ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr. Suttar Malini: ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆ? ಅತ್ಯಂತ ಸುಲಭ ಮಾರ್ಗದ ಮಾಹಿತಿ ಇಲ್ಲಿದೆ

Vishwavani Health: ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಪ್ರಾಣಿಗಳಿಗೆ ಜೀವನದಲ್ಲಿ ಯಾವುದೇ ಉದ್ದೇಶವಿರುವುದಿಲ್ಲ. ಆದರೆ ಮನುಷ್ಯನಾದವನಿಗೆ ಬದುಕಿನಲ್ಲಿ ಒಂದು ಉದ್ದೇಶ ಇಟ್ಟುಕೊಳ್ಳುವ ಅವಕಾಶವಿದೆ. ಆದರೂ ಕೆಲವರು ಯಾವುದೇ ಉದ್ದೇಶವನ್ನು ಇಟ್ಟುಕೊಳ್ಳದೆ ಪ್ರಾಣಿಗಳಂತೆ ಬದುಕುತ್ತಾರೆ ಎಂದು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ಅವರು ಹೇಳಿದರು.

ಜೀವನದಲ್ಲಿ ಗುರಿ ಅಥವಾ ಗುರು ಇರಲೇಬೇಕು ಯಾಕೆ?

ಡಾ. ಸುತ್ತೂರು ಮಾಲಿನಿ -

ಬೆಂಗಳೂರು: ಮನುಷ್ಯನಾದವನಿಗೆ ಜೀವನದಲ್ಲಿ ಒಂದು ಉದ್ದೇಶವಿರಲೇಬೇಕು. ಉದ್ದೇಶವಿಲ್ಲದೆ ಬದುಕುವವನು ಪ್ರಾಣಿಗೆ ಸಮಾನವಾಗಿದ್ದಾನೆ ಎಂದು ಮೈಸೂರು ವಿಶ್ವವಿದ್ಯಾಲಯದ (University of Mysore) ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿ, ಜಪಾನಿನ ಇಕಿಗಾಯ್ ಇದನ್ನೇ ಹೇಳುತ್ತದೆ ಎಂದು ತಿಳಿಸಿದರು.

ಪ್ರಾಣಿಗಳ ಜೀವನದಲ್ಲಿ ಯಾವುದೇ ಉದ್ದೇಶವಿರುವುದಿಲ್ಲ. ಅವುಗಳು ಕೇವಲ ಆಹಾರ, ಮಿಥುನ ಕ್ರಿಯೆಗಾಗಿ ಹೋರಾಡುತ್ತವೆ. ಆದರೆ ಮನುಷ್ಯ ಮಾತ್ರ ಒಂದು ಉದ್ದೇಶವನ್ನು ಇಟ್ಟುಕೊಂಡು ಬಾಳಬೇಕು. ಇದಕ್ಕಾಗಿ ಬಾಲ್ಯದಿಂದಲೇ ಮಕ್ಕಳ ಎಲ್ಲ ಆಸೆಗಳನ್ನು ನಾವು ಈಡೇರಿಸಬಾರದು. ಅವರಿಗೆ ಸರಿಯಾದ ಗುರಿ ಮತ್ತು ಗುರುವನ್ನು ತೋರಿಸಬೇಕು ಎಂದು ತಿಳಿಸಿದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ವಿಶ್ವವಾಣಿ ಸಂದರ್ಶನ:



ಜೀವನದಲ್ಲಿ ಒಂದು ಉದ್ದೇಶ ಇಟ್ಟುಕೊಳ್ಳಬೇಕು ಎನ್ನುವುದನ್ನು ಜಪಾನ್‌ನಲ್ಲಿ ಇಕಿಗಾಯ್ ಎನ್ನಲಾಗುತ್ತದೆ. ಇಕಿಗಾಯ್ ಎಂದರೆ ಜಪಾನಿನ ಭಾಷೆಯಲ್ಲಿ "ಬದುಕಲು ಒಂದು ಕಾರಣ" ಅಥವಾ "ಪ್ರತಿದಿನ ಬೆಳಗ್ಗೆ ಹಾಸಿಗೆಯಿಂದ ಉತ್ಸಾಹದಿಂದ ಏಳುವಂತೆ ಮಾಡುವ ಉದ್ದೇಶʼʼ ಎಂದು ಅವರು ಹೇಳಿದರು.

