#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Actor Shivarajkumar: ನಟ ಶಿವರಾಜ್‌ ಕುಮಾರ್‌ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah: ಅಮೆರಿಕದಲ್ಲಿ ಮೂತ್ರಕೋಶ ಕ್ಯಾನ್ಸರ್ ಸರ್ಜರಿ ಮಾಡಿಸಿಕೊಂಡು ಮರಳಿದ ಶಿವಣ್ಣ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದರು. ಇದೀಗ ಬೆಂಗಳೂರಿನ ಶಿವರಾಜ್‌ ಕುಮಾರ್‌ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ನಟ ಶಿವರಾಜ್‌ ಕುಮಾರ್‌ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Profile Prabhakara R Jan 27, 2025 4:25 PM

ಬೆಂಗಳೂರು: ಅನಾರೋಗ್ಯ ನಿಮಿತ್ತ ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಪಡೆದು ಗುಣಮುಖರಾಗಿ ಬಂದಿರುವ ಚಿತ್ರರಂಗದ ಖ್ಯಾತ ನಟ, ಆತ್ಮೀಯರು ಆದ ಶಿವರಾಜ್ ಕುಮಾರ್ (Actor Shivarajkumar) ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.

ಈ ವೇಳೆ ಮಾತನಾಡಿರುವ ಸಿಎಂ ಅವರು, ಶಿವರಾಜ್ ಕುಮಾರ್ ಅವರು ಮತ್ತೆ ಹಿಂದಿನಂತೆ ಕ್ರಿಯಾಶೀಲರಾಗಿರುವುದು ಕಂಡು ಖುಷಿಯಾಯಿತು. ಅಭಿಮಾನಿಗಳ ಹರಕೆ - ಹಾರೈಕೆ, ಆತ್ಮಬಲದಿಂದ ಅನಾರೋಗ್ಯವನ್ನು ಗೆದ್ದು ಬಂದಿರುವ ಶಿವರಾಜ್ ಕುಮಾರ್ ಅವರ ಮುಂದಿನ ಜೀವನ ಸುಖ - ಶಾಂತಿಯಿಂದ ಕೂಡಿರಲಿ‌ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

Shivanna 2.0

ಈ ಸುದ್ದಿಯನ್ನೂ ಓದಿ | Actor Anant Nag: ಪದ್ಮ ಭೂಷಣ ಪ್ರಶಸ್ತಿ ಘೋಷಣೆ; ಹಿರಿಯ ನಟ ಅನಂತ್‌ ನಾಗ್‌ ಹೇಳಿದ್ದೇನು?

ಪದ್ಮ ಭೂಷಣ ಪುರಸ್ಕೃತ ಅನಂತ್‌ನಾಗ್‌ಗೆ ಕಿಚ್ಚನ ಚಪ್ಪಾಳೆ

Kichcha Sudeepa

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಕಳೆದ 115 ದಿನಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 (Bigg Boss Kannada 11) ಕೊನೆಯ ಹಂತಕ್ಕೆ ತಲುಪಿದೆ. ಈಗಾಗಲೇ ಫಿನಾಲೆ ವೇದಿಕೆಗೆ ಆಗಮಿಸಿರುವ ನಿರೂಪಕ ಕಿಚ್ಚ ಸುದೀಪ್‌ (Kichcha Sudeepa) ಸ್ಪರ್ಧಿಗಳನ್ನು ಮಾತನಾಡಿಸುತ್ತಿದ್ದಾರೆ. ಕೊನೆಯ ಹಂತಕ್ಕೆ ತಲುಪಿರುವ ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್ ಕಿಶನ್ ಹಾಗೂ ಮೋಕ್ಷಿತಾ ಪೈ ಪೈಕಿ ಯಾರಾಗ್ತಾರೆ ವಿನ್ನರ್‌ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮ ಭೂಷಣ (Padma Bhushan) ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಅನಂತ್‌ ನಾಗ್‌ (Anant Nag) ಅವರನ್ನು ಸುದೀಪ್‌ ಅಭಿನಂದಿಸಿದ್ದಾರೆ.

ಫಿನಾಲೆ ವೇದಿಕೆಗೆ ಎಲ್ಲರನ್ನೂ ಸ್ವಾಗತಿಸಿದ ಸುದೀಪ್‌ ಅವರು ಆರಂಭದಲ್ಲೇ ಅನಂತ್‌ ನಾಗ್‌ ಅವರಿಗೆ ಶುಭಾಶಯ ತಿಳಿಸಿದರು. ʼ‘ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಘೋಷಣೆಯಾಗಿದೆ. ಇದು ಹಲವು ವರ್ಷಗಳ ಹಲವರ ಕೋರಿಕೆ ಆಗಿತ್ತು. ಈ ಕೋರಿಕೆ ಇದೀಗ ಈಡೇರಿದೆ. ಅನಂತ್‌ ನಾಗ್‌ ಸರ್‌ ಅವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳು. ಲೇಟ್‌ ಆದರೂ ಲೇಟೆಸ್ಟ್‌ ಆಗಿ ಬಂದಿದೆ. ಇದು ನಮಗೆಲ್ಲ ಹೆಮ್ಮೆ ತಂದಿದೆʼʼ ಎಂದಿದ್ದಾರೆ.

ಗಣರಾಜ್ಯೋತ್ಸವ ಮುನ್ನಾ ದಿನವಾದ ಜ. 25ರಂದು ಕೇಂದ್ರ ಸರ್ಕಾರ ಈ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಪೈಕಿ ಕರ್ನಾಟಕಕ್ಕೆ ಒಟ್ಟು 9 ಪದ್ಮ ಪ್ರಶಸ್ತಿ ಲಭಿಸಿದ್ದು, ಇದರಲ್ಲಿ 1 ಪದ್ಮ ವಿಭೂಷಣ, 2 ಪದ್ಮ ಭೂಷಣ ಮತ್ತು 6 ಪದ್ಮ ಶ್ರೀ ಸೇರಿದೆ. ಈ ಪೈಕಿ ಕನ್ನಡಿಗರ ಬಹು ಕಾಲದ ಬೇಡಿಕೆಯಂತೆ ಅನಂತ್‌ ನಾಗ್‌ ಅವರಿಗೆ ಪದ್ಮ ಭೂಷಣ ಲಭಿಸಿದೆ. ಅನಂತ್‌ ನಾಗ್‌ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅನೇಕ ಗಣ್ಯರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Anant Nag: ಪದ್ಮ ಭೂಷಣ ಪ್ರಶಸ್ತಿ ಘೋಷಣೆ; ಹಿರಿಯ ನಟ ಅನಂತ್‌ ನಾಗ್‌ ಹೇಳಿದ್ದೇನು?

ಅನಂತ್‌ ನಾಗ್‌ ಕಳೆದ 50 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಇಂಗ್ಲಿಷ್‌ ಚಿತ್ರಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ತೆರೆಕಂಡ ʼಸಂಕಲ್ಪʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಅನಂತ್‌ ನಾಗ್‌ ಸುಮಾರು 4 ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜತೆಗೆ ವಿವಿಧ ಪುರಸ್ಕಾರಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಹೀಗಾಗಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕೆಂಬ ಕೂಗು ಕೇಳಿ ಬಂದಿತ್ತು. ಸದ್ಯ ಈ ಕನಸು ನನಸಾಗಿದೆ.