ಔಷಧ ಇಲ್ಲದೆ ನೀರಿನಿಂದಲೇ ರೋಗ ವಾಸಿ ಮಾಡಬಹುದಾ? ತಜ್ಞರು ಈ ಬಗ್ಗೆ ಹೇಳೋದೇನು?
Health Tips: ನೀರಿನ ಸೇವನೆಯು ಜೀರ್ಣಕ್ರಿಯೆ, ಪೋಷಕಾಂಶಗಳ ಅಭಿವೃದ್ಧಿ ಮತ್ತು ರಕ್ತ ಪರಿಚಲನೆ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳನ್ನು ಬೆಂಬಲಿಸುವಂತೆ ಮಾಡುತ್ತದೆ. ಹಾಗಾದರೆ ನೀರನ್ನು ಯಾವ ಪ್ರಮಾಣದಲ್ಲಿ ಕುಡಿಯಬೇಕು? ನೀರು ಕುಡಿಯುವುದರಿಂದ ಯಾವೆಲ್ಲ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು? ಎನ್ನುವುದರ ಕುರಿತು ಡಯಟಿಷಿಯನ್ ಅನಿತಾ ಮಾಹಿತಿ ನೀಡಿದ್ದಾರೆ.
ಡಯಟಿಷಿಯನ್ ಅನಿತಾ. -
ಬೆಂಗಳೂರು, ಫೆ. 25: ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಒಂದು ಸಂಜೀವಿನಿ ಎಂದರೆ ಅದು ನೀರು. ಸರಿಯಾದ ಆರೋಗ್ಯಕ್ಕೆ ಹೆಚ್ಚು ನೀರು ಕುಡಿಯಬೇಕು ಎನ್ನುತ್ತಾರೆ (Drinking Water) ತಜ್ಞರು. ನೀರಿನ ಸೇವನೆಯೂ ಜೀರ್ಣಕ್ರಿಯೆ, ಪೋಷಕಾಂಶಗಳ ಅಭಿವೃದ್ಧಿ, ಮತ್ತು ರಕ್ತ ಪರಿಚಲನೆ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳನ್ನು ಸರಾಗಗೊಳಿಸುತ್ತದೆ. ಹಾಗಾದರೆ ನೀರನ್ನು ಯಾವ ಪ್ರಮಾಣದಲ್ಲಿ ಕುಡಿಯಬೇಕು? ನೀರು ಕುಡಿಯುವುದರಿಂದ ಯಾವೆಲ್ಲ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು? ಎನ್ನುವುದರ ಕುರಿತು ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಡಯಟಿಷಿಯನ್ ಅನಿತಾ ಮಾಹಿತಿ ನೀಡಿದ್ದಾರೆ.
ಚಿಕಿತ್ಸೆಗಾಗಿ ತೆರಳಿದಾಗ ಹೆಚ್ಚಿನ ವೈದ್ಯರು ಮೊದಲು ಪ್ರಶ್ನೆ ಮಾಡುವುದೇ ನೀರಿನ ಸೇವನೆಯ ಬಗ್ಗೆ. ಹಾಗಾಗಿ ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 8-10 ಲೋಟ ಅಂದ್ರೆ ಸುಮಾರು 2-3 ಲೀಟರ್ ನೀರು ಕುಡಿಯುವುದು ಅಗತ್ಯ. ಇನ್ನು ಮನುಷ್ಯನ ತೂಕ ಮತ್ತು ದಿನ ನಿತ್ಯದ ಕೆಲಸ, ಆ್ಯಕ್ಟಿವಿಟಿಗೆ ಅನುಗುಣವಾಗಿ ನೀರಿನ ಅಗತ್ಯ ನಿಮ್ಮ ದೇಹಕ್ಕೆ ಎಷ್ಟು ಬೇಕಾಗಬಹುದು ಎಂದು ಅಂದಾಜಿಸಲಾಗುತ್ತದೆ. ಆದರೆ ಅತಿಯಾದ ಬಿಸಿ ನೀರು ಅಥವಾ ಫ್ರಿಡ್ಜ್‌ನಲ್ಲಿಟ್ಟ ನೀರಿನ ಸೇವನೆ ಒಳ್ಳೆಯದಲ್ಲ. ಇದರಿಂದ ಹೈಡ್ರೇಷನ್ ಕಡಿಮೆಯಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.
ವಿಡಿಯೊ ನೋಡಿ:
ನೀರನ್ನು ಕುಡಿಯುವಾಗ ಕೂಡ ಸರಿಯಾದ ವಿಧಾನ ಅಳವಡಿಸಬೇಕಾಗುತ್ತದೆ. ಹೆಚ್ಚು ಅವಸರ ಪಡದೇ ನಿಧಾನವಾಗಿ ನೀರನ್ನು ಕುಡಿಯಬೇಕು. ಇದರಿಂದ ನೀರಿನ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳಲು ಮತ್ತು ಜೀರ್ಣಕಾರಿಗೆ ಸಹಾಯ ಮಾಡುತ್ತದೆ. ನಮ್ಮ ಮೂತ್ರಪಿಂಡಗಳಲ್ಲಿ ವಿಷಕಾರಿ ಅಂಶಗಳನ್ನು ಫಿಲ್ಟರ್ ಮಾಡಲು ಕೂಡ ಕುಳಿತು ನೀರು ಕುಡಿಯುವುದು ಉತ್ತಮ. ಅದೇ ರೀತಿ ಊಟದ ಮೊದಲು ಅಥವಾ ನಂತರ ಯಾವ ಸಮಯದಲ್ಲಿ ನೀರು ಕುಡಿದರೆ ಉತ್ತಮ ಎನ್ನುವ ಪ್ರಶ್ನೆ ಹಲವರಲ್ಲಿದೆ. ಊಟದ ಜತೆಗೆ ನೀರು ಕುಡಿಯುವುದನ್ನು ಕಡಿಮೆ ಮಾಡಿ. ಊಟಕ್ಕೆ 30 ನಿಮಿಷಗಳ ಮೊದಲು ಅಥವಾ 1-2 ಗಂಟೆಗಳ ನಂತರ ನೀರು ಕುಡಿಯುವುದು ಒಳ್ಳೆಯದು.
ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ?
ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಡಿ ಹೈಡ್ರೇಷನ್ ಆಗಿ ಸೋಂಕು ಕೂಡ ಆಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನೀರನ್ನು ಕಡ್ಡಾಯವಾಗಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರವಾಗಬೇಕು ಎಂದರೆ ನಾವು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ದೇಹಕ್ಕೆ ಒಳಿತು ಎಂದು ಅನಿತಾ ಸಲಹೆ ನೀಡಿದ್ದಾರೆ.