ಜಪದ ಮಹತ್ವ; ವಿಜ್ಞಾನ ಹೇಳುವುದೇನು?

ನಮ್ಮ ಪ್ರತಿಯೊಬ್ಬ ದಾರ್ಶನಿಕರು ಹೇಳಿರುವುದು ಕೂಡ ಇದನ್ನೇ. ಜೀವನದಲ್ಲಿ ಗುರಿ ಅಥವಾ ಗುರು ಇರಲೇಬೇಕು. ಮನುಷ್ಯರಲ್ಲಿ ಕೂಡ ಅನೇಕರು ಪ್ರಾಣಿಗಳ ರೀತಿಯೇ ಬದುಕುತ್ತಾರೆ. ಇನ್ನು ಕೆಲವರು ಮೂಲ ಉದ್ದೇಶವನ್ನು ಮರೆತು ಬದುಕುತ್ತಾರೆ. ರಾಜಕೀಯದಲ್ಲಿ ಕೆಲವರು ಎಂಎಲ್ ಎ, ಸಿಎಂ ಆಗಬೇಕು ಎಂದು ಗುರಿ ಇಟ್ಟುಕೊಳ್ಳುತ್ತಾರೆ. ಆದರೆ ಅವರ ನಿಜವಾದ ಉದ್ದೇಶ ಜನ ಸೇವೆ ಆಗಿರಬೇಕಾಗುತ್ತದೆ ಎಂದರು.

ಉತ್ತಮ ರೀತಿಯಲ್ಲಿ ಜೀವನ ನಡೆಸ ಆಯ್ಕೆ ಮನುಷ್ಯನಾದವನು ಮಾತ್ರ ಮಾಡಲು ಸಾಧ್ಯ ಎಂದ ಅವರು, ರೈತನಿಗೆ ಮಣ್ಣಿನ ಮೇಲೆ ಅಪಾರವಾದ ಪ್ರೀತಿ ಇರುತ್ತದೆ. ಆತನ ಉದ್ದೇಶವೇ ಭೂಮಿ ತಾಯಿಯ ಸೇವೆ. ಜೊತೆಗೆ ಬೆಳೆ ಬೆಳೆಯುವ ಮೂಲಕ ಆತ ಸಮಾಜಕ್ಕೆ ಸೇವೆ ನೀಡುತ್ತಾನೆ. ಇನ್ನು ಜನರಿಗೆ ಒಳ್ಳೆಯ ವಿಚಾರವನ್ನು ತಿಳಿಸುವುದು ಕೂಡ ಸೇವೆಯೇ ಆಗಿದೆ. ಜೀವನದಲ್ಲಿ ನಾವು ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಅದನ್ನು ಸಮಾಜಕ್ಕೆ ಅರ್ಪಣೆ ಮಾಡಿ ಹೋಗಬೇಕು ಇದನ್ನೇ ಇಕಿಗಾಯ್ ಹೇಳುತ್ತದೆ ಎಂದು ತಿಳಿಸಿದರು.

ದಾಂಡಿಯಾ ಆಡಲು ರೆಡಿಯಾಗಿದ್ದೀರಾ...? ಹಾಗಿದ್ದರೆ ಪಾಲಿಸಿ ಈ ನಿಯಮ

ಜೀವನದಲ್ಲಿ ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಬದುಕಿದರೆ ಹುರುಪು ಇರುತ್ತದೆ. ಉದ್ದೇಶ ಇದ್ದಾಗ ಶಕ್ತಿ ಹೆಚ್ಚಾಗುತ್ತದೆ, ವಿಶ್ವಾಸ ಬೆಳೆಯುತ್ತದೆ. ಜೀವನದಲ್ಲಿ ಶಿಸ್ತು ಹಾಕಿಕೊಂಡು ನಾವು ಅದಕ್ಕಾಗಿ ತಯಾರಿ ಮಾಡಿಕೊಳ್ಳತೊಡಗುತ್ತೇವೆ ಎಂದು ಅವರು ವಿವರಿಸಿದರು.