ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SBI Recruitment 2025: ಎಸ್‌ಬಿಐ ಹುದ್ದೆಗೆ ನೇಮಕ ಹೇಗೆ? ಈ ಸಲದ ಪರೀಕ್ಷೆಯಲ್ಲಿ ಆದ ಮುಖ್ಯ ಬದಲಾವಣೆಗಳೇನು?

Bank Jobs: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 541 ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಈ ಬಾರಿ ಪರೀಕ್ಷೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಅದೇನು ಎನ್ನುವುದನ್ನು ತಿಳಿಯಲು ಈ ಲೇಖನ ಓದಿ.

ಎಸ್‌ಬಿಐ ಹುದ್ದೆಗೆ ನೇಮಕ: ಈ ಸಲದ ಪರೀಕ್ಷೆಯಲ್ಲಿ ಮುಖ್ಯ ಬದಲಾವಣೆಗಳೇನು?

ಸಾಂದರ್ಭಿಕ ಚಿತ್ರ.

Profile Ramesh B Jul 7, 2025 3:22 PM

-ಆರ್‌.ಕೆ.ಬಾಲಚಂದ್ರ

ಬೆಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ (State Bank of India) ದೇಶಾದ್ಯಂತ ಖಾಲಿ ಇರುವ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ (Probationary Officer) ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 541 ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು (SBI Recruitment 2025). ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಜು. 14. ಗಮನಿಸಿ, ಈ ಬಾರಿಯ ಪರೀಕ್ಷೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಅದೇನು ಎನ್ನುವ ವಿವರ:

ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಯಲ್ಲಿ ಪೂರ್ವಭಾವಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿರಲಿವೆ.

ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು (ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ (ಒಟ್ಟು ಗರಿಷ್ಠ ಅಂಕಗಳು 100). ಇದರಲ್ಲಿ ಇಂಗ್ಲಿಷ್‌ ಲಾಂಗ್ವೇಜಗೆ 40, ನ್ಯೂಮರಿಕಲ್ ಎಬಿಲಿಟಿಯ 30 ಹಾಗೂ ರೀಸನಿಂಗ್ ಎಬಿಲಿಟಿಯ 30 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮವಿಲ್ಲ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ. ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 170 ಪ್ರಶ್ನೆಗಳನ್ನು 200 ಅಂಕಗಳಿಗೆ ಕೇಳಲಾಗುತ್ತದೆ.

I. Reasoning & Computer Aptitude 40 ಪ್ರಶ್ನೆ 60 ಅಂಕಗಳು 50 ನಿಮಿಷಗಳು.

II. Data Analysis & Interpretation 30 ಪ್ರಶ್ನೆ 60 ಅಂಕಗಳು 45 ನಿಮಿಷಗಳು.

III. General Awareness/ Economy/ Banking Knowledge 60 ಪ್ರಶ್ನೆ 60 ಅಂಕಗಳು 45 ನಿಮಿಷಗಳು.

IV. English Language 40 ಪ್ರಶ್ನೆ 20 ಅಂಕಗಳು 40 ನಿಮಿಷಗಳು.

ಈ ಸುದ್ದಿಯನ್ನೂ ಓದಿ: SBI Recruitment 2025: ಬ್ಯಾಂಕ್‌ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿ ಖಾಲಿ ಇದೆ 541 ಪ್ರೊಬೆಷನರಿ ಆಫೀಸರ್‌ ಹುದ್ದೆ

