Health Tips: ವಸಡಿನ ಸೋಂಕಿನಿಂದ ಪಾರಾಗಲು ಈ ಸರಳ ವಿಧಾನ ಫಾಲೋ ಮಾಡಿ
ಇತ್ತೀಚಿನ ದಿನಗಳಲ್ಲಿ ವಸಡಿನಲ್ಲಿ ರಕ್ತಸ್ರಾವ ಆಗುವುದು, ವಸಡು ಊದಿಕೊಳ್ಳುವುದು ಇಂತಹ ಅನೇಕ ಸಮಸ್ಯೆಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು? ಪರಿಹಾರ ಕ್ರಮಗಳು ಏನು ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ದಂತ ವೈದ್ಯೆ ಡಾ. ಇಬ್ಬನಿ ಪಿ.ಪಿ. ತಿಳಿಸಿಕೊಟ್ಟಿದ್ದಾರೆ. ವಸಡು ಮತ್ತು ಎಲುಬು ನಡುವೆ ಸೋಂಕು ಕಂಡುಬರುವುದು ವಸಡಿನ ಕಾಯಿಲೆ. ಇಂತಹ ಲಕ್ಷಣಗಳನ್ನು ಪತ್ತೆಯಾದ ಕೂಡಲೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 15: ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಅಂದರೆ ಆರೋಗ್ಯ ಚೆನ್ನಾಗಿದ್ದರೇ ಭಾಗ್ಯವಂತರು. ನಮ್ಮ ದೇಹದಲ್ಲಿ ಯಾವುರೇ ಆರೋಗ್ಯ ಸಮಸ್ಯೆ ಕಂಡುಬಂದರೂ ಅದರ ಲಕ್ಷಣಗಳನ್ನು ಬಾಯಿ ಮೂಲಕ ತಿಳಿಯಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಸಡಿನಲ್ಲಿ ರಕ್ತಸ್ರಾವ ಆಗುವುದು, ವಸಡು ಊದಿಕೊಳ್ಳುವುದು ಇಂತಹ ಅನೇಕ ಸಮಸ್ಯೆಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು? ಪರಿಹಾರ ಕ್ರಮಗಳು ಏನು ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ದಂತ ವೈದ್ಯೆ ಡಾ. ಇಬ್ಬನಿ ಪಿ.ಪಿ. ( Dr. Ibbani P.P.) ತಿಳಿಸಿ ಕೊಟ್ಟಿದ್ದಾರೆ. ವಸಡು ಮತ್ತು ಬೋನ್ ನಡುವೆ ಸೋಂಕು ಕಂಡುಬರುವುದೇ ವಸಡಿನ ಕಾಯಿಲೆ. ಇಂತಹ ಲಕ್ಷಣಗಳನ್ನು ಪತ್ತೆ ಹಚ್ಚಿದ ಕೂಡಲೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ವಸಡಿನ ಸೋಂಕು ಕಂಡು ಬಂದರೆ ಆರಂಭಿಕ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ನೋವಿನ ಅನುಭವವಾಗುತ್ತದೆ. ಬಳಿಕ ವಸಡು ಊದಿಕೊಳ್ಳುವುದು, ವಸಡಿನ ಭಾಗದಲ್ಲಿ ರಕ್ತಸ್ರಾವವಾಗುವುದು, ವಸಡಿನ ಭಾಗ ಕೆಂಪಗಾಗಾವುದು ಇಂತಹ ಲಕ್ಷಣಗಳು ಕಂಡುಬರುತ್ತದೆ. ಇದನ್ನು ನಾವು ನಿರ್ಲಕ್ಷ್ಯ ಮಾಡಿದರೆ ಹಲ್ಲಿನ ಎಲುಬು ತನಕ ಹೋಗಿ ಬೋನ್ ಇನ್‌ಫೆಕ್ಷನ್ ಕೂಡ ಆಗಬಹುದು. ಹಾಗಾಗಿ ಇದು ಕಂಡು ಬರುವ ಮೂಲ ಕಾರಣಗಳನ್ನು ಅರಿತರೆ ಬರುವುದನ್ನು ತಡೆಗಟ್ಟಬಹುದು ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಡಿಯೊ ನೋಡಿ:
ಕಾರಣಗಳು ಏನು?
- ವಸಡಿನ ಸಮಸ್ಯೆ ಕಂಡು ಬರಲು ಹಲ್ಲಿನ ಬ್ಯಾಕ್ಟಿರಿಯಾ, ಕೀಟಾಣು ಮುಖ್ಯ ಕಾರಣ. ಬ್ರಶ್ ಸರಿಯಾಗಿ ಮಾಡದಿದ್ದರೆ ಮತ್ತು ದಿನಕ್ಕೆ ಎರಡು ಬಾರಿ ಬ್ರಶ್ ಮಾಡದಿರುವವರಲ್ಲಿ ಇಂತಹ ಸಮಸ್ಯೆ ಕಂಡು ಬರುತ್ತದೆ.
- ವಸಡಿನ ಇನ್‌ಫೆಕ್ಷನ್ ಸಮಸ್ಯೆ ಹೆಚ್ಚಾದಾಗ ಅದು ಎಲುಬಿಗೆ ಹರಡಿದರೆ ಅಂತಹ ಸಮಸ್ಯೆಯನ್ನು ಪೆರಾಡಾಟೈಸಿಸ್ ಎನ್ನುತ್ತಾರೆ. ಪೆರಾಡಾಟೈಸಿಸ್‌ನಲ್ಲಿ ಎಲುಬಿನ ಶಕ್ತಿ ಕ್ಷೀಣಿಸುತ್ತದೆ. ಹೀಗಾಗಿ ಹಲ್ಲು ಅಲ್ಲಾಡುತ್ತದೆ. ಕೊನೆಗೊಂದು ದಿನ ಆ ಹಲ್ಲು ಉದುರಿ ಹೋಗುತ್ತದೆ.
