ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hindalga Jail: ಹಿಂಡಲಗಾ ಜೈಲಿನ ಮತ್ತೊಂದು ಕರ್ಮಕಾಂಡ ಬಟಾಬಯಲು; ಗಾಂಜಾಕ್ಕಾಗಿ ಜೈಲರ್‌ ಮೇಲೆ ಕೈದಿಯಿಂದ ಡೆಡ್ಲಿ ಅಟ್ಯಾಕ್‌

Hindalga Jail: ಸಹಾಯಕ ಜೈಲರ್ ಮೇಲೆ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಸಹಾಯಕ ಜೈಲರ್ ಜಿ ಆರ್ ಕಾಂಬಳೆ ಮೇಲೆ ಕೈದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ವಿಚಾರಣಾಧೀನ ಕೈದಿ ಶಾಹಿದ್ ಖುರೇಷೆಯಿಂದ ಹಲ್ಲೆ ನಡೆದಿದೆ. ಡಿಸೆಂಬರ್ 11ರಂದು ಜೈಲಿನಲ್ಲಿ ನಡೆದಂತಹ ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ. ಅಧಿವೇಶನ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿದೆ.

Profile Rakshita Karkera Dec 15, 2024 10:28 AM
ಬೆಳಗಾವಿ: ಹಿಂಡಲಗಾ ಜೈಲು(Hindalga Jail) ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆಯಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳು ಸಿಗರೇಟ್ ಸೇದುತ್ತಾ ಇಸ್ಪೀಟ್ ಆಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಹಿಂಡಲಗಾ ಜೈಲಿನಲ್ಲಿ ಮತ್ತೊಂದು ಘಟನೆ ನಡೆದಿದ್ದು ಗಾಂಜಾಕ್ಕಾಗಿ ಜೈಲರ್ ಹಾಗೂ ಕೈದಿ ನಡುವೆ ಮಾರಾಮಾರಿಯೇ ನಡೆದಿದೆ. ವಿಚಾರಣಾಧೀನ ಕೈದಿ ಒಬ್ಬ ಜೈಲರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಘಟನೆ ತಡವಾಗಿ ಬಳಕೆಗೆ ಬಂದಿದೆ.
ಸಹಾಯಕ ಜೈಲರ್ ಮೇಲೆ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಸಹಾಯಕ ಜೈಲರ್ ಜಿ ಆರ್ ಕಾಂಬಳೆ ಮೇಲೆ ಕೈದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ವಿಚಾರಣಾಧೀನ ಕೈದಿ ಶಾಹಿದ್ ಖುರೇಷೆಯಿಂದ ಹಲ್ಲೆ ನಡೆದಿದೆ. ಡಿಸೆಂಬರ್ 11ರಂದು ಜೈಲಿನಲ್ಲಿ ನಡೆದಂತಹ ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ. ಅಧಿವೇಶನ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಬೆಳಗಾವಿಯ ಹಿಂಡಲಗಾ ಜೈಲು ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ವೈದ್ಯರಿಂದ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್ ಎಸ್ ಕಾಯ್ದೆಯ ಅಡಿ 132, 115 (2) 352 ಹಾಗೂ NDPS ಕಾಯ್ದೆ 42 ಅಡಿಯಲ್ಲಿ ಕೇಸ್ ದಾಖಲಾಗಿದೆ. ಜೈಲು ಮುಖ್ಯ ಅಧಿಕ್ಷಕ ಕೃಷ್ಣಮೂರ್ತಿ ದೂರು ದಾಖಲಿಸಿದ್ದಾರೆ.
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಿರಿಯ ವೀಕ್ಷಕ ಬಿ.ಎಲ್‌.ಮೆಳವಂಕಿ, ವೀಕ್ಷಕ ವಿ.ಟಿ.ವಾಘಮೋರೆ ಅಮಾನತುಗೊಂಡ ಜೈಲಿನ ಸಿಬ್ಬಂದಿಗಳಾಗಿದ್ದಾರೆ. ಉತ್ತರ ವಲಯದ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ.ಶೇಷ ಆದೇಶ ಹೊರಡಿಸಿದ್ದಾರೆ.
ಇಬ್ಬರು ಕೈದಿಗಳ ಮಧ್ಯೆ ಗಲಾಟೆ ನಡೆಯದಂತೆ ನೋಡಿಕೊಳ್ಳುವಲ್ಲಿ ಸಿಬ್ಬಂದಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಸಾಯಿಕುಮಾರ್‌ ಮತ್ತು ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಂಕರಪ್ಪ ಕೊರವರ ಮಧ್ಯೆ ಜುಲೈ 29ರಂದು ಗಲಾಟೆ ನಡೆದಿತ್ತು.
ಈ ಸುದ್ದಿಯನ್ನೂ ಓದಿ: Keerthy Suresh : ಕೀರ್ತಿ ಸುರೇಶ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್‌ , ಗೋವಾದಲ್ಲಿ ನಡೆಯಲಿದೆ ಅದ್ಧೂರಿ ಮದುವೆ!