ಹೀಗೆ ಒಟ್ಟಾರೆ 170 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ. ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲ ಪ್ರಶ್ನೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ (ಮೇನ್ಸ್) ಮುಗಿಯುತ್ತಿದ್ದಂತೆ ಡಿಸ್ಸ್ಕ್ರಿಟ್ಟಿವ್ ಟೆಸ್ಟ್ ಇಂಗ್ಲಿಷ್‌ ಭಾಷೆಯಲ್ಲಿ (ಸಂವಹನ ಕೌಶಲ್ಯಗಳು: ಇ-ಮೇಲ್ಗಳು, ವರದಿಗಳು, ಪರಿಸ್ಥಿತಿ ವಿಶ್ಲೇಷಣೆ ಮತ್ತು ನಿಖರವಾದ ಬರವಣಿಗೆ) Letter Writing & Essay- three questions with multiple choice ಇಮೇಲ್‌ಗಳು (ಕಡ್ಡಾಯ, ಎರಡು ಆಯ್ಕೆಗಳಲ್ಲಿ ಒಂದು), ವರದಿಗಳು (ಕಡ್ಡಾಯ, ಎರಡು ಆಯ್ಕೆಗಳಲ್ಲಿ ಒಂದು) ಮತ್ತು ಪರಿಸ್ಥಿತಿ ವಿಶ್ಲೇಷಣೆ ಅಥವಾ ನಿಖರವಾದ ಬರವಣಿಗೆ (ಎರಡರಲ್ಲಿ ಒಂದು) ಸಂಬಂಧಿಸಿದಂತೆ 50 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರವನ್ನು ಬರೆಯಬೇಕು. ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಮತ್ತು ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಮೂರನೇ ಹಂತಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳ ವ್ಯಕ್ತಿತ್ವ ವಿವರಗಳಿಗಾಗಿ ಬ್ಯಾಂಕ್ ಸೈಕೋಮೆಟ್ರಿಕ್ ಪರೀಕ್ಷೆಯನ್ನು ನಡೆಸುತ್ತದೆ. ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ದೃಷ್ಟಿಕೋನವನ್ನು ಹೊಂದಲು ಪರೀಕ್ಷೆಯ ಫಲಿತಾಂಶಗಳನ್ನು ಸಂದರ್ಶನ ಸಮಿತಿಯ ಮುಂದೆ ಇಡಬಹುದು. (ಎ) ಸೈಕೋಮೆಟ್ರಿಕ್ ಪರೀಕ್ಷೆ (ಬಿ) ಗುಂಪು ಚರ್ಚೆ (ಸಿ) ವೈಯಕ್ತಿಕ ಸಂದರ್ಶನ. ಸಂದರ್ಶನ (30 ಅಂಕಗಳು) ಮತ್ತು ಗುಂಪು ಚರ್ಚೆ (20 ಅಂಕಗಳು) ಬ್ಯಾಂಕ ನಡೆಸಲಿವೆ. ಸಂದರ್ಶನದ ಸಂದರ್ಭದಲ್ಲಿ 'ಒಬಿಸಿ' ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು'ಕೆನೆರಹಿತ ಪದರ' (Non-Creamy layer) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿ ಕೊಂಡಿರುವ ಆದರೆ (Non-Creamy layer) 'ಕೆನೆರಹಿತ ಪದರ' ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಂದರ್ಶನಕ್ಕೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. EWS ವರ್ಗದ ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು 2024-25ರ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. EWS ಎಂದು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅಂತವರನ್ನು ಸಂದರ್ಶನಕ್ಕೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ.

SBI Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಆಯ್ಕೆ ಪಟ್ಟಿ

ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ- II ಮತ್ತು ಹಂತ- III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ -3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ-1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಹಂತ-2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು (250 ಅಂಕಗಳಲ್ಲಿ) ಅದರ 75 ಅಂಕಗಳು ಮತ್ತು ಅಭ್ಯರ್ಥಿಗಳ ಹಂತ-3 ರಲ್ಲಿ ಪಡೆದ ಅಂಕಗಳನ್ನು (50 ಅಂಕಗಳಲ್ಲಿ) ಅದರ 25 ಅಂಕಗಳನ್ನು ಸೇರಿಸಿ(100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ-3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು.(ಮುಖ್ಯ ಪರೀಕ್ಷೆ ಮತ್ತು ಗುಂಪು ಚರ್ಚೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲಷ್ಟೇ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.)

