ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

cabinet expansion: ಸಚಿವ ಸಂಪುಟ ವಿಸ್ತರಣೆ ಫಿಕ್ಸ್; ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ ಎಂದ ಜಮೀರ್ ಅಹ್ಮದ್

Karnataka Politics: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಚಿವ ಜಮೀರ್‌ ಅಹ್ಮದ್‌ ಅವರು, ಬಿ.ನಾಗೇಂದ್ರ ಅವರು ಮತ್ತೆ ಸಚಿವರಾಗುತ್ತಾರೆ. 10 ದಿನಗಳಲ್ಲಿ ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ಇದೆ. ಇನ್ನು ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ತಿಳಿಸಿದ್ದಾರೆ.

10 ದಿನಗಳಲ್ಲಿ ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ: ಜಮೀರ್ ಅಹ್ಮದ್

-

Prabhakara R Prabhakara R Sep 29, 2025 5:54 PM

ಬಳ್ಳಾರಿ: ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು (cabinet expansion), ಇನ್ನು 10 ದಿನಗಳಲ್ಲಿ ಬಿ.ನಾಗೇಂದ್ರ ಅವರು ಮತ್ತೆ ಸಚಿವರಾಗಲಿದ್ದಾರೆ ಎಂಬುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾವುದೇ ಕ್ಷಣದಲ್ಲಾದರೂ ಸಚಿವ ಸಂಪುಟ ವಿಸ್ತರಣೆ ಆಗಬಹುದು. ನಮ್ಮ ಕೈಯಲ್ಲಿ ನಿರ್ಧಾರ ಇಲ್ಲ. ಹೈಕಮಾಂಡ್ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಬಿ.ನಾಗೇಂದ್ರ ಅವರು ಮತ್ತೆ ಸಚಿವರಾಗುತ್ತಾರೆ. 10 ದಿನಗಳಲ್ಲಿ ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ಇದೆ. ಇನ್ನು ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಯಾವ ಕೆಲಸಗಳು ಪೆಂಡಿಂಗ್ ಉಳಿದಿಲ್ಲ. ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿವೆ. ನಾಗೇಂದ್ರ ಮೂಲಕ ಸಮಸ್ಯೆಗಳ ಬಗ್ಗೆ ನನಗೆ ಮಾಹಿತಿ ಬರುತ್ತಿದೆ. ಸಾಹಿತ್ಯ ಸಮ್ಮೇಳನ ನಡೆಸಲು ನಾಲ್ಕು ಸ್ಥಳ ಗುರುತಿಸಲಾಗಿದೆ. ಬಳ್ಳಾರಿ ಶಾಸಕರೊಂದಿಗೆ ಸೇರಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಬಳ್ಳಾರಿಯಲ್ಲಿ ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಸಮೀಕ್ಷೆಯಿಂದ ಮುಂದುವರಿದ ಜಾತಿಗಳ ಬಡವರ ಸ್ಥಿತಿಗತಿಯೂ ತಿಳಿಯಲಿದೆ: ಸಿಎಂ