ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಬೆಳ್ಳುಳ್ಳಿಯ ಸಿಪ್ಪೆಯನ್ನು ಕಸ ಎಂದು ಬಿಸಾಡದಿರಿ, ಇದರಲ್ಲಿವೆ ಆರೋಗ್ಯ ಲಾಭ!

ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯ ಮೂಲವಾಗಿದೆ. ಅದರಲ್ಲಿ ವಿಟಮಿನ್ ಎ,ಸಿ ಮತ್ತು ಇ ಅಂಶಗಳು ಹೆಚ್ಚಾಗಿದ್ದು ಆರೋಗ್ಯ ಲಾಭ ವನ್ನು ಕೂಡ ಹೆಚ್ಚಾಗಿ ಹೊಂದಿದೆ. ಆದರೆ ಅಡುಗೆಗೆ ಬೆಳ್ಳುಳ್ಳಿ ಸುಲಿದ ಬಳಿಕ ಅದರಿಂದ ಬೇರ್ಪಡುವ ಬಿಳಿಯ ಸಿಪ್ಪೆಯನ್ನು ಹೆಚ್ಚಾಗಿ ಎಸೆಯುವುದು ಉಂಟು. ಆದರೆ ಕೇವಲ ಬೆಳ್ಳುಳ್ಳಿ ಅಲ್ಲದೆ ಇದರ ಸಿಪ್ಪೆಯಿಂದಲೂ ಅನೇಕ ರೀತಿಯ ಆರೋಗ್ಯ ಲಾಭಗಳಿವೆ.

ಬೆಳ್ಳುಳ್ಳಿ ಸಿಪ್ಪೆಯಲ್ಲಿ ಇದೆ ಈ ಆರೋಗ್ಯ ಲಾಭ!

Profile Pushpa Kumari May 3, 2025 6:30 AM

ಬೆಂಗಳೂರು: ದಿನನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿಯೂ ಉಳಿದೆಲ್ಲಾ ಪದಾರ್ಥಗಳಷ್ಟೇ ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಯಾವುದೇ ಖಾದ್ಯ ಕ್ಕಾದರೂ ಒಂದು ಎಸಳು ಬೆಳ್ಳುಳ್ಳಿ ಹಾಕಿ ಒಗ್ಗರಣೆ ಹಾಕಿದರೆ ಆ ಅಡುಗೆ ಹೆಚ್ಚು ರುಚಿಕರವಾಗಿರುತ್ತದೆ. ಮುಖ್ಯವಾಗಿ ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯ ಮೂಲವಾಗಿದೆ. ಅದರಲ್ಲಿ ವಿಟಮಿನ್ ಎ,ಸಿ ಮತ್ತು ಇ ಅಂಶಗಳು ಹೆಚ್ಚಾಗಿದ್ದು ಆರೋಗ್ಯ ಲಾಭ (Health Tips) ವನ್ನು ಕೂಡ ಹೆಚ್ಚಾಗಿ ಹೊಂದಿದೆ. ಆದರೆ ಅಡುಗೆಗೆ ಬೆಳ್ಳುಳ್ಳಿ ಸುಲಿದ ಬಳಿಕ ಅದರಿಂದ ಬೇರ್ಪಡುವ ಬಿಳಿಯ ಸಿಪ್ಪೆಯನ್ನು ಹೆಚ್ಚಾಗಿ ಎಸೆಯುವುದು ಉಂಟು. ಆದರೆ ಕೇವಲ ಬೆಳ್ಳುಳ್ಳಿ ಅಲ್ಲದೆ ಇದರ ಸಿಪ್ಪೆಯಿಂದಲೂ ಅನೇಕ ರೀತಿಯ ಆರೋಗ್ಯ ಲಾಭಗಳಿವೆ.

ಚರ್ಮದ ತುರಿಕೆಗೆ ಉತ್ತಮ:

ಚರ್ಮದಲ್ಲಿ ತುರಿಕೆ ಅಥವಾ ಉರಿಯೂತ ಉಂಟಾಗಿದ್ದರೆ ಆಗ ನೀವು ಬೆಳ್ಳುಳ್ಳಿ ಸಿಪ್ಪೆಯನ್ನು ಉರಿಯುತ ಉಂಟಾಗುವ ಭಾಗಕ್ಕೆ ಹಚ್ಚಬೇಕು. ಇದರಲ್ಲಿ ಉರಿಯೂತ ಶಮನಕಾರಿ ಗುಣವಿದೆ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಚರ್ಮಕ್ಕೆ ಶಮನ ನೀಡಿ ಪರಿಹಾರ ಒದಗಿಸುತ್ತದೆ.