ಸಂದರ್ಶನಕ್ಕೆ ಕರೆಯಲ್ಪಟ್ಟ ಹೊರರಾಜ್ಯದ ಅಭ್ಯರ್ಥಿಗಳಿಗೆ ಭಾರತದಲ್ಲಿ ಅತಿ ಕಡಿಮೆ ಮಾರ್ಗದ ರೈಲ್ವೆ AC-III ಪ್ರಯಾಣ ದರ ಅಥವಾ ವಾಸಸ್ಥಳದಿಂದ/ನೇಮಕಾತಿ ಸ್ಥಳದಿಂದ ಸಂದರ್ಶನ ಸ್ಥಳಕ್ಕೆ ವಾಸ್ತವಿಕ ವೆಚ್ಚಗಳು(ಯಾವುದು ಕಡಿಮೆಯೋ ಅದನ್ನು)ಮರುಪಾವತಿಸಲಾಗುತ್ತದೆ. ಸ್ಥಳೀಯ ಸಾರಿಗೆ ವೆಚ್ಚಗಳನ್ನು ಮರುಪಾವತಿಸಲಾಗುವುದಿಲ್ಲ. ಹುದ್ದೆಗೆ ಅನರ್ಹ ಎಂದು ಕಂಡುಬಂದ ಅಭ್ಯರ್ಥಿಯನ್ನು ಸಂದರ್ಶನದಲ್ಲಿ ಹಾಜರಾಗಲು ಅನುಮತಿಸಲಾಗುವುದಿಲ್ಲ ಮತ್ತು ಯಾವುದೇ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಮೂಲಭೂತ ಬ್ಯಾಂಕಿಂಗ್ ಜ್ಞಾನವನ್ನು ಒದಗಿಸಲಾಗುತ್ತದೆ. ಪ್ರೊಬೆಷನರಿ ಆಫೀಸರ್ ಆಗಿ ನೇಮಕವಾದವರು ಮೊದಲಿಗೆ 2 ವರ್ಷ ಪ್ರೊಬೆಷನರಿ ಪಿರಿಯಡ್ನಲ್ಲಿ ವಿವಿಧ ತರಬೇತಿ ನೀಡಲಾಗುತ್ತದೆ. ಸೇರುವ ಮೊದಲು, 2.00 ಲಕ್ಷ ಮೌಲ್ಯಕ್ಕೆ ಬಾಂಡ್ ಅನ್ನು (ಎರಡು ಲಕ್ಷ ಮಾತ್ರ) ಬ್ಯಾಂಕ್ ಗೆ ಕನಿಷ್ಠ ಮೂರು ವರ್ಷಗಳ ಅವಧಿಗೆ ನೀಡಬೇಕು. ಅಭ್ಯರ್ಥಿಯು ಮೂರು ವರ್ಷಗಳ ಅವಧಿ ಮುಗಿಯುವ ಮೊದಲು ಬ್ಯಾಂಕ್ ಸೇವೆಗೆ ರಾಜೀನಾಮೆ ನೀಡಿದರೆ ಹಣ ಹಿಂತಿರುಗಿಸಲಾಗುವುದಿಲ್ಲ.

ಯಾವುದೇ ಹಂತದಲ್ಲಿ (ಅಂದರೆ ಪೂರ್ವಭಾವಿ ಪರೀಕ್ಷೆ / ಮುಖ್ಯ ಪರೀಕ್ಷೆ / ಸೈಕೋಮೆಟ್ರಿಕ್ ಪರೀಕ್ಷೆ / ಗುಂಪು ಚರ್ಚೆ / ಸಂದರ್ಶನ / ವೈದ್ಯಕೀಯ / ಸೇರ್ಪಡೆ ಇತ್ಯಾದಿ) ದಾಖಲೆಗಳ ಪರಿಶೀಲನೆಯನ್ನು ನಡೆಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.

ಪೂರ್ವಭಾವಿ ಪರೀಕ್ಷೆಯ ಕರೆ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಆದಾಗ್ಯೂ, ಅದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರಿಶೀಲಿಸುತ್ತಾರೆ ಮತ್ತು ದೃಢೀಕರಿಸುತ್ತಾರೆ, ಮುದ್ರೆ ಹಾಕುತ್ತಾರೆ. ಅಭ್ಯರ್ಥಿಯು ಕರೆ ಪತ್ರವನ್ನು (ಗುರುತಿನ ಚೀಟಿಯ ದೃಢೀಕೃತ/ ಮುದ್ರೆ ಹಾಕಿದ ಪ್ರತಿಯೊಂದಿಗೆ) ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಮುಖ್ಯ ಪರೀಕ್ಷೆಗೆ ಕರೆಯಲ್ಪಟ್ಟ ಅಭ್ಯರ್ಥಿಗಳು "ನಿಮ್ಮನ್ನು ಪರಿಚಯ ಮಾಡಿಕೊಳ್ಳಿ" ಮತ್ತು "ಕರೆ ಪತ್ರ"ದಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ ಸರಿಯಾಗಿ ದೃಢೀಕರಿಸಿದ "ಮೂಲ ಪೂರ್ವಭಾವಿ ಪರೀಕ್ಷೆಯ ಕರೆ ಪತ್ರ (ಗುರುತಿನ ಚೀಟಿಯ ದೃಢೀಕೃತ ಪ್ರತಿಯೊಂದಿಗೆ)" ಹಾಗೂ "ಮುಖ್ಯ ಪರೀಕ್ಷೆಯ ಕರೆ ಪತ್ರ" ಮತ್ತು "ಇತರ ಅಗತ್ಯ ದಾಖಲೆಗಳನ್ನು" ತರಬೇಕಾಗುತ್ತದೆ.