ಸ್ಪರ್ಶ್ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ "ಕ್ಯಾನ್ಸರ್ ಚಿಕಿತ್ಸಾ ಘಟಕ"ಕ್ಕೆ ಚಾಲನೆ ನೀಡಿದ ನಟ ಶಿವರಾಜ್ ಕುಮಾರ್
ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಹಿನ್ನೆಲೆಯಲ್ಲಿ ಸುಧಾರಿತ, ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ದಕ್ಷಿಣ ಭಾರತದಲ್ಲಿ ಒದಗಿಸುವ ನಿಟ್ಟಿನಲ್ಲಿ ಸ್ಪರ್ಶ್ ಆಸ್ಪತ್ರೆ ಸಮೂಹವು ತನ್ನ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ ಆವರಣದಲ್ಲಿ ಸ್ಪರ್ಶ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್ (ಸ್ಪರ್ಶ್ ಕ್ಯಾನ್ಸರ್ ಚಿಕಿತ್ಸಾ ಘಟಕ) ತೆರೆದಿದ್ದು, ನಟ ಶಿವರಾಜ್ ಕುಮಾರ್ ಚಾಲನೆ ನೀಡಿದರು.
                                -
                                
                                Ashok Nayak
                            
                                Nov 4, 2025 5:01 PM
                            ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಹಿನ್ನೆಲೆಯಲ್ಲಿ ಸುಧಾರಿತ, ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ದಕ್ಷಿಣ ಭಾರತದಲ್ಲಿ ಒದಗಿಸುವ ನಿಟ್ಟಿನಲ್ಲಿ ಸ್ಪರ್ಶ್ ಆಸ್ಪತ್ರೆ ಸಮೂಹವು ತನ್ನ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ ಆವರಣದಲ್ಲಿ ಸ್ಪರ್ಶ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್ (ಸ್ಪರ್ಶ್ ಕ್ಯಾನ್ಸರ್ ಚಿಕಿತ್ಸಾ ಘಟಕ) ತೆರೆದಿದ್ದು, ನಟ ಶಿವರಾಜ್ ಕುಮಾರ್ ಚಾಲನೆ ನೀಡಿದರು.
ಸ್ಪರ್ಶ್ ಆಸ್ಪತ್ರೆಯ ಯಶಸ್ವಿ ಪಯಣದಲ್ಲಿ ಈ ನೂತನ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯು ಮತ್ತೊಂದು ಮೈಲಿಗಲ್ಲಾಗಿದೆ. ಸುಧಾರಿತ ವೈದ್ಯಕೀಯ ತಂತ್ರಜ್ಞಾನ, ಬಹು ವಿಭಾಗೀಯ ತಜ್ಞರು ಹಾಗೂ ಸಹಾನುಭೂತಿಯೊಂದಿಗಿನ ಆರೈಕೆಯ ಮೂಲಕ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕ್ಯಾನ್ಸರ್ ಆರೈಕೆಯ ನಿಟ್ಟಿನಲ್ಲಿ ಸ್ಪರ್ಶ್ ಆಸ್ಪತ್ರೆಯ ಬದ್ಧತೆಗೆ ಸಾಕ್ಷಿಯಾಗಲಿದೆ.
ನಟ ಶಿವರಾಜ್ ಕುಮಾರ್ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಸ್ಪರ್ಶ್ ಆಸ್ಪತ್ರೆ ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸಾ ಘಟಕ ತೆರೆದಿರುವುದು ಶ್ಲಾಘನೀಯ, ಇಂದಿನ ಕಾಲಘಟಕ್ಕೆ ಇಂತಹ ಘಟಕಗಳ ಅವಶ್ಯಕತೆ ಹೆಚ್ಚು ಎಂದರು.
ಇದನ್ನೂ ಓದಿ: Bangalore Flat Rent: ಬೆಂಗಳೂರಿನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್ ಕೇಳಿದ ಮಾಲೀಕ!
