ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನನ್ನ ಮಗನ ಮೇಲೆ ಆತನ ಕಣ್ಣು ಏಕೆ ಬಿತ್ತೋ ಅರ್ಥವಾಗಿಲ್ಲ: ತ್ರಿಶಾಲ್‌ ಆತ್ಮಹತ್ಯೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಭಾವುಕ ಪೋಸ್ಟ್‌

ಡೆತ್‌ನೋಟ್‌ನಲ್ಲಿ "ನನ್ನನ್ನು ಕ್ಷಮಿಸು ಅಮ್ಮ ನಾನು ಸಾಯ್ತಾ ಇದ್ದೀನಿ, ನನಗೆ ತುಂಬಾ ಚಿತ್ರಹಿಂಸೆ ಮಾಡಿದ್ದಾರೆ, ನನ್ನ ಕನಸುಗಳೆಲ್ಲ ನುಚ್ಚುನೂರಾಗಿವೆ, ಆ ಇಬ್ಬರೇ ನನ್ನ ಸಾವಿಗೆ ಕಾರಣ. ಅವರನ್ನು ಬಿಡಬೇಡ ಜೈಲಿಗೆ ಹಾಕಿಸು ಎಂದು ತಮ್ಮ ಮಗ ತ್ರಿಶಾಲ್‌ ಡೆತ್‌ನೋಟ್‌ನಲ್ಲಿ ಬರೆದಿದ್ದ ಎಂದು ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ತಿಳಿಸಿದ್ದಾರೆ.

ಮಗನ ಆತ್ಮಹತ್ಯೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಭಾವುಕ ಪೋಸ್ಟ್‌

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ಪುತ್ರ ತ್ರಿಶಾಲ್‌ ರಾಜ್‌. -

Prabhakara R
Prabhakara R Mar 5, 2026 5:43 PM

ತುಮಕೂರು: ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಪುತ್ರ ತ್ರಿಶಾಲ್ ರಾಜ್ (13) ನೆನೆದು ನಗರದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ (Shakuntala Nataraj) ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ಕಿರುಕುಳದಿಂದ ನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್‌ ಹಂಚಿಕೊಂಡಿರುವ ಶಕುಂತಲಾ ನಟರಾಜ್, ಮಗನ ಡೆತ್‌ನೋಟ್‌ನಲ್ಲಿ ಏನಿತ್ತು ಎಂಬ ಬಗ್ಗೆ ತಿಳಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ತ್ರಿಶಾಲ್ ರಾಜ್ ನನ್ನ ಮುದ್ದಿನ ಮಗ. ಅವನು ಹುಟ್ಟಿದ್ದು ಏಪ್ರಿಲ್ 9-2012. ಅವನೇ ನನ್ನ ಪ್ರಪಂಚ ಆಗಿದ್ದ, ಅವನು ಒಂದೂವರೇ ವರ್ಷದ ಮಗುವಾಗಿದ್ದಾಗ ಅವನ ತಂದೆ ಮೆದುಳು ಸಂಬಂಧಿ ಕಾಯಿಲೆಯಿಂದ ತೀರಿಕೊಂಡಿದ್ದರು. ಅಲ್ಲಿಂದ ಮುಂದೆ ಮಕ್ಕಳಿಗೆ ನಾನೇ ತಾಯೀ- ತಂದೆ ಎರಡು ಆಗಿ ಶಕ್ತಿ ಮೀರಿ ಬೆಳೆಸಿದ್ದೆ.

ನಮ್ಮದು ಮಧ್ಯಮ ವರ್ಗದ ಜೀವನ. ದುಡಿಮೆಗೆ ಅನುಸರವಾಗಿ ಅವಶ್ಯಕತೆಗಳನ್ನ ಪೂರೈಸಿದಿನಿ ಅನ್ನೋ ಸಣ್ಣ ಸಮಾಧಾನ ಅಂತೂ ಇದೆ. ನಾನು ನನ್ನ ಮಕ್ಕಳು ನಮ್ಮ ತಾಯೀ ಖುಷಿಯಿಂದ ಚನಾಗೆ ಇದ್ವಿ. ಆದ್ರೆ 10-01-2025 ನನ್ನ ಮುದ್ದು ಕಂದ ನನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಬೆಳಗ್ಗೆ 10ಕ್ಕೆ ಅಮ್ಮ ಮಾಡಿದ ಫೋನ್‌ ಕಾಲ್‌ ಆಲ್ರೆಡಿ ನನ್ನ ಕೊಂದು ಹಾಕಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ತನ್ನ ಮಗನನ್ನ ನೋಡಿದ ತಾಯಿಯ ಸ್ಥಿತಿ ಹೇಗಿರಬಹುದು ಅಂತ ನೀವೇ ಅರ್ಥಮಾಡಿಕೊಂಡು ಬಿಡಿ.



ಅವನ ಸಾವಿನ ಹಿಂದಿರುವ ನಿಜವಾದ ಸತ್ಯ, ಉದ್ದೇಶ ನನಗೆ ಇಲ್ಲಿವರೆಗೂ ಸರಿಯಾಗಿ ಅರ್ಥವೇ ಆಗಿಲ್ಲ. ಒಳ್ಳೆ ಮಗು ದೇಶದ ಬಗ್ಗೆ ಅತ್ಯಂತ ಪ್ರೀತಿಯ ಅಭಿಮಾನ ಹೊಂದಿದ್ದ, ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ, ಕ್ರೀಡೆಯಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿ ಖೋ ಖೋ ನಲ್ಲಿ ರಾಜ್ಯಮಟ್ಟದ ಆಟಗಾರ. ಮುಂದೆ ನ್ಯಾಷನಲ್ಸ್ ಆಡಬೇಕು ಅನ್ನೋ ಕನಸು ಕಂಡಿದ್ದ. ನಾನು ದೊಡ್ಡವನಾದ ಮೇಲೆ ಸಂಘದಲ್ಲಿ ಪ್ರಚಾರಕ್ ಆಗ್ತೀನಿ ಅಂತ ಯಾವಾಗಲೂ ಹೇಳ್ತಾ ಇದ್ದ. ಸಂಘದ ಒಡನಾಟವನ್ನು ಕೂಡ ಬೆಳೆಸಿಕೊಂಡಿದ್ದ.

