ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆದಿವಾಸಿ ಬುಡಕಟ್ಟು ಮಂದಿ ತಮ್ಮ ಅಸ್ಮಿತೆಗಾಗಿ ಬಿರ್ಸಾ ಮುಂಡಾರಂತೆ ಹೋರಾಡಬೇಕಿದೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ. ಬಿರ್ಸಾ ಮುಂಡಾ ಅವರು 1875 ರ ನವೆಂಬರ್ 15 ರಂದು ಜಾರ್ಖಂಡ್‌ನ ಉಲಿಹಾತು ಎಂಬ ಗ್ರಾಮದಲ್ಲಿ ಜನಿಸಿದರು. ಇವರು  ಹೋರಾಟದಲ್ಲಿ ಪ್ರಮುಖ ಬುಡಕಟ್ಟು ನಾಯಕರಾಗಿ ಗುರುತಿಸಿ ಕೊಂಡರು.

ಬುಡಕಟ್ಟು ಮಂದಿ ತಮ್ಮ ಅಸ್ಮಿತೆಗಾಗಿ ಬಿರ್ಸಾ ಮುಂಡಾರಂತೆ ಹೋರಾಡಬೇಕಿದೆ

-

Ashok Nayak
Ashok Nayak Nov 15, 2025 11:44 PM

ಗುಡಿಬಂಡೆ: ಬ್ರಿಟಿಷರ ಅನ್ಯಾಯ ಮತ್ತು ಬುಡಕಟ್ಟು ಜನರ ಶೋಷಣೆಯ ವಿರುದ್ಧ ಬಿರ್ಸಾ ಮುಂಡಾ ಧ್ವನಿ ಎತ್ತುವ ಮೂಲಕ ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದರು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಡಾ.ಕೆ.ಎಂ.ನಯಾಜ್ ಅಹ್ಮದ್ ರಚಿಸಿದ "ಬಿರ್ಸಾ ಮುಂಡಾನನ್ನು ಹುಡುಕುತ್ತಾ ಎಂಬ ಸಂಶೋಧನೆ ಕೃತಿಯನ್ನು ಗುಡಿಬಂಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ. ಬಿರ್ಸಾ ಮುಂಡಾ ಅವರು 1875 ರ ನವೆಂಬರ್ 15 ರಂದು ಜಾರ್ಖಂಡ್‌ನ ಉಲಿಹಾತು ಎಂಬ ಗ್ರಾಮದಲ್ಲಿ ಜನಿಸಿದರು. ಇವರು  ಹೋರಾಟದಲ್ಲಿ ಪ್ರಮುಖ ಬುಡಕಟ್ಟು ನಾಯಕರಾಗಿ ಗುರುತಿಸಿ ಕೊಂಡರು.

ಇದನ್ನೂ ಓದಿ: Gudibande News: ಬಾಲ್ಯ ವಿವಾಹದ ಕುರಿತು ಜಾಗೃತಿ ಅಗತ್ಯ, ನಿರ್ಮೂಲನೆಗೆ ಎಲ್ಲರ ಸಹಕಾರ ಅತ್ಯಗತ್ಯ: ನಸೀಮಾ ತಹಬಸೂಮ್

ಡಾ.ಕೆ.ಎಂ.ನಯಾಜ್ ಅಹ್ಮದ್ ಮಾತನಾಡಿ ಆದಿವಾಸಿ ಬುಡಕಟ್ಟು ಮಂದಿ ತಮ್ಮ ಅಸ್ಮಿತೆಗಾಗಿ ಬಿರ್ಸಾ ಮುಂಡಾರಂತೆ ಹೋರಾಡಬೇಕಿದೆ. ತಮ್ಮ ಹಕ್ಕುಗಳನ್ನು ತಾವುಗಳೇ ಪಡೆದುಕೊಳ್ಳಬೇಕಿದೆ. ದೀನ ದಲಿತರಿಗೆ, ದಮನಿತರಿಗೆ, ಶೋಷಿತರಿಗೆ ಅಂಬೇಡ್ಕರ್ ಶಕ್ತಿ ಯಾದಂತೆ, ಸ್ವಾಭಿಮಾನದ ಹೋರಾಟಗಾರ ಬಿರ್ಸಾ ಮುಂಡಾ ಆದಿವಾಸಿಗಳ ಶಕ್ತಿಯಾಗ ಬೇಕು. ಮುಗ್ದತೆಯಿಂದ, ಹಿಂಜರಿಕೆಯಿಂದ ಹೊರಬಂದು ಸಂವಿಧಾನದ ಆಶಯದಂತೆ ಬಾಳಬೇಕು, ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಕಾಲೇಜಿನ ಪ್ರಾಂಶುಪಾಲ ಅಬ್ಜಲ್ ಬಿಜಲಿ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಇಒ ನಾಗಮಣಿ, ಬಾಗೇ ಪಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವೈ ನಾರಾಯಣನ್, ಸಿಡಿಪಿಒ ರಫೀಕ್, ಹಿರಿಯ ವಕೀಲ ಎಂ ಜಿ ಸುಧಾಕರ್ , ಅರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ, ಚಿನ್ನಿ ಕೈವಾರಮ್ಯ, ಅದಿರೆಡ್ಡಿ, ಡಿ.ಎನ್.ಕೃಷ್ಣಾರೆಡ್ಡಿ, ಶಿವಪ್ಪ, ಸಾಹಿತಿ ವೆಂಕಟಚಲಯ್ಯ, ಸನಾ ನಾಗೇಂದ್ರ, ಪ್ರಕಾಶ್, ಕೃಷ್ಣೇಗೌಡ, ಸುಲೇಮಾನ್, ಹೆಚ್.ಪಿ.ಲಕ್ಷ್ಮೀನಾರಾಯಣ ಸೇರಿದ್ದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿವರ್ಗದವರ ವಿಧ್ಯಾರ್ಥಿಗಳು ಹಾಜರಿದ್ದರು.