Hindu Samavesha: ಮಾ.6ರಂದು ಇಂಡಿಯಲ್ಲಿ ವಿರಾಟ ಹಿಂದು ಸಮಾವೇಶ
ಬೃಹತ್ ಹಿಂದು ಸಮಾವೇಶಕ್ಕೆ ಜಮಖಂಡಿ ತಾಲೂಕು ಮೈಗೂರಿನ ಪೂಜ್ಯ ಗುರುಪ್ರಸಾದ ಶ್ರೀಗಳು ಸಾನಿದ್ಯ, ಜೇವರ್ಗಿ ಅಂದೂಲ ಶ್ರೀ ಕರುಣೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರರು ಸಾನಿದ್ಯ, ಹಿರೇಮಣೂರದ ಶ್ರೀ ವೇದೇಶ ತೀರ್ಥ ವಿದ್ಯಾಪೀಠದ ಉಪಕುಲಪತಿ ಪಂಡಿತ ಶ್ರೀ ಸರ್ವೇಶಚಾರ್ಯ ಮತ್ತು ಪ್ರಾಂತ ಕಾರ್ಯವಾಹಕರು ಕರ್ನಾಟಕ ಉತ್ತರ ಪ್ರಾಂತದ ಶ್ರೀ ರಾಘವೇಂದ್ರ ಕಾಗವಾಡ ವಕ್ತಾರರಾಗಿ ಆಗಮಿಸುವರು
ತ್ರಿಕಾಗೋಷ್ಠಿಯಲ್ಲಿ ಕಾಸುಗೌಡ ಬಿರಾದಾರ , ಹಣಮಂತರಾಯಗೌಡ ಬಿರಾದಾರ ಬಿಜೆಪಿ ಮುಖಂಡ ಮತ್ತಿತರರು -
ಇಂಡಿ: ನಗರದಲ್ಲಿ ವಿರಾಟ ಹಿಂದು ಸಮಾವೇಶ ಮಾ.6ರಂದು ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ ರಾಯಗೌಡ ಪಾಟೀಲ ಜಂಟಿ ಹೇಳಿಕೆ ನೀಡಿದ್ದಾರೆ.
ನಗರದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಬೃಹತ್ ಹಿಂದು ಸಮಾವೇಶಕ್ಕೆ ಜಮಖಂಡಿ ತಾಲೂಕು ಮೈಗೂರಿನ ಪೂಜ್ಯ ಗುರುಪ್ರಸಾದ ಶ್ರೀಗಳು ಸಾನಿದ್ಯ, ಜೇವರ್ಗಿ ಅಂದೂಲ ಶ್ರೀ ಕರುಣೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರರು ಸಾನಿದ್ಯ, ಹಿರೇಮಣೂರದ ಶ್ರೀ ವೇದೇಶ ತೀರ್ಥ ವಿದ್ಯಾಪೀಠದ ಉಪಕುಲಪತಿ ಪಂಡಿತ ಶ್ರೀ ಸರ್ವೇಶಚಾರ್ಯ ಮತ್ತು ಪ್ರಾಂತ ಕಾರ್ಯವಾಹಕರು ಕರ್ನಾಟಕ ಉತ್ತರ ಪ್ರಾಂತದ ಶ್ರೀ ರಾಘವೇಂದ್ರ ಕಾಗವಾಡ ವಕ್ತಾರರಾಗಿ ಆಗಮಿಸುವರು.
ಮಾ.6ರಂದು ಶುಕ್ರವಾರ ಮಧ್ಯಾನ್ಹ 3.30ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಮಹಾವೀರ ವೃತ್ತ ಅಂಬೇಡ್ಕರ ಬಸವೇಶ್ವರ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ ಮಗ್ಗಲಿನ ಸದಾಶಿವನಗರದ ಖಾಲಿ ಇರುವ ಜಾಗದಲ್ಲಿ ಬೃಹತ್ ಹಿಂದು ಸಮ್ಮೇಳನ ಜರುಗಲಿದೆ.
ಭೀಮಾಶಂಕರ ಮುರಗುಂಡಿ ಸಂಚಲನ ಸಮಿತಿ ಅಧ್ಯಕ್ಷ ರಾಗಿರುವರು. ಪತ್ರಿಕಾಗೋಷ್ಠಿ ಯಲ್ಲಿ ಮುತ್ತು ದೇಸಾಯಿ, ಪ್ರಕಾಶ ಬಿರಾದಾರ, ಅನೀಲ ಜಮಾದಾರ, ರಾಮಸಿಂಗ ಕನ್ನೊಳ್ಳಿ ಮತ್ತಿತರಿದ್ದರು.
ಸಭೆಯಲ್ಲಿ ಜಿ.ಎಸ್.ಜೋಶಿ ವಕೀಲರು, ಆನಂದ ಕುಲಕರ್ಣಿ ಬ್ರಾಹ್ಮಣ ಸಮಾಜ ಉಪಾ ಧ್ಯಕ್ಷರು, ರಾಮಚಂದ್ರ ಕಾವಿ, ನಾಗನಾಥ ಹಂಚಾಟೆ ಭಾವಸಾರ ಸಮಾಜ ಅಧ್ಯಕ್ಷರು, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸಂತೋಷ ಗವಳಿ, ನಾವಿ ಸಮಾಜ ಅಧ್ಯಕ್ಷರು, ಕೆ.ವಿ.ಪಾಟೀಲ ಕುಡ ಒಕ್ಕಲಿಗ ಸಮಾಜ ಅಧ್ಯಕ್ಷರು, ರಾಮಸಿಂಗ ಕನ್ನೊಳ್ಳಿ ರಜಪೂತ ಸಮಾಜ ಅಧ್ಯಕ್ಷರು, ಸುಭಾಷ ಪಾಟೀಲ, ಬಾಳು ಮುಳಜಿ, ವಿವೇಕ ಹಂಜಗಿ ವಕೀಲರು ಮತ್ತಿತರಿದ್ದರು.
ಸಮಾವೇಶದ ನಿಮಿತ್ತ ಬೃಹತ್ ಶೋಭಾಯಾತ್ರೆ, ಮಾರ್ಗದುದ್ದಕ್ಕೂ ರಂಗೋಲಿ ಹಾಕಿ ತೋರಣ ಕಟ್ಟಿ ಸ್ವಾಗತಿಸುವುದು, ಮಕ್ಕಳಿಗೆ ದೇಶ ಭಕ್ತರ ಹಾಗೂ ಮಹಾಪುರುಷರ ಛದ್ಮ ವೇಷ ಹಾಕಿಸುವದು, ನಿವಾಸಿಗಳ ಮನೆ, ಅಂಗಡಿಗಳ ಮುಂದೆ ಮಹಾಪುರುಷರ ಭಾವಚಿತ್ರ ಅಳವಡಿಸುವದು ಕುರಿತು ಚರ್ಚೆ ನಡೆಯಿತು.