ಆಹಾರದಲ್ಲಿ ವಿಷಪ್ರಾಷನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ದೇವರೆಡ್ಡಿಪಲ್ಲಿ ಗ್ರಾಮದ ಪರಿಚಿತ ವ್ಯಕ್ತ ಚೌಡರೆಡ್ಡಿ ಎಂಬಾತ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆ ಪ್ರವೇಶ ಮಾಡಿದ್ದ ಎಂಬ ಮಾಹಿತಿ ಇಡೀ ಘಟನೆಯ ಚಿತ್ರಣವನ್ನೇ ಬದಲಾಯಿ ಸಿದ್ದು ನಂತರ ಹೊರಗೆ ಬಂದ ಸತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಆಹಾರಕ್ಕೆ ವಿಷ ಪ್ರಾಶನ ಮಾಡಿ ಒಂದೇ ಕುಟುಂಬದ ಎಲ್ಲರನ್ನೂ ಸಾಮೂಹಿಕ ವಾಗಿ ಕೊಲ್ಲುವ ಪಿತೂರಿ ಬೆಳಕಿಗೆ ಬಂದಿದೆ
ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಬೀಡು ಬಿಟ್ಟಿರುವ ಪೊಲೀಸರ ಚಿತ್ರ.. -
ಬಾಗೇಪಲ್ಲಿ : ತಾಲೂಕಿನ ದೇವರೆಡ್ಡಿಪಳ್ಳಿ ಗ್ರಾಮದಲ್ಲಿ ಒಂದು ಅಡಿ ಜಾಗದ ವಿಷಯದಲ್ಲಿ ಉಂಟಾಗಿದ್ದ ವೈಮನುಸ್ಸು ಆಹಾರದಲ್ಲಿ ವಿಷ ಬೆರೆಸಿ ಇಡೀ ಕುಟುಂಬವನ್ನು ಕೊಲ್ಲುವ ಪ್ರಯತ್ನ ನಡೆಸಿದ್ದ ಪಕ್ಕದ ಮನೆಯವರ ಕೃತ್ಯದಿಂದಾಗಿ ೮ ಮಂದಿ ಆಸ್ಪತ್ರೆ ಸೇರಿದ್ದು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಬಾಗೇಪಲ್ಲಿ ತಾಲೂಕು ಪರಗೋಡು ಪಂಚಾಯಿತಿ ವ್ಯಾಪ್ತಿಯ ದೇವಿರೆಡ್ಡಿಪಲ್ಲಿ ಗ್ರಾಮದ ಮದ್ದರೆಡ್ಡಿ, ಭಾಗ್ಯಮ್ಮ, ಮಂಜುನಾಥ. ಈಶ್ವರಮ್ಮ, ಸುಬ್ರಮಣಿ, ಮಣಿ, ಭಾನು ಎಂಬ ಒಂದೇ ಕುಟುಂಬದ ೮ ಮಂದಿ ವಿಷಾಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಪ್ರಾಷನಕ್ಕೆ ಒಳಗಾಗಿರುವ ೮ ಜನರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸ ಲಾಗಿದ್ದು, ಸದ್ಯಕ್ಕೆ ಮಂಜುನಾಥ್ ಹಾಗೂ ಮದ್ದರೆಡ್ಡಿ ಸೇರಿದಂತೆ ಸುಬ್ರಮಣಿ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿರಿಸಲಾಗಿದೆ.
ಇದನ್ನೂ ಓದಿ: Chikkanayakanahalli News: ತಹಸೀಲ್ದಾರ್ ಕಚೇರಿಗೆ ಕಳಂಕ ! ನೂರಾರು ನಕಲಿ ಸಾಗುವಳಿ ಚೀಟಿ ವಿತರಣೆ ಜನರಲ್ಲಿ ಆತಂಕ
ಉಳಿದ ೫ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರೂ ದೇಹದೊಳಗೆ ವಿಷ ಸೇರಿರುವು ದರಿಂದ ಯಾವಾಗ ಏನಾಗುತ್ತದೆಂದು ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆ ಎಸ್ಪಿ ಕುಶಲ್ ಚೌಕ್ಸೆ ಸೇರಿದಂತೆ ಬಾಗೇಪಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವರೆಡ್ಡಿಪಲ್ಲಿ ಗ್ರಾಮದ ಪರಿಚಿತ ವ್ಯಕ್ತ ಚೌಡರೆಡ್ಡಿ ಎಂಬಾತ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆ ಪ್ರವೇಶ ಮಾಡಿದ್ದ ಎಂಬ ಮಾಹಿತಿ ಇಡೀ ಘಟನೆಯ ಚಿತ್ರಣವನ್ನೇ ಬದಲಾಯಿಸಿದ್ದು ನಂತರ ಹೊರಗೆ ಬಂದ ಸತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಆಹಾರಕ್ಕೆ ವಿಷ ಪ್ರಾಶನ ಮಾಡಿ ಒಂದೇ ಕುಟುಂಬದ ಎಲ್ಲರನ್ನೂ ಸಾಮೂಹಿಕ ವಾಗಿ ಕೊಲ್ಲುವ ಪಿತೂರಿ ಬೆಳಕಿಗೆ ಬಂದಿದೆ. ಪರಿಚಿತ ವ್ಯಕ್ತಿ ಇಂತಹ ಅಮಾನುಷ ಕೃತ್ಯಕ್ಕೆ ಮುಂದಾಗುತ್ತಾನೆAದು ಯಾರೂ ಊಹಿಸಿರಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಯುವತಿಯ ಮಾಹಿತಿಯ ಬೆನ್ನುಹತ್ತಿದ ಪೊಲೀಷರು ಸಾಮೂಹಿಕ ಕೊಲೆಗೆ ಯತ್ನಿಸಿದ್ದ ಚೌಡರೆಡ್ಡಿ ಮತ್ತು ಆತನಿಗೆ ಮಾರ್ಗದರ್ಶನ ನೀಡಿದ್ದೇ ಅಲ್ಲದೆ ಘಟನೆಯ ಸಂಪೂರ್ಣ ಸೂತ್ರದಾರ ಎನ್ನಲಾಗುತ್ತಿರುವ ಅದೇ ಗ್ರಾಮದ ಪಾಪಿರೆಡ್ಡಿ ಎಂಬ ಇಬ್ಬರೂ ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡು ವಿವಿದ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದು ಪ್ರಕರಣದ ಪ್ರಮುಖ ಆರೋಪಿಗಳಾದ ಪಾಪಿರೆಡ್ಡಿ ಹಾಗೂ ಚೌಡರೆಡ್ಡಿಯನ್ನು ಬಂಧಿಸ ಲಾಗಿದೆ.
ಈ ವೇಳೆ ಮಾತನಾಡಿರುವ ಎಸ್ಪಿ ಅವರು ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಭರವಸೆ ನೀಡಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ಆರೋಪಿ ಚೌಡರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.