Andre Russell: ಕೋಲ್ಕತಾ ನೈಟ್ ರೈಡರ್ಸ್ ಜತೆಗಿನ 11 ವರ್ಷಗಳ ಪಯಣ ಮುಗಿಸಿದ ದೈತ್ಯ ಆಲ್‌ರೌಂಡರ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ತನ್ನ ಪ್ರಮುಖ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿದೆ. ರಸೆಲ್ 2014 ರಿಂದ ಕೆಕೆಆರ್ ತಂಡದ ಭಾಗವಾಗಿದ್ದಾರೆ. ಅವರು ತಂಡದ ಅತಿ ಹೆಚ್ಚು ರನ್ ಗಳಿಸಿದ ಮತ್ತು ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.
ತಮ್ಮ ದೈತ್ಯ ಆಲ್‌ರೌಂಡರ್ ಆಂಡ್ರೆ ರಸೆಲ್‌ರನ್ನೇ ರಿಲೀಸ್ ಮಾಡಿದ ಕೆಕೆಆರ್. -
ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜಿಗೂ ಮುನ್ನ ತಮ್ಮ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ (Andre Russell) ಅವರನ್ನು ಬಿಡುಗಡೆ ಮಾಡಿದೆ. ಈ ನಿರ್ಧಾರವು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ಆಘಾತಗೊಳಿಸಿದೆ. ರಸೆಲ್ 2014ರಲ್ಲಿ ಕೆಕೆಆರ್‌ಗೆ ಸೇರಿದ್ದರು. ಈ ಹರಾಜಿನ ಮೊದಲ ಸುತ್ತಿನಲ್ಲಿ ಆಂಡ್ರೆ ರಸೆಲ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಮನಸು ಮಾಡಿರಲಿಲ್ಲ. ಕೆಕೆಆರ್ ಎರಡನೇ ಸುತ್ತಿನಲ್ಲಿ ಅವರನ್ನು ಕೇವಲ 60 ಲಕ್ಷ ರು ಗಳಿಗೆ ಖರೀದಿಸಿತ್ತು. 2012 ಮತ್ತು 2013ರ ಸೀಸನ್‌ಗಳಲ್ಲಿ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದರು ಹಾಗೂ ಇಲ್ಲಿ ಅವರಿಂದ ಉತ್ತಮ ಪ್ರದರ್ಶನವನ್ನು ತೋರಿರಲಿಲ್ಲ.
2014ರಲ್ಲಿ ಕೆಕೆಆರ್ ಐಪಿಎಲ್ ಚಾಂಪಿಯನ್ ಆಗಿತ್ತು, ಆದರೆ ಆಂಡ್ರೆ ರಸೆಲ್ ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದಿದ್ದರು. 2015ರ ಟೂರ್ನಿಯಲ್ಲಿ ರಸೆಲ್ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತ್ತು. ಅವರು 11 ಇನಿಂಗ್ಸ್‌ಗಳಲ್ಲಿ 193ರ ಸ್ಟ್ರೈಕ್ ರೇಟ್‌ನಲ್ಲಿ 326 ರನ್ ಗಳಿಸಿದ್ದರು. ಅವರು ತಮ್ಮ ಬೌಲಿಂಗ್‌ನಲ್ಲಿ 14 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ. 2019ರ ಟೂರ್ನಿಯಲ್ಲಿ ಅವರು ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು. ನಿಷೇಧ ಕಾರಣ ಆಂಡ್ರೆ ರಸೆಲ್ 2017ರ ಐಪಿಎಲ್ ಟೂರ್ನಿಯನ್ನು ಕಳೆದುಕೊಂಡಿದ್ದರು.
IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!
ಕೆಕೆಆರ್ ಪರ ರಸೆಲ್ ಅಂಕಿಅಂಶಗಳು
ಕೆಕೆಆರ್ ಪರ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ರಸೆಲ್ ಈ ಫ್ರಾಂಚೈಸಿಗಾಗಿ 139 ಪಂದ್ಯಗಳ 115 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಈ ಅವಧಿಯಲ್ಲಿ ಅವರು 13 ಅರ್ಧಶತಕಗಳು ಸೇರಿದಂತೆ 175ರ ಸ್ಟ್ರೈಕ್ ರೇಟ್‌ನಲ್ಲಿ 2658 ರನ್ ಗಳಿಸಿದ್ದಾರೆ. ರಸೆಲ್ 187 ಬೌಂಡರಿಗಳು ಮತ್ತು 225 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರು ಕೆಕೆಆರ್‌ನ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಕೆಕೆಆರ್‌ನ ಪ್ರಮುಖ ವಿಕೆಟ್ ಪಡೆದವರ ಪಟ್ಟಿಯಲ್ಲಿ ರಸೆಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 139 ಪಂದ್ಯಗಳಲ್ಲಿ 124 ವಿಕೆಟ್‌ಗಳನ್ನು ಪಡೆದಿದ್ದಾರೆ, ಅವರ ಅತ್ಯುತ್ತಮ ಸ್ಪೆಲ್ 15ಕ್ಕೆ 5 ಆಗಿದೆ.
IPL 2026: ಮಯಾಂಕ್ ಅಗರ್ವಾಲ್ ಔಟ್! ಆರ್‌ಸಿಬಿ ರಿಲೀಸ್, ರಿಟೈನ್ ಆಟಗಾರರ ಪಟ್ಟಿ ಇಲ್ಲಿದೆ!
2024ರ ಟೂರ್ನಿಯಲ್ಲಿ ಮಿಂಚಿದ್ದ ಆಂಡ್ರೆ ರಸೆಲ್
2024ರ ಋತುವಿನಲ್ಲಿ ಕೆಕೆಆರ್ ಗೆಲುವಿನಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ರಸೆಲ್ 15 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಋತುವಿನಲ್ಲಿ ವಿದೇಶಿ ಬೌಲರ್‌ಗಳ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರು. ಅವರು ಒಂಬತ್ತು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ 222 ರನ್‌ಗಳನ್ನು ಬಾರಿಸಿದ್ದರು, 185ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ ಈ ರನ್‌ಗಳನ್ನು ಗಳಿಸಿದ್ದರೆ. 37ನೇ ವಯಸ್ಸಿನ ಕೆರಿಬಿಯನ್ ಆಲ್‌ರೌಂಡರ್ ಅನ್ನು 12 ಕೋಟಿ ರು.ಗೆ ಕೆಕೆಆರ್ ಉಳಿಸಿಕೊಂಡಿತ್ತು. ಆದರೆ ಈಗ ಕೆಕೆಆರ್ ಬಿಡುಗಡೆ ಮಾಡಿದೆ.