ಬೆಂಗಳೂರು, ಫೆ. 23: ಕೆಲಸದ ನಿಮಿತ್ತ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ಹಲವು ಮಂದಿ ಇದ್ದಾರೆ. ಇಲ್ಲಿನ ಜೀವನ ಶೈಲಿ ದುಬಾರಿಯಾಗಿದ್ದು, ಹೆಚ್ಚಿನವರಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ. ಇಲ್ಲಿನ ಟ್ರಾಫಿಕ್ ಮತ್ತು ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ದೂರುಗಳಿದ್ದರೂ, ಇಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ಹವಾಮಾನ, ತಂಪಾದ ವಾತಾವರಣ ಇರುತ್ತದೆ ಎಂದು ಹೇಳುವವರಿಗೂ ಕಡಿಮೆ ಏನಿಲ್ಲ. ಇತ್ತೀಚೆಗೆ ಹೊರಗಿನಿಂದ ಬಂದ ವ್ಯಕ್ತಿಯೊಬ್ಬರು ಬೆಂಗಳೂರಿನ ಹವಾಮಾನಕ್ಕೆ ಫಿದಾ ಆಗಿದ್ದು ವರ್ಲ್ಡ್ ಬೆಸ್ಟ್ ಸಿಟಿ ಎಂದು ಹೊಗಳಿದ್ದಾರೆ. ಸದ್ಯ ಇವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ಅಮರನಾಥ್ ಶಿವಶಂಕರ್ ಎಂಬ ವ್ಯಕ್ತಿ ಬೆಂಗಳೂರಿನ ವಾತಾವರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ʼʼನೀವು ವಿದೇಶದಲ್ಲಿ ವಾಸಿಸುತ್ತಿದ್ದರೆ, ಬೆಂಗಳೂರಿನ ಹವಾಮಾನ ಎಷ್ಟು ಅದ್ಭುತ ಎಂಬುದು ನಿಮಗೆ ಅರ್ಥವಾಗುತ್ತದೆ... ಇದು ನಿಜಕ್ಕೂ ಮೆಚ್ಚುವಂತದ್ದುʼʼ ಎಂದಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, “ನೀವು ಪಾಶ್ಚಿಮಾತ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದರೆ, ಬೆಂಗಳೂರಿನ ಹವಾಮಾನ ಬಗ್ಗೆ ನೀವು ಅರಿತುಕೊಳ್ಳುತ್ತೀರಿ. ಮಾಲಿನ್ಯವನ್ನು ಕಡಿಮೆ ಮಾಡಲು, ನಮ್ಮ ರಸ್ತೆಗಳನ್ನು ಸರಿ ಪಡಿಸಲು, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಮತ್ತು ನಮ್ಮ ಮಳೆನೀರು ಚರಂಡಿಗಳನ್ನು ಸರಿಪಡಿಸಲು ನಾವು ಸಾಧ್ಯವಾದರೆ, ವಿಶ್ವದ ಶ್ರೇಷ್ಠ ನಗರಗಳಲ್ಲಿ ಒಂದಾಗುತ್ತದೆ. ಬೆಂಗಳೂರನ್ನು ಮತ್ತೆ ಶ್ರೇಷ್ಠಗೊಳಿಸಿʼʼ ಎಂದು ಬರೆದುಕೊಂಡಿದ್ದಾರೆ.
ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಈ ಪೋಸ್ಟ್ ತ್ವರಿತವಾಗಿ ಜನಪ್ರಿಯತೆ ಗಳಿಸಿದ್ದು, 31,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ನೆಟ್ಟಿಗರೊಬ್ಬರು ''ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಹವಾಮಾನ ಸ್ವಲ್ಪ ಹದಗೆಟ್ಟಿದೆ. ಆದರೆ ಕರ್ನಾಟಕದೊಳಗಿನ ಇತರ ಸ್ಥಳಗಳಿಗೆ ಹೋಲಿಸಿದರೆ ಇದು ತುಂಬಾ ಉತ್ತಮವಾಗಿದೆ" ಎಂದಿದ್ದಾರೆ. ಮತ್ತೊಬ್ಬರು ʼʼಇಲ್ಲಿ ನಾನು ಕೆಲವು ವರ್ಷ ಇದ್ದೆ. ಮತ್ತೆ ಬೆಂಗಳೂರಿಗೆ ಹೋಗಲು ಇಷ್ಟ ಪಡುತ್ತೇನೆʼʼ ಎಂದಿದ್ದಾರೆ.