ಎಲ್ಲಾ ಸರಿಯಾಗಿ ನಡಿತಾ ಇತ್ತು , ಆದರೆ ಏಕಾಏಕಿ ಆದಿತ್ಯ ಅನ್ನೋ 19 ವರ್ಷದ ಹುಡುಗ ಅವನ ಪಾಲಿಗೆ ಯಮನಾಗಿ ಬಂದುಬಿಟ್ಟಿದ್ದ. ಶಾಲೆಗೆ ಹೊಂದಿಕೊಂಡಂತೆ ಇರುವ ಆದಿತ್ಯ ಎಂಬುವನ ಮನೆ, ಆದಿತ್ಯ ಸಣ್ಣ ವಯಸ್ಸಿಗೆ ಪುಡಿ ರೌಡಿಯಾಗಿದ್ದ ಎಂದು ಕೇಳ್ಪಟ್ಟಿದ್ದೀನಿ. ಅವನು ನನ್ನ ಮಗನನ್ನು ತನ್ನೆಡೆ ಸೆಳೆದು ಸಾಯುವ ಕೇವಲ ಒಂದು ತಿಂಗಳ ಹಿಂದೆ ಅಷ್ಟೇ ಸ್ನೇಹ ಮಾಡಿಕೊಂಡಿದ್ದ.

ಆದರೆ ಆದಿತ್ಯನ ಕಣ್ಣು ಶಾಲೆಯಲ್ಲಿ ಓದುತ್ತಿದ್ದ ಎಲ್ಲಾ ಮಕ್ಕಳನ್ನು ಬಿಟ್ಟು ನನ್ನ ಮಗನ ಮೇಲೆ ಏಕೆ ಬಿತ್ತು ಅನ್ನುವುದು ಇನ್ನು ಇಲ್ಲಿವರೆಗೂ ಅರ್ಥವಾಗಿಲ್ಲ. ನನ್ನ ಮಗ ಶಾಲೆಯಿಂದ ಬರುವ ದಾರಿಯಲ್ಲಿ ಅವನು ಏಕೆ ನನ್ನ ಮಗನನ್ನು ಪೀಡಿಸುತ್ತಿದ್ದ, ಹುಡುಗರನ್ನು ಸೇರಿಸಿಕೊಂಡು ನನ್ನ ಮಗನಿಗೆ ಚಿತ್ರಹಿಂಸೆ ಕೊಡುತ್ತಿದ್ದ ಎಂಬುದು ನನಗೆ ತಿಳಿದಿಲ್ಲ.

ಅಷ್ಟು ಗಟ್ಟಿಯಾಗಿದ್ದ ನನ್ನ ಮಗನ ಮನಸ್ಸನ್ನು ಸಾವಿನಡೆಗೆ ಸೆಳೆದ ಗಂಭೀರವಾದ ವಿಚಾರ ಯಾವುದು ಎಂಬುದು ಅರ್ಥವಾಗುತ್ತಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಮೇಲಿನ ಕೋಪಕ್ಕಾಗಿ ನನ್ನ ಮಗನನ್ನು ಗುರಿಯಾಗಿಸಿದರೆ ಎಂಬ ನಿಖರವಾದ ಮಾಹಿತಿ ಕೂಡ ನನಗಿಲ್ಲ. ಯಾಕೆಂದರೆ ಇವಾಗಿನ ಪರಿಸ್ಥಿತಿ ಮತ್ತು ವ್ಯವಸ್ಥೆ ಎಲ್ಲಾ ರೀತಿಯಲ್ಲೂ ನನ್ನ ವಿರುದ್ಧವಾಗಿಯೇ ಇದೆ. ನನ್ನ ಮಗ ಎರಡು ಪೇಜ್ ಡೆತ್ ನೋಟ್ ಬರೆದಿದ್ದ.

ಬೆಂಗಳೂರಿನಲ್ಲಿ ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಗಲಾಟೆ: ಮನನೊಂದು ಟೆಕ್ಕಿ ಯುವತಿ ಆತ್ಮಹತ್ಯೆ

ಡೆತ್‌ನೋಟ್‌ನಲ್ಲಿ "ನನ್ನನ್ನು ಕ್ಷಮಿಸು ಅಮ್ಮ ನಾನು ಸಾಯ್ತಾ ಇದ್ದೀನಿ, ನನಗೆ ತುಂಬಾ ಚಿತ್ರಹಿಂಸೆ ಮಾಡಿದ್ದಾರೆ, ನನ್ನ ಕನಸುಗಳೆಲ್ಲ ನುಚ್ಚುನೂರಾಗಿವೆ, ಆದಿತ್ಯ ಮತ್ತೆ ಹರ್ಷ ಎಂಬ ಇಬ್ಬರೇ ನನ್ನ ಸಾವಿಗೆ ಕಾರಣ. ಅವರನ್ನು ಬಿಡಬೇಡ ಜೈಲಿಗೆ ಹಾಕಿಸು, ಶಿಕ್ಷೆ ಕೊಡಿಸು ಎಂದು ಬರೆದಿರುವುದಾಗಿ ಶಕುಂತಲಾ ತಿಳಿಸಿದ್ದಾರೆ.