Assembly Chief Whip Ashoka Pattana: ರೈತರ ಜಮೀನುಗಳ ರಸ್ತೆ ಸುಧಾರಣೆಗೆ ಸರಕಾರದಿಂದ ಅನುದಾನ ಬಿಡುಗಡೆ: ಅಶೋಕ ಪಟ್ಟಣ
ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಶನಿವಾರ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಅಡಿಯಲ್ಲಿ ಸುಮಾರು 29 ಲಕ್ಷ ವೆಚ್ಚದಲ್ಲಿ ಕಲ್ಲೂರ-ಮುಳ್ಳೂರ ಗ್ರಾಮಗಳ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಶನಿವಾರ ಮಾತನಾಡಿದರು
ತಾಲೂಕಿನ ಕಲ್ಲೂರ-ಮುಳ್ಳೂರ ಗ್ರಾಮಗಳ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಶನಿವಾರ ಭೂಮಿಪೂಜೆ ನೆರವೇರಿಸಿದರು. -
ರಾಮದುರ್ಗ: ರಾಜ್ಯ ಸರಕಾರ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆಗೆ ಮೊದಲ ಆಧ್ಯತೆ ನೀಡುತ್ತಿದೆ. ತಾಲೂಕಿನ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಹಂತ ಹಂತವಾಗಿ ಸುಧಾರಣೆ ಮಾಡಲು ಕ್ರಮ ತೆಗದುಕೊಳ್ಳುವುದಾಗಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ(Assembly Chief Whip Ashoka Pattana) ಭರವಸೆ ನೀಡಿದರು.
ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಶನಿವಾರ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಅಡಿಯಲ್ಲಿ ಸುಮಾರು 29 ಲಕ್ಷ ವೆಚ್ಚದಲ್ಲಿ ಕಲ್ಲೂರ-ಮುಳ್ಳೂರ ಗ್ರಾಮಗಳ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇದನ್ನೂ ಓದಿ: MLA Ashoka Pattana: ಡಿಸಿಸಿ ಬ್ಯಾಂಕ್ ಗೆ ನಾಮನಿರ್ದೇಶಕ ಸದಸ್ಯರಾಗಿ ಶಾಸಕ ಪಟ್ಟಣ ಆಯ್ಕೆ
ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ದುರಸ್ಥಿಗೆ ಕ್ಷೇತ್ರದ ಜನತೆ ಆಗ್ರಹಿಸಿದ್ದು, ಅವುಗಳ ದುರಸ್ಥಿಗೂ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸುತ್ತೇನೆ. ಸದ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು, ರಸ್ತೆ ಮಧ್ಯದಲ್ಲಿ ಹಳ್ಳಕ್ಕೆ ಬ್ರೀಡ್ಜ ಕಂ-ಬ್ಯಾರೇಜ್ ನಿರ್ಮಾಣ ಮಾಡಲು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಶ್ರೀಕಾಂತ ಪೂಜಾರ, ಸಿದ್ದಪ್ಪ ಪೂಜಾರ, ದೊಡಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಸಿದ್ದಪ್ಪ ಸುರಕೋಡ, ಶಿವರಡ್ಡಿ ಹೂಲಿಕಟ್ಟಿ, ಬಸನಗೌಡ ಪಾಟೀಲ, ಮಹಾದೇವ ಮದಕಟ್ಟಿ, ಶರಣಪ್ಪ ಹಕಾರಿ, ಮೇಘರಾಜ ಜಾಧವ, ಪಾಂಡುರಂಗ ಜಾಧವ, ಕೂಮಾರ ಕೊಳ್ಸೆ, ಸಿದ್ದನಗೌಡ ಕೊಡ್ಲಿವಾಡ, ನರಗುಂದ ವಿಭಾಗದ ಮಲಪ್ರಭಾ ಮತ್ತು ಘಟಪ್ರಭಾ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಯೋಜನೆಗಳ ಕಾರ್ಯಾಲಯದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಜೀವನಕುಮಾರ ಸೇರಿದಂತೆ ಇತರರಿದ್ದರು.