ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುಳ್ಳು ಆರೋಪದ ಕುರಿತು ಚರ್ಚೆಗೆ ಬರಲಿ; ಸಂಜಯ್ ಪಾಟೀಲ್‌ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

Lakshmi Hebbalkar: ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ಧೈರ್ಯವಿದ್ದರೆ 5 ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು ಹಾಕಿದ್ದಾರೆ.

ಸುಳ್ಳು ಆರೋಪದ ಕುರಿತು ಚರ್ಚೆಗೆ ಬರಲಿ; ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದರು. -

Profile
Siddalinga Swamy Aug 24, 2026 6:32 PM

ಬೆಳಗಾವಿ, ಆ.24: ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ಸಂಜಯ್ ಪಾಟೀಲ್ ಅವರಿಗೆ ಧೈರ್ಯವಿದ್ದರೆ 5 ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೇರ ಸವಾಲು ಹಾಕಿದ್ದಾರೆ.

ತಾಲೂಕಿನ ಮಣ್ಣೂರು ಗ್ರಾಮದಲ್ಲಿ 'ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್' (BDCC) ವತಿಯಿಂದ ಮಂಜೂರಾದ 50 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಾರಾಮತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಇಡೀ ರಾಜ್ಯದಲ್ಲೇ ಮನೆಮಾತಾಗುವಂತೆ ಅಭಿವೃದ್ಧಿ ಪಡಿಸುವುದು ನನ್ನ ಗುರಿ. ಎಲ್ಲರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಈ ಕ್ಷೇತ್ರವನ್ನು ಮಹಾರಾಷ್ಟ್ರದ 'ಬಾರಾಮತಿ' ಮಾದರಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಬೆಳೆಸಲಾಗುವುದು ಎಂದು ಹೇಳಿದರು.

ಗೃಹಲಕ್ಷ್ಮಿ ಮತ್ತು ಮಹಾರಾಷ್ಟ್ರದ 'ಲಾಡ್ಕಿ ಬಹಿನ್' ಯೋಜನೆ ಪ್ರಸ್ತಾಪ

ಗೃಹಲಕ್ಷ್ಮಿ ಯೋಜನೆ ಹಣದ ಕುರಿತು ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ʼಎರಡು ತಿಂಗಳು ಹಣ ಬಂದಿಲ್ಲ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ 25 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ಹಣ ತಲುಪಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗುವುದು ಸ್ವಲ್ಪ ತಡವಾಗಬಹುದು. ಇದುವರೆಗೆ ಪ್ರತಿಯೊಬ್ಬ ಮಹಿಳೆಗೆ ಸುಮಾರು 70 ಸಾವಿರ ರೂಪಾಯಿವರೆಗೆ ಅನುಕೂಲವಾಗಿದೆʼ ಎಂದರು.‌

Karnataka SIR: ಎಸ್ಐ‌ಆರ್‌ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್‌!

ಮಹಾರಾಷ್ಟ್ರದ ಉದಾಹರಣೆ ನೀಡಿದ ಅವರು, "ಕರ್ನಾಟಕ ಸರ್ಕಾರದ ವಿರುದ್ಧ ಬೆಟ್ಟು ಮಾಡುವ ಮುನ್ನ ವಿರೋಧ ಪಕ್ಷದವರು ಮಹಾರಾಷ್ಟ್ರದ 'ಲಾಡ್ಕಿ ಬಹಿನ್' ಯೋಜನೆಯ ಕಥೆ ಏನಾಗಿದೆ ಮತ್ತು ಅಲ್ಲಿ ಎಷ್ಟು ಕಂತುಗಳನ್ನು ನೀಡಿದ್ದಾರೆ ಎಂಬುದನ್ನು ಯೋಚಿಸಲಿ. ನಾವು ಕೆಲಸ ಮಾಡುವವಳು, ಆದರೆ ಇವರು ಮನೆಯಲ್ಲೇ ಕುಳಿತು ವಾಟ್ಸಾಪ್‌ನಲ್ಲಿ ಆರೋಪ ಮಾಡುವವರು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.