Vishwavani Health: ಜಿರಳೆಗಳೆಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ಜೆನ್ ಝೀಗಳು?
Gen Z: ದೇಶಾದ್ಯಂತ ಗಮನ ಸೆಳೆದಿರುವ ಜೆನ್ ಝೀಗಳು ತಮ್ಮನ್ನು ತಾವು ಜಿರಳೆಗಳು ಎಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ? ಈ ಕುರಿತು ವಿಜ್ಞಾನ ಹೇಳುವುದೇನು? ಜಿರಳೆ ಯಾವುದನ್ನು ಪ್ರತಿನಿಧಿಸುತ್ತದೆ ಮತ್ತು ಅವುಗಳಿಂದ ಯಾವ ರೀತಿಯ ಅಪಾಯಗಳಿವೆ ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ವಿಶ್ವದ ಗಮನ ಸೆಳೆದಿರುವ ಜೆನ್ ಝೀಗಳು (Gen Z) ತಮ್ಮನ್ನು ತಾವು ಜಿರಳೆಗಳು ಎಂದು ಒಪ್ಪಿಕೊಂಡು ತಪ್ಪು ಮಾಡಿದರು. ಅವರು ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ತಕ್ಷಣವೇ ಆ ಪದವನ್ನು ಸ್ವೀಕರಿಸಿದರು ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನಲ್ನಲ್ಲಿ ನಿರೂಪಕಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಯಾರೋ ಹೇಳಿದರು ಎನ್ನುವ ಮಾತ್ರಕ್ಕೆ ಜೆನ್ ಝೀಗಳು ತಮ್ಮನ್ನು ತಾವು ತಕ್ಷಣವೇ ಜಿರಳೆಗಳು ಎಂದು ಒಪ್ಪಿಕೊಂಡರು. ಅವರನ್ನು ಈ ಹೆಸರನ್ನು ಸ್ವೀಕರಿಸುವ ಮೊದಲು ಅವುಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಜಿರಳೆಗಳು ವಾಸ ಮಾಡುವ ಸ್ಥಳ, ಅವುಗಳ ಮೂಲ, ಸಾಮರ್ಥ್ಯದ ಬಗ್ಗೆ ಅರಿತುಕೊಳ್ಳಬೇಕಿತ್ತು ಎಂದು ಅವರು ಹೇಳಿದರು.
ಡಾ. ಸುತ್ತೂರು ಮಾಲಿನಿ ಜತೆಗಿನ ಸಂದರ್ಶನ:
ಜಿರಳೆ ಎಂದು ತಮ್ಮನ್ನು ತಾವು ಕರೆಸಿಕೊಳ್ಳುವ ಬದಲು ಅವರು ಜೇನು ನೊಣಗಳು ಎಂದು ಇಟ್ಟುಕೊಳ್ಳುವುದು ಒಳ್ಳೆಯದು ಎಂದ ಅವರು, ಜಿರಳೆಗಳನ್ನು ಜೀವಂತ ಪಳೆಯುಳಿಕೆಗಳು ಎಂದು ಕರೆಯಲಾಗುತ್ತದೆ. ಯಾಕೆಂದರೆ ಅವುಗಳ ಹುಟ್ಟು ಡೈನೋಸಾರ್ಗಳಿಗಿಂತ ಮೊದಲಿನಿಂದಲೂ ಇತ್ತು. ಈ ನಿಟ್ಟಿನಲ್ಲಿ ಅವುಗಳ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಸಹಸ್ರಾರು ವರ್ಷಗಳು ಕಳೆದರೂ ಕೂಡ ಅವುಗಳು ಇನ್ನೂ ಭೂಮಿ ಮೇಲೆ ಇವೆ ಎಂದರು.
ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ
ಸುಮಾರು 4,500 ವಿಧದ ಜಿರಳೆಗಳು ಇವೆ. ಮನುಷ್ಯನ ಜತೆ ಇರುವುದು ಕೇವಲ 30 ಪ್ರಬೇಧಗಳು. ಒಂದು ಪ್ರಮಾಣದ ರೇಡಿಯೇಷನ್ ಅನ್ನು ಇದು ತಡೆದುಕೊಳ್ಳುತ್ತದೆ. ಆಹಾರ, ನೀರು ಇಲ್ಲದೆ ಕೆಲವು ಸಮಯ ಬದುಕುತ್ತದೆ. ಬಿಸಿ, ತಣ್ಣಗಿನ ಪರಿಸರದಲ್ಲಿ ಕೂಡ ಇವುಗಳು ಬದುಕಬಲ್ಲದು. ವಿಭಿನ್ನವಾದ ಪರಿಸರದಲ್ಲಿ ಅವುಗಳಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ನೆರವಾಗುವುದು ಅವುಗಳ ಆಂಟೆನಾ, ಕೂದಲುಗಳು ಎಂದು ಅವರು ತಿಳಿಸಿದರು.
ಜಿರಳೆಗಳು ಸಾಮಾನ್ಯವಾಗಿ ಕೊಳೆತಿರುವುದನ್ನು ತಿನ್ನುತ್ತದೆ. ಇವಗಳಿಂದ ವೈರಸ್, ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹರಡುತ್ತವೆ. ಟೈಫಾಯ್ಡ್ ಕಾಯಿಲೆಗಳು ಹರಡಲು ಮುಖ್ಯ ಕಾರಣವೆ ಜಿರಳೆಗಳು. ಜೇನು ನೊಣಗಳು ದೇಶ ಪ್ರೇಮವನ್ನು ಗುರುತಿಸುತ್ತದೆ. ಹೀಗಾಗಿ ನಮ್ಮ ಯುವ ಜನತೆ ಜೇನು ನೊಣಗಳ ಹೆಸರಿನಿಂದ ಗುರುತಿಸುವಂತಾಗಬೇಕು. ಇವುಗಳು ಸಿಹಿಯನ್ನು ಹಂಚುತ್ತದೆ. ಇವತ್ತು ಜಗತ್ತು ನಿಂತಿರುವುದೇ ಜೇನು ನೊಣಗಳಿಂದ. ಇವುಗಳು ಅಂತ್ಯವಾದರೆ ಮಾನವನ ಅಂತ್ಯವು ಆಗುತ್ತದೆ. ನಮ್ಮ ಯುವಜನತೆ ಇವುಗಳ ರೀತಿ ರಕ್ಷಣಾತ್ಮಕವಾಗಿ ಬದುಕಬೇಕು. ಹೋರಾಡುವುದನ್ನು ಕಲಿಯಬೇಕು ಎಂದರು.
ನಿಮ್ಮ ಹಿತ್ತಿಲಿನಲ್ಲಿ ಬೆಳೆಯುವ ನೀಲ ಶಂಖ ಪುಷ್ಪ ಬಳಸಿ ಆರೋಗ್ಯ, ಸೌಂದರ್ಯ ಹೆಚ್ಚಿಸಬಹುದು
ಪ್ರತಿಯೊಂದು ರೀತಿಯ ಪರಿಸರ ವ್ಯವಸ್ಥೆಯಲ್ಲಿ ಜಿರಳೆಗಳು ಬದುಕಲು ಮುಖ್ಯ ಕಾರಣ ಅವುಗಳ ಜೀನ್ಸ್ಗಳು. ಇವು ಅವುಗಳಿಗೆ ಕೀಟ ನಾಶಕಗಳಿಂದಲೂ ರಕ್ಷಣೆಯನ್ನು ಒದಗಿಸುತ್ತದೆ. ಪರಿಸರಕ್ಕೆ ತಕ್ಕಂತೆ ಬದಲಾಗುವ ದೇಹದಲ್ಲಿ ರಕ್ಷಣಾತ್ಮಕ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಅವರು ಹೇಳಿದರು.