ಬನಶಂಕರಿ ಜಾತ್ರೆಯಲ್ಲಿ ನಗೆಗಡಲಲ್ಲಿ ತೇಲಿಸುತ್ತಿರುವ ನಾಟಕ ಸುಮ್ಮನಿರ ಸುಂದ್ರಿ
ಬನಶಂಕರಿ ಜಾತ್ರೆಯಲ್ಲಿ ಕಲ್ಲೂರಿನ ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯಸಂಘದಿಂದ ನಡೆಯುತ್ತಿರುವ ಸುಮ್ಮನಿರ ಸುಂದ್ರಿ ಎಂಬ ಸಾಮಾಜಿಕ ನಾಟಕದದಲ್ಲಿ ಸುಂದ್ರಿಯಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬರ ಸೆಳೆಯುತ್ತಿದ್ದಾಳೆ
ಬಸವರಾಜ್ ಉಳ್ಳಾಗಡ್ಡಿ, ಬಾದಾಮಿ
ತಾಲೂಕಿನ ಹಂಸನೂರ ಗ್ರಾಮದ ನಾಟಕ ರಂಗಭೂಮಿ ಕಲಾವಿದೆ ಸೌಂದರ್ಯ ಬಾದಾಮಿ (ಚಿಮಲ್) ವೃತ್ತಿ ರಂಗಭೂಮಿ ಕಲಾವಿದೆಯಾಗಿ ಬಾದಾಮಿ ತಾಲೂಕು ಸೇರಿದಂತೆ ಉತ್ತರ ಕರ್ನಾ ಟಕದ ವಿವಿಧ ಗ್ರಾಮಗಳಲ್ಲಿ ಜರುಗುವ ಜಾತ್ರೆಗಳಲ್ಲಿ ಪ್ರದರ್ಶಿಸುವ ನಾಟಕಗಳಲ್ಲಿ ತಮ್ಮ ಮನೋಜ್ಞವಾಗಿ ಹಾಸ್ಯ ಪಾತ್ರಗಳಲ್ಲಿ ಯುವ ಸಮೂಹವನ್ನು ಮಂತ್ರಮುಗ್ದರನ್ನಾಗಿಸಿ ಕಲೆಯ ಬಲೆಯೊಳಗೆ ಬಿಳಿಸಿ ಮಿಂಚುತ್ತಿರುವ ಯುವ ಕಲಾವಿದೆಯು ಬನಶಂಕರಿ ಜಾತ್ರೆಯಲ್ಲಿ ಕಲ್ಲೂರಿನ ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯಸಂಘದಿಂದ ನಡೆಯುತ್ತಿರುವ ಸುಮ್ಮನಿರ ಸುಂದ್ರಿ ಎಂಬ ಸಾಮಾಜಿಕ ನಾಟಕದದಲ್ಲಿ ಸುಂದ್ರಿಯಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬರ ಸೆಳೆಯು ತ್ತಿದ್ದಾಳೆ.
Belagavi News: ಸಾಲ ಮರು ಪಾವತಿಸದ್ದಕ್ಕೆ ಹಸುಗೂಸು, ಬಾಣಂತಿಯನ್ನು ಮನೆಯಿಂದ ಹೊರಹಾಕಿದ ಫೈನಾನ್ಸ್ ಕಂಪನಿ!
ಗುರು ಮಲ್ಲಿಕಾರ್ಜುನ ನಾಟ್ಯಸಂಘದಿಂದ ನಡೆಯುತ್ತಿರುವ ಸುಮ್ಮನಿರ ಸುಂದ್ರಿ ಎಂಬ ಸಾಮಾಜಿ ನಾಟಕ ಕಂಪನಿಯ ಮಾಲಕ ಮಂಟೇಶ ಬಸಪ್ಪ ದಂಡಿನ (ಕಲ್ಲೂರ) ಇವರ ಒಡೆತನದಲ್ಲಿ ಕವಿ ಶಾಮ ಭೋಸಲೆ ವಿರಚಿತ ನಾಟಕವು ಪೌರಾಣಿಕ ಪಾತ್ರಗಳೊಂದಿಗೆ ಆಧುನಿಕತೆಯ ಸ್ಪರ್ಶವನ್ನು ಈ ಕಥೆಯು ಹೊಂದಿದ್ದು ತಪಸ್ವಿಯ ಧ್ಯಾನ ಭಂಗಗೊಳಿಸಿದ ಇಚ್ಚಾಧಾರಿ ನಾಗಗಳು ಶಾಪಕ್ಕೆ ಗುರಿ ಯಾಗಿ ಮನುಷ್ಯ ಜನ್ಮ ತಾಳುತ್ತವೆ.
ತಪಸ್ವಿಯೂ ಹಾವುಗಳ ಮಾರಣ ಹೋಮ ನಡೆಸಿ ಅದರ ವಿಷವನ್ನು ದೇಶ ವಿದೇಶಕ್ಕೆ ಕಳ್ಳು ಸಾಗಾಣಿಕೆ ಮಾಡುವ ಖಳನಾಯಕನ ಪಾತ್ರದಲ್ಲಿ ಗುಡುಗಿದರೆ ಶಾಪದಿಂದ ಮೃತನಾದ ನಾಗ ವಾಸು ಹೆಸರಿನಲ್ಲಿ ಅರಣ್ಯ ಇಲಾಖಾಧಿಕಾರಿ ಪಾತ್ರದಾರಿಯಾಗಿ ಕಳನಾಯಕನನ್ನು ಮಣಿಸುವ ಜೊತೆಗೆ ತನ್ನ ಪ್ರಿಯತಮೆಯನ್ನು ಕೂಡುತ್ತಾನೆ.
ತಪಸ್ವಿಯೂ ಇವರ ಜನ್ಮ ಜನ್ಮಗಳ ಪ್ರೀಯಿಗೆ ಕರುಗಿ ಆಶೀವಾಧದ ಮಾಡುವ ಕಠೆಯನ್ನು ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುವಂತೆ ಮಾಡಿದ್ದು ಇದರಲ್ಲಿ ಅಭಿನಯಿಸಿದ ಸೌಂದರ್ಯ ಬಾದಾಮಿ, ಜ್ಯೋತಿ ಗದಗ, ಸಾಗರ ಕಮತಗಿ, ಧನುಶ್ರಿ ಪಾಟೀಲ, ವಿಜಯಶೇಖರ ಆನೆಗುಂದಿ, ಶಾಮ ಭೋಸಲೆ, ಮೂರ್ತಿ ಕೊಪ್ಪಳ, ಕಿರಣ ಮಂಗಳೂರ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ಇದರಿಂದ ಜ.೧೨ರ ಪಲ್ಯದ ಹಬ್ಬದಿಂದ ಇಲ್ಲಿಯವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ, ಫೆ.೧೨ ಬಾರತ ಹುಣ್ಣಿಮೆಯವರೆಗೂ ಜಾತ್ರೆ ಇರುತ್ತದೆ.