ಸ್ಪಶ್೯ ಸಮೂಹ ಆಸ್ಪತ್ರೆಗಳ ಅಧ್ಯಕ್ಷ ಡಾ.ಶರಣ್ ಶಿವರಾಜ ಪಾಟೀಲ್ ಮಾತನಾಡಿ, ಸ್ಪಶ್೯ ಆಸ್ಪತ್ರೆ ಸಮೂಹಕ್ಕೆ ಕ್ಯಾನ್ಸರ್ ಕೇಂದ್ರ ಸೇರ್ಪಡೆ ಮಾಡಿತ್ತಿರುವುದು ಹೆಮ್ಮೆ ತಂದಿದೆ. ನಮ್ಮ ತಂದೆ ಶಿವರಾಜ್ ವಿ.ಪಾಟೀಲ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದುದನ್ನು ಹತ್ತಿರದಿಂದ ನೋಡಿದಾಗ ಕ್ಯಾನ್ಸರ್ ಆಸ್ಪತ್ರೆ ಅಆರಂಭಿಸಬೇಕೆಂಬ ದೃಢ ನಿರ್ಧಾರ ಮಾಡಿದೆ. ಇಂದು ಅದು ಕೈಗೂಡಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರು ಇತರ ಕಾಯಿಲೆಗಳ ಸಮಸ್ಯೆಗಳನ್ನ್ನೂ ಎದುರಿಸು ತ್ತಿರುತ್ತಾರೆ. ಇವರಿಗೆ ಬಹು ವಿಭಾಗೀಯ ಸಮಗ್ರ ಚಿಕಿತ್ಸೆ ಅಗತ್ಯವಿರುತ್ತದೆ. ಸ್ಪಶ್೯ ಆಸ್ಪತ್ರೆ ಸಮೂಹದ ತಜ್ಞ ವೈದ್ಯರು ಕೇವಲ ಕ್ಯಾನ್ಸರ್ ಮಾತ್ರ ವಲ್ಲದೇ ಕ್ಯಾನ್ಸರ್ ಜೊತೆಗಿನ ಇತರ ಕಾಯಿಲೆ ಗಳಿಗೂ ವಿಶ್ವ ದರ್ಜೆಯ ಚಿಕಿತ್ಸೆ ಒದಗಿಸಲಿದ್ದು ಈ ಕ್ಯಾನ್ಸರ್ ಕೇಂದ್ರವು ಚಿಕಿತ್ಸೆ ಮಾತ್ರವಲ್ಲದೆ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದೆ ಎಂದರು. ಬೆಂಗಳೂರಿನ ಜನತೆಗೆ ಅನುಕೂಲವಾಗುವಂತೆ ಇನ್ನೆರಡು ಕ್ಯಾನ್ಸರ್ ಕೇಂದ್ರ ಗಳನ್ನು ಮುಂದಿನ ಒಂದು ವರ್ಷದೊಳಗಾಗಿ ಆರಂಭಿಸುವುದಾಗಿ ಶರಣ್ ಪಾಟೀಲ್ ತಿಳಿಸಿದರು.
ಸಮಗ್ರ ಕ್ಯಾನ್ಸರ್ ಚಿಕಿತ್ಸೆ-ಸೇವೆಗಳು:
ಸ್ಪರ್ಶ್ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯು ಈ ಕೆಳಗಿನ ಸಮಗ್ರ ಚಿಕಿತ್ಸಾ ವಿಭಾಗಗಳೊಂದಿಗೆ ಅತ್ಯಾಧುನಿಕ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದೆ
* ನ್ಯೂಕ್ಲಿಯರ್ ಮೆಡಿಸಿನ್
* ವೈದ್ಯಕೀಯ, ಶಸ್ತ್ರ ಚಿಕಿತ್ಸೆ ಹಾಗೂ ರೇಡಿಯೇಷನ್ ವಿಭಾಗಗಳು
* ರಕ್ತ ಶಾಸ್ತ್ರ ಮತ್ತು ರಕ್ತ ಸಂಬಂಧಿ ಕ್ಯಾನ್ಸರ್ (ವಯಸ್ಕರು ಮತ್ತು ಮಕ್ಕಳು)
* ಉಪಶಾಮಕ (Palliative) ಆರೈಕೆ ಮತ್ತು ಬೆಂಬಲ
ಅತ್ಯಾಧುನಿಕ ಪೆಟ್ –ಸಿಟಿ (PET-CT) ಹಾಗೂ ಎಂಆರ್‌ಐ ಸ್ಕ್ಯಾನರ್‌ಗಳು, ಶಸ್ತ್ರಚಿಕಿತ್ಸಾಗಾರಗಳು, ನಿಖರವಾದ ವಿಕಿರಣ ಚಿಕಿತ್ಸೆ (Radiation Therapy) ಹಾಗೂ ಮೀಸಲಾಗಿರಿಸಿದ ಅಸ್ಥಿಮಜ್ಜೆ ಕಸಿ ಕೊಠಡಿಗಳು (ಬಿಎಂಟಿ ಸ್ಯೂಟ್‌ಗಳು), ಸೋಂಕು ತಗಲದಂತೆ ನಿರ್ಮಿಸಲಾದ ವಿಶೇಷ ಕೊಠಡಿ ಗಳೊಂದಿಗೆ ಅತ್ಯಾಧುನಿಕ ಮೂಲ ಸೌಕರ್ಯ ಹಾಗೂ ವೈದ್ಯಕೀಯ ಉಪಕರಣಗಳನ್ನು ಸ್ಪರ್ಶ್ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆ ಹೊಂದಿದೆ.
