BOB Recruitment 2026: ಪದವೀಧರರೇ ಗಮನಿಸಿ; ಬ್ಯಾಂಕ್ ಆಫ್ ಬರೋಡದಲ್ಲಿದೆ 104 ಹುದ್ದೆ
Bank of Baroda Jobs: ಬ್ಯಾಂಕ್ ಆಫ್ ಬರೋಡ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 104 ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಏಪ್ರಿಲ್ 16.
ಮೆಟಾ ಎಐ ಚಿತ್ರ -
ದೆಹಲಿ, ಮಾ. 30: ಬ್ಯಾಂಕ್ ಆಫ್ ಬರೋಡ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BOB Recruitment 2026). ಎವಿಪಿ, ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ಒಟ್ಟು 104 ಹುದ್ದೆಗಳಿವೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆ ತಿಳಿಸಿದೆ (Bank Jobs). ಉದ್ಯೋಗ ಸ್ಥಳ: ದೇಶಾದ್ಯಂತ (Job Guide). ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಏಪ್ರಿಲ್ 16.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಎವಿಪಿ-II (ಗ್ರೂಪ್ ಹೆಡ್)-4, ಎವಿಪಿ-II (ಟೆರಿಟರಿ ಹೆಡ್)-17, ಡೆಪ್ಯುಟಿ ಮ್ಯಾನೇಜರ್-70 ಮತ್ತು ಡೆಪ್ಯುಟಿ ಮ್ಯಾನೇಜರ್ (ವೆಲ್ತ್ ಸ್ಟ್ರಾಟಜಿಸ್ಟ್)-13 ಹುದ್ದೆಗಳಿವೆ. ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಜತೆಗೆ 3ರಿಂದ 10 ವರ್ಷಗಳ ಕಾರ್ಯಾನುಭವ ಕಡ್ಡಾಯ.
ವಯೋಮಿತಿ
ಎವಿಪಿ-II (ಗ್ರೂಪ್ ಹೆಡ್) ಹುದ್ದೆಗೆ ಕನಿಷ್ಠ ವಯಸ್ಸು 31 ವರ್ಷ, ಗರಿಷ್ಠ ವಯಸ್ಸು 45 ವರ್ಷ, ಎವಿಪಿ-II (ಟೆರಿಟರಿ ಹೆಡ್) ಹುದ್ದೆಗೆ ಕನಿಷ್ಠ ವಯಸ್ಸು 27 ವರ್ಷ, ಗರಿಷ್ಠ ವಯಸ್ಸು 35 ವರ್ಷ, ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಕನಿಷ್ಠ ವಯಸ್ಸು 24 ವರ್ಷ, ಗರಿಷ್ಠ ವಯಸ್ಸು 35 ವರ್ಷ ಮತ್ತು ಡೆಪ್ಯುಟಿ ಮ್ಯಾನೇಜರ್ (ವೆಲ್ತ್ ಸ್ಟ್ರಾಟಜಿಸ್ಟ್) ಹುದ್ದೆಗೆ ಕನಿಷ್ಠ ವಯಸ್ಸು 24 ವರ್ಷ, ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.
ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; 81 ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳು 175 ರುಪಾಯಿ ಮತ್ತು ಸಾಮಾನ್ಯ/ಇಡಬ್ಲ್ಯುಎಸ್/ಒಬಿಎಸ್ ಅಭ್ಯರ್ಥಿಗಳು 850 ರುಪಾಯಿ ಆನ್‌ಲೈನ್ ಮೂಲಕ ಪಾವತಿಸಬೇಕು.
BOB Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರವಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://bankappsweb.bankofbaroda.bank.in/BOBRECRUITMENT_MAR_WMS26/) - ಹೆಸರು ನೋಂದಾಯಿಸಿ.
- ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ವಿಳಾಸ: bankofbaroda.inಗೆ ಭೇಟಿ ನೀಡಿ.
ಉದ್ಯೋಗ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.