- ಡಯಾಬಿಟಿಸ್ ಕಾರಣದಿಂದಲೂ ವಸಡಿನ ಸೋಂಕು ಬರುತ್ತದೆ.
- ಅನುವಂಶಿಕತೆಯೂ ವಸಡಿನ ಸೋಂಕಿಗೆ ಕಾರಣವಾಗಲಿದೆ.
- ಧೂಮಪಾನ ಮಾಡುವುಡು, ಪಾನ್ ತಿನ್ನುವುದರಿಂದಲೂ ವಸಡಿನ ಸೋಂಕು ಕಂಡು ಬರುತ್ತದೆ.
ಬಾಯಿ ದುರ್ವಾಸನೆ ಬರುತ್ತಿದೆಯೇ? ಈ ಟಿಪ್ಸ್ ಅನುಸರಿಸಿ!
ಚಿಕಿತ್ಸಾ ವಿಧಾನ ಏನು?
ವಸಡಿನ ಸಮಸ್ಯೆ ಕಂಡುಬಂದಾಗ ಅದಕ್ಕೆ ನಿರ್ದಿಷ್ಟವಾದ ಚಿಕಿತ್ಸಾ ವಿಧಾನ ಇದೆ. ಸಣ್ಣ ಮಟ್ಟದಲ್ಲಿ ವಸಡಿನ ಸಮಸ್ಯೆ ಕಂಡು ಬಂದರೆ ಹಲ್ಲು ಕ್ಲೀನ್ ಮಾಡಿ ಬಳಿಕ ಎರಡು ಹೊತ್ತು ಬ್ರಶ್ ಮಾಡುವುದನ್ನು ಮುಂದುವರಿಸಬೇಕು. ಮೌತ್ ವಾಶ್ ಬಳಸಬೇಕು ಇವುಗಳೆಲ್ಲ ಸರಳ ಪರಿಹಾರ ಕ್ರಮಗಳಾಗಿವೆ. ಆದರೆ ವಸಡಿನ ಇನ್‌ಫೆಕ್ಷನ್ ಅಡ್ವಾನ್ಸ್ ಸ್ಟೇಜ್ ತಲುಪಿದರೆ ನಾನ್ ಸರ್ಜಿಕಲ್ ಮೆಥಡ್‌ನಲ್ಲಿ ಸ್ಕೇಲಿಂಗ್ ಮತ್ತು ರೂಟ್ ಕ್ಲೀನಿಂಗ್ ಎಂದು ಮಾಡುತ್ತಾರೆ. ಕ್ಯೂರೊಟಾಜ್ ಪ್ರೊಸೆಸ್‌ನಲ್ಲಿ ಹಲ್ಲಿನ ಗಮ್ ಕ್ಲೀನ್ ಮಾಡುತ್ತಾರೆ. ಸರ್ಜಿಕಲ್ ಮೆಥಡ್‌ನಲ್ಲಿ ಫ್ಲಾಕ್ ಸರ್ಜರಿ ಇರಲಿದ್ದು ಅದರಲ್ಲಿ ವಸಡನ್ನು ತೆಗೆದು ಅದರ ಬ್ಯಾಕ್ಟೀರಿಯಾ ತೆಗೆದು ಬಳಿಕ ಹೊಲಿಗೆ ಹಾಕಲಾಗುತ್ತದೆ.
ಬರದಂತೆ ತಡೆಯುವುದು ಹೇಗೆ?
- ದಿನಕ್ಕೆ ಎರಡು ಸಲ ಬ್ರಶ್ ಮಾಡಬೇಕು.
- ಧೂಮಪಾನ ಮಾಡುವ ಹವ್ಯಾಸ ಇದ್ದವರು ಅದನ್ನು ಸಾಧ್ಯವಾದಷ್ಟು ಬಿಡಬೇಕು.
- ಡಯಾಬಿಟಿಸ್ ಇದ್ದವರು ಅದನ್ನು ಕೂಡ ಕಂಟ್ರೋಲ್ ಇಡಬೇಕು.
- ಆಗಾಗ ಮೌತ್ ವಾಶ್ ಮಾಡುವುದನ್ನು ಮರೆಯಬಾರದು.
ಒಮ್ಮೆ ಚಿಕಿತ್ಸೆ ಪಡೆದ ಬಳಿಕ ಪ್ರತೀ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿಗೆ ಬಂದು ಪರೀಕ್ಷೆ ಮಾಡಿಸುತ್ತಿರಬೇಕು. ಇಲ್ಲವಾದರೆ ಈ ವಸಡಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವಸಡಿನ ಕಾಯಿಲೆ ಉಂಟಾಗಲು ನಿರ್ದಿಷ್ಟ ವಯಸ್ಸು ಎಂದಿಲ್ಲ. ಎಲ್ಲ ವಯಸ್ಸಿನವರಿಗೂ ಈ ಸಮಸ್ಯೆ ಕಂಡು ಬರುತ್ತದೆ. ಹೀಗಾಗಿ ಈ ಬಗ್ಗೆ ಮೊದಲೆ ಎಚ್ಚೆತ್ತುಕೊಳ್ಳಬೇಕು ಎಂದು ಇಬ್ಬನಿ ಸಲಹೆ ನೀಡಿದ್ದಾರೆ.