ಕಿಮೋಥೆರಪಿಯ ಡೇ ಕೇರ್ ಘಟಕ, ಆಂಕೋ ಪೆಥಾಲಜಿ (ಗ್ರಂಥಿ ರೋಗ ಶಾಸ್ತ್ರ ವಿಭಾಗ) ಹಾಗೂ ಅಣ್ವಿಕ ಪರೀಕ್ಷೆ (ಮಾಲಿಕ್ಯುಲಾರ್ ಟೆಸ್ಟಿಂಗ್), ಸಮಗ್ರ ವೈದ್ಯಕೀಯ ಪ್ರಯೋಗಾಲಯ ಹಾಗೂ ವಿಶೇಷ ಚಿಕಿತ್ಸೆಗೆಂದೇ ಮೀಸಲಾದ ಅಭಿಧಮನಿ ತೂರುನಳಿಕೆ (ಸಿವಿಸಿ) ಕ್ಲಿನಿಕ್‌ಗಳನ್ನು ಸಕಾಲದ ಮೇಲ್ವಿಚಾರಣೆ ಮತ್ತು ಚಿಕಿತ್ಸೆಗಾಗಿ ಸ್ಥಾಪಿಸಲಾಗಿದ್ದು ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಹಾಗೂ ಆರೈಕೆ ವ್ಯವಸ್ಥೆಯನ್ನು ಸ್ಪರ್ಶ್ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆ ಹೊಂದಿದೆ.
ಕ್ಯಾನ್ಸರ್ ಜಾಗೃತಿ ಮತ್ತು ಆರಂಭದಲ್ಲೇ ಪತ್ತೆ
ಸ್ತನ, ಗರ್ಭಕಂಠ, ಪ್ರಾಸ್ಟೇಟ್ (ಪುರುಷ ಸಂತಾನೋತ್ಪತ್ತಿ ಗ್ರಂಥಿ) ಹಾಗೂ ಕರುಳಿನ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಈ ಕುರಿತು ಜಾಗೃತಿ ಮತ್ತು ತಿಳುವಳಿಕೆ ಮೂಡಿಸುವ ಜೊತೆಗೆ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಗೆ ಸ್ಪರ್ಶ್ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಜಾಗೃತಿ ಅಭಿಯಾನಗಳ ಜೊತೆಗೆ ಉಚಿತ ಕ್ಯಾನ್ಸರ್ ಪತ್ತೆ ಶಿಬಿರಗಳು ಹಾಗೂ ಕ್ಯಾನ್ಸರ್‌ನಿಂದ ಗುಣಮುಖರಾದವರಿಗೆ ಬೆಂಬಲ ನೀಡುವ ಉಪಕ್ರಮಗಳನ್ನೂ ಈ ಸಂಸ್ಥೆಯು ಕೈಗೊಳ್ಳಲಿದೆ.
ರೋಗಿಗಳಲ್ಲಿ ಭರವಸೆ ತುಂಬುವಲ್ಲಿ ಆಸ್ಪತ್ರೆ ಪಾತ್ರ ಬಹು ಮುಖ್ಯವಾದುದು. ಕ್ಯಾನ್ಸರ್ ರೋಗಿಗಳಲ್ಲಿ ಬಹುತೇಕರು ಭರವಸೆ ಕಳೆದುಕೊಂಡಿರುತ್ತಾರೆ. ನಾನೂ ಕ್ಯಾನ್ಸರ್ ಪೀಡಿತನಾಗಿದ್ದಾಗ ಆಸ್ಪತ್ರೆ, ವೈದ್ಯರು, ನನ್ನ ಕುಟುಂಬ,, ಸಿನೆಮಾ ಇಂಡಸ್ಟ್ರಿ, ರಾಜ್ಯದ ಜನತೆ ನನಗೆ ಧೈರ್ಯ ಮತ್ತು ಭರವಸೆ ತುಂಬಿದರು"
ಕಾರ್ಯಕ್ರಮದಲ್ಲಿ ಖ್ಯಾತ ನಟಿ ಪ್ರೇಮಾ, ಸರ್ವೋಚ್ಛ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಸ್ಪರ್ಶ್ ಆಸ್ಪತ್ರೆ ಗ್ರಂಥಿ ವಿಜ್ಞಾನ ಮುಖ್ಯಸ್ಥ ಡಾ.ಶೇಖರ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾದವರೂ ಸೇರಿದಂತೆ ಸ್ಪರ್ಶ್ ಆಸ್ಪತ್ರೆ ಸಮೂಹದ ವಿವಿಧ ವಿಭಾಗಗಳ ತಜ್ಞರು, ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.