ʻಒಂದು ವರ್ಷ ಪಾಲೋ ಮಾಡಿದೆʼ: ವಿರಾಟ್ ಕೊಹ್ಲಿ ಲೈಫ್ ಸ್ಟೈಲ್ ಬಗ್ಗೆ ಸಂಜು ಸ್ಯಾಮ್ಸನ್ ಹೇಳಿಕೆ!
ವಿರಾಟ್ ಕೊಹ್ಲಿಯ ಜೀವನ ಶೈಲಿಯ ಬಗ್ಗೆ ಭಾರತ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಸಲಹೆಯಂತೆ ಒಂದೂವರೆ ವರ್ಷ ಅವರ ಜೀವನ ಕ್ರಮವನ್ನು ನಾನು ಪಾಲಿಸಿದೆ, ಆದರೆ ತದ ನಂತರ ಅನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ಲೈಫ್‌ಸ್ಟೈಲ್ ಬಗ್ಗೆ ಮಾತನಾಡಿದ ಸಂಜು ಸ್ಯಾಮ್ಸನ್. -
ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಇಂದಿಗೂ ವಿಶ್ವ ಕ್ರಿಕೆಟ್‌ನಲ್ಲಿ ಆಟಗಾರರಿಗೆ ಮಾದರಿಯಾಗಿದ್ದಾರೆ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ ಅವರು ಕೇವಲ ಬ್ಯಾಟಿಂಗ್ ಶೈಲಿಯನ್ನಷ್ಟೇ ಅಲ್ಲ, ಆಟಗಾರರು ತಮ್ಮ ಜೀವನಶೈಲಿ ಮತ್ತು ಫಿಟ್ನೆಸ್‌ನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದಕ್ಕೂ ಹೊಸ ಮಾನದಂಡವನ್ನು ನಿರ್ಮಿಸಿದರು. ಗ್ಲೂಟನ್‌ರಹಿತ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಹಿಡಿದು ಜಿಮ್‌ನಲ್ಲಿ ಗಂಟೆಗಟ್ಟಲೆ ಕಠಿಣ ಅಭ್ಯಾಸ ನಡೆಸುವವರೆಗೆ, ಕೊಹ್ಲಿ ಕ್ರಿಕೆಟ್‌ನಲ್ಲಿ ಫಿಟ್ನೆಸ್‌ಗೆ ಹೊಸ ಆಯಾಮವನ್ನು ತಂದುಕೊಟ್ಟಿದ್ದರು. ಅದೇ ರೀತಿ ವಿರಾಟ್ ಕೊಹ್ಲಿಯ ಲೈಫ್ ಸ್ಟೈಲ್ ಅನ್ನು ಫಾಲೋ ಮಾಡಿದ ಬಗ್ಗೆ ಸಂಜು ಸ್ಯಾಮ್ಸನ್ (Sanju Samson) ಮಾಹಿತಿ ಹಂಚಿಕೊಂಡಿದ್ದಾರೆ.
ಇದೀಗ ಭಾರತ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ ಅವರೊಂದಿಗಿನ ಆಸಕ್ತಿದಾಯಕ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಒಮ್ಮೆ ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಲು ವಿರಾಟ್ ಕೊಹ್ಲಿ ಅವರಿಂದ ಸಲಹೆ ಪಡೆದಿದ್ದರೂ, ಆ ಕಟ್ಟುನಿಟ್ಟಿನ ದಿನಚರಿಯನ್ನು ಸುಮಾರು ಒಂದು ವರ್ಷ ಮಾತ್ರ ಅನುಸರಿಸಲು ಸಾಧ್ಯವಾಯಿತು. ನಂತರ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
PAK vs WI: ರನ್ ನೀಡದೆ 5 ವಿಕೆಟ್ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್ಟಿನ್ ಗ್ರೀವ್ಸ್!
ಜಿಯೊಸ್ಟಾರ್ ಜೊತೆಗೆ ಮಾತನಾಡಿದ ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ ಜಿಮ್‌ನಲ್ಲಿ ತೋರುವ ಶಿಸ್ತು ಮತ್ತು ಸಮರ್ಪಣೆಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಗತ್ಯವಾದ ಆಹಾರ ಪದ್ಧತಿ ಹಾಗೂ ದಿನಚರಿಯನ್ನು ಹೇಗೆ ಪಾಲಿಸಬೇಕು ಎಂಬ ಕುರಿತು ಕೊಹ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದ ಸಲಹೆಗಳನ್ನು ಅವರು ನೆನಪಿಸಿಕೊಂಡರು. ಕೊಹ್ಲಿ ನೀಡಿದ ಸಲಹೆಗಳನ್ನು ತಾವು ಕೆಲಕಾಲ ಅನುಸರಿಸಿದ್ದಾಗಿ ಹೇಳಿದ ಸಂಜು, ಆದರೆ ಸುಮಾರು ಒಂದು ವರ್ಷದ ಬಳಿಕ ಆ ಕಟ್ಟುನಿಟ್ಟಿನ ದಿನಚರಿಯನ್ನು ಮುಂದುವರಿಸಲು ಸಾಧ್ಯವಾಗದೆ ಅದರಿಂದ ದೂರವಾದೆ ಎಂದು ಒಪ್ಪಿಕೊಂಡಿದ್ದಾರೆ.