ಮೊಡವೆಗೆ ಪರಿಹಾರ:

ಮುಖದಲ್ಲಿ ಮೊಡವೆ ಸಮಸ್ಯೆ ಇದ್ದರೆ ಬೆಳುಳ್ಳಿ ಸಿಪ್ಪೆ ಹೆಚ್ಚು ಉಪಯುಕ್ತ ವಾಗಲಿದೆ. ಬೆಳ್ಳುಳ್ಳಿ ಸಿಪ್ಪೆಯನ್ನು ನೆನಸಿ ಬಳಿಕ ಅದನ್ನು ಕುದಿಸಿ, ತಣ್ಣಗಾದ ಮೇಲೆ ಅದೇ ನೀರಿನಿಂದ ಮುಖ ತೊಳೆಯಿರಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆದರೆ ಆಯಿತು.ಈ ರೀತಿ ಮಾಡುವುದರಿಂದ ಮೊಡವೆ ಸಮಸ್ಯೆ ನಿವಾರಣೆ ಆಗುತ್ತದೆ.

ಫೇಸ್ ಪ್ಯಾಕ್ ಮಾಡಬಹುದು:

ಬೆಳ್ಳುಳ್ಳಿ ಸಿಪ್ಪೆಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಿದೆ. ಅದೇ ರೀತಿ ಇದರಲ್ಲಿ ಕಾಲಜನ್ ಅಂಶ ಹೆಚ್ಚಾಗಿದ್ದು ಚರ್ಮದ ಆರೋಗ್ಯಕ್ಕೆ ಬಹಳಷ್ಟು ಒಳಿತು. ಬೆಳ್ಳುಳ್ಳಿಯ ಸಿಪ್ಪೆಗಳನ್ನು ಒಣಗಿಸಿ, ಅವುಗಳನ್ನು ಪುಡಿಮಾಡಿ ಮತ್ತು ಮೊಸರಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿದರೆ ಚರ್ಮ ಕಾಂತಿಯುಕ್ತ ವಾಗಿ ಕಾಣುತ್ತದೆ.

ಒಳ್ಳೆಯ ನಿದ್ರೆಗೆ ಸಹಕಾರಿ:

ಬೆಳ್ಳುಳ್ಳಿ ಸಿಪ್ಪೆಯಲ್ಲಿ ಇರುವ ಅಂಶವು ನೈಸರ್ಗಿಕವಾದ ನಿದ್ರೆಗೆ ಸಹಕಾರಿ ಯಾಗುವುದು. ರಾತ್ರಿ ಮಲಗುವ ಮೊದಲು ಯಾವುದೇ ಪಾನೀಯದಲ್ಲಿ ಬೆರೆಸಿ ಕುಡಿಯಿರಿ. ಇದರಿಂದ ಉತ್ತಮ ನಿದ್ರೆಗೆ ನೆರವಾಗುವುದು.

ಇದನ್ನು ಓದಿ: Health Tips: ರಾತ್ರಿ ಇಡೀ ಏಸಿಯಲ್ಲೇ ಮಲಗುತ್ತೀರಾ? ಇದನ್ನೊಮ್ಮೆ ಓದಿ

ಅಸ್ತಮಾ ರೋಗಿಗಳಿಗೆ ವರದಾನ:

ನಿಮಗೆ ಅಸ್ತಮಾ ಸಮಸ್ಯೆ ಇದ್ದರೆ ‌ ಬೆಳ್ಳುಳ್ಳಿ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿ ನಂತರ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ. ಬೆಳಿಗ್ಗೆ ಮತ್ತು ಸಂಜೆ ಮಿತಿಯಾದ ಪ್ರಮಾಣದಲ್ಲಿ ಸೇವಿಸಿ. ಇದರಿಂದ ಅಸ್ತಮಾಕ್ಕೆ ಮುಕ್ತಿ ದೊರೆಯುತ್ತದೆ.

ತಲೆ ಹೊಟ್ಟು ಅಥವಾ ಕೂದಲು ಉದುರುವಿಕೆಗೆ ಸಹಕಾರಿ:

ಬೆಳ್ಳುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ತಣಿಯಲು ಬಿಡಿ. ಬಳಿಕ ಆ ನೀರಿನಿಂದ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ತಲೆಹೊಟ್ಟು ನಿವಾರಣೆ ಆಗಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.

ಪಾದಗಳಲ್ಲಿ ಊತ ನಿವಾರಿಸಲು:

ಬೆಳ್ಳುಳ್ಳಿ ಸಿಪ್ಪೆಯಿಂದ ಪಾದಗಳ ಊತವೂ ಕಡಿಮೆಯಾಗುತ್ತದೆ. ಇದಕ್ಕಾಗಿ, ಬೆಳ್ಳುಳ್ಳಿಯ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ‌ ಅದನ್ನು ಸರಿಯಾಗಿ ಕುದಿಸಿ ಮತ್ತು ಅದರಲ್ಲಿ ಪಾದಗಳಿಗೆ ಬಿಸಿ ಶಾಖ ನೀಡಿದರೆ ಪಾದದ ಊತಕ್ಕೆ ಶೀಘ್ರ ಪರಿಹಾರ ಸಿಗಲಿದೆ.