ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramadurga News: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಠಾವಧಿ ಪ್ರತಿಭಟನೆ

ಹಗಲು ರಾತ್ರಿ ಎನ್ನದೆ ಗ್ರಾಮ ಆಡಳಿತಾಧಿಕಾರಿಗಳು ವ್ಯಕ್ತಿಯ ಜನನದಿಂದ ಮರಣದವರೆಗೆ ದೃಢೀ ಕರಣ, ಆಸ್ತಿ ದೃಢೀಕರಣ ಸೇರಿದಂತೆ ಸಾರ್ವಜನಿಕರು ಹಾಗೂ ಸರಕಾರದ ನಡುವೆ ಕೊಂಡಿ ಯಾಗಿ ಕೆಲಸ ಮಾಡುತ್ತಿದ್ದೇವೆ. ಸರಕಾರ ಮಾತ್ರ ನಮ್ಮ ಸೇವೆಗೆ ತಕ್ಕಂತೆ ಭದ್ರತಾ ಸೌಲಭ್ಯಗಳನ್ನು ನೀಡುತ್ತಿಲ್ಲ

ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ

ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ, ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದ ಹಿನ್ನಲೆಯಲ್ಲಿ ತಮ್ಮ ಬೇಡಿಕೆಗಳನ್ನು ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಸಲ್ಲಿಸಿದರು.

Profile Ashok Nayak Feb 10, 2025 10:00 PM

ರಾಮದುರ್ಗ: ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಗ್ರಾಮ ಆಡಳಿತಾಧಿಕಾರಿಗಳ ಸಂಘಟನೆಯ ನೇತೃತ್ವದಲ್ಲಿ ರಾಜ್ಯಾಧ್ಯಂತ ನಡೆಯುತ್ತಿರುವ 2ನೇ ಹಂತದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಬೆಂಬಲಿಸಿ, ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳು ಸೇವೆಯಿಂದ ದೂರ ಉಳಿದು ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಅನಿರ್ದಿಷ್ಠಾವಧಿ ಧರಣಿ ಸತ್ಯಾ ಗ್ರಹ ನಡೆಸಿದರು. ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಟೆಂಕ್ ಹಾಕಿ ಪ್ರತಿಭಟನೆ ನಡೆಸು ತ್ತಿರುವ ಆಡಳಿತ ಅಧಿಕಾರಿಗಳು ಸರಕಾರ ಬೇಡಿಕೆಗಳ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಯಥಾಸ್ಥಿಯಲ್ಲಿ ಮುಂದುವರೆಯಲಿದೆ ಎಂದು ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಸಲ್ಲಿಸಿದರು.

ಹಗಲು ರಾತ್ರಿ ಎನ್ನದೆ ಗ್ರಾಮ ಆಡಳಿತಾಧಿಕಾರಿಗಳು ವ್ಯಕ್ತಿಯ ಜನನದಿಂದ ಮರಣದ ವರೆಗೆ ದೃಢೀಕರಣ, ಆಸ್ತಿ ದೃಢೀಕರಣ ಸೇರಿದಂತೆ ಸಾರ್ವಜನಿಕರು ಹಾಗೂ ಸರಕಾರದ ನಡುವೆ ಕೊಂಡಿ ಯಾಗಿ ಕೆಲಸ ಮಾಡುತ್ತಿದ್ದೇವೆ. ಸರಕಾರ ಮಾತ್ರ ನಮ್ಮ ಸೇವೆಗೆ ತಕ್ಕಂತೆ ಭದ್ರತಾ ಸೌಲಭ್ಯಗಳನ್ನು ನೀಡುತ್ತಿಲ್ಲ.

ಇದನ್ನೂ ಓದಿ: Ramadurga: ರಾಮದುರ್ಗ: ಭೂ ದಾಖಲೆಗಳ ಅಭಿಲೇಖಾಲಯದ ಗಣಕೀರಣ ವ್ಯವಸ್ಥೆಗೆ ಚಾಲನೆ

ಗ್ರಾಮ ಆಡಳಿತಾಧಿಕಾರಿಗಳ ಕೌಟುಂಬಿಕ ಹಾಗೂ ಕಾರ್ಯದೊತ್ತಡದಲ್ಲಿ ಉಂಟಾಗುವ ಸಮಸ್ಯೆ ಗಳನ್ನು ಬಗೆಹರಿಸುವಂತೆ ನೂರಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಒಂದನೇ ಹಂತದ ಧರಣಿ ಸತ್ಯಾಗ್ರಹವನ್ನು ನಡೆಸಿದ್ದೇವೆ. ಸರಕಾರ ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ವಿಷಾಧನೀಯ.

ಶೀಘ್ರ ಕಂದಾಯ ಸಚಿವರು ಸರಕಾರದ ಮಧ್ಯಸ್ಥಿಕೆ ವಹಿಸಿ, ನಮ್ಮ ರಾಜ್ಯ ಸಂಘದ ಪದಾಧಿಕಾರಿ ಗಳನ್ನು ಕರೆದು ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಹಿಂತಗೆದುಕೊಳ್ಳುವುದಿಲ್ಲ ಎಂದು ಅವರು ಮನವಿ ಮೂಲಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಮ್ಮ ಬೇಡಿಕೆಗಳನ್ನು ಮೇಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘಟನೆಯ ತಾಲೂಕಾಧ್ಯಕ್ಷ ಶಿವು ಗೊರವನ ಕೊಳ್ಳ, ಗೌರವಾಧ್ಯಕ್ಷ ರಂಗನಾಥ ದಾಸರ, ಉಪಾಧ್ಯಕ್ಷ ಲೋಕೇಶ ಚವ್ಹಾಣ, ಖಜಾಂಚಿ ಪ್ರವೀಣ ಖಾನಾಪೂರ, ಪ್ರಧಾನ ಕಾರ್ಯದರ್ಶಿ ಅತ್ತಾಉಲ್ಲಾಖಾನ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮಹೇಶ ತೆಂಗಿನಕಾಯಿ, ನಿಂಗನಗೌಡ ಚಿಗದಮ್ಮನವರ, ಬಸವರಾಜ ಕುಂಬಾರ, ಸದಸ್ಯರಾದ ಪರಂಡೆಪ್ಪ, ಸುನಿಲ್, ಸಮೀರ, ನಾರಾಯಣ ಗುಂಜೇರಿ, ಸಂತೋಷ ಬೀಳಗಿಕರ, ಸಂಜು ಹಿರೇಮಠ, ಮಹಾಂತೇಶ ಕೊಡಳ್ಳಿ, ಲಕ್ಷ್ಮಣ ಉಪ್ಪಾರ, ಸುನಿಲ್ ನರಗುಂದ, ಅಹನಂತ ಬಂಡಾರಿ, ಶಿವಲೀಲಾ ಬಾಗೇವಾಡಿ, ಸವಿತಾ ಪಂಡರಿ, ರೂಬಿನಾ, ಫಾತಿಮಾ ಅತ್ತಾರ, ಸುನಂದಾ ತಿಮ್ಮಾಪೂರ, ಅಶ್ವಿನಿ ಹವೇಲಿ, ಶೋಭಾ ಬೆಹರೆ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.