🚨 SANJU SAMSON OPENS UP ON WHY HE COULDN'T FOLLOW VIRAT KOHLI'S LIFESTYLE! 💪🏏 🚨
— Crush Cric (@CrushCricx) July 28, 2026
🗣️ Sanju Samson revealed that he once asked Virat Kohli for advice on becoming a better international cricketer. Virat didn't just talk about batting or fitness—he explained that success comes… pic.twitter.com/GhO5Brc34h
"ವಿರಾಟ್ ಭಾಯ್ ಹೇಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ತುಂಬಾ ಸ್ಪಷ್ಟವಾಗಿ ಮತ್ತು ನೇರವಾಗಿ ಮಾತನಾಡುವ ವ್ಯಕ್ತಿ. ನೀವು ಏನನ್ನಾದರೂ ಸಾಧಿಸಬೇಕಾದರೆ ಅದಕ್ಕೆ ಏನು ಮಾಡಬೇಕು ಎಂಬುದನ್ನು ಅವರು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುತ್ತಾರೆ. ಜಿಮ್‌ನಲ್ಲಿ ಅವರು ಅಭ್ಯಾಸ ಮಾಡುವ ರೀತಿ ನೋಡಿದರೆ ಅವರೊಳಗಿನ ವಿಭಿನ್ನ ವ್ಯಕ್ತಿತ್ವ ಕಾಣಿಸುತ್ತದೆ. ಅವರ ಆ ಗುಣ ನನಗೆ ತುಂಬಾ ಇಷ್ಟ. ಭಾರತ ತಂಡದ ಕ್ಯಾಂಪ್ ವೇಳೆ ನಾವು ಇಬ್ಬರೂ ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದೆವು. ಆಗ ನಾನು, 'ಪಾಜಿ, ನಾನು ಏನು ಮಾಡಬೇಕು? ನನಗೂ ಸ್ವಲ್ಪ ಸಲಹೆ ನೀಡಿ' ಎಂದು ಕೇಳಿದ್ದೆ," ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತದ ಪ್ಲೇಯಿಂಗ್ XI ಆರಿಸಿದ ವಸೀಮ್ ಜಾಫರ್!
"ಜೀವನಶೈಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎಂದು ವಿರಾಟ್ ಭಾಯ್ ನನಗೆ ಹೇಳಿದರು. ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಬೇಕಾದರೆ ವಿಭಿನ್ನ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಮ್ಮ ಕ್ರಿಕೆಟ್ ಪಯಣದಲ್ಲಿ ತಮಗೆ ಯಾವುದು ಪ್ರಯೋಜನಕಾರಿಯಾಯಿತು ಎಂಬುದನ್ನು ವಿವರಿಸಿ, 'ಈ ಆಹಾರ ನಿನ್ನ ಬಾಡಿ ರಿಕವರಿಗೆ ಸಹಾಯ ಮಾಡುತ್ತದೆ, ಇದು ಮಾಡುವುದಿಲ್ಲ. ಮುಂದಿನ 10 ವರ್ಷಗಳ ಕಾಲ ಇದೇ ಶಿಸ್ತನ್ನು ಕಾಪಾಡಿಕೊಂಡರೆ ನಿನ್ನ ಮುಂದೆ ಅತ್ಯುತ್ತಮ ವೃತ್ತಿಜೀವನವಿರುತ್ತದೆ ಎಂದಿದ್ದರು. ನಾನು ಸುಮಾರು ಒಂದೂವರೆ ವರ್ಷ ಅವರ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿದೆ. ಆದರೆ ಅದರ ನಂತರ ಆ ಕಟ್ಟುನಿಟ್ಟಿನ ಜೀವನಶೈಲಿಯನ್ನು ಅದೇ ರೀತಿಯಲ್ಲಿ ಮುಂದುವರಿಸಲು ನನಗೆ ಸಾಧ್ಯವಾಗಲಿಲ್ಲ," ಎಂದು ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.