ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Bandh: ಮಾರ್ಚ್ 22ರಂದು ಕರ್ನಾಟಕ ಬಂದ್‌; ಅಂದು ಏನಿದೆ, ಏನಿಲ್ಲ?

ಬೆಳಗಾವಿಯಲ್ಲಿನ ಮರಾಠಿಗರ ಪುಂಡಾಟಿಕೆ, ಅಟ್ಟಹಾಸ, ಎಂಇಎಸ್ ನಿಷೇಧಿಸಬೇಕು. ಕಳಸಾ-ಬಂಡೂರಿ ಮಹದಾಯಿ ಯೋಜನ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ಮೇಕೆದಾಟು ಬಗ್ಗೆ ತಮಿಳುನಾಡು ವಿರೋಧ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ನೀತಿ ವಿರೋಧಿಸಿ ಹಾಗೂ ಚಾಲಕರಿಗೆ ಶಕ್ತಿ ತುಂಬಲು ದಿನಾಂಕ 22-03-2025ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಮಾರ್ಚ್ 22ರಂದು ಕರ್ನಾಟಕ ಬಂದ್‌; ಅಂದು ಏನಿದೆ, ಏನಿಲ್ಲ?

ವಾಟಾಳ್‌ ನಾಗರಾಜ್

ಹರೀಶ್‌ ಕೇರ ಹರೀಶ್‌ ಕೇರ Mar 18, 2025 4:11 PM

ಬೆಂಗಳೂರು: ಬೆಳಗಾವಿಯಲ್ಲಿ (Belagavi) ಮರಾಠಿಗರ ಪುಂಡಾಟ, ವಿವಿಧ ನದಿ ಯೋಜನೆಗಳ ಆರಂಭಕ್ಕೆ ಆಗ್ರಹಿಸಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಗೆ (Karnataka bandh) ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ಕರೆ ನೀಡಿದ್ದಾರೆ. ಈ ಕುರಿತು ಇಂದು ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ಕನ್ನಡಪರ ಸಂಘಟನೆಗಳ ನಾಯಕರೊಂದಿಗೆ ಸಭೆಯನ್ನು ವಾಟಾಳ್ ನಾಗರಾಜ್ ನಡೆಸಿದರು. ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಬೆಳಗಾವಿಯಲ್ಲಿನ ಮರಾಠಿಗರ ಪುಂಡಾಟಿಕೆ, ಅಟ್ಟಹಾಸ, ಎಂಇಎಸ್ ನಿಷೇಧಿಸಬೇಕು. ಕಳಸಾ-ಬಂಡೂರಿ ಮಹದಾಯಿ ಯೋಜನ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು. ಮೇಕೆದಾಟು ಬಗ್ಗೆ ತಮಿಳುನಾಡು ವಿರೋಧ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ನೀತಿ ವಿರೋಧಿಸಿ ಹಾಗೂ ಚಾಲಕರಿಗೆ ಶಕ್ತಿ ತುಂಬಲು ದಿನಾಂಕ 22-03-2025ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಬಂದ್ ವೇಳೆ ಏನಿರಲ್ಲ?

ಬಂದ್ ವೇಳೆಯಲ್ಲಿ ಹೋಟೆಲ್ ಕ್ಲೋಸ್

ಸಿನಿಮಾ ಥಿಯೇಟರ್ ಬಂದ್

ಸರ್ಕಾರಿ ಕಚೇರಿಗಳು ತೆರೆದಿರುವುದು ಅನುಮಾನ

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸೋ ಸಾಧ್ಯತೆ

ಸಾರಿಗೆ ಬಸ್ ಸಂಚಾರ ಇರಲ್ಲ.

ಓಲಾ, ಉಬರ್, ಆಟೋ, ಲಾರಿ ಸಂಚಾರ ಬಹುತೇಕ ಸ್ಥಗಿತ.

ಮಾಲ್‌ಗಳು ಕ್ಲೋಸ್

ಬಂದ್ ವೇಳೆ ಏನಿರುತ್ತೆ?

ಮೆಡಿಕಲ್ ಶಾಪ್ ಓಪನ್

ಹಾಲಿನ ಬೂತ್ ಗಳು ತೆರೆದಿರುತ್ತೆ

ಹಣ್ಣು-ತರಕಾರಿ ಅಂಗಡಿ ಓಪನ್

ಅಗತ್ಯ ವಸ್ತುಗಳ ಪೂರೈಕೆ ಸೇವೆ ಎಂದಿನಂತೆ ಇರಲಿದೆ

ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ ಆಗೋದು ಕಡಿಮೆ

ಇದನ್ನೂ ಓದಿ: ಪ್ರತಿಭಟನೆಗೆ ಯತ್ನ:ವಾಟಾಳ್ ನಾಗರಾಜ್ ಗೃಹ ಬಂಧನ