕ್ಷ್ಮಿ